Kabza teaser release date: ಬಹುನಿರೀಕ್ಷಿತ 'ಕಬ್ಜ' ಟೀಸರ್ ಬಿಡುಗಡೆಗೆ ದಿನಾಂಕ ಫಿಕ್ಸ್..ಉಪ್ಪಿ ಬರ್ತ್‌ಡೇ ದಿನವಂತೂ ಅಲ್ಲ..!
ಉಪೇಂದ್ರ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಸಿನಿಮಾ ಆರಂಭದಿಂದಲೂ ಟಾಕ್ ಆಫ್ ದಿ ಟೌನ್ ಎನಿಸಿದೆ. ಈ ಸಿನಿಮಾ ಯಾವಾಗ ಬಿಡುಗಡೆ ಆಗಬಹುದು ಎಂದು ಎಲ್ಲರೂ ಕಾಯುತ್ತಿದ್ದಾರೆ. ಸದ್ಯಕ್ಕೆ ಟೀಸರ್ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ.
ಕನ್ನಡದ ಬಹುನಿರೀಕ್ಷಿತ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಅಪ್‌ಡೇಟ್‌ಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಉಪೇಂದ್ರ ಹಾಗೂ ಸುದೀಪ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಸಿನಿಮಾ ಆರಂಭದಿಂದಲೂ ಟಾಕ್ ಆಫ್ ದಿ ಟೌನ್ ಎನಿಸಿದೆ. ಈ ಸಿನಿಮಾ ಯಾವಾಗ ಬಿಡುಗಡೆ ಆಗಬಹುದು ಎಂದು ಎಲ್ಲರೂ ಕಾಯುತ್ತಿದ್ದಾರೆ. ಸದ್ಯಕ್ಕೆ ಟೀಸರ್ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನಟ ಉಪೇಂದ್ರ ಹುಟ್ಟುಹಬ್ಬಕ್ಕೂ ಮುನ್ನ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದೆ. ಅಂದರೆ ಉಪೇಂದ್ರ ಹುಟ್ಟುಹಬ್ಬ ಸೆಪ್ಟೆಂಬರ್ 18ಕ್ಕೆ. ಕಬ್ಜ ಚಿತ್ರದ ಟೀಸರ್ ಸೆಪ್ಟೆಂಬರ್ 17 ಸಂಜೆ 5 ಗಂಟೆಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ.
ಕನ್ನಡಿಗರ ಹೆಮ್ಮೆಯ 'ಕೆಜಿಎಫ್ 2' ಸಿನಿಮಾ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ. ಕನ್ನಡಿಗರ ಮತ್ತೊಂದು ಹೆಮ್ಮೆಯ 'ಕಬ್ಜ' ಚಿತ್ರ ಕೂಡಾ ಇದೇ ಮಟ್ಟದಲ್ಲಿ ಹೆಸರು ಮಾಡಬೇಕು ಎಂಬುದು ಕನ್ನಡಿಗರ ಆಸೆ. ಆದ್ದರಿಂದ ಈ ಚಿತ್ರ ಹೇಗೆ ಇರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾ ಬಹುತೇಕ ಮುಕ್ತಾಯವಾಗಿದೆ. ಈ ಸಿನಿಮಾ ಸುಮಾರು 7 ಭಾಷೆಗಳಲ್ಲಿ ತೆರೆ ಕಾಣುತ್ತಿರುವುದರಿಂದ ಕೊಂಚ ತಡವಾಗುತ್ತಿದೆ. ಸೆಪ್ಟೆಂಬರ್ 17 ರಂದು ಟೀಸರ್ ಬಿಡುಗಡೆ ಮಾಡಿ, ಶೀಘ್ರದಲ್ಲೇ ಸಿನಿಮಾ ರಿಲೀಸ್ ದಿನಾಂಕವನ್ನು ಕೂಡಾ ಘೋಷಿಸುವುದಾಗಿ ನಿರ್ದೇಶಕ-ನಿರ್ಮಾಪಕ ಆರ್. ಚಂದ್ರು ಮಾಹಿತಿ ನೀಡಿದ್ದಾರೆ.
'ಕಬ್ಜ' ಚಿತ್ರವನ್ನು ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿ ಆರ್. ಚಂದ್ರು ಅವರೇ ನಿರ್ಮಿಸಿದ್ದು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಪ್ರಕಾಶ್ ರೈ, ಶ್ರೀನಿವಾಸ್ ರಾವ್ ಕೋಟಾ, ಜಗಪತಿ ಬಾಬು, ಎಂ. ಕಾಮರಾಜ್, ಕಬೀರ್ ದುಹಾನ್ ಸಿಂಗ್, ಬೊಮನ್ ಇರಾನಿ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಸೇರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು 'ಕಬ್ಜ' ಟೀಸರ್
'ಐ ಲವ್ ಯು' ಚಿತ್ರದ ನಂತರ ನಿರ್ದೇಶಕ ಆರ್. ಚಂದ್ರು ಹಾಗೂ ಉಪೇಂದ್ರ ಮತ್ತೆ ಒಂದಾಗಿದ್ದು ಸಿನಿಪ್ರಿಯರಿಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ಗಳು, ಮೋಷನ್ ಪೋಸ್ಟರ್ಗಳನ್ನು ನೋಡಿದರೆ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿಬಂದಿರುವುದು ತಿಳಿಯುತ್ತದೆ. ಕಳೆದ ವರ್ಷ ದೀಪಾವಳಿ ವೇಳೆಗೆ ಚಿತ್ರದ ಟೀಸರನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಆರ್. ಚಂದ್ರು ಹೇಳಿದ್ದರು. ಆದರೆ ಆಗ ಟೀಸರ್ ಬಿಡುಗಡೆ ಮಾಡಿರಲಿಲ್ಲ. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ಚಂದ್ರು, ನಮ್ಮ ಮನೆಯಲ್ಲಿ ದೀಪಾವಳಿಯನ್ನೇ ಮಾಡಿಲ್ಲ, ಇನ್ನು ಟೀಸರ್ ಹೇಗೆ ಬಿಡುಗಡೆ ಮಾಡಲಿ ಎಂದಿದ್ದರು. ಏಕೆಂದರೆ ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ನಿಧನರಾಗಿದ್ದು ಎಲ್ಲರಿಗೂ ಬಹಳ ನೋವು ನೀಡಿತ್ತು. ಆದ್ದರಿಂದ ಆ ಸಮಯದಲ್ಲಿ ಟೀಸರ್ ಬಿಡುಗಡೆ ಮಾಡಿರಲಿಲ್ಲ.