ʻಕೆಡಿ; ದಿ ಡೆವಿಲ್ʼ ಚಿತ್ರದ ಮೊದಲ ಟೀಸರ್ ಬಿಡುಗಡೆ; ರೆಟ್ರೋ ಲುಕ್‌ನಲ್ಲಿ ಧ್ರುವ ಸರ್ಜಾ ಆಕ್ಷನ್ ಅಬ್ಬರ
ʻಕೆಡಿ; ದಿ ಡೆವಿಲ್ʼ ಸಿನಿಮಾ, ಪ್ಯಾನ್ ಇಂಡಿಯನ್ ಪ್ರೇಕ್ಷಕರೆಡೆಗೆ ಹೊರಟು ನಿಂತಿದೆ. ಅಂದರೆ, ಈ ಚಿತ್ರದ ಮೊದಲ ಟೀಸರ್ ಝಲಕ್ ಬಿಡುಗಡೆ ಆಗಿದೆ. ಅದೂ ಮಾಯಾನಗರಿ ಮುಂಬೈನಲ್ಲಿ.

KD The Devil Movie: ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ "ಕೆಡಿ ದಿ ಡೆವಿಲ್" ಸಿನಿಮಾ ಗ್ರ್ಯಾಂಡ್ ಆಗಿಯೇ ರಿಲೀಸ್ ಆಗಬೇಕಿತ್ತು. ಆದರೆ, ಶೂಟಿಂಗ್ ಬಾಕಿ ಇದ್ದ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಇದೇ ಸಿನಿಮಾ, ಪ್ಯಾನ್ ಇಂಡಿಯನ್ ಪ್ರೇಕ್ಷಕರೆಡೆಗೆ ಹೊರಟು ನಿಂತಿದೆ. ಅಂದರೆ, ಈ ಚಿತ್ರದ ಮೊದಲ ಟೀಸರ್ ಝಲಕ್ ಬಿಡುಗಡೆ ಆಗಿದೆ. ಅದೂ ಮಾಯಾನಗರಿ ಮುಂಬೈನಲ್ಲಿ.
ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ "ಕೆಡಿ ದಿ ಡೆವಿಲ್". ಈ ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಚಿತ್ರೀಕರಣ ಮುಗಿದು, ಹಾಡುಗಳ ಶೂಟಿಂಗ್ ಸಹ ಮುಗಿಸಿಕೊಂಡಿರುವ ಚಿತ್ರತಂಡ, ಗುರುವಾರ ಮುಂಬೈನಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.
ಬಹುತಾರಾಗಣದ "ಕೆಡಿ ದಿ ಡೆವಿಲ್" ಸಿನಿಮಾದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸಿದರೆ, ಇನ್ನುಳಿದಂತೆ ಬಾಲಿವುಡ್‌ನ ಸಂಜಯ್ ದತ್ ಖಳನಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ನೋರಾ ಫತೇಹಿ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ.
1970- 75ರ ಕಾಲಘಟ್ಟದಲ್ಲಿ ನಡೆದ ನೈಜಘಟನೆ ಆಧರಿತ ಗ್ಯಾಂಗ್‌ಸ್ಟರ್ ಕಥೆ ಈ ಚಿತ್ರದಲ್ಲಿದೆ. ಚಿತ್ರಕ್ಕಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‌ಹಾಕಲಾಗಿತ್ತು. ಆರು ಕಲರ್ ಫುಲ್ ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್‌ಗಳು ಕೆಲಸ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಅರ್ಜುನ್ ಜನ್ಯ ಹಾಡುಗಳಿಗೆ ಸಂಗೀತ ನೀಡಿದ್ದಾರೆ.
ಯಾರಿಗೆ ಯಾವ ಪಾತ್ರ?
‘ಕಾಳಿದಾಸ’ನಾಗಿ ಧ್ರುವ ಸರ್ಜಾ, ‘ಡಕ್ ದೇವ’ ಎಂಬ ಪಾತ್ರದಲ್ಲಿ ಸಂಜಯ್ ದತ್, ‘ಸತ್ಯವತಿ’ ಲುಕ್‌ನಲ್ಲಿ ಶಿಲ್ಪಾ ಶೆಟ್ಟಿ, ಧರ್ಮನ ಪಾತ್ರದಲ್ಲಿ ರಮೇಶ್ ಅರವಿಂದ್, ‘ಅಣ್ಣಯ್ಯಪ್ಪ’ನಾಗಿ ರವಿಚಂದ್ರನ್ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯಗೆ ಮಚ್‌ಲಕ್ಷ್ಮಿಯಾಗಿ ಕಂಡಿದ್ದಾರೆ. ಸದ್ಯಕ್ಕೆ ಟೀಸರ್ ರಿಲೀಸ್ ಆಗಿದ್ದು, ಸಿನಿಮಾ ಯಾವಾಗ ಬಿಡುಗಡೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಇಲ್ಲ.
