Biggest Flop Movie: ಬಜೆಟ್ 45 ಕೋಟಿ, ಬಂದಿದ್ದು 45 ಸಾವಿರ; ವಿಶ್ವದಲ್ಲಿ ಇದಕ್ಕಿಂತ ಫ್ಲಾಪ್ ಸಿನಿಮಾ ಮತ್ತೊಂದಿಲ್ಲ!
Biggest Flop Movie: ಭಾರತದಲ್ಲೇ ಇದಕ್ಕಿಂತ ಫ್ಲಾಪ್ ಸಿನಿಮಾ ಮತ್ತೊಂದಿಲ್ಲ. 45 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು. ಆದರೆ ಗಳಿಸಿದ್ದು 45 ಸಾವಿರ ರೂಪಾಯಿ. ಚಿತ್ರಮಂದಿರಕ್ಕೆ ಬಿಡುಗಡೆಯಾಗಿ 10 ತಿಂಗಳಾದರೂ ಒಟಿಟಿಗೂ ಬಿಡುಗಡೆಯಾಗಿಲ್ಲ ಎಂಬುದೇ ಅಚ್ಚರಿ.
Biggest Flop Movie: ಬಾಕ್ಸ್ ಆಫೀಸ್ನಲ್ಲಿ ಬಜೆಟ್ಗಿಂತಲೂ ಅತ್ಯಂತ ಕಡಿಮೆ ಗಳಿಕೆ ಮಾಡುವ ಸಿನಿಮಾವನ್ನು ಫ್ಲಾಪ್ ಸಿನಿಮಾ ಎನ್ನುತ್ತಾರೆ. ಆದರೆ, ಬಜೆಟ್‌ನ ಶೇಕಡಾ 0.0001 ರಷ್ಟು ಮಾತ್ರ ಕಲೆಕ್ಷನ್ ಮಾಡಿದ ಚಿತ್ರವನ್ನು ಏನನ್ನಬೇಕು? ವಿಶ್ವದಲ್ಲೇ ಇದಕ್ಕಿಂತ ಕೆಟ್ಟ ಅಥವಾ ಫ್ಲಾಪ್ ಸಿನಿಮಾ ಮತ್ತೊಂದಿಲ್ಲ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಇರೋದಿಲ್ಲ! ಬರೋಬ್ಬರಿ 45 ಕೋಟಿ ಬಜೆಟ್‌ನಲ್ಲಿ ತೆರೆಕಂಡ ಈ ಸಿನಿಮಾ ಗಳಿಸಿದ್ದೆಷ್ಟು? ಕೇವಲ 45 ಸಾವಿರ ಕಲೆಕ್ಷನ್..!
ಇದು ಅತಿ ದೊಡ್ಡ ಫ್ಲಾಪ್ ಸಿನಿಮಾ
ಇತ್ತೀಚಿನ ದಿನಗಳಲ್ಲಿ ದೊಡ್ಡ ಬಜೆಟ್ ಸಿನಿಮಾಗಳ ಜೊತೆಗೆ ರಾತ್ರಿ-ಹಗಲು ಭರ್ಜರಿ ಪ್ರಚಾರಗಳೊಂದಿಗೆ ಬರುತ್ತಿರುವ ಸಿನಿಮಾಗಳನ್ನು ನೋಡಿದ್ದೇವೆ, ನೋಡುತ್ತಿದ್ದೇವೆ. ಅದರೆ 45 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಕನಿಷ್ಠ ಸಿನಿಮಾವನ್ನೂ ಪೂರ್ಣಗೊಳಿಸದೆ ಯಾವುದೇ ಪ್ರಮೋಷನ್‌ಗಳೂ ಇಲ್ಲದೆ, ಮಾಡಿದ ಸಿನಿಮಾ ಕೂಡ ಇದೆ ಎಂದರೆ ನಂಬಲು ಸಾಧ್ಯವೇ? ಇದಕ್ಕೆ ಉತ್ತರ ಹೌದು ಇದೆ. ಅದರ ಹೆಸರು ದಿ ಲೇಡಿ ಕಿಲ್ಲರ್.
ಭಾರತದ ಅತಿ ದೊಡ್ಡ ಫ್ಲಾಪ್ ಚಿತ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ ಈ ದಿ ಲೇಡಿ ಕಿಲ್ಲರ್ ಚಿತ್ರ. ಕಳೆದ ವರ್ಷ ನವೆಂಬರ್ 3ರಂದು ತೆರೆ ಕಂಡ ಈ ಚಿತ್ರದಲ್ಲಿ ಅರ್ಜುನ್ ಕಪೂರ್ ಮತ್ತು ಭೂಮಿ ಪಡ್ನೇಕರ್ ನಟಿಸಿದ್ದಾರೆ. ಹಲವು ವರ್ಷಗಳ ವಿಳಂಬ ಮತ್ತು ಎಲ್ಲಾ ಲೆಕ್ಕಾಚಾರಗಳನ್ನು ಮೀರಿದ ಬಜೆಟ್‌ನೊಂದಿಗೆ ಚಿತ್ರೀಕರಣ ಪೂರ್ಣಗೊಳ್ಳುವ ಮೊದಲೇ ಚಿತ್ರ ಬಿಡುಗಡೆಯಾಯಿತು. ಆದರೆ, ಆಗಿದ್ದು ಮಾತ್ರ ಅಟ್ಟರ್ಫ್ಲಾಪ್...!
ಕೇವಲ 12 ಪ್ರದರ್ಶನಗಳು
ಲೇಡಿ ಕಿಲ್ಲರ್ ಚಿತ್ರವನ್ನು ರೂ.45 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ ಚಿತ್ರ ದೇಶಾದ್ಯಂತ 12 ಶೋಗಳನ್ನು ಮಾತ್ರ ಪ್ರದರ್ಶಿಸಿದೆ. ಮೊದಲ ದಿನ 38 ಸಾವಿರ ರೂಪಾಯಿ ಕಲೆ ಹಾಕಿತು. ಆದರೆ, ಒಟ್ಟು 45 ಸಾವಿರ ರೂಪಾಯಿಗೆ ಕೊನೆಗೊಂಡಿತು. ಮೊದಲ ದಿನವೇ ದೇಶದೆಲ್ಲೆಡೆ ಕೇವಲ 293 ಟಿಕೆಟ್‌ಗಳು ಮಾರಾಟವಾದವು ಎಂದರೆ ಈ ಸಿನಿಮಾದ ದುಸ್ಥಿತಿ ಏನೆಂದು ನಿಮಗೆ ಅರ್ಥವಾಗುತ್ತದೆ.
ಈ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸದೆಯೇ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಿದ್ದು, ನಿಜವಾಗಲೂ ನಂಬಲಸಾಧ್ಯ. ಚಿತ್ರದ ಡಿಜಿಟಲ್ ಹಕ್ಕುಗಳು ಮೊದಲೇ ಮಾರಾಟವಾಗಿದ್ದವು. ಡಿಸೆಂಬರ್ನಲ್ಲಿ ಸ್ಟ್ರೀಮಿಂಗ್‌ಗೆ ರಿಲೀಸ್ ಆಗಬೇಕಿತ್ತು. ಆದರೆ ಆತುರಾತುರವಾಗಿ ನವೆಂಬರ್ ಮೊದಲ ವಾರದಲ್ಲಿ ರಿಲೀಸ್ ಮಾಡಬೇಕಾಯಿತು. ಕನಿಷ್ಠ ಪಕ್ಷ ಚಿತ್ರೀಕರಣವೂ ಮುಗಿದಿರಲಿಲ್ಲ ಎಂದು ವರದಿಯಾಗಿದೆ.
ಪ್ರಚಾರವನ್ನೇ ಮಾಡದ ಚಿತ್ರತಂಡ
ಈ ಸಿನಿಮಾದಲ್ಲಿ ನಟಿಸಿರುವ ಅರ್ಜುನ್ ಕಪೂರ್ ಮತ್ತು ಭೂಮಿ ಪಡ್ನೇಕರ್ ಈ ಸಿನಿಮಾವನ್ನು ಪ್ರಚಾರ ಮಾಡಲ್ಲ ಎಂದು ಹೇಳಿದ್ರು. ಇಂತಹ ಒಂದು ಸಿನಿಮಾ ಥಿಯೇಟರ್ಗೆ ಬರುತ್ತದೆ ಎಂದು ಯಾರಿಗೂ ತಿಳಿದೇ ಇರಲಿಲ್ಲ. ಒಂದು ಟ್ರೇಲರ್ ಹೊರತುಪಡಿಸಿ, ಚಿತ್ರದ ಯಾವುದೇ ಅಪ್ಡೇಟ್ಗಳೂ ಹೊರ ಬಂದಿರಲಿಲ್ಲ. ಇಷ್ಟು ಧಾರುಣವಾಗಿ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ನಿರ್ಮಾಪಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆದರೆ ಒಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೋಸ್ಕರ ಸಿನಿಮಾವನ್ನು ತರಾತುರಿಯಲ್ಲಿ ಥಿಯೇಟರ್ ರಿಲೀಸ್ ಮಾಡಲಾಗಿತ್ತು. ಮತ್ತೊಂದು ಅಚ್ಚರಿ ವಿಷಯ ಅಂದರೆ ವರ್ಷವಾಗುತ್ತಾ ಬಂದರೂ ಈ ಚಿತ್ರ ಇನ್ನೂ ಒಟಿಟಿಗೂ ಬಂದಿಲ್ಲ. ನೆಟ್‌ಫ್ಲಿಕ್ಸ್ ಲೇಡಿ ಕಿಲ್ಲರ್ ಚಿತ್ರದ ಡಿಜಿಟಲ್ ಹಕ್ಕು ಪಡೆದಿದ್ದರೂ ಅದಿನ್ನೂ ಸ್ಟ್ರೀಮಿಂಗ್‌ಗೆ ಬಂದಿಲ್ಲ. ಈ ಚಿತ್ರ 2023ರ ನವೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಅಂದರೆ 10 ತಿಂಗಳು ಕಳೆದರೂ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಯಾವುದೇ ಅಪ್‌ಡೇಟ್ ಇಲ್ಲ.