ಸ್ಯಾಂಡಲ್‌ವುಡ್‌ಗೆ ಹೆದರಿಸುವ ʻವಿಡಿಯೋʼ ಮೂಲಕ ಎಂಟ್ರಿ ಕೊಟ್ಟ ಯೂಟ್ಯೂಬರ್‌ ʻದೂತʼ ಸಮೀರ್‌ ಎಂ ಡಿ
ಕನ್ನಡ ಸುದ್ದಿ  /  ಮನರಂಜನೆ  /  ಸ್ಯಾಂಡಲ್‌ವುಡ್‌ಗೆ ಹೆದರಿಸುವ ʻವಿಡಿಯೋʼ ಮೂಲಕ ಎಂಟ್ರಿ ಕೊಟ್ಟ ಯೂಟ್ಯೂಬರ್‌ ʻದೂತʼ ಸಮೀರ್‌ ಎಂ ಡಿ

ಸ್ಯಾಂಡಲ್‌ವುಡ್‌ಗೆ ಹೆದರಿಸುವ ʻವಿಡಿಯೋʼ ಮೂಲಕ ಎಂಟ್ರಿ ಕೊಟ್ಟ ಯೂಟ್ಯೂಬರ್‌ ʻದೂತʼ ಸಮೀರ್‌ ಎಂ ಡಿ

ಬ್ಲಿಂಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದವರು ನಿರ್ದೇಶಕ ಶ್ರೀನಿಧಿ ಬೆಂಗಳೂರು. ಇದೀಗ ಇದೇ ಶ್ರೀನಿಧಿ ಹೊಸದೊಂದು ಸಿನಿಮಾ ಮೂಲಕ ಆಗಮಿಸಿದ್ದಾರೆ. ಆ ಚಿತ್ರಕ್ಕೆ ʻವಿಡಿಯೋʼ ಎಂದು ಶೀರ್ಷಿಕೆ ಇಡಲಾಗಿದ್ದು, ಮೊದಲ ಟೀಸರ್‌ ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಈ ಚಿತ್ರದಲ್ಲಿ ದೂತ ಸಮೀರ್‌ ಎಂ ಟಿ ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಂದನವನಕ್ಕೆ ಹೆದರಿಸುವ ʻವಿಡಿಯೋʼ ಮೂಲಕ ಎಂಟ್ರಿ ಕೊಟ್ಟ ʻದೂತʼ ಸಮೀರ್‌ ಎಂ ಡಿ
ಚಂದನವನಕ್ಕೆ ಹೆದರಿಸುವ ʻವಿಡಿಯೋʼ ಮೂಲಕ ಎಂಟ್ರಿ ಕೊಟ್ಟ ʻದೂತʼ ಸಮೀರ್‌ ಎಂ ಡಿ

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವಿಡಿಯೋ ಮೂಲಕವೇ ಸಂಚಲನ ಸೃಷ್ಟಿಸಿದವರು ದೂತ ಯೂಟ್ಯೂಬ್‌ ಚಾನೆಲ್‌ನ ಸಮೀರ್‌ ಎಂ. ಡಿ. ಇದೀಗ ಇದೇ ಯೂಟ್ಯೂಬರ್‌ ಚಂದನವನಕ್ಕೆ ಎಂಟ್ರಿ ನೀಡಿದ್ದಾರೆ. ಆ ಸಿನಿಮಾದ ಟೀಸರ್‌ ಜತೆಗೆ ಹಾಗೂ ಥೀಮ್ ಮ್ಯೂಸಿಕ್ ಸಹ ಬಿಡುಗಡೆ ಆಗಿದೆ. ಹಾಗಾದರೆ ಯಾವುದಾ ಸಿನಿಮಾ? ನಿರ್ದೇಶಕರು ಯಾರು? ಇಲ್ಲಿದೆ ವಿವರ.

ಬ್ಲಿಂಕ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡಿದವರು ನಿರ್ದೇಶಕ ಶ್ರೀನಿಧಿ ಬೆಂಗಳೂರು. ಇದೀಗ ಇದೇ ಶ್ರೀನಿಧಿ ಹೊಸದೊಂದು ಸಿನಿಮಾ ಮೂಲಕ ಆಗಮಿಸಿದ್ದಾರೆ. ಆ ಚಿತ್ರಕ್ಕೆ ʻವಿಡಿಯೋʼ ಎಂದು ಶೀರ್ಷಿಕೆ ಇಡಲಾಗಿದ್ದು, ಮೊದಲ ಟೀಸರ್‌ ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ಈ ಚಿತ್ರದಲ್ಲಿ ದೂತ ಸಮೀರ್‌ ಅವರು ಅಚ್ಚರಿಯ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ಮಾಣಕ್ಕೆ ಮುಂದಾದ ದೀಕ್ಷಿತ್‌ ಶೆಟ್ಟಿ

ಅಂದಹಾಗೆ, ʻವಿಡಿಯೋʼ ಸಿನಿಮಾ ಮೂಲಕ ನಿರ್ದೇಶಕ ಶ್ರೀನಿಧಿ ಬೆಂಗಳೂರು ಜತೆಗೆ ಮಗದೊಮ್ಮೆ ಕೈ ಜೋಡಿಸಿದ್ದಾರೆ ನಟ ದೀಕ್ಷಿತ್‌ ಶೆಟ್ಟಿ. ಈ ಸಲ ನಾಯಕ ನಟನಾಗಿ ಕಾಣಿಸಿಕೊಳ್ಳುವ ಬದಲು, ನಿರ್ಮಾಪಕರಾಗಿ ಆಗಮಿಸಿದ್ದಾರೆ. ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದು, ಫೌಂಡ್‌ ಫೂಟೇಜ್‌ ಥ್ರಿಲ್ಲರ್‌ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಹಾರರ್‌ ಅಂಶಗಳೇ ನೋಡುಗರನ್ನು ಭಯಗೊಳಿಸುವಂತಿವೆ. ರಿಯಲಿಸ್ಟಿಕ್‌ ಆಗಿಯೇ ಈ ದೃಶ್ಯಗಳನ್ನು ಸೆರೆಹಿಡಿದಂತೆ ಕಾಣಿಸುತ್ತದೆ.

ಯಾರೆಲ್ಲ ನಟಿಸಿದ್ದಾರೆ?

ʻವಿಡಿಯೋʼ ಸಿನಿಮಾ ಟೀಸರ್‌ ಮತ್ತು ಥೀಮ್‌ ಮ್ಯೂಸಿಕ್‌ ಬಿಡುಗಡೆ ಆಗಿದ್ದು, ಇದರಲ್ಲಿ ʻದೂತʼ ಯೂಟ್ಯೂಬ್‌ ಚಾನೆಲ್‌ನ ಸಮೀರ್‌ ಎಂ.ಡಿ ಅವರೇ ನಿರೂಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಭರತ್, ಜೀವನ್ ಶಿವಕುಮಾರ್, ತೇಜೇಶ್, ಪ್ರಿಯಾ ಜೆ ಆಚಾರ್, ನಲ್ಮೇ ನಾಚಿಯಾರ್ ಮುಖ್ಯಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ.‌ ಪ್ರಸನ್ನ ಕುಮಾರ್ ಸಂಗೀತ, ಅವಿನಾಶ್ ಶಾಸ್ತ್ರಿ ಛಾಯಾಗ್ರಣವಿರೋ ಈ ಚಿತ್ರಕ್ಕೆ ಖ್ಯಾತ ವಸ್ತ್ರವಿನ್ಯಾಸಕ ಭರತ್ ಸಾಗರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸದ್ಯ ಟೀಸರ್ ಬಿಡುಗಡೆ ಮಾಡಿರೋ ಚಿತ್ರತಂಡ ಇಲ್ಲಿಂದ ಚಿತ್ರೀಕರಣ ಆರಂಭಿಸಲಿದ್ದು, ಇದೇ ವರ್ಷ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಚಿತ್ರತಂಡದ್ದು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.