OTT Crime Thriller: ಮೊದಲ ರಾತ್ರಿಯೇ ಕರಾಳ ರಾತ್ರಿಯಾದಾಗ! ನೇರವಾಗಿ ಒಟಿಟಿಗೆ ಬರುತ್ತಿದೆ ‌ಕಾಮಿಡಿ ಕ್ರೈಂ ಥ್ರಿಲ್ಲರ್ ಧೂಮ್‌ ಧಾಮ್ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Ott Crime Thriller: ಮೊದಲ ರಾತ್ರಿಯೇ ಕರಾಳ ರಾತ್ರಿಯಾದಾಗ! ನೇರವಾಗಿ ಒಟಿಟಿಗೆ ಬರುತ್ತಿದೆ ‌ಕಾಮಿಡಿ ಕ್ರೈಂ ಥ್ರಿಲ್ಲರ್ ಧೂಮ್‌ ಧಾಮ್ ಸಿನಿಮಾ

OTT Crime Thriller: ಮೊದಲ ರಾತ್ರಿಯೇ ಕರಾಳ ರಾತ್ರಿಯಾದಾಗ! ನೇರವಾಗಿ ಒಟಿಟಿಗೆ ಬರುತ್ತಿದೆ ‌ಕಾಮಿಡಿ ಕ್ರೈಂ ಥ್ರಿಲ್ಲರ್ ಧೂಮ್‌ ಧಾಮ್ ಸಿನಿಮಾ

OTT Comedy Crime Thriller: ಕಾಮಿಡಿ ಕ್ರೈಮ್‌ ಥ್ರಿಲ್ಲರ್ ಜಾನರ್‌ನ ಧೂಮ್‌ ಧಾಮ್‌ ಚಿತ್ರ ನೇರವಾಗಿ ನೆಟ್‌ಫ್ಲಿಕ್ಸ್‌ ಒಟಿಟಿಗೆ ಬರುತ್ತಿದೆ. ಯಾಮಿ ಗೌತಮ್ ಮತ್ತು ಪ್ರತೀಕ್ ಗಾಂಧಿ ಅಭಿನಯದ ಚಿತ್ರದ ಟ್ರೇಲರ್‌ ಸೋಮವಾರ (ಜನವರಿ 27) ಬಿಡುಗಡೆಯಾಗಿದೆ.

ಧೂಮಾ ಧಾಮ್‌ ಸಿನಿಮಾ ಟ್ರೇಲರ್‌ ಬಿಡುಗಡೆ, ಫೆಬ್ರವರಿ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ
ಧೂಮಾ ಧಾಮ್‌ ಸಿನಿಮಾ ಟ್ರೇಲರ್‌ ಬಿಡುಗಡೆ, ಫೆಬ್ರವರಿ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ

OTT Comedy Crime Thriller: ಒಟಿಟಿಯಲ್ಲಿನ ಕ್ರೈಂ ಥ್ರಿಲ್ಲರ್‌ ಕಾಮಿಡಿ ಸಿನಿಮಾಗಳಿಗೆ ದೊಡ್ಡ ವೀಕ್ಷಕ ಬಳಗವಿದೆ. ಅದರಂತೆ, ಇದೀಗ ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಧೂಮ್‌ ಧಾಮ್‌ ಸಿನಿಮಾ ಶೀಘ್ರದಲ್ಲಿಯೇ ಒಟಿಟಿ ಅಂಗಳಕ್ಕೆ ಆಗಮಿಸಲಿದೆ. ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆ ಆಗಲಿರುವ ಈ ಸಿನಿಮಾ, ಇದೀಗ ಟ್ರೇಲರ್‌ (Dhoom Dhaam Trailer) ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಧೂಮ್‌ ಧಾಮ್‌ ಸಿನಿಮಾ ಸೋಮವಾರ (ಜ. 27) ತನ್ನ ಮೊದಲ ಟ್ರೇಲರ್‌ ಹೊರತಂದಿದೆ. ಯಾವಾಗಿನಿಂದ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಫೆಬ್ರವರಿ 14ರಂದು ನೆಟ್‌ಫ್ಲಿಕ್ಸ್‌ನಲ್ಲಿ ಧೂಮ್‌ ಧಾಮ್‌ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ಬಾಲಿವುಡ್‌ ನಟಿ ಯಾಮಿ ಗೌತಮ್‌ ಜತೆಗೆ ಸ್ಕ್ಯಾಮ್‌ 1992 ವೆಬ್‌ ಸಿರೀಸ್‌ ಖ್ಯಾತಿಯ ಪ್ರತೀಕ್‌ ಗಾಂಧಿ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಿಷಬ್‌ ಸೇಠ್ ನಿರ್ದೇಶಿಸಿದ ಈ ಚಿತ್ರವನ್ನು ಆದಿತ್ಯ ಧರ್ ಮತ್ತು ಲೋಕೇಶ್ ಧರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಜಸ್ಟ್‌ ಮದುವೆಯಾಗಿ ಮೊದಲ ರಾತ್ರಿಯ ಸಿಹಿಕನಸಿನಲ್ಲಿದ್ದ ದಂಪತಿಗೆ, ಕೆಲವು ಆಗುಂತಕರು ಹೇಗೆ ಕಾಟ ಕೊಡುತ್ತಾರೆ ಎಂಬುದನ್ನು ಕಾಮಿಡಿ ಮೂಲಕ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಕ್ರೈಮ್ ಥ್ರಿಲ್ಲರ್ ಪ್ರಕಾರಕ್ಕೆ ಹಾಸ್ಯವನ್ನು ಸೇರಿಸುವ ಮೂಲಕ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ರಿಷಬ್ ‌ಸೇಠ್.‌ ಅಂದಹಾಗೆ ಈ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ನೇರವಾಗಿ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ಧೂಮ್ ಧಾಮ್ ಟ್ರೇಲರ್ ಹೇಗಿದೆ?

ಕೊಯಲ್ (ಯಾಮಿ ಗೌತಮ್) ಮತ್ತು ವೀರ್ (ಪ್ರತೀಕ್ ಗಾಂಧಿ) ಧೂಮ್ ಧಾಮ್ ಆಗಿ ಮದುವೆಯಾಗಿ ಹೊಟೇಲ್‌ವೊಂದರಲ್ಲಿ ಮೊದಲ ರಾತ್ರಿಯ ಕೋಣೆ ಸೇರಿರುತ್ತಾರೆ. ಏಕಾಂತದಲ್ಲಿರುವಾಗಲೇ, ಬಾಗಿಲ ಬೆಲ್‌ ಹೊಡೆಯುತ್ತಿದೆ. ಯಾರು ಎಂದು ಬಾಗಿಲು ತೆರೆಯುತ್ತಿದ್ದಂತೆ, ಚಾರ್ಲಿ ಎಲ್ಲಿದ್ದಾನೆ ಎಂದು ಕೈಯಲ್ಲಿ ಗನ್‌ ಹಿಡಿದಾತ ಕೇಳುತ್ತಾನೆ? ಮುಗ್ಧ ವೀರ್, ಚಾರ್ಲಿ ಯಾರು ಎಂದು ಕೇಳುತ್ತಾನೆ. ಅವನ ಬಗ್ಗೆ ಗೊತ್ತಿದ್ದ ಕೋಯಲ್ ಕೊಂಚ ಗಾಬರಿಯಾಗುತ್ತಾಳೆ. ಅಲ್ಲಿಂದ ಈ ದಂಪತಿಗೆ ಒಂದಾದ ಮೇಲೊಂದು ಸಮಸ್ಯೆ ಶುರುವಾಗುತ್ತಲೇ ಹೋಗುತ್ತದೆ.

ಅಷ್ಟಕ್ಕೂ ಈ ಧೂಮ್‌ ಧಾಮ್‌ ಮದುವೆ ಎಲ್ಲಿಗೆ ಬಂದು ನಿಲ್ಲುತ್ತದೆ? ಆ ಚಾರ್ಲಿ ಯಾರು? ನವ ದಂಪತಿ ಆ ಗ್ಯಾಂಗ್ ಹಿಡಿತದಿಂದ ಹೇಗೆ ಪಾರಾಗುತ್ತಾರೆ? ಹೀಗೆ ಕಾಮಿಡಿಯಾಗಿಯೇ ಈ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಫೆಬ್ರವರಿ 14 ರಿಂದ ನೆಟ್ ಫ್ಲಿಕ್ಸ್ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್ ಆಗಲಿದೆ.

Whats_app_banner