Zebra OTT: ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?
ಕನ್ನಡ ಸುದ್ದಿ  /  ಮನರಂಜನೆ  /  Zebra Ott: ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?

Zebra OTT: ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?

ಜೀಬ್ರಾ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲೂ ಚಿತ್ರತಂಡ ಬಹಳ ಶ್ರಮಪಟ್ಟಿತ್ತು. ಮೆಗಾಸ್ಟಾರ್ ಚಿರಂಜೀವಿ ಕೂಡ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬುದು ಉಲ್ಲೇಖನೀಯ.

ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ
ಒಟಿಟಿಗೆ ಲಗ್ಗೆಯಿಟ್ಟ ಡಾಲಿ ಧನಂಜಯ್ ಅಭಿನಯದ ಜೀಬ್ರಾ ಸಿನಿಮಾ

ಯಂಗ್ ಟ್ಯಾಲೆಂಟೆಡ್ ಹೀರೋ ಸತ್ಯದೇವ್ ಅಭಿನಯದ ಜೀಬ್ರಾ ಚಿತ್ರ ಥಿಯೇಟರ್‌ನಲ್ಲಿ ಪಾಸಿಟಿವ್ ಟಾಕ್ ಪಡೆದುಕೊಂಡಿತ್ತು. ಚಿತ್ರವು ನವೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ತಮಿಳಿನ ಹಿರಿಯ ನಟ ಸತ್ಯರಾಜ್ ಮತ್ತು ಕನ್ನಡ ನಟ ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಬ್ಯಾಂಕಿಂಗ್ ಹಗರಣಗಳ ಸುತ್ತ ಹೆಣೆದಿದ್ದ ಜೀಬ್ರಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ. ಆ ಮಟ್ಟಕ್ಕೆ ಆದಾಯ ಬಂದಿರಲಿಲ್ಲ. ಈಗ ಜೀಬ್ರಾ ಚಿತ್ರ ಒಟಿಟಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ಟ್ರೀಮ್ ಆಗುತ್ತಿದೆ.

ಜೀಬ್ರಾ ಚಲನಚಿತ್ರವು ನಿನ್ನೆ (ಡಿಸೆಂಬರ್ 20)ರಂದು ಆಹಾ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಎರಡು ದಿನಗಳ ಹಿಂದೆ ಡಿಸೆಂಬರ್ 18 ರಂದು ಆಹಾ ಗೋಲ್ಡ್ ಪ್ಲಾನ್ ಹೊಂದಿರುವವರಿಗೆ ಮಾತ್ರ ಚಲನಚಿತ್ರವನ್ನು ಲಭ್ಯಗೊಳಿಸಲಾಗಿತ್ತು. ಆಹಾ ಒಟಿಟಿ ಚಂದಾದಾರಿಕೆಯನ್ನು ಹೊಂದಿರುವ ಎಲ್ಲ ಬಳಕೆದಾರರು ಡಿಸೆಂಬರ್ 20ರಿಂದ ಜೀಬ್ರಾ ಸಿನಿಮಾವನ್ನು ವೀಕ್ಷಿಸಬಹುದು. ಆಹಾ ಒಟಿಟಿಯಲ್ಲಿ ಸಾಮಾನ್ಯ ಪ್ಲಾನ್ ಇರುವವರೂ ಈಗ ಈ ಸಿನಿಮಾ ನೋಡಬಹುದಾಗಿದೆ.

ಲಕ್ಕಿ ಭಾಸ್ಕರ್-ಜೀಬ್ರಾ ಸಾಮ್ಯತೆ

ಸಿನಿಮಾ ತೆರೆಕಂಡು ಚಿತ್ರಮಂದಿರಗಳಿಗೆ ಅಪ್ಪಳಿಸಿದ ಸಂದರ್ಭದಲ್ಲಿ ಅದೇ ಸಮಯದಲ್ಲಿ ಬಿಡುಗಡೆಯಾಗಿದ್ದ ಲಕ್ಕಿ ಭಾಸ್ಕರ್ ಚಿತ್ರದೊಂದಿಗಿನ ಕೆಲವು ಹೋಲಿಕೆಗಳು ಮತ್ತು ಪೈಪೋಟಿ ಜೀಬ್ರಾಗೆ ಅನನುಕೂಲವಾಗಿ ಪರಿಣಮಿಸಿತ್ತು. ಜೀಬ್ರಾ ಚಿತ್ರವು ಬ್ಯಾಂಕಿಂಗ್ ಹಗರಣಗಳು ಮತ್ತು ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿತ್ತು. ಈ ಹಿನ್ನೆಲೆಯಲ್ಲಿ ಜೀಬ್ರಾ ಸಿನಿಮಾ ಲಕ್ಕಿ ಭಾಸ್ಕರ್ ಸಿನಿಮಾಗಳ ನಡುವೆ ಒಂದಷ್ಟು ಸಾಮ್ಯತೆಗಳಿದ್ದರೂ ಸಹ ಜೀಬ್ರಾ ವಿಭಿನ್ನ ಕಥೆ ಮತ್ತು ಚಿತ್ರಕಥೆ ಹೊಂದಿತ್ತು. ಇದು ಜೀಬ್ರಾ ಸಿನಿಮಾದ ಕುರಿತು ಒಳ್ಳೆಯ ಮಾತುಗಳು ಕೇಳಿಬಂದಿದ್ದವು. ಅದರಲ್ಲೂ ಜೀಬ್ರಾ ಸಿನಿಮಾದಲ್ಲಿ ಸತ್ಯದೇವ್ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಲಕ್ಕಿ ಭಾಸ್ಕರ್ ಮತ್ತು ಅಮರನ್ ಸಿನಿಮಾಗಳ ಎದುರು ಕನ್ನಡ ಜೀಬ್ರಾ ಸಿನಿಮಾ ತಕ್ಕ ಮಟ್ಟಿಗೆ ಸ್ಪರ್ಧೆ ನೀಡಿತ್ತು.

ಜೀಬ್ರಾ ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸಿದ್ದಾರೆ. ಏಕಾಏಕಿ ಭಾರಿ ಹಣದ ಅಗತ್ಯವಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಎದುರಿಸಿದ ಸವಾಲುಗಳು ಮತ್ತು ಸವಾಲನ್ನು ಮೀರಲು ನಡೆಸಿದ ಪ್ರಯತ್ನಗಳ ವಿಷಯಗಳನ್ನು ಈ ಸಿನಿಮಾದ ಕಥಾ ಹಂದರ ಒಳಗೊಂಡಿತ್ತು. ಜೊತೆಗೆ ಕಾಮಿಡಿ ಡ್ರಾಮಾ ಕೂಡ ಕಥೆಯಲ್ಲಿ ಸೇರ್ಪಡೆಗೊಂಡಿತ್ತು. ಈ ಎಲ್ಲ ಅಂಶಗಳು ಜೀಬ್ರಾ ಚಿತ್ರ ಸುಮಾರು ರೂ.6.2 ಕೋಟಿ ಕಲೆಕ್ಷನ್ ಮಾಡಲು ಕಾರಣವಾದವು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. ಆದರೆ, ದೊರೆತ ಪಾಸಿಟಿವ್‌ ಟಾಕ್‌ಗೆ ತಕ್ಕಂತೆ ಗಲ್ಲಾಪೆಟ್ಟಿಗೆಯ ಕಲೆಕ್ಷನ್‌ ದೊಡ್ಡದಾಗಿರಲಿಲ್ಲ. ಈಗಾಗಲೇ ಹೇಳಿದಂತೆ ಜೀಬ್ರಾಗೆ ಲಕ್ಕಿ ಭಾಸ್ಕರ್ ಮತ್ತು ಅಮರನ್ ಸಿನಿಮಾಗಳು ದೊಡ್ಡ ಮಟ್ಟದ ಸ್ಪರ್ಧೆಯನ್ನು ನೀಡಿದವು.

ಜೀಬ್ರಾ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲೂ ಚಿತ್ರತಂಡ ಬಹಳ ಶ್ರಮಪಟ್ಟಿತ್ತು. ಮೆಗಾಸ್ಟಾರ್ ಚಿರಂಜೀವಿ ಕೂಡ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂಬುದು ಉಲ್ಲೇಖನೀಯ.

ಜೀಬ್ರಾ ಚಿತ್ರತಂಡದ ವಿವರ

ಜೀಬ್ರಾ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. ಧನಂಜಯ ಮತ್ತು ಸತ್ಯರಾಜ್ ಜೊತೆಗೆ ಅಮೃತಾ ಅಯ್ಯರ್, ಶಂಕರ್, ಸುನಿಲ್ ವರ್ಮಾ ಮತ್ತು ಸತ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬಾಲ ಸುಂದರಂ, ಎಸ್ ಎನ್ ರೆಡ್ಡಿ ಮತ್ತು ದಿನೇಶ್ ಸುಂದರಂ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Whats_app_banner