ಪುನೀತ್‌ ರಾಜ್‌ಕುಮಾರ್‌ ಅವರದ್ದು ಪುಣ್ಯದ ಸಾವಾ? ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್‌ ಹೇಳಿದ್ದೇನು?
ಕನ್ನಡ ಸುದ್ದಿ  /  ಮನರಂಜನೆ  /  ಪುನೀತ್‌ ರಾಜ್‌ಕುಮಾರ್‌ ಅವರದ್ದು ಪುಣ್ಯದ ಸಾವಾ? ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್‌ ಹೇಳಿದ್ದೇನು?

ಪುನೀತ್‌ ರಾಜ್‌ಕುಮಾರ್‌ ಅವರದ್ದು ಪುಣ್ಯದ ಸಾವಾ? ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್‌ ಹೇಳಿದ್ದೇನು?

ಪವರ್‌ಸ್ಟಾರ್‌, ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನ ಬಳಿಕ ಅವರು ಏನಾಗಿರುತ್ತಾರೆ? ಎಂಬ ಪ್ರಶ್ನೆಗೆ ಗರುಡ ಪುರಾಣವನ್ನು ಉಲ್ಲೇಖಿಸಿ ಉತ್ತರ ನೀಡಿದ್ದಾರೆ ನಿರ್ದೇಶಕಿ ರೂಪಾ ಅಯ್ಯರ್.‌ ಹೀಗಿದೆ ಅವರ ಮಾತಿನ ಪೂರ್ಣ ವಿವರ.

ʻಪುನೀತ್‌ ರಾಜ್‌ಕುಮಾರ್‌ ಅವರದ್ದು ಪುಣ್ಯದ ಸಾವುʼ; ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್‌ ಹೇಳಿದ್ದೇನು?
ʻಪುನೀತ್‌ ರಾಜ್‌ಕುಮಾರ್‌ ಅವರದ್ದು ಪುಣ್ಯದ ಸಾವುʼ; ಗರುಡ ಪುರಾಣ ಮತ್ತು ಆತ್ಮದ ಬಗ್ಗೆ ರೂಪಾ ಅಯ್ಯರ್‌ ಹೇಳಿದ್ದೇನು?

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಇಲ್ಲವಾಗಿ ಮೂರು ವರ್ಷದ ಮೇಲಾಯಿತು. ಇಂದಿಗೂ ಇಡೀ ಕರ್ನಾಟಕ ಅವರ ನೆನಪಿನಲ್ಲಿದೆ. ನಿತ್ಯ ಒಂದಲ್ಲ ಒಂದು ರೀತಿ ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದಾರೆ ಅಪ್ಪು ಅವರ ಅಭಿಮಾನಿಗಳು. ಇದೀಗ ಇದೇ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮತ್ತು ಅವರ ಸಾವಿನ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್‌ ಗರುಡ ಪುರಾಣ ಉಲ್ಲೇಖಿಸಿ ಮಾತನಾಡಿದ್ದಾರೆ. ಒಂದಷ್ಟು ಅಚ್ಚರಿಯ ವಿಚಾರಗಳನ್ನೂ ಹೇಳಿದ್ದಾರೆ. ಪುನೀತ್‌ ಅವರದ್ದು ನಿಜಕ್ಕೂ ಪುಣ್ಯದ ಸಾವು ಎಂದಿದ್ದಾರೆ.

ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೂಪಾ ಅಯ್ಯರ್, ಪುನೀತ್‌ ಅವರ ಸಾವಿನ ಬಳಿಕ ಅವರು ಏನಾಗಿರುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. "ಪುನೀತ್‌ ರಾಜ್‌ಕುಮಾರ್‌ ಅಂದ ತಕ್ಷಣ ಎಲ್ಲರ ಮೊಗದಲ್ಲೂ ನಗು ಅರಳುತ್ತದೆ. ಬಾಕಿ ಉಳಿದ ಎಲ್ಲ ಕರ್ಮಗಳನ್ನು ಮುಗಿಸುವ ಹಂತಕ್ಕೆ ಬಂದಿದ್ದರು. ಅದಕ್ಕಾಗಿಯೇ ಕಲಾವಿದರ ಮನೆಯಲ್ಲಿ ಕಲಾವಿದನಾಗಿ ಜನ್ಮವೆತ್ತಿದ್ದರು. ಇರೋವಷ್ಟು ದಿನ ಸಾಮಾನ್ಯನಾಗಿಯೇ ಇದ್ದರು. "ನಾನು ಸ್ಟಾರ್‌ ಹೀರೋ, ನಾನೂ ಸಿನಿಮಾ ಮಾಡಿದ್ದೇನೆ.." ಅನ್ನೋ ಆಟಿಟ್ಯೂಡ್‌ ಅವರಿಗೆ ಇರಲಿಲ್ಲ. ಅವರಿಗಿದ್ದ ಹಂಬಲ್‌ನೆಸ್‌ ಅವರ ತಂದೆಯಿಂದ, ತಾಯಿಯಿಂದ ಅಥವಾ ಅವರ ಹಿಂದಿನ ಜನ್ಮದಿಂದ ಬಂದಿದೆ. ಎಷ್ಟೇ ಬೆಳೆದರೂ ಎಲ್ಲರನ್ನೂ ಮಾತನಾಡಿಸುವ ಗುಣದವರು."

ಪುನೀತ್‌ ಅವರದ್ದು ಪುಣ್ಯದ ಸಾವು..!

"ಗರುಡ ಪುರಾಣದ ಪ್ರಕಾರ, ಅಧ್ಮಾತ್ಮಕವಾಗಿ ಇದೊಂದು ಒಳ್ಳೆಯ ಸಾವು. ಅಂಥ ಸಾವು ಬರಲಿ ಎಂದು ವಯಸ್ಸಾದವರು ಕಾಯುತ್ತಿರುತ್ತಾರೆ. ಒಂದು ಲೋಹವೂ ನನ್ನನ್ನು ಮುಟ್ಟಕೂಡದು. ನಾನು ಇಂಜೆಕ್ಷನ್‌ ಮಾಡಿಸಿಕೊಳ್ಳಬಾರದು, ಮೈಯನ್ನು ಕೂಯ್ಯಿಸಿಕೊಳ್ಳದೇ, ಪ್ರಜ್ಞೆ ತಪ್ಪಿಸಿ ಚಿಕಿತ್ಸೆ ಪಡೆಯದೇ.. ಇಂಥ ಸಾವು ಬರಕೂಡದು ಎಂದು ವಯಸ್ಸಾದವರು ಕೇಳಿಕೊಳ್ಳುತ್ತಾರೆ. ಅದರಲ್ಲೂ ಪುನೀತ್‌ ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ತೊಡೆಯ ಮೇಲೆ ಸಾವನ್ನಪ್ಪಿದರು. ಅದು ನಿಜಕ್ಕೂ ಪುಣ್ಯದ ಸಾವು."

ಕೋಟಿ ಕೋಟಿ ಜನರಿಂದ ಆಶೀರ್ವಾದ ಸಿಕ್ಕಿದೆ..

"ಅವರ ಜೀವನವನ್ನು ನೋಡಿದರೆ ಅವರು ಯಾವತ್ತೂ ಕಣ್ಮರೆಯಾಗುವುದಿಲ್ಲ. ಇಂದಿಗೂ ನಮ್ಮನ್ನು ಮೋಟಿವೇಟ್‌ ಮಾಡುತ್ತಾರೆ. ಚಿಕ್ಕಂದಿನಿಂದ, ದೊಡ್ಡವರಾದ ಮೇಲೆ, ಈಗಲೂ ಅವರನ್ನು ಎಲ್ಲರೂ ಇಷ್ಟಪಡುತ್ತಾರೆ. ನಾವು ಸಾಮಾನ್ಯರು, ಸಾಕಷ್ಟು ಹೀರೋಗಳನ್ನು ನೋಡಿರುತ್ತೇವೆ. ಸಾಕಷ್ಟು ಹೀರೋಗಳು ಬೇರೆಯವರಿಗೆ ತೊಂದರೆಯನ್ನೂ ಕೊಟ್ಟಿದ್ದುಂಟು. ತುಂಬ ಜನ ಅಂಥ ನಟರಿಗೆ ಶಾಪ ಹಾಕಿದ್ದಾರೆ. ಆದರೆ, ಪುನೀತ್‌ ಅವರು ತಮ್ಮ ಸುತ್ತಲಿನ ಜನರಷ್ಟೇ ಅಲ್ಲ ಇಡೀ ನಾಡಿನ ಜನರನ್ನು ಸಂತೋಷಪಡಿಸಿದ ವ್ಯಕ್ತಿ. ಅವರ ಇಡೀ ಪಯಣದುದ್ದಕ್ಕೂ ಎಲ್ಲರನ್ನು ಖುಷಿಯಾಗಿಟ್ಟರು. ಇಂಥ ಮನುಷ್ಯನಿಗೆ ಎಷ್ಟು ಆಶೀರ್ವಾದ ಸಿಕ್ಕಿರುತ್ತೆ ಲೆಕ್ಕ ಹಾಕಿ?"

ಅವರು ಸದ್ಯ ದೇವಲೋಕದಲ್ಲಿದ್ದಾರೆ..

"ದುಡ್ಡು ಕೊಟ್ಟು ಪಡೆದುಕೊಳ್ಳದ ಏಕೈಕ ಪುಣ್ಯ ಎಂದರೆ ಆಶೀರ್ವಾದ. ಅದೇ ರೀತಿ ಪುನೀತ್‌ ರಾಜ್‌ಕುಮಾರ್‌ ಅವರು ಇದ್ದಷ್ಟು ದಿನ ಏನೆನೆಲ್ಲ ಮಾಡಬೇಕೋ ಎಲ್ಲವನ್ನೂ ಕ್ರಮಬದ್ಧವಾಗಿ ಮಾಡಿದ್ದಾರೆ. ಹೀಗಿರುವಾಗ ಒಂದೇ ಕ್ಷಣಕ್ಕೆ ಹೀಗೆ ಹೋಗಿದ್ದಾರೆ ಅಂದ್ರೆ, ಮೇಲಿನ ದೇವರು ಅವರನ್ನು ಸ್ವಾಗತಿಸಿದ್ದಾರೆ ಅಂತಲೇ ಅರ್ಥ. ದೇವಲೋಕದಲ್ಲಿಯೇ ಅವರಿದ್ದಾರೆ. ಒಂದು ವೇಳೆ ನಾವು ಅವರನ್ನು ಬದುಕಿಸಿಕೊಂಡಿದ್ದರೆ, ಹಳೇ ಪುನೀತ್‌ ಸಿಗುತ್ತಿರಲಿಲ್ಲ. ಹೇಗೆ ತಮ್ಮ ಕಲ್ಲಿನಂಥ ದೇಹವನ್ನೇ ರಾಜನಂತೆ ಹಾಗೇ ತೆಗೆದುಕೊಂಡು ಹೋದರು. ಇದಷ್ಟು ದಿನ ಎಲ್ಲರನ್ನು ಸಂತೋಷ ಪಡಿಸಿದ್ದಾರೆ. ಯಾರನ್ನೂ ನೆಗ್ಲೆಕ್ಟ್‌ ಮಾಡಿಲ್ಲ. ಸಾಮಾನ್ಯ ವ್ಯಕ್ತಿಯ ಜತೆಗೂ ಸಾಮಾನ್ಯನಂತೆಯೇ ಇರುತ್ತಿದ್ದರು."

“ಈ ಥರ ಒಬ್ಬ ಮನುಷ್ಯ ಇರೋಕೆ ಹೇಗೆ ಸಾಧ್ಯ? ಇದಕ್ಕೂ ಉತ್ತರ ನೀಡಿದ ರೂಪಾ ಅಯ್ಯರ್‌, ”ಕೊನೇ ಜನ್ಮ ಆಗಿದ್ದರೆ ಸಾಧ್ಯ, ತುಂಬ ಪ್ರಬುದ್ಧವಾದ ಮನಸ್ಸಿದ್ದರೂ ಇದು ಸಾಧ್ಯವಾಗುತ್ತದೆ. ಮೈ ಕೈಗೆ ಆಪರೇಷನ್‌ಗಳನ್ನು ಮಾಡಿಸಿಕೊಳ್ಳದೆ, ಗಟ್ಟಿ ದೇಹದ ಜತೆಗೆ, ಜ್ಞಾನದ ಜತೆಗೇ ಅವರು ಹೋದರು. ಅದು ಅವರಿಗೆ ಸಿಕ್ಕ ರಾಜಮರ್ಯಾದೆ." ಎಂದಿದ್ದಾರೆ ರೂಪಾ ಅಯ್ಯರ್.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.