Daaku Maharaaj Collection: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದ ಡಾಕು ಮಹಾರಾಜ್‌
ಕನ್ನಡ ಸುದ್ದಿ  /  ಮನರಂಜನೆ  /  Daaku Maharaaj Collection: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದ ಡಾಕು ಮಹಾರಾಜ್‌

Daaku Maharaaj Collection: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದ ಡಾಕು ಮಹಾರಾಜ್‌

Daaku Maharaaj Box Office Collection: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಚಿತ್ರ ಜನವರಿ 12ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೊದಲ ದಿನವೇ ಒಳ್ಳೆಯ ಮೊತ್ತವನ್ನೇ ಸಂಗ್ರಹಿಸುವ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿದ್ದಾರೆ ಬಾಲಯ್ಯ.

ಡಾಕು ಮಹಾರಾಜ್‌ ಸಿನಿಮಾ ಮೊದಲ ದಿನದ ಕಲೆಕ್ಷನ್‌ ಎಷ್ಟು
ಡಾಕು ಮಹಾರಾಜ್‌ ಸಿನಿಮಾ ಮೊದಲ ದಿನದ ಕಲೆಕ್ಷನ್‌ ಎಷ್ಟು

Daaku Maharaaj Box Office Collection Day 1: ಟಾಲಿವುಡ್‌ನ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೈ ವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಡಾಕು ಮಹಾರಾಜ್ ಸಿನಿಮಾ ಜನವರಿ 12ರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಆಗಿದೆ. ಯುವ ನಿರ್ದೇಶಕ ಬಾಬಿ ಕೊಲ್ಲಿ ಮತ್ತು ಮಾಸ್ ಸಿನಿಮಾಗಳ ಬಾಪ್‌ ಎಂದೇ ಹೆಸರಾಗಿರುವ ಬಾಲಯ್ಯ ಅವರ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾ, ಪಾಸಿಟಿವ್‌ ವಿಮರ್ಶೆ ಜತೆಗೆ ಬಾಕ್ಸ್‌ ಆಫೀಸ್‌ ಅನ್ನು ಲೂಟಿ ಮಾಡುತ್ತಿದೆ.

ಮೊದಲ ದಿನದ ಗಳಿಕೆ ಎಷ್ಟು?

ಮೊದಲ ದಿನವೇ ಡಾಕು ಮಹಾರಾಜ್‌ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ ಎಂದು ಬಾಕ್ಸ್‌ ಆಫೀಸ್‌ ಮೂಲಗಳು ಮಾಹಿತಿ ನೀಡಿವೆ. ಮೊದಲ ದಿನವೇ ವಿಶ್ವಾದ್ಯಂತ 56 ಕೋಟಿ ರೂ.ಗಳನ್ನು ಬಾಲಣ್ಣನ ಡಾಕು ಮಹಾರಾಜ್‌ ಸಿನಿಮಾ ಬಾಚಿಕೊಂಡಿದೆ. ಭಾನುವಾರ ಬಿಡುಗಡೆಯಾದ ಈ ಸಿನಿಮಾಕ್ಕೆ, ಮೊದಲ ದಿನವೇ ದೊಡ್ಡ ಓಪನಿಂಗ್‌ ಸಿಕ್ಕಿದೆ. ಥಿಯೇಟರ್‌ಗಳು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ. ಈಗಾಗಲೇ ಗೇಮ್‌ ಚೇಂಜರ್‌ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅದನ್ನೇ ಡಾಕು ಮಹಾರಾಜ್‌ ಎನ್‌ಕ್ಯಾಶ್‌ ಮಾಡಿಕೊಳ್ಳುತ್ತಿದ್ದಾನೆ.

ಸತತ ನಾಲ್ಕನೇ ಗೆಲುವು

ಈ ಹಿಂದಿನ ಅಖಂಡ, ವೀರಸಿಂಹ ರೆಡ್ಡಿ, ಮತ್ತು ಭಗವಂತ ಕೇಸರಿ ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದಿದ್ದ ಬಾಲಣ್ಣ, ಇದೀಗ ಡಾಕು ಮಹಾರಾಜ್ ಮೂಲಕ ಮತ್ತೊಂದು ಗೆಲುವನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಾಗವಂಶಿ ಮತ್ತು ಸಾಯಿ ಸೌಜನ್ಯ ಅವರು ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್‌ನಡಿಯಲ್ಲಿ ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.

ಬಾಲಕೃಷ್ಣ ಎದುರು ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ನಟಿಸಿದರೆ, ಶ್ರದ್ಧಾ ಶ್ರೀನಾಥ್, ಚಾಂದನಿ ಚೌಧರಿ, ಊರ್ವಶಿ ರೌಟೇಲಾ, ಸಚಿನ್ ಖೇಡೇಕರ್, ಹರ್ಷವರ್ಧನ್, ಹಿಮಜಾ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಮತ್ತು ರೂಬೆನ್-ನಿರಂಜನ್ ದೇವರಮನ್ ಸಂಕಲನವನ್ನು ನಿರ್ವಹಿಸಿದ್ದಾರೆ. ತೆಲುಗು ಇತರ ಭಾಷೆಗಳಿಗೂ ಈ ಸಿನಿಮಾ ಡಬ್‌ ಆಗಿ ತೆರೆಕಂಡಿದೆ.

Whats_app_banner