ಭಾಗ್ಯಲಕ್ಷ್ಮೀ ಧಾರಾವಾಹಿ; ಕಿಶನ್ ಪೂರ್ವಾಪರ ತಿಳಿದುಕೊಳ್ಳಲು ಜಿಮ್‌ಗೆ ಸೇರಿದ ಕುಸುಮಾ, ಬೇಕು ಅಂತಲೇ ಮಹಿಳೆ ಜತೆಗೆ ಕಿರಿಕ್
ಪೂಜಾ ಇಷ್ಟಪಟ್ಟ ಹುಡುಗ ಕಿಶನ್ ಯಾರು, ಅವನ ನಡವಳಿಕೆ ಹೇಗಿದೆ, ಅವನ ಪೂರ್ವಾಪರ ಎಂಬುದನ್ನು ಕಂಡು ಹಿಡಿಯಲು, ಆತನ ಜಿಮ್‌ಗೆ ತೆರಳಿದ್ದಾಳೆ ಕುಸುಮಾ. ಕಿಶನ್ ವರ್ತನೆ ಕಂಡು ಖುಷಿಯಾಗಿರುವ ಕುಸುಮಾ, ಆತನ ಕೋಪ ಹೇಗಿರುತ್ತದೆ ಎಂಬುದನ್ನೂ ನೋಡಲು ಅಲ್ಲೇ ಇದ್ದ ಮಹಿಳೆ ಜತೆಗೆ ಬೇಕು ಅಂತಲೆ ಜಗಳಕ್ಕೆ ನಿಂತಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾಳ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ. ಕಿಶನ್ ಜೊತೆಗೆ ಪೂಜಾ ಪಾರ್ಕ್‌ಗೆ ಹೋದ ವಿಚಾರವನ್ನು ತಾಂಡವ್, ಮನೆಗೆ ಬಂದು ಹೇಳಿದ್ದಾನೆ. ಶಾಂತವಾಗಿದ್ದ ಮನೆಯಲ್ಲಿ ರಂಪಾಟ ಜೋರಾಗಿದೆ. ಇನ್ನೊಂದು ಕಡೆ ಪೂಜಾ ಇಷ್ಟ ಪಡುತ್ತಿರುವ ಹುಡುಗ ಜಿಮ್ ಮಾಲೀಕ ಕಿಶನ್ ಎಂಬುದು ಗೊತ್ತಾಗಿದೆ. ಇತ್ತ ಪೂಜಾಳಿಗೂ ಆ ಹುಡುಗ ಇಷ್ಟ ಆಗಿದ್ದಾನೆ. ನಾವ್ಯಾಕೆ ಆ ಹುಡುಗನ್ನ ಒಂದು ಸಲ ಭೇಟಿ ಮಾಡಬಾರದು ಎಂದು ಅತ್ತೆ ಕುಸುಮಾಗೆ ಹೇಳುತ್ತಾಳೆ ಭಾಗ್ಯ. ಭಾಗ್ಯಾಳ ಮಾತು ಕುಸುಮಾಗೂ ಸರಿ ಅನಿಸಿ ನೇರವಾಗಿ ಜಿಮ್‌ಗೆ ಹೊರಟೇ ಬಿಟ್ಟಿದ್ದಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿಯ 787ನೇ ಸಂಚಿಕೆಯಲ್ಲಿ ಕಿಶನ್ ಯಾರು, ಅವನ ಹಿನ್ನೆಲೆ ಏನು ಎಂಬುದನ್ನು ಪತ್ತೆ ಮಾಡೋಕೆ ನೇರವಾಗಿ ಜಿಮ್‌ಗೆ ಬಂದಿದ್ದಾಳೆ ಕುಸುಮಾ. ನಾನೂ ಜಿಮ್‌ಗೆ ಸೇರಬೇಕು ಎಂದು ಸೀರೆಯಲ್ಲಿಯೇ ಬಂದಿದ್ದಾಳೆ ಕುಸುಮಾ. ಜಿಮ್‌ನ ಲೇಡಿ ಟ್ರೇನರ್‌ವೊಬ್ಬರು ಸೀರೆಯುಟ್ಟು ಬಂದ ಕುಸುಮಾರನ್ನು ತಡೆದಿದ್ದಾಳೆ. ಇಲ್ಲಿ ಈ ಥರ ಸೀರೆಯುಟ್ಟು ಜಿಮ್ ಮಾಡುವ ಹಾಗಿಲ್ಲ. ಜಿಮ್ ಉಡುಪುಗಳನ್ನೇ ಧರಿಸಿ ಬರಬೇಕು ಎಂದಿದ್ದಾಳೆ. ಅಷ್ಟಕ್ಕೇ ಕುಪಿತಗೊಂಡ ಕುಸುಮಾ, ನಾನು ಸೀರೆಯಲ್ಲಿಯೇ ಜಿಮ್ ಮಾಡುವೆ ಏನಿವಾಗ? ಎಂದು ಗದರಿದ್ದಾಳೆ.
ಏನಾದ್ರೂ ಮಾಡ್ಕೊಂಡು ಹೋಗಿ ಎಂದು ಟ್ರೇನರ್ ಬೇರೆ ಕಡೆ ಹೋಗಿದ್ದಾಳೆ. ಇತ್ತ ಜಿಮ್ ಹೇಗಿದೆ ಎಂದು ಒಂದು ಸುತ್ತು ಹೊಡೆದ ಕುಸುಮಾ, ಅಲ್ಲಿನ ಜಿಮ್ ಐಟಂಗಳನ್ನು ನೋಡಿದ್ದಾರೆ. ಏನೆನೆಲ್ಲ ಇದೆ ಎಂದು ಕಣ್ಣರಳಿಸಿ ಕಣ್ತುಂಬಿಕೊಂಡಿದ್ದಾರೆ. ಸೀರೆ ಧರಿಸಿಯೇ ಸೈಕಲಿಂಗ್ ಮಾಡಲು ಕುಸುಮಾ ಟ್ರೈ ಮಾಡಿದ್ದಾಳೆ. ಟ್ರೇನರ್‌ನ ಕರೆದು ಇದನ್ನು ಹೇಗೆ ಓಡಿಸೋದು ಎಂದು ಕೇಳಿದ್ದಾಳೆ. ಸೀರೆ ಧರಿಸಿ ಈ ವ್ಯಾಯಾಮ ಮಾಡಲು ಕಷ್ಟ ಎಂದಿದ್ದಾಳೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅಷ್ಟರಲ್ಲಿ ಅದೇ ಸ್ಥಳಕ್ಕೆ ಜಿಮ್ ಮಾಲೀಕ ಕಿಶನ್ ಎಂಟ್ರಿಯಾಗಿದೆ.
ಕಿಶನ್ ಬರ್ತಿದ್ದಂತೆ ಆತನನ್ನೇ ದಿಟ್ಟಿಸಿ ನೋಡಿದ್ದಾಳೆ ಕುಸುಮಾ. ಕಿಶನ್‌ನ ನೋಡ್ತಿದ್ದಂತೆ ಕುಸುಮಾಗೆ ಆ ಹುಡುಗ ಇಷ್ಟವಾಗಿದ್ದಾನೆ. ಆತ ವರ್ತಿಸಿದ ರೀತಿಗೆ, ಕಾಲಿಗೆ ಬಿದ್ದ ಕ್ಷಮೆ ಕೇಳಿದ್ದಕ್ಕೆ, ಹಿರಿಯರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೋಡಿದ ಕುಸುಮಾ, ಫಿದಾ ಆಗಿದ್ದಾಳೆ. ಇತ್ತ ಇದೇ ವೇಳೆ ಭಾಗ್ಯಾಳ ಫೋನ್ ಬಂದಿದೆ. ಹೇಗಿದ್ದಾನೆ ಹುಡುಗ ಎಂದೆಲ್ಲ ವಿಚಾರಿಸಿದ್ದಾಳೆ. ಕುಸುಮಾ ಸಹ ಕಿಶನ್ ಬಗ್ಗೆ ಒಳ್ಳೆಯ ಓಪಿನಿಯನ್ ಹೇಳಿದ್ದಾಳೆ. ಒಟ್ಟಿನಲ್ಲಿ ಪೂಜಾಳಿಗೆ ಒಳ್ಳೆಯ ಹುಡುಗನೇ ಸಿಕ್ಕ ಅನ್ನೋ ಖುಷಿಯಲ್ಲಿದ್ದಾರೆ ಕುಸುಮಾ ಮತ್ತು ಭಾಗ್ಯಾ.
ಕೈ ತುತ್ತು ಕ್ಯಾಂಟಿನ್‌ಗೆ ತಾಂಡವ್ ಎಂಟ್ರಿ
ಕೈತುತ್ತು ಕ್ಯಾಂಟಿನ್‌ಗೆ ಬಂದ ತಾಂಡವ್, ಪೂಜಾ ಮತ್ತು ಭಾಗ್ಯಾ ಜತೆಗೆ ಕಟುವಾಗಿ ಮಾತನಾಡಿದ್ದಾನೆ. ತಾಂಡವ್ ಮಾತಿಗೆ ಕ್ಯಾರೆ ಎನ್ನದ ಪೂಜಾ, ಬಂದ ಕೆಲಸ ಏನಿದ್ಯೋ ಅದನ್ನು ಮಾಡ್ಕೊಂಡು ಹೋಗಿ ಎಂದಿದ್ದಾಳೆ. ಭಾಗ್ಯ ಒಳ್ಳೆಯ ಕಾಫಿ ಕೊಟ್ಟರೂ, ಚೆನ್ನಾಗಿಲ್ಲ ಎಂದು ಜರಿಯುತ್ತಿದ್ದಾನೆ. ಹೇಗಾದರೂ ಮಾಡಿ, ಇವರನ್ನು ಇಲ್ಲಿಂದ ಕಳಿಸಬೇಕು ಎಂದಿದ್ದಾನೆ ತಾಂಡವ್. ತಾಂಡವ್ ಮಾತಿಗೆ ಭಾಗ್ಯ ಸಹ ಟಕ್ಕರ್ ಕೊಟ್ಟಿದ್ದಾಳೆ. ಕಿಚಾಯಿಸಿದ ತಾಂಡವ್‌ಗೆ ಉತ್ತರ ಕುಮಾರ ಪೌರುಷ ಮನೆಮುಂದೆ ಎಂದು ಪೂಜಾ ಮತ್ತು ಭಾಗ್ಯ ಇಬ್ಬರೂ ಸೇರಿ ಕಾಲೆಳೆದಿದ್ದಾರೆ.
ಸಿಟ್ಟು ಪರೀಕ್ಷೆಗೆ ಮುಂದಾದ ಕುಸುಮಾ
ಕಿಶನ್‌ನ ಸಿಟ್ಟು ಎಷ್ಟಿದೆ ಎಂಬುದನ್ನು ನೋಡಲು, ಅಲ್ಲಿದ್ದ ಮಹಿಳೆ ಜತೆಗೆ ಬೇಕು ಅಂತಲೇ ಜಗಳಕ್ಕಿಳಿದ್ದಾಳೆ ಕುಸುಮಾ. ಆಕೆ ಧರಿಸಿದ ಬಟ್ಟೆ ಬಗ್ಗೆಯೂ ಕಾಮೆಂಟ್ ಮಾಡಿದ್ದಾಳೆ. ನನಗೆ ಆವಾಜ್ ಹಾಕ್ತಿಯಾ ಎನ್ನುತ್ತಲೇ ಆಕೆಯ ಹೆಡ್‌ಫೋನ್ ಕಿತ್ತೆಸೆದಿದ್ದಾಳೆ. ಅಲ್ಲಿಗೆ ಜಿಮ್‌ನಲ್ಲಿ ಜಡೆ ಜಗಳ ಶುರುವಾಗಿದೆ. ಈ ಜಗಳ ಬಿಡಿಸೋಕೆ ಬರುವ ಕಿಶನ್ ಹೇಗೆ ವರ್ತಿಸುತ್ತಾನೆ ಎಂಬುದನ್ನು ನೋಡಲು ಕುಸುಮಾ ಸಹ ಉತ್ಸುಕದಲ್ಲಿದ್ದಾಳೆ. ಈ ಕುತೂಹಲ ಇಂದಿನ ಭಾಗ್ಯಲಕ್ಷ್ಮೀ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್,
ಧರ್ಮರಾಜ್ - ಶಶಿಧರ್ ಕೋಟೆ,
ಭಾಗ್ಯಾ - ಸುಷ್ಮಾ ಕೆ ರಾವ್,
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್,
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ,
ಪೂಜಾ - ಆಶಾ ಅಯ್ಯನರ್,
ಶ್ರೇಷ್ಠಾ - ಕಾವ್ಯಾ ಗೌಡ,
ತನ್ವಿ - ಅಮೃತಾ ಗೌಡ,
ಗುಂಡಣ್ಣ - ನಿಹಾರ್ ಗೌಡ,
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ