Aamir khan retired from Movies: ಸಿನಿಮಾ ಜೀವನದಿಂದ ನಿವೃತ್ತಿ ಪಡೆಯಲಿದ್ದಾರಾ ಆಮೀರ್ ಖಾನ್..?
ಆಮೀರ್ ಖಾನ್ ಎಂದರೆ ಬಾಕ್ಸ್ ಆಫೀಸ್ ಕಿಂಗ್ ಇದ್ದಂತೆ. ಮೊದಲ ದಿನದ ಗಳಿಕೆಯಲ್ಲೇ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. ಆದರೆ 'ಲಾಲ್ ಸಿಂಗ್ ಚಡ್ಡಾ' ಸೋಲಿನ ನಂತರ ಆಮೀರ್ ಖಾನ್ ಎಷ್ಟೋ ನಿದ್ರೆಯಿಲ್ಲದ ದಿನಗಳನ್ನು ಕಳೆದಿದ್ದಾರಂತೆ.
ಚಿತ್ರರಂಗದಲ್ಲಿ ಸೋಲು-ಗೆಲುವು ಸಹಜ. ಒಂದು ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದ ಬಾಲಿವುಡ್ ನಟ ಆಮೀರ್ ಖಾನ್ ಈಗ ಸತತ ಸೋಲು ಅನುಭವಿಸುತ್ತಿದ್ದಾರೆ. ಈತ್ತೀಚೆಗೆ ತೆರೆ ಕಂಡ ಬಹುನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಕೂಡಾ ಸೋಲು ಕಂಡಿತು. ಇದೀಗ ಆಮೀರ್ ಖಾನ್ ನಟನೆಯಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಟ್ರೆಂಡಿಂಗ್ ಸುದ್ದಿ
'ಲಾಲ್ ಸಿಂಗ್ ಚಡ್ಡಾ' ಸೋಲಿನ ನಂತರ ಆಮೀರ್ ಖಾನ್ ಎಷ್ಟೋ ನಿದ್ರೆಯಿಲ್ಲದ ದಿನಗಳನ್ನು ಕಳೆದಿದ್ದಾರಂತೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ. ಬಾಲಿವುಡ್ ಚಿತ್ರರಂಗದಲ್ಲಿ ಇದು ಮತ್ತೊಂದು ಇತಿಹಾಸ ನಿರ್ಮಿಸುತ್ತದೆ ಎಂದು ಆಮೀರ್ ಖಾನ್ ಬಲವಾಗಿ ನಂಬಿದ್ದರಂತೆ. ಆದರೆ ಜನರು ಸಿನಿಮಾವನ್ನು ನಿರಾಕರಿಸಿದ್ದಾರೆ. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಕೂಡಾ ದೊರೆತಿಲ್ಲ, ಬಾಕ್ಸ್ ಆಫೀಸಿನಲ್ಲಿ ಕೂಡಾ ಸಿನಿಮಾ ಸ್ವಲ್ಪವೂ ಲಾಭ ಮಾಡಿಲ್ಲದಿರುವುದು ಆಮೀರ್‌ಗೆ ಬೇಸರ ತರಿಸಿದೆಯಂತೆ. ಈ ಕಾರಣಕ್ಕಾಗಿ ಆಮೀರ್ ಖಾನ್ ಕೆಲವು ದಿನಗಳ ಕಾಲ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳಲು ನಿರ್ಧಾರ ಮಾಡಿದ್ದಾರಂತೆ. ಆದರೆ ಆಮೀರ್ ಖಾನ್ ಶಾಶ್ವತವಾಗಿ ಸಿನಿಮಾರಂಗದಿಂದ ದೂರ ಉಳಿಯಲಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ. ಆದರೆ ಆಮೀರ್ ಖಾನ್ ಅಧಿಕೃತವಾಗಿ ಇದನ್ನು ಘೋಷಿಸಿಲ್ಲ. ಇವೆಲ್ಲಾ ಅಂತೆ ಕಂತೆ ಮಾತುಗಳಿಂದ ಆಮೀರ್ ಖಾನ್ ಅಭಿಮಾನಿಗಳಿಗೆ ಬೇಸರ ಆಗಿರುವುದಂತೂ ನಿಜ.
ಆಮೀರ್ ಖಾನ್ ಎಂದರೆ ಬಾಕ್ಸ್ ಆಫೀಸ್ ಕಿಂಗ್ ಇದ್ದಂತೆ. ಮೊದಲ ದಿನದ ಗಳಿಕೆಯಲ್ಲೇ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ. 2018ರಲ್ಲಿ ಬಿಡುಗಡೆ ಆಗಿದ್ದ 'ಥಗ್ಸ್ ಆಫ್ ಹಿಂದೂಸ್ತಾನ್' ಸಿನಿಮಾ ಮೊದಲ ದಿನವೇ ಬರೋಬ್ಬರಿ 52 ಕೋಟಿ ರೂ. ಕಲೆಕ್ಷನ್ ಮಾಡಿತ್ತು. 'ದಂಗಲ್' ಸಿನಿಮಾ 29 ಕೋಟಿ ರೂ. ಬಾಚಿಕೊಂಡಿತ್ತು. 'ಪಿಕೆ' ಬತ್ತಳಿಕೆಗೂ 26 ಕೋಟಿ ರೂ. ಬಂದು ಬಿದ್ದಿತ್ತು. ಆದರೆ ಬಹುನಿರೀಕ್ಷಿತ 'ಲಾಲ್ ಸಿಂಗ್ ಛಡ್ಡಾ' ಮಾತ್ರ ಮೊದಲ ದಿನ ಕೇವಲ 12 - 13 ಕೋಟಿ ರೂ. ಒಳಗಷ್ಟೇ ಗಳಿಕೆ ಕಂಡಿತ್ತು. ಒಟ್ಟಾರೆಯಾಗಿ 69 ಕೋಟಿ ಗಳಿಸುವಷ್ಟರಲ್ಲಿ ಸುಸ್ತು ಹೊಡೆದಿತ್ತು. ಇದೀಗ ಸಿನಿಮಾವು ನೆಟಫ್ಲಿಕ್ಸ್‌ಗೆ ಸೇಲ್ ಮಾಡಲಾಗಿದೆ.
ಬಹಿಷ್ಕಾರದ ಬಿಸಿ ಎದುರಿಸಿದ್ದ ಸಿನಿಮಾ
'ಲಾಲ್ ಸಿಂಗ್ ಛಡ್ಡಾ' ಸಿನಿಮಾಗೆ ಬಾಯ್‌ಕಾಟ್ ಸಮಸ್ಯೆ ಎದುರಾಗಿತ್ತು. ತಮ್ಮ ಹಾಗೂ ಸಿನಿಮಾ ವಿರುದ್ಧ ಜನರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಆಮೀರ್ ಖಾನ್ ಬೇಸರ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು ''ಚಿತ್ರವನ್ನು ಬಾಯ್ ಕಾಟ್ ಮಾಡಬೇಕು ಎಂದು ಅಭಿಯಾನ ಆರಂಭವಾಗಿರುವುದು ನನಗೆ ತುಂಬಾ ನೋವು ತಂದಿದೆ. ನನಗೆ ಭಾರತ ಇಷ್ಟವಿಲ್ಲ ಎಂಬ ತಪ್ಪು ಕಲ್ಪನೆ ಕೆಲವರಿಗೆ ಇದೆ. ಆದ್ದರಿಂದಲೇ ನನ್ನ ಹಾಗೂ ನನ್ನ ಸಿನಿಮಾಗಳ ವಿರುದ್ಧ ಟ್ವಿಟ್ಟರ್ನಲ್ಲಿ ಬಾಯ್‌ಕಾಟ್ ಅಭಿಯಾನ ಮಾಡುತ್ತಿದ್ದಾರೆ. ಆದರೆ ನನ್ನ ಬಗ್ಗೆ ಈ ರೀತಿ ತಪ್ಪು ತಿಳಿದಿರುವುದು ದುರದೃಷ್ಟಕರ. ನನ್ನ ಬಗ್ಗೆ ತಪ್ಪು ತಿಳಿಯಬೇಡಿ. ನನಗೆ ಭಾರತ ಎಂದರೆ ಬಹಳ ಇಷ್ಟ. ದಯವಿಟ್ಟು ನನ್ನ ಸಿನಿಮಾಗಳನ್ನು ಬಹಿಷ್ಕರಿಸಬೇಡಿ. ಎಲ್ಲರೂ ಲಾಲ್ ಸಿಂಗ್ ಚಡ್ಡಾ ಸಿನಿಮಾ ನೋಡಿ'' ಎಂದು ಆಮೀರ್ ಖಾನ್ ಮನವಿ ಮಾಡಿದ್ದರು.