Love Mocktail 3: ಆದಿ- ನಿಧಿ ಲವ್‌ಸ್ಟೋರಿಗೆ ಮತ್ತೊಂದು ಟ್ವಿಸ್ಟ್‌..; ‘ಲವ್‌ ಮಾಕ್‌ಟೇಲ್‌ 3’ ಘೋಷಿಸಿದ ಡಾರ್ಲಿಂಗ್‌ ಕೃಷ್ಣ..
ಕನ್ನಡ ಸುದ್ದಿ  /  ಮನರಂಜನೆ  /  Love Mocktail 3: ಆದಿ- ನಿಧಿ ಲವ್‌ಸ್ಟೋರಿಗೆ ಮತ್ತೊಂದು ಟ್ವಿಸ್ಟ್‌..; ‘ಲವ್‌ ಮಾಕ್‌ಟೇಲ್‌ 3’ ಘೋಷಿಸಿದ ಡಾರ್ಲಿಂಗ್‌ ಕೃಷ್ಣ..

Love Mocktail 3: ಆದಿ- ನಿಧಿ ಲವ್‌ಸ್ಟೋರಿಗೆ ಮತ್ತೊಂದು ಟ್ವಿಸ್ಟ್‌..; ‘ಲವ್‌ ಮಾಕ್‌ಟೇಲ್‌ 3’ ಘೋಷಿಸಿದ ಡಾರ್ಲಿಂಗ್‌ ಕೃಷ್ಣ..

‘ಲವ್‌ ಮಾಕ್‌ಟೇಲ್‌ 3’ ಸಿನಿಮಾ ಆಗಲಿದೆ ಎಂಬ ಬಗ್ಗೆ ಈವರೆಗೂ ಹೆಚ್ಚು ಸುದ್ದಿಯಾಗಿಲ್ಲ. ಸ್ವತಃ ಕೃಷ್ಣ ಮತ್ತು ಮಿಲನಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಯುಗಾದಿ ಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಬೆಲ್ಲವನ್ನೇ ನೀಡಿದೆ.

ಆದಿ- ನಿಧಿ ಲವ್‌ಸ್ಟೋರಿಗೆ ಮತ್ತೊಂದು ಟ್ವಿಸ್ಟ್‌..; ‘ಲವ್‌ ಮಾಕ್‌ಟೇಲ್‌ 3’ ಘೋಷಿಸಿದ ಡಾರ್ಲಿಂಗ್‌ ಕೃಷ್ಣ..
ಆದಿ- ನಿಧಿ ಲವ್‌ಸ್ಟೋರಿಗೆ ಮತ್ತೊಂದು ಟ್ವಿಸ್ಟ್‌..; ‘ಲವ್‌ ಮಾಕ್‌ಟೇಲ್‌ 3’ ಘೋಷಿಸಿದ ಡಾರ್ಲಿಂಗ್‌ ಕೃಷ್ಣ..

Love Mocktail 3: ಸ್ಯಾಂಡಲ್‌ವುಡ್‌ನಲ್ಲಿ ‘ಲವ್‌ ಮಾಕ್‌ಟೇಲ್‌’ ಯಶಸ್ವಿ ಸಿನಿಮಾಗಳಲ್ಲೊಂದು. ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಕೃಷ್ಣ ನಿಭಾಯಿಸಿದ್ದರೆ, ಮಿಲನಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದರು. ಸಿನಿಮಾ ನೋಡಿದ ಪ್ರೇಕ್ಷಕ ಮೆಚ್ಚಿಗೆ ಮಹಾಪೂರವನ್ನೇ ಸುರಿಸಿದ್ದ. ಈ ಸಿನಿಮಾದ ಗೆಲುವು ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್‌ಗೆ ದೊಡ್ಡ ಬೆನ್ನುಲುಬಾಗಿ ನಿಂತಿತು. ಅದಾದ ಮೇಲೆ ಸೀಕ್ವೆಲ್‌ ಮಾಡುವ ಬಗ್ಗೆಯೂ ಹೇಳಿಕೊಂಡಿತು. ಆ ಚಿತ್ರವನ್ನೂ ತೆರೆಗೆ ತಂದಿತ್ತು ಈ ಜೋಡಿ. ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಯಾರೂ ಊಹಿಸದ ಸುದ್ದಿಯೊಂದನ್ನು ನೀಡಿದೆ.

‘ಲವ್‌ ಮಾಕ್‌ಟೇಲ್‌ 3’ ಸಿನಿಮಾ ಆಗಲಿದೆ ಎಂಬ ಬಗ್ಗೆ ಈವರೆಗೂ ಹೆಚ್ಚು ಸುದ್ದಿಯಾಗಿಲ್ಲ. ಸ್ವತಃ ಕೃಷ್ಣ ಮತ್ತು ಮಿಲನಾ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದೀಗ ಯುಗಾದಿ ಹಬ್ಬಕ್ಕೆ ಅವರ ಅಭಿಮಾನಿಗಳಿಗೆ ಬೆಲ್ಲವನ್ನೇ ನೀಡಿದೆ. ಅಂದರೆ, ‘ಲವ್‌ ಮಾಕ್‌ಟೇಲ್‌ 3’ ಚಿತ್ರವನ್ನು ಘೋಷಿಸಿದ್ದಾರೆ ಮಿಲನಾ ಮತ್ತು ಕೃಷ್ಣ! ಈ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿದೆ. ಸೋಷಿಯಲ್‌ ಮೀಡಿಯಾದಲ್ಲಿ ‘ಲವ್‌ ಮಾಕ್‌ಟೇಲ್‌ 3’ ಶುರು ಎಂದು ಬರೆದುಕೊಂಡು ಯುಗಾದಿಯ ಶುಭಾಶಯ ತಿಳಿಸಿದೆ ಈ ಜೋಡಿ.

2020ರಲ್ಲಿ ಮೊದಲ ಭಾಗ

‘ಲವ್‌ ಮಾಕ್‌ಟೇಲ್‌’ ಚಿತ್ರ 2020ರ ಜನವರಿಯಲ್ಲಿ ರಿಲೀಸ್‌ ಆಗಿತ್ತು. ಚಿತ್ರಮಂದಿರದಲ್ಲಿ ಸದ್ದು ಮಾಡಿದ್ದ ಈ ಸಿನಿಮಾ, ಹೆಚ್ಚು ದಿನ ಥಿಯೇಟರ್‌ ಅಂಗಳದಲ್ಲಿ ನಿಂತಿರಲಿಲ್ಲ. ಆದರೆ, ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿತ್ತು. ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿಯೂ ಸ್ಟ್ರೀಮ್‌ ಆಗಿ ಮೆಚ್ಚುಗೆ ಪಡೆದಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಚಿತ್ರಮಂದಿರದಲ್ಲಿ ಸಿನಿಮಾ ಮಿಸ್‌ ಮಾಡಿಕೊಂಡವರು, ಒಟಿಟಿಯಲ್ಲಿ ಸಿನಿಮಾ ನೋಡಿ, ಗೂಗಲ್‌ ಪೇ ಮೂಲಕ ಹಣ ರವಾನಿಸಿದ್ದರು.

ಮೊದಲ ಭಾಗ ಹಿಟ್‌ ಆಗುತ್ತಿದ್ದಂತೆ, ಎರಡು ವರ್ಷದ ಬಳಿಕ ಅಂದರೆ 2022ರ ಫೆಬ್ರವರಿಯಲ್ಲಿ ‘ಲವ್‌ ಮಾಕ್‌ಟೇಲ್‌ 2’ ಸಿನಿಮಾ ತೆರೆಗೆ ಅಪ್ಪಳಿಸಿತು. ಹಲವು ಕುತೂಹಲಗಳೊಂದಿಗೆ ರಿಲೀಸ್‌ ಆಗಿದ್ದ ಈ ಸಿನಿಮಾ ನೋಡುಗನಿಗೆ ಬೇಸರ ಮೂಡಿಸಿರಲಿಲ್ಲ. ಇದೀಗ ನಿರ್ದೇಶಕ ಕೃಷ್ಣ ಈ ಎರಡೂ ಸಿನಿಮಾಗಳ ಕಥೆಯನ್ನೇ 3ನೇ ಭಾಗದಲ್ಲಿಯೂ ಮುಂದುವರಿಸಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ

Kantara 2 Update: ಯುಗದ ಆದಿಯ ದಿನವೇ ‘ಕಾಂತಾರ’ ಪ್ರೀಕ್ವೆಲ್‌ಗೆ ಕೈಯಿಟ್ಟ ರಿಷಬ್ ಶೆಟ್ಟಿ..

Kantara 2 Update: ಸ್ಯಾಂಡಲ್‌ವುಡ್‌ನ ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಆ ಚಿತ್ರದ ಪ್ರೀಕ್ವೆಲ್‌ ಆಗುತ್ತಿರುವುದು ಈಗಾಗಲೇ ಅಧಿಕೃತವಾಗಿದೆ. ಇತ್ತ ತೆರೆಹಿಂದೆ ಆ ಚಿತ್ರದ ಕೆಲಸಗಳಲ್ಲಿ ರಿಷಬ್‌ ಶೆಟ್ಟಿ ಮತ್ತವರ ತಂಡ ಬಿಜಿಯಾಗಿದೆ. ಯುಗಾದಿ ಹಬ್ಬದ ದಿನದಂದೇ ಈ ವಿಚಾರವನ್ನು ಅಧಿಕೃತವಾಗಿ ರಿಷಬ್‌ ಶೆಟ್ಟಿ ಘೋಷಿಸಿದ್ದಾರೆ. ಕಾಂತಾರ ಸಿನಿಮಾ ಕೇವಲ ಕನ್ನಡ, ಕರ್ನಾಟಕ ಮಾತ್ರವಲ್ಲದೆ ಪರಭಾಷೆಗಳಲ್ಲಿಯೂ ದೊಡ್ಡ ಮಟ್ಟದ ಯಶಸ್ಸು ಗಳಿಸಿದ ಚಿತ್ರ. ಅದರಲ್ಲೂ ಹಿಂದಿ ಭಾಷಿಕರನ್ನು ಸೆಳೆದ ಕನ್ನಡದ ಸಿನಿಮಾ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ನೋಡಿದ ಎಷ್ಟೋ ಮಂದಿ, ಈ ಚಿತ್ರದ ಮುಂದುವರಿದ ಭಾಗ ಯಾವಾಗ? ಎಂದು ಪ್ರಶ್ನಿಸಿದ್ದರು. ಅದಕ್ಕಾಗಿ ನಾವು ಕಾಯುತ್ತಿದ್ದೇವೆ ಎಂದಿದ್ದರು. ಇದೀಗ ‘ಕಾಂತಾರ’ ಚಿತ್ರದ ಪ್ರೀಕ್ವೆಲ್‌ಗೆ ಯುಗದ ಆದಿಯ ದಿನವೇ ಶುಭಾರಂಭ ಮಾಡಿದ್ದಾರೆ. ಪೂರ್ಣ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner