ಕನ್ನಡ ಸುದ್ದಿ  /  Entertainment  /  Director Shivaprasad About His Movie Dil Pasand

Dil Pasand Teaser: ದಿಲ್‌ ಪಸಂದ್‌ನಷ್ಟೇ ಚೆನ್ನಾಗಿದೆ ನಮ್ಮ ಸಿನಿಮಾ...ಚಿತ್ರದ ಬಗ್ಗೆ ಭರವಸೆ ವ್ಯಕ್ತಪಡಿಸಿದ 'ದಿಲ್‌ ಪಸಂದ್‌' ನಿರ್ದೇಶಕ

ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಇಬ್ಬರೂ ಕೃಷ್ಣನಿಗೆ ನಾಯಕಿಯರಾಗಿ ನಟಿಸಿದ್ದಾರೆ. ನವೆಂಬರ್‌ 11 ರಂದು 'ದಿಲ್ ಪಸಂದ್‌' ಸಿನಿಮಾ ತೆರೆಗೆ ಬರುತ್ತಿದೆ.

'ದಿಲ್‌ ಪಸಂದ್‌' ಚಿತ್ರತಂಡ
'ದಿಲ್‌ ಪಸಂದ್‌' ಚಿತ್ರತಂಡ

ಇತೀಚೆಗೆ ಬಿಡುಗಡೆಯಾದ ಡಾರ್ಲಿಂಗ್ ಕೃಷ್ಣ ಅಭಿನಯದ 'ದಿಲ್ ಪಸಂದ್' ಚಿತ್ರದ ಟೀಸರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಕಳೆದ ಹನ್ನೊಂದು ತಿಂಗಳ ಹಿಂದೆ ನಮ್ಮ ಚಿತ್ರ ಆರಂಭವಾಗಿತ್ತು. ಇದೇ ನವೆಂಬರ್ 11 ರಂದು ಚಿತ್ರ ತೆರೆಗೆ ಬರುತ್ತಿದೆ. ನಮ್ಮ ಚಿತ್ರ 'ದಿಲ್ ಪಸಂದ್‌'ನಷ್ಟೇ ಸಿಹಿಯಾಗಿದೆ ಎಂದು ನಿರ್ದೇಶಕ ಶಿವತೇಜಸ್‌ ಹೇಳಿದ್ದಾರೆ.

ಟೀಸರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಎಲ್ಲಾ ಸದಸ್ಯರು ಭಾಗಿಯಾಗಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನನ್ನ ಕಥೆ ಮೆಚ್ಚಿಕೊಂಡು ಸಿನಿಮಾ ನಿರ್ಮಿಸಲು ಒಪ್ಪಿದ ನಿರ್ಮಾಪಕ ಸುಮಂತ್ ಕ್ರಾಂತಿ ಅವರಿಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಶಿವತೇಜಸ್ ಕೃತಜ್ಞತೆ ಅರ್ಪಿಸಿದರು. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಇಬ್ಬರೂ ಕೃಷ್ಣನಿಗೆ ನಾಯಕಿಯರಾಗಿ ನಟಿಸಿದ್ದಾರೆ. ನಿಶ್ವಿಕಾ ನಾಯ್ಡು ಮಾತನಾಡಿ, 'ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಐಶು. ಈ ಚಿತ್ರದಲ್ಲಿ ನಾನು ಬಹಳ ಎಮೋಷನ್ ಹುಡುಗಿಯಾಗಿ ನಡಿಸಿದ್ದೇನೆ' ಎಂದರು.

'ಈ ಚಿತ್ರದಲ್ಲಿ ಮುಗ್ದ ಹುಡುಗಿಯ ಪಾತ್ರ ನನ್ನದು. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರ 'ದಿಲ್ ಪಸಂದ್' ಈ ಸಿನಿಮಾದಲ್ಲಿ ನಟಿಸಿರುವುದು ಖುಷಿ ನೀಡಿದೆ' ಎಂದು ಮೇಘಾ ಶೆಟ್ಟಿ ಹೇಳಿಕೊಂಡರು. 'ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿಯಾಗಿದ್ದೆ. ಎಂಜಾಯ್ ಮಾಡುತ್ತಾ ಡಬ್ಬಿಂಗ್ ಮಾಡಿದ್ದೇನೆ. ಚಿತ್ರದಲ್ಲಿ ನಿಮಗೆ ಖಂಡಿತ ಮನರಂಜನೆ ದೊರೆಯುತ್ತದೆ 'ದಿಲ್ ಪಸಂದ್' ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ' ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

'ದಿಲ್ ಪಸಂದ್' ಚಿತ್ರವನ್ನು ರಶ್ಮಿ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಸುಮಂತ್‌ ಕ್ರಾಂತಿ ನಿರ್ಮಿಸಿದ್ದಾರೆ. ಶಿವತೇಜಸ್‌, ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಕವಿರಾಜ್‌, ಯೋಗರಾಜ್‌ ಭಟ್‌, ಚೇತನ್‌ ಕುಮಾರ್‌ ಸಾಹಿತ್ಯವಿರುವ ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ನವೆಂಬರ್‌ 11 ರಂದು ಸಿನಿಮಾ ತೆರೆಗೆ ಬರುತ್ತಿದೆ.

ಈ ಸಿನಿಮಾ ಹೊರತುಪಡಿಸಿ ಡಾರ್ಲಿಂಗ್‌ ಕೃಷ್ಣ ಅಭಿನಯದ ಶುಗರ್‌ ಫ್ಯಾಕ್ಟರಿ ಹಾಗೂ ಮಿಸ್ಟರ್‌ ಬ್ಯಾಚುಲರ್‌ ಸಿನಿಮಾಗಳು ಚಿತ್ರೀಕರಣ ಮುಗಿಸಿವೆ. ಲವ್‌ ಮಿ ಆರ್‌ ಹೇಟ್‌ ಮಿ ಚಿತ್ರೀಕರಣದ ಹಂತದಲ್ಲಿದೆ. ನಿಶ್ವಿಕಾ ನಾಯ್ಡು ಅಭಿನಯದ ಗುರುಶಿಷ್ಯರು ಸಿನಿಮಾ ಇತ್ತೀಚೆಗೆ ತೆರೆಕಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಮೇಘಾ ಶೆಟ್ಟಿ ಎಂದಿನಂತೆ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಗಣೇಶ್‌ ಜೊತೆ ತ್ರಿಬಲ್‌ ರೈಡಿಂಗ್‌ ಚಿತ್ರದಲ್ಲಿ ಕೂಡಾ ಬ್ಯುಸಿಯಾಗಿದ್ದಾರೆ.

IPL_Entry_Point