ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 10, 2024: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಈಗ ಕೇದಾರ್‌ನಾಥ್ ಕುರಿಫಾರಂ ಚಿತ್ರದ ಹೀರೋ; ಇದೇ ಮಾಸಾಂತ್ಯಕ್ಕೆ ತೆರೆಗೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 10 Aug 202411:53 AM IST
Entertainment News in Kannada Live:ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಈಗ ಕೇದಾರ್‌ನಾಥ್ ಕುರಿಫಾರಂ ಚಿತ್ರದ ಹೀರೋ; ಇದೇ ಮಾಸಾಂತ್ಯಕ್ಕೆ ತೆರೆಗೆ
- ಕಾಮಿಡಿ ಕಿಲಾಡಿಗಳು ಶೋ ಮೂಲಕ ನಗು ಉಕ್ಕಿಸಿದ್ದ ಮಡೆನೂರ್ ಮನು, ಇದೀಗ ಕೇದಾರ್‌ನಾಥ್ ಕುರಿಫಾರಂ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಇತ್ತೀಚೆಷ್ಟೇ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆ ಆಗಿವೆ.
Sat, 10 Aug 202410:14 AM IST
Entertainment News in Kannada Live:ಸಾಮಾಜಿಕ ಕಳಕಳಿಯ ವಿಕಾಸ ಪರ್ವ ಚಿತ್ರಕ್ಕೆ ಪ್ರಣಯರಾಜ ಶ್ರೀನಾಥ್ ಸಾಥ್; ಟ್ರೇಲರ್ ಬಿಡುಗಡೆ ಮಾಡಿ ಹರಸಿದ ಹಿರಿಯ ನಟ
- ಸಾಮಾಜಿಕ ಕಳಕಳಿಯ ಜತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿರುವ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹಿರಿಯ ನಟ ಶ್ರೀನಾಥ್ ವಿಕಾಸ ಪರ್ವ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
Sat, 10 Aug 202405:35 AM IST
Entertainment News in Kannada Live:ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಭೀಮನದ್ದು ಗಜ ಗಾಂಭೀರ್ಯದ ನಡಿಗೆ; ಮೊದಲ ದಿನ ಬೊಕ್ಕಸಕ್ಕೆ ಬಂತು ಕೋಟಿ ಕೋಟಿ!
- ದುನಿಯಾ ವಿಜಯ್ ಅವರ ಭೀಮ ಸಿನಿಮಾ ಶುಕ್ರವಾರ (ಆಗಸ್ಟ್ 9) ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪಕ್ಕದ ತೆಲುಗು, ತಮಿಳು ರಾಜ್ಯಗಳಲ್ಲಿಯೂ ತೆರೆಕಂಡಿದೆ. ಮೊದಲ ದಿನ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದ್ದಂತೆ, ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ. ಹಾಗಾದರೆ, ಮೊದಲ ದಿನ ಈ ಚಿತ್ರ ಗಳಿಸಿದ್ದೆಷ್ಟು?
Sat, 10 Aug 202405:12 AM IST
Entertainment News in Kannada Live:1969ರ ಕಾಲಘಟ್ಟ, ಚಿನ್ನದ ಜತೆಗೆ ಚೀನಾ ನಂಟು; ಸೆಟ್ಟೇರಿತು ಪ್ರಶಾಂತ್ ನೀಲ್- ಜೂನಿಯರ್ ಎನ್‌ಟಿಆರ್ ‘ಡ್ರ್ಯಾಗನ್’
- ಟಾಲಿವುಡ್‌ನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಮತ್ತು ಸರಣಿ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಪ್ರಶಾಂತ್ ನೀಲ್ ಜೋಡಿಯ NTR 31 ಸಿನಿಮಾ ಸೆಟ್ಟೇರಿದೆ. ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಈ ಚಿತ್ರದ ಮುಹೂರ್ತ ನೆರವೇರಿದೆ.
Sat, 10 Aug 202404:45 AM IST
Entertainment News in Kannada Live:ರಣವೀರ್ ಸಿಂಗ್ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್ ನಟಿ; ಇಷ್ಟೊಂದು ಎಕ್ಸ್‌ಪೋಸ್ ಬೇಕಿತ್ತಾ ಎಂದ ನೆಟ್ಟಿಗರು PHOTOS
- ಬಾಲಿವುಡ್ ನಟ ರಣವೀರ್ ಸಿಂಗ್ ಬಳಿಕ ಅದೇ ಬಿಟೌನ್‌ನ ಮತ್ತೋರ್ವ ನಟಿ ಬೆತ್ತಲಾಗಿದ್ದಾರೆ. ಫೋಟೋಶೂಟ್‌ಗಾಗಿ ನ್ಯೂಡ್ ಫೋಟೋಶೂಟ್ ಮಾಡಿಸಿದ್ದಾರೆ. ನಿಖಿತಾ ಗಾಗ್ ಅವರ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ
Sat, 10 Aug 202404:04 AM IST
Entertainment News in Kannada Live:ಶ್ರೇಷ್ಠಾ ಮದುವೆಗೆ ನೀನೂ ಹೋಗುವಂತಿಲ್ಲ, ಆ ದಿನ ನನ್ನ ಕಣ್ಮುಂದೆ ಇರಬೇಕು, ಮಗನಿಗೆ ಕುಸುಮಾ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರು ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 9ರ ಎಪಿಸೋಡ್. ನನ್ನ ತಂದೆಗೆ ಕುಸುಮಾ ಕರೆ ಮಾಡಿ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಕ್ಕೆ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಇತ್ತ, ಮಗನಿಗೆ ನೀನು ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕುಸುಮಾ ಕಂಡಿಷನ್ ಮಾಡುತ್ತಾಳೆ.
Sat, 10 Aug 202403:58 AM IST
Entertainment News in Kannada Live:ಸುಬ್ಬು ಹುಟ್ಟುಹಬ್ಬದ ನೆಪದಲ್ಲಿ ಒಂದಾಗಿದ್ದಾರೆ ಅಪ್ಪ-ಮಗಳು, ವಿಜಯಾಂಬಿಕಾಗೆ ತಪ್ಪಿದ್ದಲ್ಲ ಟೆನ್‌ಷನ್; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- Shravani Subramanya Kannada Serial Today Episode August 10th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಸುಬ್ಬು ಗಾಡಿ ಮೇಲಿಲ್ಲ ಹನುಮಂತನ ಸ್ಟಿಕ್ಕರ್, ವಿಜಯಾಂಬಿಕಾಗೆ ಶುರುವಾಯ್ತು ಹೊಸ ಟೆನ್‌ಷನ್. ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಒಂದಾಗ್ತಿದ್ದಾರೆ ಶ್ರಾವಣಿ-ವೀರೇಂದ್ರ. ಮಿನಿಸ್ಟರ್ ಮನೆಗೆ ಕೆಲಸಕ್ಕೆ ಬಂದ್ಲು ಶ್ರೀವಲ್ಲಿ.
Sat, 10 Aug 202403:30 AM IST
Entertainment News in Kannada Live:ಅಪೇಕ್ಷಾ ಪಾರ್ಥನಿಗೆ ಸದ್ದಿಲ್ಲದೆ ರಿಜಿಸ್ಟ್ರಾರ್ ಮ್ಯಾರೇಜ್ ಮಾಡಿಸಲು ಮುಂದಾದ ಜೀವನ್, ಶಕುಂತಲಾ ಷಡ್ಯಂತ್ರ ಠುಸ್ ಪಟಾಕಿ- ಅಮೃತಧಾರೆ ಕಥೆ
- Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲೂ ಅಪೇಕ್ಷಾ ಮತ್ತು ಪಾರ್ಥರ ಮದುವೆ ಮುರಿದುಬಿದ್ದ ವಿಚಾರವೇ ಪ್ರಮುಖ ಹೈಲೈಟ್ಸ್. ಆದರೆ, ಈ ಸಮಯದಲ್ಲಿ ಪ್ರೇಮಿಗಳು ಮದುವೆಯಾಗಲು ಜೀವನ್ ಸಹಕರಿಸಲು ಮುಂದಾದ ಬೆಳವಣಿಗೆಯೊಂದು ನಡೆದಿದೆ.