ವಿಧಿಯ ಅಟ್ಟಹಾಸ! ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?
ಕನ್ನಡ ಸುದ್ದಿ  /  ಮನರಂಜನೆ  /  ವಿಧಿಯ ಅಟ್ಟಹಾಸ! ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?

ವಿಧಿಯ ಅಟ್ಟಹಾಸ! ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?

ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಅಥವಾ ತಾನು ಹೆಚ್ಚು ದಿನ ಬದುಕಲ್ಲ ಎಂಬುದು ಮೊದಲೇ ಗೊತ್ತಿತ್ತಾ? ಅಥವಾ ಇದೆಲ್ಲವೂ ಕಾಕತಾಳೀಯವೋ? ಒಟ್ಟಿನಲ್ಲಿ ರಾಕೇಶ್‌ ಅವರ ಅಕಾಲಿಕ ನಿಧನಕ್ಕೂ, ಅವರ ಇನ್‌ಸ್ಟಾಗ್ರಾಂನಲ್ಲಿನ ಬಯೋ ಬರಹಕ್ಕೂ ಒಂದಷ್ಟು ಸಾಮ್ಯತೆ ಕಂಡುಬರುತ್ತಿದೆ.

ವಿಧಿಯ ಅಟ್ಟಹಾಸ! ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು?
ವಿಧಿಯ ಅಟ್ಟಹಾಸ! ರಾಕೇಶ್‌ ಪೂಜಾರಿಗೆ ತಮ್ಮ ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ, ಹೀಗ್ಯಾಕೆ ಬರೆದುಕೊಂಡಿದ್ದರು? (Rakesh Poojary Instagram)

ದೂರದ ಉಡುಪಿ ಬಳಿಯ ಸಣ್ಣ ಹಳ್ಳಿಯಿಂದ ಬಂದಿದ್ದ 33ರ ಪ್ರಾಯದ ಹಾಸ್ಯ ನಟ ರಾಕೇಶ್‌ ಪೂಜಾರಿ, ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ಮನೆ ಮಾತಾದರು. ಸಿನಿಮಾ, ಸೀರಿಯಲ್‌ಗಳಲ್ಲಿ ಸಾಲು ಸಾಲು ಅವಕಾಶ ಪಡೆಯುತ್ತ ಹೋದರು. ಸಂಪಾದನೆಯ ಜತೆಗೆ ಖ್ಯಾತಿಯೂ ಅವರನ್ನು ಅಲಂಕರಿಸಿತು. ನಿರೀಕ್ಷೆಗೂ ಮೀರಿ ಬೆಳೆಯುತ್ತ ಹೋದರು. ಆದರೆ, ಇದೀಗ ಹಠಾತ್‌ ಸಾವು ಅವರನ್ನು ಇಲ್ಲವಾಗಿಸಿದೆ. ಆಪ್ತಬಳಗದ ಪ್ರಕಾರ ಕೆಲವರು ಲೋ ಬಿಪಿಯಿಂದಾಗಿ, ಇನ್ನು ಕೆಲವರು ಹೃದಯಾಘಾತದಿಂದ ರಾಕೇಶ್‌ ಪೂಜಾರಿ ಅಸುನೀಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲರಿಗೂ ಬೇಕಾದ ಜೀವ ಕಣ್ಮುಚ್ಚಿದೆ. ಸ್ನೇಹ ಬಳಗ ಕಣ್ಣೀರಲ್ಲಿದೆ. ಇದೆಲ್ಲದರ ನಡುವೆ, ತಮ್ಮ ಸಾವಿನ ಬಗ್ಗೆ ರಾಕೇಶ್‌ಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ? ಹೀಗಿದೆ ನೋಡಿ ವಿವರ.

ಸಾವೇ ಹಾಗೆ. ಅದಕ್ಕೆ ವಯಸ್ಸಿನ ಹಂಗಿಲ್ಲ. ಬಡವ ಶ್ರೀಮಂತ ಅನ್ನೋ ಬೇಧ ಭಾವವಿಲ್ಲ. ಅದು ಬರ್ತಾಯಿದ್ದಂತೆ, ಹೋಗುವುದೊಂದೆ ನಮ್ಮ ಕಾಯಕ. ಇದೀಗ ಚಿಕ್ಕ ವಯಸ್ಸಿನ ರಾಕೇಶ್‌ ಪೂಜಾರಿ ಬಾಳಿನಲ್ಲಿಯೂ ಆ ಸಾವು ಅನ್ನೋ ವಿಧಿ ತನ್ನ ಅಟ್ಟಹಾಸ ಮೆರೆದಿದೆ. ಹಿಂದಿನ ದಿನ ಚೆನ್ನಾಗಿದ್ದ, ಮದುವೆ ಮನೆಯಲ್ಲಿ ಎಲ್ಲರ ಜೊತೆ ಕುಣಿದು ಪುಕ್ಕಳಿಸಿದ್ದ ರಾಕೇಶ್‌ ಇನ್ನಿಲ್ಲ ಅನ್ನೋ ಸುದ್ದಿ ಇದೀಗ ಆತಂಕದ ಜತೆಗೆ ಅಚ್ಚರಿಗೆ ದೂಡಿದೆ. ಬಹುನಿರೀಕ್ಷಿತ ʻಕಾಂತಾರ 2ʼ ಸಿನಿಮಾದಲ್ಲಿಯೂ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದ ರಾಕೇಶ್‌, ಕಳೆದ ಕೆಲ ದಿನಗಳಿಂದ ಆ ಸಿನಿಮಾದ ಶೂಟಿಂಗ್‌ನಲ್ಲಿಯೇ ಭಾಗವಹಿಸಿದ್ದರು.

ಆಪ್ತ ಬಳಗದಲ್ಲಿ ಇವರೇ ಕಾಮಿಡಿ ಕಿಂಗ್‌

ಆಪ್ತ ಬಳಗದಲ್ಲಿ ಎಲ್ಲರ ಮೊಗದಲ್ಲಿ ನಗು ಉಕ್ಕಿಸುವ ಕಾಯಕವನ್ನು ಅಷ್ಟೇ ಸಲೀಸಾಗಿ ಮಾಡುತ್ತಿದ್ದ ರಾಕೇಶ್‌ ಪೂಜಾರಿ, ಎಲ್ಲರಿಗೂ ಬೇಕಾಗಿದ್ದವರು. ಆಪ್ತ ಬಳಗದಲ್ಲಿ ಕಾಮಿಡಿ ಕಿಂಗ್‌ ಎಂದೇ ಫೇಮಸ್‌ ಆಗಿದ್ದವರು. ಯಾವುದೇ ಗಾಡ್‌ ಫಾದರ್‌ ಇಲ್ಲದೆ, ತಮ್ಮ ನಿಜ ಪ್ರತಿಭೆಯಿಂದಲೇ ರಿಯಾಲಿಟಿ ಶೋ ಲೋಕಕ್ಕೆ ಬಂದಿದ್ದ ರಾಕೇಶ್‌, ಕಾಮಿಡಿ ಕಿಲಾಡಿಗಳು ಸೀಸನ್‌ 2ರಲ್ಲಿ ಆಡಿಷನ್‌ ನೀಡಿದ್ದರು. ಆದರೆ, ಸೀಸನ್‌ 2ಕ್ಕೆ ಸೆಲೆಕ್ಟ್‌ ಆಗಲಿಲ್ಲ. ಅದಾದ ಮೇಲೆ ಸೀಸನ್‌ 3ಕ್ಕೆ ವಾಹಿನಿಯಿಂದಲೇ ಬುಲಾವ್‌ ಬಂತು. ಅಚ್ಚರಿಯ ರೀತಿಯಲ್ಲಿ ಅದೇ 3ನೇ ಸೀಸನ್‌ನ ವಿನ್ನರ್‌ ಆಗಿಯೂ ರಾಕೇಶ್‌ ಕಪ್‌ ಎತ್ತಿ ಹಿಡಿದರು. ಇದೀಗ ಯಾವುದೇ ಸುಳಿವು ನೀಡದೆ ಕಣ್ಮರೆಯಾಗಿದ್ದಾರೆ.

ಸಾವಿನ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ?

ರಾಕೇಶ್‌ ಪೂಜಾರಿ ಅವರ ಸೋಷಿಯಲ್‌ ಮೀಡಿಯಾ ಗಮನಿಸಿದರೆ, ಅವರ ಬಯೋದಲ್ಲಿ ನಾಲ್ಕೇ ಅಕ್ಷರದ ಸಾಲಿದೆ. ʻLife is short me 2ʼ ಎಂದು ಬರೆದುಕೊಂಡಿದ್ದಾರೆ. ʻನನ್ನ ಜೀವನವೂ ಚಿಕ್ಕದುʼ ಎಂದು ಅದರ ಅರ್ಥ. ಹಾಗಾದರೆ, ತಮ್ಮ ಸಾವಿನ ಮುನ್ಸೂಚನೆ ಅಥವಾ ತಾನು ಹೆಚ್ಚು ದಿನ ಬದುಕಲ್ಲ ಎಂಬುದು ಅವರಿಗೆ ಮೊದಲೇ ಗೊತ್ತಿತ್ತಾ? ಅಥವಾ ಇದೆಲ್ಲವೂ ಕಾಕತಾಳೀಯವೋ? ಒಟ್ಟಿನಲ್ಲಿ ರಾಕೇಶ್‌ ಅವರ ಅಕಾಲಿಕ ನಿಧನಕ್ಕೂ, ಅವರ ಇನ್‌ಸ್ಟಾಗ್ರಾಂನಲ್ಲಿನ ಬಯೋ ಬರಹಕ್ಕೂ ಒಂದಷ್ಟು ಸಾಮ್ಯತೆ ಕಂಡುಬರುತ್ತಿದೆ.

ರಾಕೇಶ್‌ ಪೂಜಾರಿ ಅವರ ಬಯೋದಲ್ಲಿ ಕಂಡಿದ್ದು
ರಾಕೇಶ್‌ ಪೂಜಾರಿ ಅವರ ಬಯೋದಲ್ಲಿ ಕಂಡಿದ್ದು

ಹುಟ್ಟೂರಿನಲ್ಲಿ ಇಂದು ಅಂತ್ಯಕ್ರಿಯೆ

ಕಾಂತಾರ ಚಾಪ್ಟರ್‌ 1 ಶೂಟಿಂಗ್‌ ಮುಗಿಸಿದ್ದ ರಾಕೇಶ್‌ ಪೂಜಾರಿ, ಆ ಸಿನಿಮಾ ಮೇಲೆ ಬೆಟ್ಟದಷ್ಟು ಕನಸಿಟ್ಟುಕೊಂಡಿದ್ದರು. ಕೆರಿಯರ್‌ಗೆ ಮಗದಷ್ಟು ಮೈಲೇಜ್‌ ತಂದುಕೊಡಲಿದೆ ಎಂದೇ ಭಾವಿಸಿದ್ದರು. ಅದರಂತೆ ತಮ್ಮ ಪಾಲಿನ ಶೂಟಿಂಗ್‌ ಸಹ ಮುಗಿಸಿದ್ದರು. ಇದರ ಜತೆಗೆ ತುಳು ಭಾಷೆಯ ಹಲವು ಸಿನಿಮಾಗಳಲ್ಲಿಯೂ ಅವರು ನಟಿಸುತ್ತಿದ್ದರು ಎಂದು ವರದಿಯಾಗಿದೆ. ಇದೀಗ ವಿಧಿಯಾಟಕ್ಕೆ ರಾಕೇಶ್‌ ಬಲಿಯಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನ ಆಪ್ತ ಬಳಗ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡು, ಕಂಬನಿ ಮಿಡಿಯುತ್ತಿದ್ದಾರೆ. ಕೆಲವರು ಇಂದು ನಡೆಯುವ ಗೆಳೆಯನ ಅಂತಿಮ ದರ್ಶನಕ್ಕೆಂದು ಉಡುಪಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.