Daaku Maharaaj Twitter Review: ಡಾಕು ಮಹಾರಾಜ್‌ ಸಿನಿಮಾ ಹೇಗಿದೆ, ಪ್ರೇಕ್ಷಕ ಏನಂದ, ವರ್ಕೌಟ್‌ ಆಯ್ತಾ ಬಾಲಣ್ಣನ ಮಾಸ್‌ ಅವತಾರ?
ಕನ್ನಡ ಸುದ್ದಿ  /  ಮನರಂಜನೆ  /  Daaku Maharaaj Twitter Review: ಡಾಕು ಮಹಾರಾಜ್‌ ಸಿನಿಮಾ ಹೇಗಿದೆ, ಪ್ರೇಕ್ಷಕ ಏನಂದ, ವರ್ಕೌಟ್‌ ಆಯ್ತಾ ಬಾಲಣ್ಣನ ಮಾಸ್‌ ಅವತಾರ?

Daaku Maharaaj Twitter Review: ಡಾಕು ಮಹಾರಾಜ್‌ ಸಿನಿಮಾ ಹೇಗಿದೆ, ಪ್ರೇಕ್ಷಕ ಏನಂದ, ವರ್ಕೌಟ್‌ ಆಯ್ತಾ ಬಾಲಣ್ಣನ ಮಾಸ್‌ ಅವತಾರ?

Daaku Maharaaj Twitter Review: ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಸಿನಿಮಾ ಇಂದು (ಜನವರಿ 12) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇತ್ತ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ವಿಮರ್ಶೆ ನೀಡುತ್ತಿದ್ದಾರೆ. ಮಾಸ್‌ ಅವತಾರಕ್ಕೆ ಫಿದಾ ಆದರೆ, ಹಿನ್ನೆಲೆ ಸಂಗೀತಕ್ಕೂ ಪ್ರೇಕ್ಷಕ ತಲೆದೂಗಿದ್ದಾನೆ. ಇಲ್ಲಿದೆ ಟ್ವಿಟ್ಟರ್‌ ರಿವ್ಯೂವ್.‌

ಡಾಕು ಮಹಾರಾಜ್‌ ಸಿನಿಮಾ ಟ್ವಿಟ್ಟರ್‌ ವಿಮರ್ಶೆ
ಡಾಕು ಮಹಾರಾಜ್‌ ಸಿನಿಮಾ ಟ್ವಿಟ್ಟರ್‌ ವಿಮರ್ಶೆ

Daaku Maharaaj Twitter Review: ಅಖಂಡ, ವೀರಸಿಂಹ ರೆಡ್ಡಿ, ಭಗವಂತ್ ಕೇಸರಿ ಚಿತ್ರಗಳ ಯಶಸ್ಸಿನ ನಂತರ ಟಾಲಿವುಡ್‌ ಸ್ಟಾರ್‌ ನಟ ನಂದಮೂರಿ ಬಾಲಕೃಷ್ಣ ಮತ್ತೊಂದು ದೊಡ್ಡ ಸಿನಿಮಾ ಮೂಲಕ ಇಂದು (ಜ. 12) ಆಗಮಿಸಿದ್ದಾರೆ. ಅದುವೇ 'ಡಾಕು ಮಹಾರಾಜ್'. ಬಾಲಣ್ಣನ ಹೊಸ ಆಕ್ಷನ್ ಎಂಟರ್‌ಟೈನರ್ ಡಾಕು ಮಹಾರಾಜ್ ಸಿನಿಮಾ ಮೇಲೆ ಈಗಾಗಲೇ ಬೆಟ್ಟದಷ್ಟು ನಿರೀಕ್ಷೆಗಳಿವೆ. ಅದರಂತೆ ಮೊದಲ ಶೋ ನೋಡಿದ ಸಿನಿಪ್ರಿಯರು ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರದ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಪಾಸಿಟಿವ್‌ ಪ್ರತಿಕ್ರಿಯೆಗಳು ಹೆಚ್ಚೆಚ್ಚು ಸಂದಾಯವಾಗುತ್ತಿವೆ. ಹಾಗಾದರೆ, ಸಿನಿಮಾ ನೋಡಿದವ್ರು ಏನಂದ್ರು? ಇಲ್ಲಿದೆ ಟ್ವಿಟ್ಟರ್‌ ವಿಮರ್ಶೆ.

ಜೈ ಲವ ಕುಶ ಮತ್ತು ವಾಲ್ತೇರು ವೀರಯ್ಯ ಚಿತ್ರಗಳನ್ನು ನಿರ್ದೇಶಿಸಿದ್ದ ಬಾಬಿ ಕೊಲ್ಲಿ ಡಾಕು ಮಹಾರಾಜ್‌ ಸಿನಿಮಾ ನಿರ್ದೇಶಿಸಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಬಾಲಕೃಷ್ಣ ಎದುರು ಪ್ರಜ್ಞಾ ಜೈಸ್ವಾಲ್ ಮತ್ತು ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿದರೆ, ಚಾಂದಿನಿ ಚೌಧರಿ ಪ್ರಮುಖ ಪಾತ್ರದಲ್ಲಿದ್ದಾರೆ. ಟಾಲಿವುಡ್ ಟಾಪ್ ಮ್ಯೂಸಿಕ್ ನಿರ್ದೇಶಕ ತಮನ್ ಸಂಗೀತ ನೀಡಿರುವ ಈ ಚಿತ್ರದ ಐಟಂ ಸಾಂಗ್ ಈಗಾಗಲೇ ಸಖತ್‌ ವೈರಲ್‌ ಆಗಿದೆ. ಊರ್ವಶಿ ರೌಟೇಲಾ ಜತೆಗಿನ ದಬಿಡಿ ದಿಬಿಡಿ ಹಾಡಿಗೆ ವ್ಯಾಪಕ ಮೆಚ್ಚುಗೆ ಜತೆಗೆ ಟೀಕೆಗಳೂ ಬಂದಿದ್ದವು. ಅದೆಲ್ಲದರ ನಡುವೆಯೂ ಈ ಸಿನಿಮಾಕ್ಕೆ ಇದೀಗ ನೋಡುಗರಿಂದ ಮೆಚ್ಚುಗೆ ಸಿಕ್ಕಿದೆ.

ಡಾಕು ಮಹಾರಾಜ್ ಚಿತ್ರದಲ್ಲಿ ಬಾಲಕೃಷ್ಣ ಎರಡು ಶೇಡ್‌ಗಳಲ್ಲಿ ಕಂಡಿದ್ದಾರೆ. ಡಕಾಯಿತನಾಗಿಯೂ ಗಮನ ಸೆಳೆದಿದ್ದಾರೆ. ಬಾಲಣ್ಣ ಅವರ ಸಿನಿಮಾ ಅಂದರೆ ಅಲ್ಲಿ ಮಾಸ್‌ ಮಸಾಲಾ ಇರಲೇಬೇಕು. ಅದರಂತೆ ಇಲ್ಲಿಯೂ ಆಕ್ಷನ್, ಕಾಮಿಡಿ ಮತ್ತು ಸೆಂಟಿಮೆಂಟ್‌ಅನ್ನು ಹದವಾಗಿಯೇ ಬೆರೆಸಿದ್ದಾರೆ ನಿರ್ದೇಶಕರು. ಡಾಕು ಮಹಾರಾಜ್‌ ಮಾಮೂಲು ಮಾಸ್ ಮಸಾಲಾ ಕಥೆಯಾದರೂ, ಅದನ್ನು ಅಷ್ಟೇ ಅದ್ಧೂರಿಯಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕರು.

ಬಾಲಯ್ಯ ಅವರ ಇಮೇಜ್‌ಗೆ ತಕ್ಕಂತೆ ನಿರ್ದೇಶಕ ಬಾಬಿ ಕೊಲ್ಲಿ, ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ಳುವಂತಹ ಸಂಭಾಷಣೆ ಹೆಣೆದರೆ, ಸಾಹಸ ನಿರ್ದೇಶಕರು ಮಾಸ್ ಅವತಾರದಲ್ಲಿ ತೋರಿಸಿದ್ದಾರೆ. ಬಾಬಿ ಡಿಯೋಲ್‌ ಅವರ ನಟನೆಯೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ಸಿನಿಮಾ ನೋಡಿದವರು ಅಭಿಪ್ರಾಯಪಟ್ಟಿದ್ದಾರೆ.

ತೆರೆಮೇಲೆ ಡಾಕು ಅಬ್ಬರ; ಹೀಗಿದೆ ಪ್ರೇಕ್ಷಕನ ಪ್ರತಿಕ್ರಿಯೆ

"ಬಾಲಕೃಷ್ಣ ಅವರ ಸ್ಕ್ರೀನ್ ಪ್ರೆಸೆನ್ಸ್ ಅದ್ಭುತವಾಗಿದೆ. ಬಾಬಿ ಕೊಲ್ಲಿ ನಿಮ್ಮ ನಿರ್ದೇಶನ ಸೂಪರ್. ‌ಸಾಹಸ ನಿರ್ದೇಶನ ಮೈನವಿರೇಳಿಸುವಂತಿದೆ. ದೃಶ್ಯಗಳು ನೆಕ್ಸ್ಟ್‌ ಲೆವೆಲ್‌ನಲ್ಲಿವೆ. ತಮನ್ ಅವರ ಸಂಗೀತ, ಬಿಜಿಎಂ ಮನಸ್ಸಿಗೆ ಮುದ ನೀಡುತ್ತದೆ" ಎಂದು ಆಸ್ಟ್ರೇಲಿಯನ್ ತೆಲುಗು ಫಿಲ್ಮ್ಸ್ ವಿಮರ್ಶೆ ಮಾಡಿದೆ.

"ಡಾಕು ಮಹಾರಾಜ್ ಚಿತ್ರದ ಮೊದಲಾರ್ಧವು ಬ್ಲಾಕ್‌ಬಸ್ಟರ್‌. ತಮನ್ ಬಿಜಿಎಂ ಅದ್ಭುತ. ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಹಬ್ಬ" ಎಂದು ಪಾನಿಪುರಿ ಎಂಬ ಎಕ್ಸ್‌ ಖಾತೆ ಬಳಕೆದಾರರು ಬರೆದಿದ್ದಾರೆ.

"ತಮನ್ ಅವರ ಸಂಗೀತಕ್ಕೆ ಹೂಮಾಲೆ ಹಾಕಬೇಕು. ನಾಗವಂಶಿ ಅವರಿಗೆ ಹಿಟ್ ಪಟ್ಟ ಫಿಕ್ಸ್‌. ನಿರ್ದೇಶಕ ಬಾಬಿ ಅವರ ನಿರ್ದೇಶನವು ಅದ್ಭುತ" ಎಂದು ಸಿನಿಮಾ ನೋಡಿದವರೊಬ್ಬರು ಬರೆದುಕೊಂಡಿದ್ದಾರೆ. "ಸಿನಿಮಾ ನೋಡುವುದು ಸರಿ. ಆದರೆ ಕ್ಲೈಮ್ಯಾಕ್ಸ್ ಉತ್ತಮವಾಗಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಇನ್ನು ಕೆಲವರು ಕಾಮೆಂಟ್‌ ಮಾಡಿದ್ದಾರೆ.

"ಡಾಕು ಮಹಾರಾಜ್ ಸಿನಿಮಾದ ಮೊದಲಾರ್ಧ ಬ್ಲಾಕ್‌ಬಸ್ಟರ್‌. ದ್ವಿತೀಯಾರ್ಧ ಸೂಪರ್‌. ಒಟ್ಟಾರೆ ಕ್ರೇಜಿ ಬಿಜಿಎಂನೊಂದಿಗೆ ಮಾಸ್ ಆಕ್ಷನ್ ಎಂಟರ್ಟೈನರ್‌ ಚಿತ್ರವಾಗಿದೆ" 

"ನಾನು ಡಾಕು ಮಹಾರಾಜ್ ಸಿನಿಮಾ ನೋಡಿದೆ. ದ್ವಿತೀಯಾರ್ಧ ತುಂಬಾ ಕಷ್ಟಕರವಾಗಿತ್ತು. ತಮನ್ ಅವರ ಬಿಜಿಎಂ ವ್ಯರ್ಥವಾಯಿತು. ಚಿತ್ರದಲ್ಲಿ ಬರುವ ಕುದುರೆ ಎಪಿಸೋಡ್ ಚೆನ್ನಾಗಿ ವರ್ಕ್‌ ಆಗಿದೆ. ಕೆಟ್ಟ ಬರವಣಿಗೆ ಪ್ರತಿ ಫ್ರೇಮ್‌ನಲ್ಲಿ ಕಂಡುಬಂದಿದೆ" ಎಂದು ಟ್ವಿಟರ್ ಬಳಕೆದಾರರೊಬ್ಬರು 5ಕ್ಕೆ 1.75 ರೇಟಿಂಗ್‌ ಕೊಟ್ಟಿದ್ದಾರೆ.

ಒಟ್ಟಾರೆ ಡಾಕು ಮಹಾರಾಜ್‌ ಸಿನಿಮಾಕ್ಕೆ ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಜತೆಗೆ ಸಂಕ್ರಾಂತಿ ಪ್ರಯುಕ್ತ ಈ ಸಿನಿಮಾ ಭಾನುವಾರದಂದು ಬಿಡುಗಡೆ ಆಗಿದ್ದು ವಿಶೇಷ. 

Whats_app_banner