Devara OTT: ಸಿನಿಮಾ ಬಿಡುಗಡೆಗೂ ಮೊದಲೇ ಜೂನಿಯರ್ ಎನ್ಟಿಆರ್ ದೇವರ ಈ ಒಟಿಟಿ ಜೊತೆ ಒಪ್ಪಂದ; ವೀಕ್ಷಣೆ ಯಾವಾಗ?
Devara Part 1 OTT Streaming: ದೇವರ ಪಾರ್ಟ್-1 ಸೆಪ್ಟೆಂಬರ್ 27 ರಂದು ಅಂದರೆ ನಾಳೆ ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಬಿಡುಗಡೆಗೆ ಎರಡು ದಿನಗಳ ಮೊದಲೇ ದೇವರ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಕುರಿತು ಅಪ್ಡೇಟ್ ವೈರಲ್ ಆಗುತ್ತಿದೆ.
Junior NTR Devara OTT Release: ಟಾಲಿವುಡ್ ಬಹುನಿರೀಕ್ಷಿತ ಸಿನಿಮಾ ದೇವರ ಪಾರ್ಟ್-1 ಸೆಪ್ಟೆಂಬರ್ 27ರ ಶುಕ್ರವಾರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನವೇ ದಾಖಲೆ ಮಟ್ಟದಲ್ಲಿ ಪ್ರೀ ಬಿಸಿನೆಸ್ ಆಗಿದ್ದು, ಮೊದಲ ದಿನವೇ 100 ಕೋಟಿಗೂ ಅಧಿಕ ಬಾಚಿಕೊಳ್ಳಲಿದೆ ಎಂದು ಸಿನಿ ಪ್ರಿಯರು ಅಂದಾಜಿಸಿದ್ದಾರೆ. ಆರ್ಆರ್ಆರ್ ನಂತರ ರಿಲೀಸ್ ಆಗುತ್ತಿರುವ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಅವರ ಮೊದಲ ಚಿತ್ರ ಇದು. ಸೋಲೋ ನಾಯಕನಾಗಿ ನಟಿಸಿದ ಚಿತ್ರವು 6 ವರ್ಷಗಳ ಬಳಿಕ ಬಿಡುಗಡೆಯಾಗುತ್ತಿದೆ ಎಂಬುದು ವಿಶೇಷ. ಜೊತೆಗೆ ಆಚಾರ್ಯ ಚಿತ್ರದ ಫ್ಲಾಪ್ ನಂತರ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ದೇವರ ಆಗಿರುವ ಕಾರಣ ನಿರೀಕ್ಷೆಗಳು ದುಪ್ಪಟ್ಟಾಗಿಸಿವೆ.
ತಾರಕ್ ಅಭಿಮಾನಿಗಳು ಮತ್ತು ಸಿನಿ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ದೇವರ ಚಿತ್ರ ಮೇಕಿಂಗ್ ಇದೆಯಂತೆ. ಇತ್ತೀಚೆಗೆ ಬಿಡುಗಡೆಯಾದ ದೇವರ ಹಾಡುಗಳು, ಗ್ಲಿಂಪ್ಸ್, ಟೀಸರ್ ಮತ್ತು ಟ್ರೇಲರ್ಗಳು ಗಮನ ಸೆಳೆದಿದ್ದು, ನಿರೀಕ್ಷೆ ಹುಟ್ಟು ಹಾಕಿವೆ. ಅಲ್ಲದೆ, ದೇವರ ಚಿತ್ರದಲ್ಲಿನ ಆಕ್ಷನ್ ಎಪಿಸೋಡ್ಗಳು ಅದ್ಭುತವಾಗಿವೆ. ವಿಶೇಷವಾಗಿ ಸೆಕೆಂಡ್ ಹಾಫ್ನಲ್ಲಿ ಟೆರ್ರಿಫಿಕ್ ಆಗಿರಲಿದೆ ಎಂದು ಹಲವರು ವಿಮರ್ಶೆ ನೀಡಿದ್ದಾರೆ. ಎನ್ಟಿಆರ್ ನಟನೆ ಚಿತ್ರಕ್ಕೆ ಪ್ರಮುಖ ಶಕ್ತಿಯಾಗಿದೆ. ಸೆಕೆಂಡ್ ಹಾಫ್ನಲ್ಲಿ ಜಾನ್ವಿ ಕಪೂರ್ ಎಂಟ್ರಿಯಾಗಲಿದೆ ಎಂದು ವರದಿಯಾಗಿದೆ. ಅಲ್ಲದೇ ದೇವರ ಚಿತ್ರದ ಪ್ರಚಾರ ಕಾರ್ಯ ಜೋರಾಗಿ ನಡೆಯುತ್ತಿದೆ. ಟಾಲಿವುಡ್‌ನಿಂದ ಬಾಲಿವುಡ್‌ಗೆ ದೇವರ ಪ್ರಚಾರ ನಡೆಯುತ್ತಿದೆ.
ನಿರ್ದೇಶಕ ಕೊರಟಾಲ ಶಿವ ಹಲವು ಸಂದರ್ಶನಗಳಲ್ಲಿ ಭಾಗವಹಿಸಿದ್ದದರೆ, ಬಾಲಿವುಡ್ ಬೆಡಗಿ ಆಲಿಯಾ ಭಟ್ ಜೊತೆ ಎನ್ ಟಿಆರ್ ಚಿಟ್ ಚಾಟ್ ಮಾಡಿದ್ದಾರೆ. ಇದರ ನಡುವೆ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಸೀಸನ್-2ರಲ್ಲೂ ದೇವರ ಚಿತ್ರ ತಂಡ ಭಾಗವಹಿಸಿತು. ಇದರ ಇತ್ತೀಚಿನ ಪ್ರೋಮೋ ಸೆಪ್ಟೆಂಬರ್ 25ರ ಬುಧವಾರ ಬಿಡುಗಡೆಯಾಗಿದೆ. ದೇವರ ಪಾರ್ಟ್-1 ಸೆಪ್ಟೆಂಬರ್ 27 ರಂದು ಅಂದರೆ ನಾಳೆ ವಿಶ್ವದಾದ್ಯಂತ ಚಿತ್ರಮಂದಿರಗಳಿಗೆ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರದ ಬಿಡುಗಡೆಗೆ ಎರಡು ದಿನಗಳ ಮೊದಲೇ ದೇವರ ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಕುರಿತು ಅಪ್ಡೇಟ್ ವೈರಲ್ ಆಗುತ್ತಿದೆ. ಆ ಫ್ಲಾಟ್ ಫಾರಂನಲ್ಲೇ ಬಿಡುಗಡೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ನೆಟ್ಫ್ಲಿಕ್ಸ್ನಲ್ಲಿ ದೇವರ ಪ್ರಸಾರ
ಪ್ರಮುಖ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ದೇವರ ಒಟಿಟಿ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಆದಾಗ್ಯೂ, ಚಿತ್ರಮಂದಿರಕ್ಕೆ ಬಿಡುಗಡೆಯಾದ 50 ದಿನಗಳ ನಂತರ ಮಾತ್ರ ದೇವರ ಚಿತ್ರವನ್ನು ಒಟಿಟಿಯಲ್ಲಿ ಪ್ರಸಾರ ಮಾಡಲು ತಯಾರಕರು ನೆಟ್‌ಫ್ಲಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ದೇವರ ಬಾಕ್ಸ್ ಆಫೀಸ್ ಏನೇ ಆಗಿರಬಹುದು, ಕೋಟಿ ಕೋಟಿ ಕಲೆಕ್ಷನ್ ಮಾಡಿದರೂ, ಕಲೆಕ್ಷನ್ ಡೌನ್ ಆದರೂ ಒಟಿಟಿ ರಿಲೀಸ್ ವಿಚಾರದಲ್ಲಿ ಯಾವುದೇ ಬದಲಾವಣೆ ಆಗಿಲ್ಲವಂತೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗುವ ಕಪಿಲ್ ಶೋಗೆ ಚಿತ್ರ ತಂಡ ಬಂದಿದ್ದು ಕೂಡ ಒಟಿಟಿ ಒಪ್ಪಂದಕ್ಕೆ ಸುಳಿವು ನೀಡಿದೆ. ಹಾಗಿದ್ದರೆ ದೇವರ ಬಿಡುಗಡೆ ಆಗುವುದು ಯಾವಾಗ?
ನವೆಂಬರ್‌ನಲ್ಲಿ ದೇವರ ಒಟಿಟಿ ಬಿಡುಗಡೆ
ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ದೇವರ ಚಿತ್ರ ಲಭ್ಯವಿರಲಿದೆ. ದೇವರ ಒಟಿಟಿ ಬಿಡುಗಡೆಯ ದಿನಾಂಕ ಇನ್ನೂ ಖಚಿತವಾಗಿ ತಿಳಿದಿಲ್ಲ. ಆದರೆ ಇದು ನವೆಂಬರ್ ತಿಂಗಳಲ್ಲಿ ಸ್ಟ್ರೀಮ್ ಆಗುವ ಸಾಧ್ಯತೆ ದಟ್ಟವಾಗಿದೆ. ಸದ್ಯದ ಮಾಹಿತಿ ಏನೆಂದರೆ ದೇವರ ನವೆಂಬರ್ ಮಧ್ಯದಲ್ಲಿ ಅಂದರೆ 2ನೇ ಅಥವಾ 3ನೇ ವಾರದಲ್ಲಿ ಒಟಿಟಿ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಟಾಪ್ ಬ್ಯೂಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ತೆಲುಗಿನಲ್ಲಿ ದೇವರ ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದು, ಮೊದಲ ಚಿತ್ರದಲ್ಲೇ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸಿದ್ದಾರೆ.