Colors Kannada: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ ಭೀಮ ಸಿನಿಮಾ; ಯುಗಾದಿಗೆ ದುನಿಯಾ ವಿಜಯ್ ಅಬ್ಬರ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಯುಗಾದಿಯಂದು ಭೀಮ ಸಿನಿಮಾ ಪ್ರಸಾರವಾಗಲಿದೆ. ಯುಗಾದಿ ಸಂಭ್ರಮ ಹೆಚ್ಚಿಸೋಕೆ ದುನಿಯಾ ವಿಜಯ್ ಜತೆಗೂಡುತ್ತಿದ್ದಾರೆ. ಮನೆಯಲ್ಲೇ ಕೂತು ಈ ಸಿನಿಮಾ ನೋಡಬಹುದು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಯುಗಾದಿಯಂದು ಭೀಮ ಸಿನಿಮಾ ಪ್ರಸಾರವಾಗಲಿದೆ. ಯುಗಾದಿ ಸಂಭ್ರಮ ಹೆಚ್ಚಿಸೋಕೆ ದುನಿಯಾ ವಿಜಯ್ ಜತೆಗೂಡುತ್ತಿದ್ದಾರೆ. ಭೀಮ ಸಿನಿಮಾವನ್ನು ಸಾಕಷ್ಟು ಜನ ಈಗಾಗಲೇ ವೀಕ್ಷಿಸಿದ್ದಾರೆ. ಆದರೆ ಈ ಬಾರಿ ಮನೆಯಲ್ಲೇ ಕೂತು ನೀವು ಈ ಸಿನಿಮಾವನ್ನು ನೋಡಬಹುದು. ಮಾರ್ಚ್ 30 ರಾತ್ರಿ 7:30ಕ್ಕೆ ಸಿನಿಮಾ ಪ್ರಸಾರವಾಗಲಿದೆ. ದುನಿಯಾ ವಿಜಯ್ ಅಭಿನಯದ ಭೀಮ ಸಿನಿಮಾ ಆಗಸ್ಟ್ 9ರಂದು ಬಿಡುಗಡೆಯಾಗಿತ್ತು. ವಿಜಯ್ ನಿರ್ದೇಶನದ ಸಲಗ ಸಿನಿಮಾ ಗೆದ್ದ ಬೆನ್ನಲ್ಲೇ ಘೋಷಣೆ ಮಾಡಿದ ಎರಡನೇ ಸಿನಿಮಾ ಈ ಭೀಮ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರ ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.
ಸೇಡಿನ ಕಥೆ ಹೊಂದಿರುವ ಸಿನಿಮಾ
ಗಾಂಜಾ ಮಾರಾಟ ಮಾಡುವವರ ವಿರುದ್ಧ ಪೊಲೀಸ್ ಅಧಿಕಾರಿ ಹೇಗೆ ಕ್ರಮಕೈಗೊಳ್ಳುತ್ತಾರೆ ಎಂಬುದು ಈ ಸಿನಿಮಾದಲ್ಲಿ ಹೆಚ್ಚು ರೋಚಕವಾಗಿದೆ. ಸಿನಿಮಾದ ಮೊದಲಾರ್ಧ ಹಾಸ್ಯ ಮಿಶ್ರಿತವಾಗಿಯೇ ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ಹಾಡುಗಳು ಕೂಡ ತುಂಬಾ ಸುಂದರವಾಗಿ ಮೂಡಿ ಬಂದಿವೆ. ಸಿನಿಮಾದಲ್ಲಿ ದುನಿಯಾ ವಿಜಯ್ ಗೆದ್ದರೂ, ಮತ್ತಷ್ಟು ದುಷ್ಮನ್‌ಗಳು ಹುಟ್ಟಿಕೊಳ್ಳುತ್ತಾರೆ. ಆತನನ್ನು ಹಣಿಯಲು ಸಂಚು ರೂಪಿಸಲಾಗುತ್ತದೆ.
ಮಾಸ್ ಹೀರೋ ದುನಿಯಾ ವಿಜಯ್
ಒಂದು ಸಲ ಹೊಡೆದರೆ ಜಾಲಿ, ಇನ್ನೊಂದು ಸಲ ಹೊಡೆದರೆ ಶ್ರದ್ದಾಂಜಲಿ ಎಂಬ ಖಡಕ್ ಡೈಲಾಗ್ ಜನರಿಗೆ ಇಷ್ಟವಾಗುವಂತಿದೆ. ಮಾಸ್ ಹಾಡಿನ ಮೂಲಕ ಎಂಟ್ರಿಕೊಡುವ ಭೀಮ (ದುನಿಯಾ ವಿಜಯ್) ಲೋಕಲ್ ರೌಡಿಸಂ ಹೇಗಿರುತ್ತದೆ ಎಂಬುದನ್ನೂ ತೋರಿಸಿದ್ದಾರೆ. ಚರಣ್ ರಾಜ್ ಸಂಗೀತದಲ್ಲಿ ಮೂಡಿ ಬಂದ ಹಾಡುಗಳು ಈ ಸಿನಿಮಾಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಸಾಕಷ್ಟು ಜನ ಸಿನಿಮಾ ಹಾಗೂ ಹಾಡು ಎರಡನ್ನೂ ಇಷ್ಟಪಟ್ಟಿದ್ಧಾರೆ. ಕಲರ್ಸ್ ಕನ್ನಡ ವಾಹಿನಿಯು ಯುಗಾದಿಯಂದು ಈ ಸಿನಿಮಾವನ್ನು ಪ್ರಸಾರಮಾಡಲಿದ್ದು, ನೀವೆಲ್ಲ ಮನೆಯಲ್ಲೇ ಕುಳಿತು ಈ ಸಿನಿಮಾ ನೋಡಬಹುದು.
ಚಿತ್ರ: ಭೀಮಾ
ನಿರ್ದೇಶಕ: ವಿಜಯ್ ಕುಮಾರ್
ತಾರಾಗಣ: ವಿಜಯ್ ಕುಮಾರ್, ಅಶ್ವಿನಿ ಅಂಬರೀಶ್, ಪ್ರಿಯಾ ಶತಮರ್ಷನ್, ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಮತ್ತು ಶುದ್ಧಿ
