Kanguva Day 1 Collection: ಭರ್ಜರಿ ಆರಂಭ ಗಳಿಸಿದ ‘ಕಂಗುವಾ’; ಮೊದಲ‌ ದಿನವೇ ರಜಿನಿಕಾಂತ್ ನಟನೆಯ ವೆಟ್ಟೈಯನ್ ಗಳಿಕೆ‌‌ ಮೀರಿಸುವ ನಿರೀಕ್ಷೆ
ಕನ್ನಡ ಸುದ್ದಿ  /  ಮನರಂಜನೆ  /  Kanguva Day 1 Collection: ಭರ್ಜರಿ ಆರಂಭ ಗಳಿಸಿದ ‘ಕಂಗುವಾ’; ಮೊದಲ‌ ದಿನವೇ ರಜಿನಿಕಾಂತ್ ನಟನೆಯ ವೆಟ್ಟೈಯನ್ ಗಳಿಕೆ‌‌ ಮೀರಿಸುವ ನಿರೀಕ್ಷೆ

Kanguva Day 1 Collection: ಭರ್ಜರಿ ಆರಂಭ ಗಳಿಸಿದ ‘ಕಂಗುವಾ’; ಮೊದಲ‌ ದಿನವೇ ರಜಿನಿಕಾಂತ್ ನಟನೆಯ ವೆಟ್ಟೈಯನ್ ಗಳಿಕೆ‌‌ ಮೀರಿಸುವ ನಿರೀಕ್ಷೆ

Kanguva Day 1 Collection Prediction: ನಟ ಸೂರ್ಯ ಅಭಿನಯದ 'ಕಂಗುವಾ' ಮತ್ತು ನಟ ರಜನಿಕಾಂತ್ ಅಭಿನಯದ 'ವೆಟ್ಟೈಯನ್' ಎರಡರ ನಡುವೆ ಹೋಲಿಕೆ ಮಾಡಿ ನೋಡಿದಾಗ ರಜನಿ ಕಾಂತ್ ಅವರ ಸಿನಿಮಾವನ್ನು ಮೀರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

'ಕಂಗುವಾ'ಮೊದಲ‌ ದಿನವೇ ರಜಿನಿಕಾಂತ್ ನಟನೆಯ ವೆಟ್ಟೈಯನ್ ಗಳಿಕೆ‌‌ ಮೀರಿಸುವ ನಿರೀಕ್ಷೆ
'ಕಂಗುವಾ'ಮೊದಲ‌ ದಿನವೇ ರಜಿನಿಕಾಂತ್ ನಟನೆಯ ವೆಟ್ಟೈಯನ್ ಗಳಿಕೆ‌‌ ಮೀರಿಸುವ ನಿರೀಕ್ಷೆ

Kanguva Day 1 Collection: 'ಕಂಗುವಾ' ವರ್ಲ್ಡ್‌ವೈಡ್ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಅಂದಾಜು ನಿರೀಕ್ಷೆಯನ್ನು ಮಾಡಲಾಗಿದೆ. ಎಕ್ಸಪರ್ಟ್‌ ಪ್ರಿಡಿಕ್ಷನ್ ಪ್ರಕಾರ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಇತ್ತೀಚಿನ ತಮಿಳು ಆಕ್ಷನ್ ಥ್ರಿಲ್ಲರ್ ವೆಟ್ಟೈಯನ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೀರಿಸುವ ಅಂದಾಜಿದೆ. ಇಂದು (ನವೆಂಬರ್ 14) ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ನಟ ಸೂರ್ಯ ದ್ವಿಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದು ಬಿಗ್‌ ಬಜೆಟ್‌ ಸಿನಿಮಾ ಆಗಿರುವುದರಿಂದ ಜನರ ನಿರೀಕ್ಷೆ ಕೂಡ ತುಂಬಾ ಇದೆ.

ನಿರ್ಮಾಪಕ ಮತ್ತು ಫಿಲ್ಮ್‌ ಬ್ಯುಸಿನೆಸ್‌ ಎಕ್ಸ್‌ಪರ್ಟ್‌ ಗಿರೀಶ್ ಜೋಹರ್ ತಿಳಿಸಿದ ಮಾಹಿತಿ ಪ್ರಕಾರ ಕಂಗುವಾ ಸಿನಿಮಾ ಜಾಗತಿಕವಾಗಿ ಉತ್ತಮ ಆರಂಭ ಪಡೆದಿದೆ. ಎಲ್ಲೆಡೆ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿದೆ. "ಜಾಗತಿಕವಾಗಿ ಬಿಡುಗಡೆಗೂ ಮುನ್ನವೇ ಇದು ಈಗಾಗಲೇ 15 ಕೋಟಿ ರೂಪಾಯಿಗಳ ಮುಂಗಡ ಬುಕ್ಕಿಂಗ್‌ ಆಗಿದೆ. ಇನ್ನೂ ಹೆಚ್ಚಿನ ಗಳಿಕೆಯ ನಿರೀಕ್ಷೆ ಇದೆ. ಈ ಎಣಿಕೆ ಏರುತ್ತಲೇ ಇರುವುದು ಸಿನಿಮಾ ತಂಡಕ್ಕೆ ಖುಷಿಯ ವಿಚಾರವಾಗಿದೆ. ಕಂಗುವ ಮೊದಲ ದಿನದಂದು ಸಾಗರೋತ್ತರ ಮಾರುಕಟ್ಟೆಯಲ್ಲಿ 20 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಮೊದಲ ದಿನದಂದು 70-75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಫಿಲ್ಮೀ ಬೀಟ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಟ ಸೂರ್ಯ ಅಭಿನಯದ ಕಂಗುವಾ ಮತ್ತು ನಟ ರಜನಿಕಾಂತ್ ಅಭಿನಯದ ವೆಟ್ಟೈಯನ್ ಎರಡರ ನಡುವೆ ಹೋಲಿಕೆ ಮಾಡಿ ನೋಡಿದಾಗ ರಜನಿ ಕಾಂತ್ ಅವರ ಸಿನಿಮಾವನ್ನು ಮೀರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ವೆಟ್ಟೈಯನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾದ ದಿನದಂದು 70 ಕೋಟಿ ರೂ. ಗಳಿಸಿದ ವರದಿಗಳು ನಿಜವಾಗಿದ್ದರೆ, ಮೊದಲ ದಿನದಲ್ಲಿ ಕಂಗುವಾ ವೆಟ್ಟೈಯನ್ ಅನ್ನು ಸೋಲಿಸುವ ನಿರೀಕ್ಷೆಯಿದೆ ಎಂದಿದ್ದಾರೆ.

ಸೂರ್ಯ ಅವರ ವೃತ್ತಿಜೀವನದ ಅತಿದೊಡ್ಡ ಬಜೆಟ್ ಚಿತ್ರವಾದ 'ಕಂಗುವಾ' ಇಂದು ಗುರುವಾರ ತಮಿಳು, ತೆಲುಗು, ಹಿಂದಿ ಮತ್ತು ಇತರ ದಕ್ಷಿಣದ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಆಕ್ಷನ್ ಥ್ರಿಲ್ಲರ್ ಕಥಾವಸ್ತುವಿನೊಂದಿಗೆ ತೆರೆಕಂಡ ಚಿತ್ರವನ್ನು ಶಿವ ನಿರ್ದೇಶಿಸಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಅನಿಮಲ್ ಖ್ಯಾತಿಯ ಬಾಬಿ ಡಿಯೋಲ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

Whats_app_banner