BBK 11: ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ, ಇನ್ನು ಏನೆಲ್ಲ ಇದೆ ನೋಡಿ ಜನರ ಉಡುಗೊರೆ; ವಾರದ ಕಥೆ ಕಿಚ್ಚನ ಜೊತೆ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ, ಇನ್ನು ಏನೆಲ್ಲ ಇದೆ ನೋಡಿ ಜನರ ಉಡುಗೊರೆ; ವಾರದ ಕಥೆ ಕಿಚ್ಚನ ಜೊತೆ

BBK 11: ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ, ಇನ್ನು ಏನೆಲ್ಲ ಇದೆ ನೋಡಿ ಜನರ ಉಡುಗೊರೆ; ವಾರದ ಕಥೆ ಕಿಚ್ಚನ ಜೊತೆ

ಬಿಗ್‌ ಬಾಸ್‌ ಸೀಸನ್‌ 11ರ ಆಟ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜನರಿಂದ ಸ್ಪರ್ಧಿಗಳಿಗೆ ಬಂತು ನಾನಾ ರೀತಿಯ ಉಡುಗೊರೆ. ಈ ವಾರದ ಕಥೆ ಕಿಚ್ಚನ ಜೊತೆ ಹೇಗಿರಲಿದೆ ಎಂಬುದರ ಸುಳಿವು ಇದೀಗ ಸಿಕ್ಕಿದೆ. ಧನರಾಜ್‌ಗೆ ಸೈಕಲ್ ಪಂಪ್‌, ಗೌತಮಿಗೆ ಮುಖವಾಡ ದೊರೆತಿದೆ.

ಜನರಿಂದ ಸ್ಪರ್ದಿಗಳಿಗೆ ಬಂತು ನಾನಾ ರೀತಿಯ ಉಡುಗೊರೆ
ಜನರಿಂದ ಸ್ಪರ್ದಿಗಳಿಗೆ ಬಂತು ನಾನಾ ರೀತಿಯ ಉಡುಗೊರೆ (Colors Kannada)

ಬಿಗ್‌ ಬಾಸ್‌ ಸೀಸನ್‌ 11ರ ಆಟ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ವಾರ ಏನೆನೆಲ್ಲ ಆಗಿದೆ ಎಂಬುದು ನಿಮಗೆ ಗೊತ್ತೇ ಇದೆ. ನರಕ ಸ್ವರ್ಗಗಳು ಈಗ ಒಂದಾಗಿ ಹೊಸ ಆಟ ಆರಂಭವಾಗುತ್ತಿದೆ. ಇನ್ನು ಮುಂದೆ ಏನಾಗುತ್ತದೆ ಎಂದು ತಿಳಿದುಕೊಳ್ಳಲು ಸ್ಪರ್ಧಿಗಳ ಜೊತೆಗೆ ವೀಕ್ಷಕರೂ ಕಾದಿದ್ದಾರೆ. ಇದಕ್ಕೆ ಇಂದು ರಾತ್ರಿ 9 ಗಂಟೆಗೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಉತ್ತರ ಸಿಗಲಿದೆ. ಈ ಬಾರಿ ಯಾರಿಗೆಲ್ಲ ಕಿಚ್ಚನ ಕಿಚ್ಚು ತಟ್ಟಲಿದೆ ಎಂದು ನಿಮಗೆ ಈಗಾಗಲೇ ಒಂದಷ್ಟು ಊಹೆಗಳು ಇರಬಹುದು. ಅದಕ್ಕೆ ತಕ್ಕಂತೆ ಈಗೊಂದು ಸಣ್ಣ ಸುಳಿವು ಸಿಕ್ಕಿದೆ. ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಜನರಿಂದ ಗಿಫ್ಟ್‌ ಬಂದಿದೆ.

ಜನ ನೀಡಿರುವ ಉಡುಗೊರೆಯನ್ನು ಸ್ಪರ್ಧಿಗಳಿಗೆ ನೀಡಲಾಗುತ್ತಿದೆ. ಜನರ ಉಡುಗೊರೆ ನೋಡಿ ಯಾರಿಗೂ ಅಷ್ಟೊಂದು ಖುಷಿ ಆದ ಹಾಗಿಲ್ಲ. ಯಾಕೆಂದರೆ ಜನರು ನೀಡಿದ ಸುಳಿವಿನಲ್ಲಿ ತಾವು ಎಡವಿದ್ದು ಎಲ್ಲಿ ಎಂಬುದು ಸ್ಪರ್ಧಿಗಳಿಗೆ ಅರ್ಥ ಆಗುತ್ತಿದೆ. ಜನರಿಂದ ಬಂದ ಉಡುಗೊರೆಗಳನ್ನು ಒಂದು ಬಾಕ್ಸ್‌ನಲ್ಲಿ ತಂದು ಇಡಲಾಗಿದೆ. ಒಬ್ಬೊಬ್ಬರಾಗಿ ಎದ್ದು ಹೋಗಿ ಅದನ್ನು ತಂದುಕೊಂಡಿದ್ದಾರೆ.

ಇನ್ನು ಉಡುಗೊರೆಯೊಳಗಡೆ ಒಂದೊಂದು ಸಣ್ಣ ಚೀಟಿಗಳನ್ನು ಇಟ್ಟಿದ್ದಾರೆ. ಅದರಲ್ಲಿ ಆ ಉಡುಗೊರೆಯನ್ನು ಯಾಕೆ ಕೊಡಲಾಗಿದೆ ಎಂಬ ಚಿಕ್ಕ ಸುಳಿವನ್ನು ಬರೆಯಲಾಗಿದೆ. ಧನರಾಜ್ ಆಚಾರ್‌ಗೆ ಸೈಕಲ್ ಪಂಪ್ ನೀಡಲಾಗಿದೆ. ಯಾಕೆ ಎಂದು ಚೀಟಿಯಲ್ಲಿ ಬರೆಯಲಾಗಿದೆ. ಇನ್ನೊಬ್ಬರಿಗೆ ಚಾರ್ಜರ್‌ ನೀಡಲಾಗಿದೆ. ಇನ್ನು ವಿಕ್ರಂ ಅವರಿಗೆ
ಸಿಕ್ಕಾಪಟ್ಟೆ ಸೌಂಡ್ ಮಾಡುತ್ತೆ ಅಂತ ಅಂದುಕೊಂಡಿದ್ವಿ, ಆದರೆ ಅಂದುಕೊಂಡಷ್ಟು ಸೌಂಡ್ ಮಾಡಿಲ್ಲ ಎಂದು ಸೀಟಿ ಕೊಡಲಾಗಿದೆ.

ಇದನ್ನೂ ಓದಿ: ನಿರೀಕ್ಷಿತ ದಿನಾಂಕದಂದು OTTಯಲ್ಲಿ ಬಿಡುಗಡೆಯಾಗದ ಕೃಷ್ಣಂ ಪ್ರಣಯ ಸಖಿ; ಇನ್ನೆಷ್ಟು ದಿನ ಕಾಯಬೇಕು ಎಂದು ಪ್ರಶ್ನಿಸಿದ ಅಭಿಮಾನಿಗಳು

ಉರಿತಾ ಇದ್ದ ಫೈಯರ್‌ ಬ್ರಾಂಡ್‌ ಈಗ ಆರಿ ಹೋಗಿದೆ ಎಂದು ಚೈತ್ರಾ ಕುಂದಾಪುರ ಅವರಿಗೆ ಇದ್ದಿಲು ನೀಡಲಾಗಿದೆ. ಅದನ್ನು ನೋಡಿ ಹತ್ಕೊಳತ್ತೆ ಬೆಂಕಿ, ಹತ್ತಸ್ತೀನಿ ಸರ್ ಎಂದು ಹೇಳಿದ್ದಾರೆ. ಇನ್ನು ಗೌತಮಿ ಅವರಿಗೆ ಮುಖವಾಡ ನೀಡಲಾಗಿದೆ. ಮುಖವಾಡ ನೀಡಿ ಈ ಮುಖವಾಡದಿಂದ ಸತ್ಯ ಗೊತ್ತಾಗ್ತಾ ಇಲ್ಲ ಎಂದು ಕಿಚ್ಚ ಹೇಳಿದ್ದಾರೆ. ಇನ್ನು ಭವ್ಯಾ ಗೌಡ ಅವರಿಗೆ ಕ್ಯಾಲ್ಕ್ಯುಲೇಟರ್ ನೀಡಲಾಗಿದೆ. ತುಂಬಾ ಲೆಕ್ಕಾಚಾರ ಮಾಡಿ ಆಟ ಆಡಿದ್ರೆ ಕಳ್ದೆ ಹೋಗ್ತೀರಾ ಎಂದು ಅವರ ಚೀಟಿಯಲ್ಲಿ ಬರೆಯಲಾಗಿತ್ತು.

ಒಟ್ಟಿನಲ್ಲಿ ಎಲ್ಲ ಉಡುಗೊರೆಗಳು ತುಂಬಾ ಒಳಾರ್ಥವನ್ನು ಹೊಂದಿದ್ದು, ಇನ್ನು ಯಾರಿಗೆ ಯಾವ ಉಡುಗೊರೆ ಬಂದಿದೆ ಎಂದು ತಿಳಿಯಲು ನೀವು ಕಾತರರಾಗಿರಬಹುದು. ಒಟ್ಟಿನಲ್ಲಿ ಇಂದು ಕಿಚ್ಚನ ಪಂಚಾಯ್ತಿಯಲ್ಲಿ ತುಂಬಾ ಕುತೂಹಲಕಾರಿ ವಿಷಯಗಳು ನಿಮಗೆ ಸಿಗಲಿದೆ.

Whats_app_banner