ಕನ್ನಡ ಸುದ್ದಿ  /  ಮನರಂಜನೆ  /  Darshan Election Campaign: ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ, ಗೆಳೆಯ ಸಚ್ಚಿದಾನಂದ ಪರ ದರ್ಶನ್‌ ಮತ ಯಾಚನೆ

Darshan Election Campaign: ಶ್ರೀರಂಗಪಟ್ಟಣ ಬಿಜೆಪಿ ಅಭ್ಯರ್ಥಿ, ಗೆಳೆಯ ಸಚ್ಚಿದಾನಂದ ಪರ ದರ್ಶನ್‌ ಮತ ಯಾಚನೆ

ತಮ್ಮನ್ನು ನೋಡಲು ಬಂದ ಅಭಿಮಾನಿಗಳತ್ತ ದರ್ಶನ್‌ ತೆರೆದ ವಾಹನದಲ್ಲೇ ನಿಂತು ಕೈ ಬೀಸಿ ವಿಶ್‌ ಮಾಡಿದರು. ಸುಮಲತಾ ಕೂಡಾ ಮಾತನಾಡಿ ಸಚ್ಚಿದಾನಂದ ಪರ ಮತ ಯಾಚನೆ ಮಾಡಿದರು. ದರ್ಶನ್‌ ಬರುತ್ತಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಪಕ್ಕದ ಊರುಗಳಿಂದ ಕೂಡಾ ಅಭಿಮಾನಿಗಳು ಆಗಮಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ದರ್ಶನ್‌ ಬಿಜೆಪಿ ಪರ ಪ್ರಚಾರ
ಶ್ರೀರಂಗಪಟ್ಟಣದಲ್ಲಿ ದರ್ಶನ್‌ ಬಿಜೆಪಿ ಪರ ಪ್ರಚಾರ (PC: Facebook)

ರಾಜ್ಯದಲ್ಲಿ ಚುನಾವಣೆ ಕಾವು ದಿನೇ ದಿನೆ ಹೆಚ್ಚುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಭರ್ಜರಿ ಪ್ರಚಾರ ಕೂಡಾ ಆರಂಭಿಸಿದ್ದಾರೆ. ಈ ಬಾರಿ ಕೂಡಾ ಎಂದಿನಂತೆ ಚುನಾವಣೆ ಪ್ರಚಾರದಲ್ಲಿ ತಾರೆಯರ ರಂಗು ಹೆಚ್ಚಾಗಿದೆ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ಕಿಚ್ಚ ಸುದೀಪ್‌ ಇಬ್ಬರೂ ಬಿಜೆಪಿ ಪರ ಪ್ರಚಾರಕ್ಕೆ ಇಳಿದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

2019 ಲೋಕಸಭೆ ಚುನಾವಣೆ ವೇಳೆ ಸುಮಲತಾ ಅಂಬರೀಶ್‌ ಪರ ಭರ್ಜರಿ ಪ್ರಚಾರ ಮಾಡಿದ್ದ ದರ್ಶನ್‌ ಈಗ ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಅವರ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ. ಏಪ್ರಿಲ್‌ 17 ಸಚ್ಚಿದಾನಂದ ಹುಟ್ಟುಹಬ್ಬ ಆಗಿದ್ದು ಅದೇ ದಿನ, ಅವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ಮಂಡ್ಯ ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ರಾಜ್ಯ ಕಾರ್ಯಕರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ. ಎಸ್. ನಂಜುಡೇಗೌಡ ಹಾಗೂ ಮಂಡ್ಯ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಮೇಳಾಪುರ ಶ್ರೀಧರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ನಂತರ ನಡೆದ ರ್ಯಾಲಿಯಲ್ಲಿ ದರ್ಶನ್‌ ಹಾಗೂ ಇನ್ನಿತರರು ತೆರೆದ ವಾಹನದಲ್ಲಿ ಸಚ್ಚಿದಾನಂದ ಜೊತೆ ಸೇರಿ ಮತ ಯಾಚನೆ ಮಾಡಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳತ್ತ ದರ್ಶನ್‌ ತೆರೆದ ವಾಹನದಲ್ಲೇ ನಿಂತು ಕೈ ಬೀಸಿ ವಿಶ್‌ ಮಾಡಿದರು. ಸುಮಲತಾ ಕೂಡಾ ಮಾತನಾಡಿ ಸಚ್ಚಿದಾನಂದ ಪರ ಮತ ಯಾಚನೆ ಮಾಡಿದರು. ದರ್ಶನ್‌ ಬರುತ್ತಿದ್ದಾರೆ ಎಂದು ತಿಳಿದು ಅವರನ್ನು ನೋಡಲು ಪಕ್ಕದ ಊರುಗಳಿಂದ ಕೂಡಾ ಅಭಿಮಾನಿಗಳು ಆಗಮಿಸಿದ್ದರು. ಕೂಲಿಂಗ್‌ ಗ್ಲಾಸ್‌, ಚೆಕ್ಸ್‌ ಷರ್ಟ್‌ ಧರಿಸಿ ದರ್ಶನ್‌ ಬಹಳ ಸ್ಟೈಲಿಷ್‌ ಆಗಿ ಕಾಣುತ್ತಿದ್ದರು. ಕೆಲವು ದಿನಗಳ ಹಿಂದೆ ಕೂಡಾ 'ಕ್ರಾಂತಿ' ಚಿತ್ರದ ಪ್ರಚಾರಕ್ಕಾಗಿ ದರ್ಶನ್‌ ಶ್ರೀರಂಗಪಟ್ಟಣ ಭೇಟಿ ನೀಡಿದ್ದರು. ಕೆಲವು ದಿನಗಳ ಹಿಂದೆ ಗೆಳೆಯ ಸಚ್ಚಿದಾನಂದ ಜೊತೆ ದರ್ಶನ್‌ ತಿರುಪತಿಗೆ ತೆರಳಿದ್ದರು.

ದರ್ಶನ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಸದ್ಯಕ್ಕೆ ಅವರು 'ಕಾಟೇರ' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಮೈಸೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ರಾಬರ್ಟ್‌ ನಂತರ ಈ ಚಿತ್ರದ ಮೂಲಕ ತರುಣ್‌ ಸುಧೀರ್‌ ಹಾಗೂ ದರ್ಶನ್‌ ಮತ್ತೆ ಒಂದಾಗಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ನಟಿಸುತ್ತಿದ್ದಾರೆ. ಇತ್ತೀಚೆಗೆ ರಾಧನಾ, ಪ್ರಭಾವತಿ ಪಾತ್ರದ ಪೋಸ್ಟರ್‌ ರಿಲೀಸ್‌ ಆಗಿತ್ತು. ಇದು 70ರ ದಶಕದ ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿರುವ ಸಿನಿಮಾ.

ಟಿ20 ವರ್ಲ್ಡ್‌ಕಪ್ 2024