ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಸಮಯ ಸಿಕ್ಕಾಗಲೆಲ್ಲ ಹೆಚ್ಚು ಕೇಳುವ ಇಷ್ಟದ ಹಾಡು ಇದೇ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಸಮಯ ಸಿಕ್ಕಾಗಲೆಲ್ಲ ಹೆಚ್ಚು ಕೇಳುವ ಇಷ್ಟದ ಹಾಡು ಇದೇ ನೋಡಿ

ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಸಮಯ ಸಿಕ್ಕಾಗಲೆಲ್ಲ ಹೆಚ್ಚು ಕೇಳುವ ಇಷ್ಟದ ಹಾಡು ಇದೇ ನೋಡಿ

ಕ್ರಿಕೆಟ್‌ ಲೋಕದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿಯ ಇಷ್ಟದ ಹಾಡು ಯಾವುದು? ಈ ಪ್ರಶ್ನೆಗೆ ಇದೀಗ ಸ್ವತಃ ವಿರಾಟ್‌ ಅವರೇ ಉತ್ತರ ನೀಡಿದ್ದಾರೆ. ಆರ್‌ಸಿಬಿ ಚಾಟ್‌ ಶೋನಲ್ಲಿ ಈ ಗುಟ್ಟನ್ನು ರಿವೀಲ್‌ ಮಾಡಿದ್ದಾರೆ.

ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಸಮಯ ಸಿಕ್ಕಾಗಲೆಲ್ಲ ಹೆಚ್ಚು ಕೇಳುವ ಇಷ್ಟದ ಹಾಡು ಇದೇ ನೋಡಿ
ಆರ್‌ಸಿಬಿ ಸ್ಟಾರ್‌ ಪ್ಲೇಯರ್‌ ವಿರಾಟ್‌ ಕೊಹ್ಲಿ ಸಮಯ ಸಿಕ್ಕಾಗಲೆಲ್ಲ ಹೆಚ್ಚು ಕೇಳುವ ಇಷ್ಟದ ಹಾಡು ಇದೇ ನೋಡಿ

ವಿರಾಟ್‌ ಕೊಹ್ಲಿಯನ್ನು ಅಭಿಮಾನಿಗಳು ಕಿಂಗ್‌ ಕೊಹ್ಲಿ ಅಂತಾ ಸುಮ್‌ ಸುಮ್ಮನೇ ಕರೆಯೋದಿಲ್ಲ. ವಿರಾಟ್‌ ಬ್ಯಾಟ್ ಹಿಡಿದು ಫೀಲ್ಡ್‌ಗಿಳಿದ್ರೆ ರನ್‌ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಬೌಲರ್ಸ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಆರ್‌ಸಿಬಿಯ ಸ್ಟಾರ್‌ ಬ್ಯಾಟರ್‌ ಆಗಿರುವ ಕಿಂಗ್‌ ಕೊಹ್ಲಿ ಇತ್ತೀಚೆಗೆ ಆರ್‌ಸಿಬಿ ಚಾಟ್‌ ಶೋನಲ್ಲಿ ತಾವು ಪದೇ ಪದೆ ಕೇಳುವ ತಮ್ಮಿಷ್ಟದ ಹಾಡು ಯಾವುದು ಎಂಬುದನ್ನು ರಿವೀಲ್‌ ಮಾಡಿದ್ದಾರೆ.

ವಿರಾಟ್‌ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ತಮಿಳಿನ ʻನೀ ಸಿಂಗಮ್ ಧಾನ್‌ʼ ಹಾಡನ್ನು ಪದೇ ಪದೆ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್‌ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಕೇಳುತ್ತಿರುತ್ತಾರೆ.

ʻನೀ ಸಿಂಗಮ್ ಧಾನ್‌ʼ, ಕಾಲಿವುಡ್‌ ನಟ ಸಿಲಂಬರಸನ್ ಅಲಿಯಾಸ್‌ ಸಿಂಬು ಅಭಿನಯದ ʻಪಾಥು ಥಲಾʼ ಚಿತ್ರದ ಹಾಡು. 2023ರಲ್ಲಿ ರಿಲೀಸ್ ಆಗಿ ಸಕ್ಸಸ್‌ ಕಂಡಿರುವ ಈ ಚಿತ್ರದ ʻನೀ ಸಿಂಗಮ್ ಧಾನ್‌ʼ ವಿರಾಟ್ ಅವರ ಇಷ್ಟದ ಗೀತೆ. ಸಿದ್‌ ಶ್ರೀರಾಮ್‌ ಕಂಠದಲ್ಲಿ, ಎ. ಆರ್‌ ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು. ʻನೀ ಸಿಂಗಮ್ ಧಾನ್‌ʼ ಅಂದ್ರೆ 'ನೀವು ನಿಜವಾಗಿಯೂ ಸಿಂಹ' ಅಂದರ್ಥ. ಕೊಹ್ಲಿ ತಮ್ಮ ನೆಚ್ಚಿನ ಹಾಡನ್ನು ರಿವೀಲ್‌ ಮಾಡುತ್ತಿದ್ದಂತೆ, ಇತ್ತ ಫ್ಯಾನ್ಸ್‌, ಸಿಂಬು ವಿರಾಟ್‌ ಅವರ ಬಯೋಪಿಕ್‌ ಮಾಡೋದಿಕ್ಕೆ ಉತ್ತಮ ಎನ್ನುತ್ತಿದ್ದಾರೆ.

ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸೂಕ್ತ ಎಂಬ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅಭಿಮಾನಿಗಳ ಆಸೆ ಮಾತ್ರ. ಈ ಬಗ್ಗೆ ಯಾವುದೇ ನಿರ್ಮಾಣ ಸಂಸ್ಥೆಯಾಗಲಿ, ನಿರ್ದೇಶಕರಾಗಲಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿಲ್ಲ.

ವಿರಾಟ್‌ ಕೊಹ್ಲಿ ಫಿಟ್ನೆಸ್‌, ಅವರ ಸ್ಟೈಲ್‌, ನೋಟದಂತೆ, ನಟ ಸಿಂಬು ಥೇಟ್‌ ಹಾಗೆಯೇ ಇದ್ದಾರೆ. ಹೀಗಾಗಿ ವಿರಾಟ್‌ ಬಯೋಪಿಕ್‌ ಪ್ಲಾನ್‌ ನಡೆದರೇ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್‌ ಎಂಬ ಮಾತು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ. ಮುಂದೆ ವಿರಾಟ್‌ ಅನುಷ್ಕಾ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ಶುರು ಮಾಡಿದಲ್ಲಿ ಸಿಂಬು ಅವರನ್ನು ಅಪ್ರೋಚ್‌ ಆದರು ಅಚ್ಚರಿಪಡುವ ಆಗಿಲ್ಲ. ಕ್ರಿಕೆಟ್‌ನಲ್ಲಿ ವಿರಾಟ್‌, ಸಿನಿಮಾದಲ್ಲಿ ಸಿಂಬು ಸದ್ಯ ಮಿಂಚುತ್ತಿದ್ದಾರೆ. ಸಿಂಬು ಥಗ್ ಲೈಫ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ STR49, STR50 ಮತ್ತು 51 ಬ್ಯಾಕ್‌ ಟು ಬ್ಯಾಕ್‌ ಲೈನಪ್‌ ಮಾಡಿಕೊಂಡಿದ್ದಾರೆ ಸಿಂಬು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.