Nooru Janmaku Serial Lyrics: ಕೊರಳ ಬಾಂಧವ್ಯ ಬಯಸಿ, ಬೆರಳ ಜೊತೆ ಮಾಡಿಕೋ.. ಇರಲಾರೆ ನಿನ್ನ ವಿನಃ ನೂರು ಜನ್ಮಕೂ
ಕನ್ನಡ ಸುದ್ದಿ  /  ಮನರಂಜನೆ  /  Nooru Janmaku Serial Lyrics: ಕೊರಳ ಬಾಂಧವ್ಯ ಬಯಸಿ, ಬೆರಳ ಜೊತೆ ಮಾಡಿಕೋ.. ಇರಲಾರೆ ನಿನ್ನ ವಿನಃ ನೂರು ಜನ್ಮಕೂ

Nooru Janmaku Serial Lyrics: ಕೊರಳ ಬಾಂಧವ್ಯ ಬಯಸಿ, ಬೆರಳ ಜೊತೆ ಮಾಡಿಕೋ.. ಇರಲಾರೆ ನಿನ್ನ ವಿನಃ ನೂರು ಜನ್ಮಕೂ

Nooru Janmaku Serial Song Lyrics: ಕಲರ್ಸ್‌ ಕನ್ನಡದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಹೊಸ ಧಾರಾವಾಹಿ ನೂರು ಜನ್ಮಕೂ. ಈಗ ಇದೇ ಸೀರಿಯಲ್‌ ವೀಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸೀರಿಯಲ್‌ ಕಥೆ ಮಾತ್ರವಲ್ಲದೆ ಇದೇ ಧಾರಾವಾಹಿಯ ಇಂಟ್ರೋ ಹಾಡು ಸಹ ಕಿವಿಗಿಂಪು. ಇಲ್ಲಿದೆ ಈ ಹಾಡಿನ ಸಾಹಿತ್ಯ.

 ನೂರು ಜನ್ಮಕೂ ಧಾರಾವಾಹಿ ಹಾಡಿನ ಸಾಹಿತ್ಯ
ನೂರು ಜನ್ಮಕೂ ಧಾರಾವಾಹಿ ಹಾಡಿನ ಸಾಹಿತ್ಯ

Nooru Janmaku Serial Song Lyrics: ಕಲರ್ಸ್‌ ಕನ್ನಡದಲ್ಲಿ ಕಳೆದ ವಾರವಷ್ಟೇ (ಡಿ. 23) ಪ್ರಸಾರ ಆರಂಭಿಸಿದೆ ನೂರು ಜನ್ಮಕೂ ಸೀರಿಯಲ್.‌ ಹಾರರ್‌ ಪ್ರೇಮಕಥೆಯಾಗಿರುವ ಈ ಧಾರಾವಾಹಿಯನ್ನು ಶ್ರವಂತ್ ರಾಧಿಕಾ ನಿರ್ದೇಶನ ಮಾಡುತ್ತಿದ್ದಾರೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಶಿಲ್ಪಾ ಕಾಮತ್‌, ಚಂದನಾ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ನಟಿಸುತ್ತಿದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಏನಿದು ಕಥೆ? 

‘ನೂರು ಜನ್ಮಕೂ’ ಒಂದು ಗಾಢ ಪ್ರೇಮಕತೆ. ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ, ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಇತ್ತ ಕಾಮಿನಿ ಪಾತ್ರದಲ್ಲಿ ಚಂದನಾ ಗೌಡ ಈ ಜೋಡಿಯನ್ನು ದೂರ ಮಾಡುವ ಪ್ರೇತವಾಗಿ ಎದುರಾಗಿದ್ದಾರೆ. ಸದ್ಯ ನೋಡುಗರಿಂದ ಮೆಚ್ಚುಗೆ ಪಡೆದ ನೂರು ಜನ್ಮಕೂ ಸೀರಿಯಲ್‌, ಇಂಟ್ರೋ ಹಾಡಿನಿಂದಲೂ ಸಂಗೀತ ಪ್ರಿಯರ ಮನಸ್ಸು ಗೆದ್ದಿದೆ. ಆ ಹಾಡಿನ ಸಾಹಿತ್ಯ ಇಲ್ಲಿದೆ.   

ನೂರು ಜನ್ಮಕೂ ಸೀರಿಯಲ್‌ ಹಾಡಿನ ಸಾಹಿತ್ಯ

ಆ.. ಆ..

ನಿನ್ನ ಹೆಸರೇ ಜೀವ ಸಿಂಚನ

ಅರಿತಾ ಒಲವು ನೀಡೋಯ್ತು ಪ್ರಾಣ

ಉಸಿರ ಒಡೆಯ ನೀನೇ ಈ ದಿನ

ನಿನ್ನೆ, ನಾಳೆ ನಿನದೇನಾ?

 

ಕೊರಳ ಬಾಂಧವ್ಯ ಬಯಸಿ

ಬೆರಳ ಜೊತೆ ಮಾಡಿಕೋ

ಇರಲಾರೆ ನಿನ್ನ ವಿನಃ

ನೂರು ಜನ್ಮಕೂ..

 

ಹಗಲು ಇರುಳು ಕಾಯುವೆ

ಹೃದಯವ ಸೇರಿಕೋ

ನಿನ್ನೇ ಪ್ರೀತಿ ಮಾಡುವೆ

ನೂರು ಜನ್ಮಕೂ..

 

ದೇಹ ಮಣ್ಣೇ ಆದರೂ

ಆತ್ಮದ ಅಂತ್ಯಕೂ

ಬೆನ್ನ ಬಿಡದೆ ಕಾಡುವೆ

ನೂರು ಜನ್ಮಕೂ..

                                                  ---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner