Emergency Twitter Review: ಕಂಗನಾ ರಣಾವತ್ ಕೈ ಹಿಡೀತಾ ಎಮರ್ಜೆನ್ಸಿ ಸಿನಿಮಾ? ಟ್ವಿಟ್ಟರ್ ವಿಮರ್ಶೆ ಹೀಗಿದೆ
Emergency Twitter Review: ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಎಮರ್ಜೆನ್ಸಿ ಸಿನಿಮಾ ಇಂದು (ಜ. 17) ವಿಶ್ವದಾದ್ಯಂತ ತೆರೆಕಂಡಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುವುದರ ಜತೆಗೆ ಎಮರ್ಜೆನ್ಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಕಂಗನಾ. ಈ ಚಿತ್ರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Emergency Twitter Review: ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ಇಂದು (ಜನವರಿ 17) ಬಿಡುಗಡೆ ಆಗಿದೆ. 1975 ರಿಂದ 1977ರ ಅವಧಿಯಲ್ಲಿ ಅಂದಿನ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರು ತೆಗೆದುಕೊಂಡ ನಿರ್ಧಾರಗಳ ಮೇಲೆ ಇಡೀ ಸಿನಿಮಾ ಕೇಂದ್ರೀಕೃತವಾಗಿದೆ. ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಕಾಣಿಸಿಕೊಂಡಿರುವುದು ಒಂದೆಡೆಯಾದರೆ, ಈ ಎಮೆರ್ಜೆನ್ಸಿ ಸಿನಿಮಾವನ್ನು ನಿರ್ದೇಶನ ಮಾಡುವುದರ ಜತೆಗೆ ಬಂಡವಾಳ ಹೂಡಿ ನಿರ್ಮಾಪಕರೂ ಆಗಿದ್ದಾರೆ.
ಅಂದಹಾಗೆ, ಈ ಬಹುತಾರಾಗಣದ ಸಿನಿಮಾದಲ್ಲಿ, ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರಣಾವತ್ ಕಾಣಿಸಿಕೊಂಡರೆ, ಜಯಪ್ರಕಾಶ್ ನಾರಾಯಣ್ ಆಗಿ ಅನುಪಮ್ ಖೇರ್, ಅಟಲ್ ಬಿಹಾರಿ ವಾಜಪೇಯಿಯಾಗಿ ಶ್ರೇಯಸ್ ತಲ್ಪಾಡೆ, ಮೊರಾರ್ಜಿ ದೇಸಾಯಿ ಪಾತ್ರದಲ್ಲಿ ಅಶೋಕ್ ಛಾಬ್ರಾ, ಪುಪುಲ್ ಜಯಕರ್ ಪಾತ್ರದಲ್ಲಿ ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ಷಾ, ಸಂಜಯ್ ಗಾಂಧಿಯಾಗಿ ವಿಶಾಕ್ ನಾಯರ್, ಜಗಜೀವನ್ ರಾಮ್ ಆಗಿ ಸತೀಶ್ ಕೌಶಿಕ್, ಆರ್ ಕೆ ಧವನ್ ಪಾತ್ರದಲ್ಲಿ ದರ್ಶನ್ ಪಾಂಡ್ಯ ಸೇರಿ ಇನ್ನೂ ಸಾಕಷ್ಟು ಮಂದಿ ತಾರಾಗಣದಲ್ಲಿದ್ದಾರೆ.
ಎಮೆರ್ಜೆನ್ಸಿಗೆ ಪಾಸಿಟಿವ್ ಟಾಕ್
ಸದ್ಯ ಬಿಡುಗಡೆ ಆಗಿರುವ ಈ ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದವರು, ಕಂಗನಾ ಅವರ ಪ್ರಯತ್ನಕ್ಕೆ ಜೈ ಎಂದರೆ, ಇನ್ನು ಕೆಲವರು ಕಟು ಟೀಕೆ ಮುಂದುವರಿಸಿದ್ದಾರೆ. "ಎಮರ್ಜೆನ್ಸಿ ಸಿನಿಮಾ ವೀಕ್ಷಿಸಿದೆ. ಇದು ಕಂಗನಾ ರಣಾವತ್ ಅವರ ಅತ್ಯುತ್ತಮ ಅಭಿನಯ ಮತ್ತು ಚಿತ್ರಗಳಲ್ಲಿ ಒಂದಾಗಿದೆ. ಈ ಮಾಸ್ಟರ್‌ಪೀಸ್ ಅನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಇದು ಇಂದಿರಾ ಗಾಂಧಿಯನ್ನು ಧನಾತ್ಮಕ ಮತ್ತು ಋಣಾತ್ಮಕ ಎರಡೂ ಬೆಳಕಿನಲ್ಲಿ ತೋರಿಸುವ ಅದ್ಭುತ ಚಿತ್ರ" ಎಂದಿದ್ದಾರೆ.
