ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 14, 2024: Kotee OTT release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 14 Aug 202408:50 AM IST
Entertainment News in Kannada Live:Kotee OTT release: ಒಟಿಟಿಗೆ ಬಂತು ಕೋಟಿ ಸಿನಿಮಾ; ಡಾಲಿ ಧನಂಜಯ್ ನಟನೆಯ ಫ್ಯಾಮಿಲಿ ಡ್ರಾಮಾವನ್ನು ಮನೆಯಲ್ಲೇ ನೋಡಿ
- Kotee OTT release date: ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಒಟಿಟಿಗೆ ಆಗಮಿಸಿದೆ. ಈ ಸಿನಿಮಾದ ಮೂಲಕ ಕಲರ್ಸ್ ಕನ್ನಡದ ಮನರಂಜನೆ ಚಾನೆಲ್ ಹೆಡ್ ಆಗಿದ್ದ ಪರಮೇಶ್ವರ ಗುಂಡ್ಕಲ್ ಅವರು ನಿರ್ದೇಶಕರಾಗಿ ಹೊರಹೊಮ್ಮಿದ್ದರು. ಈ ಸಿನಿಮಾವನ್ನು ಈಗ ಆನ್‌ಲೈನ್‌ನಲ್ಲಿ ನೋಡಬಹುದು.
Wed, 14 Aug 202407:30 AM IST
Entertainment News in Kannada Live:ಕೃಷ್ಣಂ ಪ್ರಣಯ ಸಖಿ ಮತ್ತೊಂದು ಹಾಡು ಬಿಡುಗಡೆ; ಕೃಷ್ಣ ಜನ್ಮಾಷ್ಟಮಿಗೆ ಒಳ್ಳೆ ಸಾಂಗ್, ಶ್ರೀ ಕೃಷ್ಣಂ ಜಗತ್ ಕಾರಣಂ ಆಲಿಸೋಣ ಬನ್ನಿ
- Krishnam Pranaya Sakhi Songs: ಕೃಷ್ಣಂ ಪ್ರಣಯ ಸಖಿ ಸಿನಿಮಾ ಆಗಸ್ಟ್ 14 ಅಂದರೆ ನಾಳೆ ಬಿಡುಗಡೆಯಾಗಲಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಸಿನಿಮಾದ "ಶ್ರೀ ಕೃಷ್ಣಂ ಜಗತ್ ಕಾರಣಂ, ಜಗದೇಕ ಜಗನ್ಮೋಹನಂ, ಶ್ರೀ ಕೃಷ್ಣಂ ಜಗತ್ ಪಾಲಕಂ, ಜಯಜಯಹೆ ಜಗನ್ನಾಯಕಂ" ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
Wed, 14 Aug 202405:08 AM IST
Entertainment News in Kannada Live:ತನ್ನ ಹೆಸರು ಹಾಳು ಮಾಡಿದವರ ಬೇಟೆಗೆ ಸಿದ್ಧಳಾದ ಭಾಗ್ಯಾ, ಅಕ್ಕನಿಗೆ ಸಾಥ್ ಕೊಟ್ಟ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 13ರ ಎಪಿಸೋಡ್‌ನಲ್ಲಿ ತನಗೆ ಅವಮಾನ ಮಾಡಿದವರನ್ನು ಕಂಡುಹಿಡಿಯಲು ಭಾಗ್ಯಾ ನಿರ್ಧರಿಸುತ್ತಾಳೆ. ಪೂಜಾ ಕೂಡಾ ಅಕ್ಕನಿಗೆ ಧೈರ್ಯ ಹೇಳಿ, ಯೂಟ್ಯೂಬರ್ ಮೇಘಾಳನ್ನು ಭೇಟಿ ಮಾಡಲು ಪ್ಲ್ಯಾನ್ ಮಾಡುತ್ತಾಳೆ.
Wed, 14 Aug 202405:07 AM IST
Entertainment News in Kannada Live:Bheema movie collection: 5 ದಿನದಲ್ಲಿ ಭೀಮನ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿರುವುದೇ ದುನಿಯಾ ವಿಜಯ್ ಸಿನಿಮಾ
- Bheema movie collection Day 5: ಸಕ್‌ನಿಲ್ಕ್.ಕಾಂ ಪ್ರಕಾರ ದುನಿಯಾ ವಿಜಯ್ ನಟನೆಯ, ಡ್ರಗ್ಸ್ ವಿರುದ್ಧ ಹೋರಾಟವಿರುವ ಭೀಮ ಸಿನಿಮಾ ಐದನೇ ದಿನ ಅಂದರೆ, ಮಂಗಳವಾರ ಸುಮಾರು 1.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಆರಂಭಿಕ ಅಂದಾಜು. ದಿನ 4 ಸೋಮವಾರ 1.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
Wed, 14 Aug 202404:38 AM IST
Entertainment News in Kannada Live:ಸುಬ್ಬು ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿ, ವಿಜಯಾಂಬಿಕಾ ಮೋಸ ಬಯಲಿಗೆಳೆಯುವ ಶಪಥ ಮಾಡಿದ್ಲು ಶ್ರಾವಣಿ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- Shravani Subramanya Kannada Serial Today Episode August 14th: ಸುಬ್ಬು ಹುಟ್ಟುಹಬ್ಬಕ್ಕೆ ಅಪ್ಪ-ಮಗಳು ಸೇರಿ ಭರ್ಜರಿ ತಯಾರಿ, ಪದ್ಮನಾಭನ ಕುಟುಂಬದ ಜೊತೆ ಶ್ರೀವಲ್ಲಿಗೂ ಸಿಕ್ತು ಆಹ್ವಾನ. ವಿಜಯಾಂಬಿಕಾ ಖುಷಿಗೆ ಕಾರಣವೇ ಬೇರೆ. ಮನೆಯವರ ಜೊತೆ ದೇವಸ್ಥಾನಕ್ಕೆ ಹೋಗಲು ಸುಬ್ಬುಗೆ ಸಿಕ್ಕಿಲ್ಲ ರಜೆ. ಅತ್ತೆ ವಿಜಯಾಂಬಿಕಾ ಮೋಸ ಬಯಲಿಗೆಳೆಯುವ ಶಪಥ ಮಾಡಿದ ಶ್ರಾವಣಿ.
Wed, 14 Aug 202404:08 AM IST
Entertainment News in Kannada Live:ಕಲ್ಕಿ 2898 ಎಡಿ ಸಿನಿಮಾ ಈ ತಿಂಗಳೇ ಒಟಿಟಿಯಲ್ಲಿ ಬಿಡುಗಡೆ; ಪ್ರಭಾಸ್ ಸಿನಿಮಾವನ್ನು ಯಾವಾಗ, ಎಲ್ಲಿ ನೋಡಬಹುದು? ಇಲ್ಲಿದೆ ವಿವರ
- Kalki 2898 ad OTT Release Date: ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ವರ್ಷದ ಬ್ಲಾಕ್‌ಬಸ್ಟರ್ ಸಿನಿಮಾ ಕಲ್ಕಿ 2898 ಎಡಿ ಇದೇ ಆಗಸ್ಟ್ 23ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ.
Wed, 14 Aug 202403:30 AM IST
Entertainment News in Kannada Live:Amruthadhaare: ರೌಡಿಗಳ ವಿರುದ್ಧ ಪಾರ್ಥನ ಫೈಟಿಂಗ್, ತಮ್ಮನನ್ನೇ ಕೊಲ್ಲಲು ಮುಂದಾದ ಜೈದೇವ್- ಅಮೃತಧಾರೆಯಲ್ಲಿ ಸಿನಿಮಿಯ ಘಟನೆಗಳು
- Amruthadhaare serial Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಆಗಸ್ಟ್ 13ರ ಸಂಚಿಕೆಯಲ್ಲಿ ಹಲವು ಸಿನಿಮಯ ಘಟನೆಗಳು ನಡೆದಿವೆ. ಅಪೇಕ್ಷಾಳನ್ನು ಮದುವೆಯಾಗಲು ಹೊರಟ ತಮ್ಮನನ್ನೇ ಸಾಯಿಸಲು ಜೈದೇವ್ ಮುಂದಾಗಿದ್ದಾನೆ. ಗೌತಮ್‌ಗೆ ವಿಷಯ ಗೊತ್ತಾಗಿದೆ.