ಕನ್ನಡ ಸುದ್ದಿ  /  Entertainment  /   Dhanush Praised His Ex Father In Law Rajinikanth

Dhanush: ಡೈವೋರ್ಸ್‌ ಆಗಿದ್ರೂ ಐಶ್ವರ್ಯ ಜೊತೆ ಫೋಟೋ, ರಜನಿಕಾಂತ್‌ ಬಗ್ಗೆ ಹೊಗಳಿಕೆ...ಫೋಟೋ ವೈರಲ್‌

ಬೇರೆಯಾದ ನಂತರ ಧನುಷ್‌ ಹಾಗೂ ಐಶ್ವರ್ಯ, ಪುತ್ರನ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದು ಈ ಫೋಟೋ ಕೂಡಾ ವೈರಲ್‌ ಆಗುತ್ತಿದೆ. ಪುತ್ರ ಯಾತ್ರಾನ ಶಾಲೆಯ ಕಾರ್ಯಕ್ರಮದಲ್ಲಿ ಧನುಷ್‌, ಐಶ್ವರ್ಯ, ಯಾತ್ರಾ, ಲಿಂಗ ಹಾಗೂ ಇನ್ನಿತರರು ಜೊತೆಗೆ ಇರುವ ಫೋಟೋ ವೈರಲ್‌ ಆಗುತ್ತಿದೆ.

ಡಿವೋರ್ಸ್‌ಗೂ ಮುನ್ನ ಪತ್ನಿ ಹಾಗೂ ರಜನಿಕಾಂತ್‌ ಜೊತೆ ಧನುಷ್
ಡಿವೋರ್ಸ್‌ಗೂ ಮುನ್ನ ಪತ್ನಿ ಹಾಗೂ ರಜನಿಕಾಂತ್‌ ಜೊತೆ ಧನುಷ್ (PC: Dhanuşh Aishwarya Social media)

ಕಾಲಿವುಡ್‌ ನಟ ಧನುಷ್‌ ಈ ವರ್ಷದ ಆರಂಭದಲ್ಲಿ ತಮ್ಮ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ತಾವು ಪತ್ನಿ ಸೌಂದರ್ಯ ಅವರಿಂದ ದೂರಾಗುತ್ತಿರುವುದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಅನೌನ್ಸ್‌ ಮಾಡಿದ್ದರು. ರಜನಿಕಾಂತ್‌ ಪುತ್ರಿ ಐಶ್ವರ್ಯ ಕೂಡಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಇದೇ ಸಂದೇಶ ಹಂಚಿಕೊಂಡಿದ್ದರು.

ಪತ್ನಿಯಿಂದ ದೂರಾದರೂ ಧನುಷ್‌ಗೆ ತಮ್ಮ ಮಾಜಿ ಮಾವ ರಜನಿಕಾಂತ್‌ ಮೇಲೆ ಇನ್ನೂ ಅಪಾರ ಗೌರವ ಇದೆ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ 'ಜೈಲರ್‌' ಪೋಸ್ಟರ್‌ ಸಾಕ್ಷಿ. ಜೈಲರ್‌, ರಜನಿಕಾಂತ್‌ ಅವರ 169ನೇ ಸಿನಿಮಾ. ಅಣ್ಣಾಥೆ ಚಿತ್ರದ ನಂತರ ರಜನಿಕಾಂತ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿ ನೆಲ್ಸನ್‌ ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರತಂಡ, ರಜನಿಕಾಂತ್‌ ಫಸ್ಟ್‌ ಲುಕ್‌ ಬಿಡುಗಡೆಗೊಳಿಸಿತ್ತು. ತಲೈವರ್‌ ಪೋಸ್ಟರ್‌ ನೋಡಿ ಅಭಿಮಾನಿಗಳು ಸ್ಟನ್‌ ಆಗಿದ್ದರು. ರಜನಿ ಖಡಕ್‌ ಲುಕ್‌ ಕಂಡು ಸಂತೋಷ ವ್ಯಕ್ತಪಡಿಸಿದ್ದರು.

ಇದೀಗ ಧನುಷ್‌ ಕೂಡಾ ತಮ್ಮ ಮಾಜಿ ಮಾವನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೈಲರ್‌ ಚಿತ್ರದ ಪೋಸ್ಟರನ್ನು ಧನುಷ್‌ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. Wow !! ಎಂದು ಕ್ಯಾಪ್ಷನ್‌ ಕೂಡಾ ನೀಡಿದ್ದಾರೆ. ಧನುಷ್‌ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ಆಶ್ಚರ್ಯದ ಜೊತೆಗೆ ಸಂತೋಷ ವ್ಯಕ್ತಪಡಿಸಿದ್ಧಾರೆ. ಇನ್ನು ಬೇರೆಯಾದ ನಂತರ ಧನುಷ್‌ ಹಾಗೂ ಐಶ್ವರ್ಯ, ಪುತ್ರನ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದು ಈ ಫೋಟೋ ಕೂಡಾ ವೈರಲ್‌ ಆಗುತ್ತಿದೆ. ಪುತ್ರ ಯಾತ್ರಾನ ಶಾಲೆಯ ಕಾರ್ಯಕ್ರಮದಲ್ಲಿ ಧನುಷ್‌, ಐಶ್ವರ್ಯ, ಯಾತ್ರಾ, ಲಿಂಗ ಹಾಗೂ ಇನ್ನಿತರರು ಜೊತೆಗೆ ಇರುವ ಫೋಟೋ ವೈರಲ್‌ ಆಗುತ್ತಿದೆ.

2004 ರಲ್ಲಿ ಮದುವೆಯಾಗಿದ್ದ ಐಶ್ವರ್ಯ ಹಾಗೂ ಧನುಷ್

ತಮಿಳಿನ ಖ್ಯಾತ ನಿರ್ದೇಶಕ-ನಿರ್ಮಾಪಕ ಕಸ್ತೂರಿ ರಾಜಾ ಪುತ್ರ ಧನುಷ್ 2004 ರಲ್ಲಿ ರಜನಿಕಾಂತ್ ಪುತ್ರ ಐಶ್ವರ್ಯ ಅವರನ್ನು ಪ್ರೀತಿಸಿ ಮದುವೆಯಾದರು. ಇವರು ಮದುವೆಯಾದಾಗ ಧನುಷ್​​​​​​ಗೆ 21 ಹಾಗೂ ಐಶ್ವರ್ಯಾಗೆ 23 ವರ್ಷ ವಯಸ್ಸು. ಈ ದಂಪತಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. ‌ ಇದೇ ವರ್ಷ ಜನವರಿ 17 ರಂದು ಇಬ್ಬರೂ ಡೈವೋರ್ಸ್‌ ಘೋಷಿಸಿದ್ದರು. ''ಹಿತೈಷಿಗಳಾಗಿ, ಪೋಷಕರಾಗಿ, ಸ್ನೇಹಿತರಾಗಿ, ದಂಪತಿಗಳಾಗಿ 18 ವರ್ಷಗಳ ನಮ್ಮ ಜೀವನ ಪರಸ್ಪರ ಹೊಂದಾಣಿಕೆ, ಬೆಳವಣಿಗೆಯಿಂದ ಕೂಡಿತ್ತು. ಆದರೆ ಈಗ ನಾವು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಗಂಡ-ಹೆಂಡತಿ ಸಂಬಂಧದಿಂದ ಹೊರಬರುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ನಿರ್ಧಾರವನ್ನು ದಯವಿಟ್ಟು ಗೌರವಿಸಿ ಹಾಗೂ ಅದನ್ನು ನಿಭಾಯಿಸುವಂತ ಪ್ರೈವೆಸಿಯನ್ನು ನಮಗೆ ನೀಡಿ ಪ್ರೀತಿಯನ್ನು ಹರಡಿ'' ಎಂದು ಧನುಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಐಶ್ವರ್ಯ ಕೂಡಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದೇ ಪೋಸ್ಟ್ ಹಂಚಿಕೊಂಡಿದ್ದು 'ಇದಕ್ಕೆ ಕ್ಯಾಪ್ಷನ್ ಅಗತ್ಯವಿಲ್ಲ. ನಿಮ್ಮ ಪ್ರೀತಿ ಹಾಗೂ ವಿವೇಚನೆಯಷ್ಟೇ ಅಗತ್ಯ' ಎಂದು ಹೇಳಿದ್ದರು.

<p>ಮಗನ ಶಾಲೆ ಕಾರ್ಯಕ್ರಮದಲ್ಲಿ ಧನುಷ್‌ ಹಾಗೂ ಐಶ್ವರ್ಯ</p>
ಮಗನ ಶಾಲೆ ಕಾರ್ಯಕ್ರಮದಲ್ಲಿ ಧನುಷ್‌ ಹಾಗೂ ಐಶ್ವರ್ಯ

ಮಾಜಿ ಪತ್ನಿಯನ್ನು ಫ್ರೆಂಡ್‌ ಎಂದು ಸಂಬೋಧಿಸಿದ್ದ ಧನುಷ್‌

ಐಶ್ವರ್ಯ ರಜನಿಕಾಂತ್ ತಾವು ನಿರ್ಮಿಸಿದ್ದ 'ಪಯಣಿ' ಎಂಬ ಆಲ್ಬಂ ವಿಡಿಯೋ ಲಿಂಕನ್ನು ತಮ್ಮ ಟ್ವಿಟ್ಟರ್​​​​​​​​​​​​​​​​​​​​​​​​​​​​​​​​​​​​​​​​ನಲ್ಲಿ ಹಂಚಿಕೊಂಡಿದ್ದರು. ಈ ಟ್ವೀಟ್​​​​ಗೆ ಪ್ರತಿಕ್ರಿಯಿಸಿದ್ದ ಧನುಷ್​​​​, 'ಅಭಿನಂದನೆಗಳು ಡಿಯರ್ ಫ್ರೆಂಡ್',​​ ನಿಮ್ಮ ಮ್ಯೂಸಿಕ್ ವಿಡಿಯೋಗೆ ಶುಭವಾಗಲಿ ಎಂದು ಹಾರೈಸಿದ್ದರು. ಧನುಷ್, ಐಶ್ವರ್ಯಗೆ ಸ್ನೇಹಿತೆ ಎಂದು ಸಂಬೋಧಿಸಿರುವುದನ್ನು ನೋಡಿ ನೆಟಿಜನ್ಸ್ ಆಶ್ಚರ್ಯ ವ್ಯಕ್ತಪಡಿಸಿದ್ದರು. ಡೈವೋರ್ಸ್ ಘೋಷಿಸಿದ ನಂತರ ಪತ್ನಿ ಎಷ್ಟು ಬೇಗ ಫ್ರೆಂಡ್ ಆಗಿ ಬದಲಾಗಿದ್ದಾರೆ ನೋಡಿ ಎಂದು ಟೀಕಿಸಿದ್ದರು.

IPL_Entry_Point