ದರ್ಶನ್‍ ಬಿಡುಗಡೆ; ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ- ‘ದಿ ಡೆವಿಲ್’ ಚಿತ್ರೀಕರಣ ಆರಂಭ ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  ದರ್ಶನ್‍ ಬಿಡುಗಡೆ; ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ- ‘ದಿ ಡೆವಿಲ್’ ಚಿತ್ರೀಕರಣ ಆರಂಭ ಯಾವಾಗ?

ದರ್ಶನ್‍ ಬಿಡುಗಡೆ; ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ- ‘ದಿ ಡೆವಿಲ್’ ಚಿತ್ರೀಕರಣ ಆರಂಭ ಯಾವಾಗ?

ದರ್ಶನ್‌ ಹೈ ಕೋರ್ಟ್ ನೀಡಿದ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ. ಅವರ ಸಿನಿಮಾ ‘ದಿ ಡೆವಿಲ್’ ಚಿತ್ರೀಕರಣ ನಿಂತು ಹೋಗಿತ್ತು. ಮತ್ತೆ ಯಾವಾಗಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

‘ದಿ ಡೆವಿಲ್’ ಚಿತ್ರೀಕರಣ ಆರಂಭ ಯಾವಾಗ?
‘ದಿ ಡೆವಿಲ್’ ಚಿತ್ರೀಕರಣ ಆರಂಭ ಯಾವಾಗ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್‍ ಅವರಿಗೆ ಹೈ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ದರ್ಶನ್‍ಗೆ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಕೆಲವು ತಿಂಗಳುಗಳ ಕಾಲ ಬೇಸರದಲ್ಲಿದ್ದ ದರ್ಶನ್‍ ಸಹ ಖುಷಿಯಾಗಿದ್ದಾರೆ.

ಜೂನ್‍ ತಿಂಗಳಲ್ಲಿ ದರ್ಶನ್‍ ಬಂಧನಕ್ಕೊಳಗಾದಾಗ, ಅವರು ಮೂರ್ನಾಲ್ಕು ತಿಂಗಳು ಹೊರಗೆ ಬರುವುದು ಕಷ್ಟ ಎಂದು ಹೇಳಲಾಗಿತ್ತು. ಹಾಗಾದರೆ, ದರ್ಶನ್‍ ಅವರ ಮುಂದಿನ ಚಿತ್ರಗಳ ಕಥೆಯೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ದರ್ಶನ್‍ ಬಂಧನದಿಂದ ನೇರವಾಗಿ ಸಮಸ್ಯೆಯಾಗುವುದು ‘ದಿ ಡೆವಿಲ್‍’ ಚಿತ್ರಕ್ಕೆ.

‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣ

‘ದಿ ಡೆವಿಲ್‍’ ಚಿತ್ರದ ಚಿತ್ರೀಕರಣ ಕೆಲವು ತಿಂಗಳುಗಳ ಹಿಂದೆ ಪ್ರಾರಂಭವಾಗಿದ್ದು, ಅಕ್ಟೋಬರ್‍ನಲ್ಲಿ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ‘ಡೆವಿಲ್‍’ ಚಿತ್ರೀಕರಣ ಸಮಯದಲ್ಲಿ ದರ್ಶನ್‍ ಅವರ ಎಡಗೈಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಶಸ್ತ್ರಚಿಕಿತ್ಸೆ ನಡೆದಿತ್ತು. ಇದರಿಂದ ಚಿತ್ರೀಕರಣ ಸಹ ವಿಳಂಬವಾಗಿತ್ತು. ಜೂನ್‍ ತಿಂಗಳಲ್ಲಿ ಚಿತ್ರೀಕರಣ ಪುನಃ ಪ್ರಾರಂಭವಾಗಿದ್ದಷ್ಟೇ ಅಲ್ಲ, ಡಿಸೆಂಬರ್‌ನಲ್ಲಿ ಕ್ರಿಸ್ಮಸ್‍ ವೇಳೆಗೆ ಚಿತ್ರ ಬಿಡುಗಡೆ ಎಂದು ಚಿತ್ರತಂಡ ಎಂದು ಅಧಿಕೃತವಾಗಿ ಘೋಷಿಸಿತ್ತು.

ಹಾಗಿರುವಾಗಲೇ, ದರ್ಶನ್‍ ಬಂಧನವಾಯ್ತು. ಆ ಪರಿಸ್ಥಿತಿಯಲ್ಲಿ ದರ್ಶನ್ ಯಾವಾಗ ಬಿಡುಗಡೆಯಾಗುತ್ತಾರೆ ಎಂಬ ವಿಷಯದ ಬಗ್ಗೆ ಸ್ಪಷ್ಟತೆ ಇರಲಿಲ್ಲ. ದರ್ಶನ್‍ ಬಿಡುಗಡೆಯಾಗಿ, ಚಿತ್ರೀಕರಣ ಮುಗಿದು, ಹೇಳಿದ ಸಮಯಕ್ಕೆ ಬಿಡುಗಡೆ ಆಗುವುದು ಸಂಶಯವಾಗಿತ್ತು. ‘ದಿ ಡೆವಿಲ್‍’ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಕಡಿಮೆ ಇತ್ತು.

ಬೇಲ್‍ ಸಿಕ್ಕಿರುವುದರಿಂದ ಪುನಃ ಚಿತ್ರೀಕರಣ ಆರಂಭವಾಗಬಹುದು

ಇದೀಗ ದರ್ಶನ್‍ ಬಿಡುಗಡೆ ಆಗಿರುವುದರಿಂದ ‘ದಿ ಡೆವಿಲ್‍’ ಚಿತ್ರಕ್ಕೆ ಪುನಃ ಜೀವ ಬಂದಂತಾಗಿದೆ. ದರ್ಶನ್‍ಗೆ ಬೇಲ್‍ ಸಿಕ್ಕಿರುವುದರಿಂದ ಅವರು ಪುನಃ ಚಿತ್ರೀಕರಣದಲ್ಲಿ ಭಾಗವಹಿಸಬಹುದಾಗಿದೆ. ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು ಮತ್ತು ಬೆಂಗಳೂರು ಬಿಟ್ಟು ಹೋಗಬಾರದು ಎಂಬ ಷರತ್ತುಗಳ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲೇ ದರ್ಶನ್‍ ಚಿತ್ರೀಕರಣ ಮಾಡಬಹುದಾಗಿದೆ. ಆದರೆ, ಸದ್ಯಕ್ಕೆ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರು ಯಾವಾಗ ಮತ್ತೆ ಚಿತ್ರೀಕರಣದಲ್ಲಿ ಬಾಗವಹಿಸಬಹುದು ಎಂಬ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಸದ್ಯ ಚಿಕಿತ್ಸೆ ಚಾಲ್ತಿಯಲ್ಲಿರುವುದರಿಂದ, ಅವರು ದೈಹಿಕವಾಗಿ ಫಿಟ್‍ ಆಗುವುದಕ್ಕೆ ಇನ್ನೂ ಒಂದಿಷ್ಟು ಸಮಯ ಖಂಡಿತಾ ಬೇಕು. ಆ ನಂತರ ಅವರು ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದಕ್ಕೆಲ್ಲಾ ಎರಡ್ಮೂರು ತಿಂಗಳುಗಳು ಬೇಕೇ ಬೇಕು. ಆ ನಂತರ ಅವರು ಚಿತ್ರೀಕರಣದಲ್ಲಿ ಭಾಗವಹಿಸಿದರೂ, ‘ದಿ ಡೆವಿಲ್‍’ 2025ರ ಜೂನ್‍ ನಂತರ ಬಿಡುಗಡೆಯಾಗಲಿದೆ.

ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ‘ಕಾಟೇರ’ ನಂತರ ದರ್ಶನ್‍ ಅಭಿನಯದ ಒಂದಿಷ್ಟು ಹಳೆಯ ಚಿತ್ರಗಳು ಮರುಬಿಡುಗಡೆಯಾಗಿದ್ದು ಬಿಟ್ಟರೆ, ಮಿಕ್ಕಂತೆ ಯಾವುದೇ ಹೊಸ ಚಿತ್ರವೂ ಬಿಡುಗಡೆಯಾಗಿಲ್ಲ. ಅವರ ಮುಂದಿನ ಚಿತ್ರಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ‘ದಿ ಡೆವಿಲ್‍’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

Whats_app_banner