Kannada Full Movies: ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ ಸೇರಿದಂತೆ 5 ಕನ್ನಡ ಸಿನಿಮಾ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Kannada Full Movies: ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ ಸೇರಿದಂತೆ 5 ಕನ್ನಡ ಸಿನಿಮಾ ನೋಡಿ

Kannada Full Movies: ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ ಸೇರಿದಂತೆ 5 ಕನ್ನಡ ಸಿನಿಮಾ ನೋಡಿ

Kannada Full Movies: ಇಂದು ಡಾ ರಾಜ್‌ಕುಮಾರ್‌ ಪುಣ್ಯಸ್ಮರಣೆ. ದಿವಂಗತ ರಾಜ್‌ಕುಮಾರ್‌‌ ಹಳೆಯ ಸಿನಿಮಾಗಳನ್ನು ಉಚಿತವಾಗಿ ನೋಡಲು ಬಯಸುವವರಿಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ, ಭಕ್ತ ಪ್ರಹ್ಲಾದ, ಹೊಸ ಬೆಳಕು ಫುಲ್‌ ಮೂವಿಗಳನ್ನು ಇಲ್ಲಿ ನೀಡಲಾಗಿದೆ.

Kannada Full Movies: ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ ಸೇರಿದಂತೆ 5 ಕನ್ನಡ ಸಿನಿಮಾ ನೋಡಿ
Kannada Full Movies: ರಾಜ್‌ಕುಮಾರ್‌ ಪುಣ್ಯಸ್ಮರಣೆಗೆ ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ ಸೇರಿದಂತೆ 5 ಕನ್ನಡ ಸಿನಿಮಾ ನೋಡಿ

Kannada Full Movies: ಇಂದು (ಏಪ್ರಿಲ್‌ 12) ರಾಜ್‌ಕುಮಾರ್‌ ಪುಣ್ಯಸ್ಮರಣೆ. ಡಾ. ರಾಜ್‌ಕುಮಾರ್‌ ಜನಪ್ರಿಯ ಗೀತೆಗಳನ್ನು ಕೇಳುತ್ತಾ, ರಾಜ್‌ ಕುಮಾರ್‌ ಸಿನಿಮಾಗಳನ್ನು ನೋಡುತ್ತ ಅಭಿಮಾನಿಗಳು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿರಬಹುದು. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಓದುಗರಿಗಾಗಿ ರಾಜ್‌ಕುಮಾರ್‌ ಅವರ ಆಯ್ದ ಐದು ಸಿನಿಮಾಗಳನ್ನು ಇಲ್ಲಿ ನೀಡುತ್ತಿದೆ. ಇದೇ ಪುಟದಲ್ಲಿದ್ದುಕೊಂಡು ಆಕಸ್ಮಿಕ, ಸಂಪತ್ತಿಗೆ ಸವಾಲ್‌, ದೇವತಾ ಮನುಷ್ಯ, ಭಕ್ತ ಪ್ರಹ್ಲಾದ, ಹೊಸ ಬೆಳಕು ಸಿನಿಮಾಗಳನ್ನು ಉಚಿತವಾಗಿ ನೋಡಬಹುದು. ಈ ಐದು ಸಿನಿಮಾಗಳ ಕುರಿತು ಒಂದಿಷ್ಟು ಸಂಕ್ಷಿಪ್ತ ಮಾಹಿತಿಯನ್ನೂ ಇಲ್ಲಿ ನೀಡಲಾಗಿದೆ.

ಸಂಪತ್ತಿಗೆ ಸವಾಲ್‌ (Sampathige Saval movie)

ಇದು 1974ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ. ಎ.ವಿ.ಶೇಷಗಿರಿ ರಾವ್ ನಿರ್ದೇಶನದ ಈ ಚಿತ್ರ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ನಾಟಕವೊಂದು ಸಿನಿಮಾವಾಗಿ ಖ್ಯಾತಿ ಪಡೆಯಿತು. ಈ ಚಿತ್ರಗಳ ಸಂಭಾಷಣೆಗಳು ಹಾಡುಗಳಿಗಿಂತ ಹೆಚ್ಚು ಖ್ಯಾತಿ ಪಡೆದಿತ್ತು. ಡಾ.ರಾಜ್‍ರಂತಹ ಮೇರು ನಟನನ್ನು ಬೈಯ್ಯುವಂತಹ ಗಯ್ಯಾಳಿ ಪಾತ್ರ ಮಾಡಿ ಮಂಜುಳ ಸೈ ಎನಿಸಿಕೊಂಡರು.ನಾಯಕಿಗೆ ಬುದ್ಧಿ ಕಲಿಸುವ ರಾಜ್ ಇಲ್ಲಿ ನಿಜವಾದ ನಾಯಕನಾದರು. " ಯಾವ ನಾಯಿಗೆ ಬೇಕೋ, ಯಾವ ನಾಯಿಗೆ ಬೇಕೋ ನಿನ್ನ ಋಣ" ದುರ್ಗಿ- " ಲೇ, ನೀನು ಗಂಡಸೇ ಆಗಿದ್ರೇ, ನೀನು ನಿಮ್ಮಪ್ಪನ ಮಗನೇ ಆಗಿದ್ರೆ ,ಗಿಡಕ್ಕೆ ಕೈ ಹಾಕೋ ನೋಡೋಣ..." " ಬೇವರ್ಸಿ, ಹಳೆ ಬೇವರ್ಸಿ, ಬಿಕನಾಸಿ, ದರ್ವೇಸಿ " ಇತ್ಯಾದಿ ಸಂಭಾಷಣೆಗಳು ಈ ಸಿನಿಮಾದಲ್ಲಿದ್ದವು. ಸಂಪತ್ತಿಗೆ ಸವಾಲ್‌ ಸಂಪೂರ್ಣ ಸಿನಿಮಾ ಇಲ್ಲಿದೆ ನೋಡಿ.

ಆಕಸ್ಮಿಕ

1993ರ ಭಾರತೀಯ ಕನ್ನಡ ಭಾಷೆಯ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಟಿಎಸ್‌ ನಾಗಾಭರಣ ನಿರ್ದೇಶನದ ಈ ಸಿನಿಮಾದಲ್ಲಿ ರಾಜಕುಮಾರ್, ಗೀತಾ ಮತ್ತು ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ತ ರಾ ಸು ಅವರ ತ್ರಿವಳಿ ಆಕಸ್ಮಿಕ ಅಪರಾದಿ ಪರಿಣಾಮ ಎಂಬ ಮೂರು ಕಾದಂಬರಿಗಳನ್ನು ಆಧರಿಸಿ ಮಾಡಿರುವ ಸಿನಿಮಾವಾಗಿದೆ. ನಾಗರಹಾವು ಸಿನಿಮಾ ಕೂಡ ಇದೇ ರೀತಿ ಮೂರು ಕಾದಂಬರಿಗಳನ್ನು ಆಧರಿಸಿತ್ತು. ಆಕಸ್ಮಿಕ ಸಿನಿಮಾಖ್ಕೆ ಹಂಸಲೇಖ ಸಂಗೀತ, ಸಾಹಿತ್ಯವಿದೆ. ಈ ಸಿನಿಮಾ ಹಲವು ತಿಂಗಳುಗಳ ಕಾಲ ಕರ್ನಾಟಕದ್ಯಾಂತ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇಪತ್ತೈದು ವಾರಗಳ ಕಾಲ ತುಂಬಿದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಈ ಸಿನಿಮಾದ ನಟನೆಗಾಗಿ ರಾಜ್‌ಕುಮಾರ್‌ 8 ನೇ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಈ ಸಿನಿಮಾದ ಹಾಡು ಈಗಲೂ ಜನಪ್ರಿಯತೆ ಉಳಿಸಿಕೊಂಡಿದೆ. ಈ ಸಿನಿಮಾಕ್ಕೆ ಶಿವರಾಜ್‌ ಕುಮಾರ್‌ ಹೀರೋ ಆಗಬೇಕಿತ್ತು. ಆದರೆ, ಸ್ಕ್ರಿಪ್ಟ್‌ ನೋಡಿದ ಬಳಿಕ ಇದಕ್ಕೆ ರಾಜ್‌ಕುಮಾರ್‌ ಸೂಕ್ತ ಎಂದು ಅಣ್ಣಾವ್ರನ್ನು ಆಯ್ಕೆ ಮಾಡಲಾಯಿತಂತೆ. ಆಕಸ್ಮಿಕ ಫುಲ್‌ ಮೂವಿ ಇಲ್ಲಿದೆ ನೋಡಿ.

ದೇವತಾ ಮನುಷ್ಯ

ಡಾ. ರಾಜ್‌ಕುಮಾರ್‌ ಅವರ 200ನೇ ಚಲನಚಿತ್ರವಾಗಿದೆ. ಈ ಚಿತ್ರದ ಮೂಲ ಕಥೆಯು ಜಾರ್ಜ್ ಎಲಿಯಟ್ ಅವರ 1861ನಿರ ಇಂಗ್ಲಿಷ್ ಕಾದಂಬರಿ ಸಿಲಾಸ್ ಮಾರ್ನರ್ ಅನ್ನು ಆಧರಿಸಿದೆ . ನಿನ್ನಂತ ಅಪ್ಪ ಇಲ್ಲ ಮುಂತಾದ ಹಾಡುಗಳು ಈಗಲೂ ಜನಪ್ರಿಯತೆ ಉಳಿಸಿಕೊಂಡಿವೆ. ದೇವತಾ ಮನುಷ್ಯ ಫುಲ್‌ ಮೂವಿ ಇಲ್ಲಿದೆ ನೋಡಿ.

ಭಕ್ತ ಪ್ರಹ್ಲಾದ

1983ರಲ್ಲಿ ಬಿಡುಗಡೆಯಾದ ಭಕ್ತಿ ಪ್ರದಾನ ಕನ್ನಡ ಸಿನಿಮಾ. ರಾಜ್‌ಕುಮಾರ್,ಸರಿತಾ,ಪುನೀತ್ ರಾಜ್‌ಕುಮಾರ್‌ ಮತ್ತು ಅನಂತ್‌ ನಾಗ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ನರಸಿಂಹಾವತಾರ ಎಂದು ಡಬ್ ಮಾಡಲಾಯಿತು . ಭಕ್ತ ಪ್ರಹ್ಲಾದ ಕನ್ನಡ ಸಿನಿಮಾ ಇಲ್ಲಿದೆ ನೋಡಿ.

ಹೊಸ ಬೆಳಕು

1982ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಾಕಷ್ಟು ಜನಪ್ರಿಯತೆ ಪಡೆಯಿತು. 26 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಇದು ದೊರೈ ಭಗವಾನ್‌ ನಿರ್ದೇಶನದ ಸಿನಿಮಾ. ಹೊಸ ಬೆಳಕು ಎಂಬ ಕಾದಂಬರಿ ಆಧರಿಸಿದ ಈ ಸನಿಮಾದಲ್ಲಿ ರಾಜ್‌ ಕುಮಾರ್‌, ಸರಿತಾ, ಮಮತಾ ರಾವ್‌, ಕೆಎಸ್‌ ಅಶ್ವತ್‌ ಮುಂತಾದವರು ನಟಿಸಿದ್ದಾರೆ. ಎಂ ರಂಗರಾವ್‌ ಸಂಗೀತ ಸಂಯೋಜಿಸಿದ ಈ ಸಿನಿಮಾದ ಹಾಡುಗಳೆಲ್ಲ ಸೂಪರ್‌ಹಿಟ್‌ ಆಗಿತ್ತು. ಹೊಸ ಬೆಳಕು ಸಿನಿಮಾ ಇಲ್ಲಿದೆ ನೋಡಿ.

ರಾಜ್‌ಕುಮಾರ್‌ ಪುಣ್ಯಸ್ಮರಣೆಯಂದು ಈ ಐದು ಸಿನಿಮಾಗಳಲ್ಲಿ ಯಾವುದಾದರೂ ಒಂದಾದರೂ ಸಿನಿಮಾ ನೋಡುವಿರಾ? ಡಾಕ್ಟರ್‌ ರಾಜ್‌ಕುಮಾರ್‌ ಅವರಿಗೆ ಸಂಬಂಧಪಟ್ಟ ಇತ್ತೀಚಿನ ಎಲ್ಲಾ ಸುದ್ದಿಗಳು, ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner