ರಾಕೇಶ್ ಪೂಜಾರಿ ತಂಗಿ ಮದುವೆಗೆ ನಾವು ಸಹಾಯ ಮಾಡ್ತೀವಿ; ಕಾಮಿಡಿ ಕಿಲಾಡಿಗಳು ಶೋ ಗೆಳೆಯರ ಭರವಸೆ
ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ರಾಕೇಶ್ ಪೂಜಾರಿ ಅನಿರೀಕ್ಷಿತವಾಗಿ ಅಗಲಿರುವುದರಿಂದ ಅವರ ಆಪ್ತರು, ಸ್ನೇಹಿತರು ಬೇಸರದಲ್ಲಿದ್ದಾರೆ. "ಕಾಮಿಡಿ ಕಿಲಾಡಿಗಳು ಶೋನಿಂದ ಆಗಮಿಸಿರುವ ನಾವೆಲ್ಲರೂ ಒಂದು ಫ್ಯಾಮಿಲಿ ರೀತಿ ಇದ್ದೇವೆ. ಗೆಳೆಯನ ತಂಗಿ ಮದುವೆಗೆ ನಾವೆಲ್ಲರೂ ಸಹಯಾ ಮಾಡುತ್ತೇವೆ" ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ಹೇಳಿದ್ದಾರೆ.

ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ರಾಕೇಶ್ ಪೂಜಾರಿ ಅನಿರೀಕ್ಷಿತವಾಗಿ ಅಗಲಿರುವುದರಿಂದ ಅವರ ಆಪ್ತರು, ಸ್ನೇಹಿತರು ಬೇಸರದಲ್ಲಿದ್ದಾರೆ. ಇದೇ ಸಮಯದಲ್ಲಿ ಅಗಲಿದ ಆತ್ಮೀಯನ ಕುಟುಂಬದ ಕುರಿತೂ ಕಾಮಿಡಿ ಕಿಲಾಡಿ ಗೆಳೆಯರು ಯೋಚಿಸುತ್ತಿದ್ದಾರೆ. "ಕಾಮಿಡಿ ಕಿಲಾಡಿಗಳು ಶೋನಿಂದ ಆಗಮಿಸಿರುವ ನಾವೆಲ್ಲರೂ ಒಂದು ಫ್ಯಾಮಿಲಿ ರೀತಿ ಇದ್ದೇವೆ. ಗೆಳೆಯನ ತಂಗಿ ಮದುವೆಗೆ ನಾವೆಲ್ಲರೂ ಸಹಯಾ ಮಾಡುತ್ತೇವೆ" ಎಂದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ಹೇಳಿದ್ದಾರೆ.
"ನಿನ್ನೆ ಕೆಆರ್ ಪೇಟೆ ಶಿವಣ್ಣ ಮಾತನಾಡುತ್ತಿದ್ದರು. ನಾವೆಲ್ಲರೂ ಇದ್ದೇವೆ ಅಂದರು. ನಾವೆಲ್ಲರೂ ಇವರ ಜತೆ ಇರುತ್ತೇವೆ. ಹಣಕಾಸು ವಿಚಾರದಲ್ಲಿ ಆಗಿರಲಿ. ಯಾವುದೇ ಸಪೋರ್ಟ್‌ಗೆ ಇರುತ್ತೇವೆ. ನಿನ್ನೆ ತೀರಿ ಹೋಗಿರುವ ವಿಚಾರ ಅಂತ ಅಲ್ಲ. ಕಾಮಿಡಿ ಕಿಲಾಡಿಯಿಂದ ಬಂದ ನಾವೆಲ್ಲರೂ ಫ್ಯಾಮಿಲಿ ರೀತಿ ಇದ್ದೇವೆ. ಯಾರಿಗೆ ಏನೇ ಸಮಸ್ಯೆ ಆದರೂ ನಮ್ಮ ಕೈಯಲ್ಲಿ ಆಗುವಷ್ಟು ಎಲ್ಲರೂ ಸಹಾಯ ಮಾಡುತ್ತೇವೆ" ಎಂದು ಟಿವಿ ನೈನ್‌ಗೆ ನೀಡಿದ ಸಂದರ್ಶನದಲ್ಲಿ ಸೀರುಂಡೆ ರಘು ಹೇಳಿದ್ದಾರೆ.
"ಅವರ ತಂದೆ ತೀರಿ ಹೋದ ಸಮಯದಲ್ಲಿಯೂ ಎಲ್ಲರೂ ಒಂದು ಗ್ರೂಪ್ ಮಾಡಿ ನಮಗೆ ಎಷ್ಟಾಗುತ್ತೋ ಸಹಾಯ ಮಾಡೋಣ ಅಂತ ಮಾಡಿದ್ವಿ. ಇಂತಹ ಸಮಯದಲ್ಲಿ ಯಾರೂ ಕೂಡ ಬಾಯಿಬಿಟ್ಟು ಹೇಳೋದಿಲ್ಲ. ರಾಕೇಶ್‌ನ ಕುಟುಂಬಕ್ಕೆ ನಾವು ಇಷ್ಟೇ ಹೇಳೋದು, ನಿಮ್ಮ ಜತೆ ನಾವು 30-35 ಜನನೂ ಇದ್ದೇವೆ. ತಂಗಿ ಮದುವೆ ಮಾಡಬೇಕು ಅಂತ ಹೇಳ್ತಾ ಇದ್ರು. ಹುಡುಗನ ಹುಡುಕಿದ್ದಾರೋ ಅಂತ ನಮಗೆ ಗೊತ್ತಿಲ್ಲ. ಮದುವೆಗೆ ನಾವೆಲ್ಲರೂ ಸಪೋರ್ಟ್ ಮಾಡ್ತೀವಿ. ರಾಕೀ ದೊಡ್ಡ ಕನಸು ಏನಾಗಿತ್ತು ಅಂದರೆ ಅವನು ಮದುವೆಯಾಗದೆ ಇದ್ರೂ ಅವನ ತಂಗಿ ಮದುವೆ ಜೋರಾಗಿ ಮಾಡಬೇಕು ಅಂದುಕೊಂಡಿದ್ದ" ಎಂದು ರಘು ನೆನಪಿಸಿಕೊಂಡಿದ್ದಾರೆ.
"ನಾಲ್ಕು ವರ್ಷದ ಹಿಂದೆ ಅವನ ತಂದೆ ತೀರಿ ಹೋದ ಸಮಯದಲ್ಲಿ ಅವನ ತಂಗಿ ಹೇಳಿದ್ರು... ನಮ್ಮ ಅಪ್ಪನ ರೂಪದಲ್ಲಿ ಇವನು ಇದ್ದಾನೆ. ನಮ್ಮ ಅಪ್ಪ ಇಲ್ಲ ಅನ್ನೋ ಕೊರಗನ್ನು ಇವನು ನೀಗಿಸ್ತಾನೆ ಅಂದಿದ್ರು. ತುಂಬಾ ಆಸೆಗಳು, ಕನಸುಗಳು.. ಅವನ ಬಗ್ಗೆ ಅವನಿಗೆ ಆಸೆ ಇರಲಿಲ್ಲ. ನನಗೆ ಹಾಗೆ ಆಗಬೇಕು ಎಂದೆಲ್ಲ ಅವನಿಗೆ ಇರಲಿಲ್ಲ. ಬಂದದ್ದನ್ನುಸ್ವೀಕರಿಸಬೇಕು. ದೇವರು ನಮಗೆ ಏನು ನೀಡಿದ್ದಾನೋ ಅದನ್ನು ಸ್ವೀಕರಿಸಬೇಕು ಎನ್ನುವ ಮನಸ್ಥಿತಿ ಆತನದ್ದು. ದೇವರು ಕೊಟ್ಟದ್ದನ್ನೇ ಸ್ವೀಕರಿಸಿದ ಅನ್ಸುತೆ. ಇಷ್ಟು ಬೇಗ ಅವನ್ನ ಕಳೆದುಕೊಳ್ಳುತ್ತೇವೆ ಎಂದು ನಾವು ಯೋಚಿಸಿರಲಿಲ್ಲ" ಎಂದು ಸೀರುಂಡೆ ರಘು ಭಾವುಕರಾದರು.
"ರಾಕೇಶ್ ಬಂದಿರೋದು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ. ಸೀಸನ್ 3ಗೆ ಮೊದಲು ಚಾಂಪಿಯನ್‌ಶಿಪ್ ನಡೆಯುತ್ತಿತ್ತು. ಶರಣಯ್ಯ ಸರ್ ಅವನನ್ನು ಸೆಲೆಕ್ಟ್ ಮಾಡಿದ್ರು. ಆರಂಭದಲ್ಲಿ ಸಣ್ಣ ಸಣ್ಣ ಕ್ಯಾರೆಕ್ಟರ್ ಅವನಿಗೆ ಸಿಗ್ತಾ ಇತ್ತು. ಸ್ಟೇಜ್ ಫಿಯರ್ ತುಂಬಾ ಇದೆ ಎಂದು ಅವನು ಹೇಳಿಕೊಂಡಿದ್ದ. ಸೀಸನ್ 3ನಲ್ಲಿ ಇವನು ಡೈರೆಕ್ಟಾಗಿ ಬಂದಾಗ ಎಲ್ಲರನ್ನೂ ತಿನ್ನುವಂತಹ ಪ್ರತಿಭೆ ಆಗಿ ಹೋದ, ರಾಕೀ ಬಾಯ್ ಯಾವ ಸ್ಕಿಟ್ ಕೊಟ್ರೂ ಗೆಲಿಸ್ತಾನೆ ಅನ್ನೋ ರೀತಿ ಆಯ್ತು. ಸೀಸನ್ 2 ನಲ್ಲಿ ಮಾಡಿದ್ರೂ ನಮಗೆ ಸಣ್ಣ ಸಣ್ಣ ಕ್ಯಾರೆಕ್ಟರ್ ಸಿಗ್ತಾ ಇತ್ತು. ಇವನು ಎರಡು ಮೂರು ಎಪಿಸೋಡ್‌ಗೆ ಶೈನ್ ಆಗಿಬಿಟ್ಟ" ಎಂದು ಟಿವಿ ನೈನ್‌ಗೆ ಸೀರುಂಡೆ ರಘು ಮಾಹಿತಿ ನೀಡಿದ್ದಾರೆ.
ಮೇ 11ರ ರಾತ್ರಿ ಮದುವೆ ನಿಮಿತ್ತ ಕಾರ್ಕಳದಲ್ಲಿದ್ದ ರಾಕೇಶ್, ಆ ಕಾರ್ಯಕ್ರಮದಲ್ಲಿನ ಹಾಡಿಗೆ ಡಾನ್ಸ್ ಮಾಡಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ರಾಕೇಶ್ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಹಬ್ಬಿತು. ಹೃದಯಾಘಾತದಿಂದ ರಾಕೇಶ್ ಪೂಜಾರಿ ಮೃತಪಟ್ಟಿದ್ದರು.