Priyamani: ಮತ್ತೆ ಮುನ್ನೆಲೆಗೆ ಬಂತು ಪ್ರಿಯಾಮಣಿ ಡೈವೋರ್ಸ್ ಸುದ್ದಿ..ಪತಿಯಿಂದ ನಿಜಕ್ಕೂ ದೂರಾಗ್ತಿದ್ದಾರಾ ಬಹುಭಾಷಾ ನಟಿ..?
ಪ್ರಿಯಾಮಣಿ ಹಾಗೂ ಮುಸ್ತಫಾ ಡೈವೋರ್ಸ್ ವಿಚಾರ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಮುಸ್ತಫಾ ರಾಜ್ಗೆ ಈ ಮೊದಲೇ ಮದುವೆಯಾಗಿದ್ದು ಅವರು ಮೊದಲ ಪತ್ನಿಗೆ ಕಾನೂನಿನ ಪ್ರಕಾರ ಡೈವೋರ್ಸ್ ನೀಡಿಲ್ಲ ಎಂಬ ಮಾತು ಕಳೆದ ವರ್ಷ ಕೇಳಿಬಂದಿತ್ತು.
ಚಿತ್ರರಂಗದಲ್ಲಿ ಗಾಸಿಪ್ ಸಾಮಾನ್ಯವಾಗಿದೆ. ನಟನಟಿಯರ ವೃತ್ತಿ ಜೀವನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪ್ರತಿದಿನ ನಾವು ಅನೇಕ ಸುದ್ದಿಗಳನ್ನು ಕೇಳುತ್ತಾ ಬಂದಿದ್ದೇವೆ. ಇದೀಗ ಬಹುಭಾಷಾ ನಟಿ ಪ್ರಿಯಾಮಣಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ನಲ್ಲಿ ಗಾಸಿಪ್ ಹರಿದಾಡುತ್ತಿದೆ.
ಪ್ರಿಯಾಮಣಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಕೂಡಾ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಪ್ರಿಯಾಮಣಿ ತಮ್ಮ ಬಾಲ್ಯದ ಗೆಳೆಯ ಮುಸ್ತಫಾ ರಾಜ್ ಅವರನ್ನು 2017 ರಲ್ಲಿ ಮದುವೆಯಾದರು. ಎಲ್ಲವೂ ಸರಿಯಾಗಿದೆ ಎಂದುಕೊಳ್ಳುತ್ತಿರುವಾಗಲೇ ಪ್ರಿಯಾಮಣಿ, ತಮ್ಮ ಪತಿಯಿಂದ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪ್ರಿಯಾಮಣಿ ಹಾಗೂ ಮುಸ್ತಫಾ ಡೈವೋರ್ಸ್ ವಿಚಾರ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಮುಸ್ತಫಾ ರಾಜ್ಗೆ ಈ ಮೊದಲೇ ಮದುವೆಯಾಗಿದ್ದು ಅವರು ಮೊದಲ ಪತ್ನಿಗೆ ಕಾನೂನಿನ ಪ್ರಕಾರ ಡೈವೋರ್ಸ್ ನೀಡಿಲ್ಲ ಎಂಬ ಮಾತು ಕಳೆದ ವರ್ಷ ಕೇಳಿಬಂದಿತ್ತು. ''ನಾನು ಹಾಗೂ ಮುಸ್ತಫಾ ರಾಜ್ ಕಾನೂನಿನ ಪ್ರಕಾರ ಬೇರೆಯಾಗಿಲ್ಲ. ನಾನು ಇನ್ನೂ ಅವರ ಪತ್ನಿಯಾಗಿ ಉಳಿದಿದ್ದೇನೆ. ಆದ್ದರಿಂದ ಪ್ರಿಯಾ ಮಣಿ ಹಾಗೂ ಮುಸ್ತಫಾ ರಾಜ್ ಮದುವೆ ಅಸಿಂಧು ಎಂದು ಮೊದಲ ಪತ್ನಿ ಆಯೆಷಾ ಹೇಳಿದ್ದರು. ಅಷ್ಟೇ ಅಲ್ಲ ಮುಸ್ತಫಾ ಇವೆಲ್ಲವನ್ನೂ ಬಚ್ಚಿಟ್ಟು ಪ್ರಿಯಾಮಣಿ ಅವರನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪಗಳನ್ನು ಮುಸ್ತಫಾ ನಿರಾಕರಿಸಿದ್ದರು.
ಪ್ರಿಯಾಮಣಿ ಕೂಡಾ ಮುಸ್ತಫಾ ಮೊದಲ ಮದುವೆ ವಿಚಾರ ನನಗೆ ಗೊತ್ತು ಎಂದು ಹೇಳಿಕೊಂಡಿದ್ದರು. ಈ ಸುದ್ದಿ ಹರಡಿದ ನಂತರ ಪ್ರಿಯಾಮಣಿ ತಮ್ಮ ಪತಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಅವರಿಂದ ದೂರಾಗಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ ಪ್ರಿಯಾಮಣಿ ಕಳೆದ ದೀಪಾವಳಿ ಹಬ್ಬದಂದು ಪತಿ ಮುಸ್ತಫಾ ರಾಜ್ ಅವರೊಂದಿಗೆ ಇರುವ ಫೋಟೋವೊಂದನ್ನು ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಮತ್ತೆ ಇದೇ ಸುದ್ದಿ ಹರಿದಾಡುತ್ತಿದೆ.
ಪ್ರಿಯಾಮಣಿ ಹಾಗೂ ಮುಸ್ತಫಾ ರಾಜ್ ನಡುವೆ ಮೊದಲ ಪತ್ನಿ ವಿಚಾರವಾಗಿ ಬಹಳ ಮನಸ್ತಾಪ ಉಂಟಾಗಿದ್ದು ಇಬ್ಬರೂ ಡೈವೋರ್ಸ್ ಪಡೆಯಲು ನಿರ್ಧರಿಸಿದ್ದಾರೆ. ಪ್ರಿಯಾಮಣಿ ಶೀಘ್ರದಲ್ಲೇ ತಮ್ಮ ವಿಚ್ಛೇದನದ ಬಗ್ಗೆ ಘೋಷಿಸಲಿದ್ದಾರೆ ಎಂಬ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಇದೂ ಕೂಡಾ ಗಾಸಿಪ್ ಇರಬಹುದಾ ಅಥವಾ ನಿಜವಾಗಲೂ ಇಬ್ಬರೂ ದೂರಾಗುತ್ತಿದ್ದಾರಾ...? ಎಂಬ ಪ್ರಶ್ನೆಗೆ ಮತ್ತೆ ಪ್ರಿಯಾಮಣಿ ಅವರಿಂದಲೇ ಉತ್ತರ ದೊರೆಯಬೇಕಿದೆ.
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಪ್ರಿಯಾಮಣಿ ಅಭಿನಯದ ತೆಲುಗಿನ 'ವಿರಾಟ ಪರ್ವಂ' ಇತ್ತೀಚೆಗೆ ತೆರೆ ಕಂಡಿತ್ತು. ಇದನ್ನು ಹೊರತುಪಡಿಸಿ ಸೈನೆಡ್, ಕನ್ನಡದ ಡಾ.56, ಖೈಮರಾ, ಹೆಸರಿಡದ ಹೊಸ ಸಿನಿಮಾ, ತಮಿಳಿನ ಕೊಟೇಷನ್ ಗ್ಯಾಂಗ್ ಸಿನಿಮಾಗಳಲ್ಲಿ ಅವರು ಬ್ಯುಸಿ ಇದ್ದಾರೆ.