ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 19, 2024: ವೀರ ಚಂದ್ರಹಾಸ ಸಿನಿಮಾದ ಟೀಸರ್ ಬಿಡುಗಡೆ: ಕಾಂತಾರ ನೆನಪಿಸಿದ ಧೀಂಗಣ; ಬೆಳ್ಳಿತೆರೆ ಮೇಲೆ ಯಕ್ಷಗಾನದ ಗೂಸ್‌ಬಂಪ್ಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 19 Aug 202401:32 PM IST
Entertainment News in Kannada Live:ವೀರ ಚಂದ್ರಹಾಸ ಸಿನಿಮಾದ ಟೀಸರ್ ಬಿಡುಗಡೆ: ಕಾಂತಾರ ನೆನಪಿಸಿದ ಧೀಂಗಣ; ಬೆಳ್ಳಿತೆರೆ ಮೇಲೆ ಯಕ್ಷಗಾನದ ಗೂಸ್‌ಬಂಪ್ಸ್
- Veera Chandrahasa Movie: ಹಿರಿತೆರೆಮೇಲೆ ಭೂತಾರಾಧನೆಯನ್ನು ತೋರಿಸಿದ ಕಾಂತಾರ ಸಿನಿಮಾದ ಬಳಿಕ ಯಕ್ಷಗಾನದ ವೈಭವ ಹಿರಿತೆರೆ ಮೇಲೆ ರಾರಾಜಿಸಲಿದೆ. ರವಿ ಬಸ್ರೂರು ಮತ್ತು ತಂಡದ ಹೊಸ ಪ್ರಯತ್ನ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ವೀರಚಂದ್ರಹಾಸ ಸಿನಿಮಾದ ಟೀಸರ್ ಇಲ್ಲಿದೆ ನೋಡಿ.
Mon, 19 Aug 202410:33 AM IST
Entertainment News in Kannada Live:ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ, ಅತ್ಯಾಚಾರಿಗಳನ್ನು ನಡು ರಸ್ತೆಯಲ್ಲಿ ಸುಟ್ಟರೂ ಕಡಿಮೆಯೇ- ನಟ ಧ್ರುವ ಸರ್ಜಾ ಆಕ್ರೋಶ
- Actor Dhruva Sarja: ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಕನ್ನಡ ನಟ ಧ್ರುವ ಸರ್ಜಾ ಧ್ವನಿ ಎತ್ತಿದ್ದಾರೆ. ಪ್ರತಿಮನೆಯಲ್ಲೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಕಲಿಸಿಕೊಡಬೇಕು, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಲು ತಿಳಿಸಬೇಕು ಎಂದಿದ್ದಾರೆ.
Mon, 19 Aug 202409:56 AM IST
Entertainment News in Kannada Live:ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು; ನಿಮಗೆ ಯಾವುದು ಇಷ್ಟ
- Trending Movies This Week In Netflix OTT: ಪ್ರಸಿದ್ಧ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಟಾಪ್ 10 ಟ್ರೆಂಡಿಂಗ್ ಚಲನಚಿತ್ರಗಳು ಯಾವುವು ಎಂಬುದನ್ನು ತಿಳಿಯೋಣ. ಹಲವು ಆಸಕ್ತಿದಾಯಕ ಚಿತ್ರಗಳು ನಿಮಗೆ ಇಷ್ಟವಾಗಬಹುದು.
Mon, 19 Aug 202409:47 AM IST
Entertainment News in Kannada Live:OTT Movies: ಒಟಿಟಿಗಳಲ್ಲಿ ಕನ್ನಡ ಸಿನಿಮಾಗಳ ತಾತ್ಸಾರ, ರಿಷಬ್ ಶೆಟ್ಟಿ ಬೇಸರ; ಹಿಂದಿಗೆ ರೆಸ್ಪೆಕ್ಟ್ ನೀಡಿ ಎಂದ ನೆಟ್ಟಿಗರಿಗೆ ತರಾಟೆ
- OTT Platforms Kannada Movies: ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಸಿನಿಮಾಗಳನ್ನು ಕಡೆಗಣಿಸುತ್ತಿವೆ ಎಂದು ಕಾಂತಾರ ನಟ ರಿಷಬ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.ಉದಾ
Mon, 19 Aug 202407:44 AM IST
Entertainment News in Kannada Live:Darshan: ಮಿಸ್ ಮಾಡ್ತಿದ್ದೀವಿ ಅಣ್ಣಾ... ರಕ್ಷಾ ಬಂಧನದಂದು ನಟ ದರ್ಶನ್ ನೆನಪಿನಲ್ಲಿ ತರುಣ್ ಸುಧೀರ್ ಪತ್ನಿ ಸೋನಲ್ ಭಾವುಕ ಪೋಸ್ಟ್
- Kannada Actor Darshan News: ಇತ್ತೀಚೆಗೆ ನಿರ್ದೇಶಕ ತರುಣ್ ಸುಧೀರ ಜತೆ ವಿವಾಹವಾದ ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂಥೆರೋ ಅವರು ಜೈಲಿನಲ್ಲಿರುವ ಕಾಂಟೇರ ನಟ ದರ್ಶನ್‌ಗೆ ರಕ್ಷಾ ಬಂಧನದ ಶುಭಾಶಯ ಕೋರಿದ್ದಾರೆ. ಈ ಸಮಯದಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
Mon, 19 Aug 202407:07 AM IST
Entertainment News in Kannada Live:ಏರುತಿಹುದು ನೋಡಿಲ್ಲಿ ಕೃಷ್ಣಂ ಪ್ರಣಯ ಸಖಿ ಬಾಕ್ಸ್ ಆಫೀಸ್ ಗಳಿಕೆ; 4 ದಿನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಗಳಿಸಿದ್ದೆಷ್ಟು?
- Krishnam Pranaya Sakhi Box Office Collection: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಿ 4 ದಿನವಾಗಿದೆ. ಭಾನುವಾರ ಅಂದರೆ ನಿನ್ನೆ ಈ ಸಿನಿಮಾ 2.18 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಐದು ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ಕಾರ್ಡ್ ಇಲ್ಲಿದೆ.
Mon, 19 Aug 202406:37 AM IST
Entertainment News in Kannada Live:ಅಣ್ಣಾ-ತಂಗಿಯರ ಬಂಧ ಗಟ್ಟಿಗೊಳಿಸಿದ ಚಿತ್ರಗಳಿವು; ರಕ್ಷಾಬಂಧನದಂದು ಒಟಿಟಿಯಲ್ಲಿ ಮಿಸ್ ಮಾಡದೆ ನೋಡಿ
- Raksha Bandhan Movies in OTT: ಅಣ್ಣ ತಂಗಿಯರ ಮಧುರ ಬಂಧವನ್ನು ಬಿಂಬಿಸುವ ರಾಖಿ ಹಬ್ಬದಂದು ಸಹೋದರರು ಒಟ್ಟಿಗೆ ಕುಳಿತು ವೀಕ್ಷಿಸಲು ಒಟಿಟಿಯಲ್ಲಿ ಹಲವು ಚಿತ್ರಗಳಿವೆ. ಕನ್ನಡ ಚಿತ್ರಗಳ ಕುರಿತು ನಿಮಗೆ ಈಗಾಗಲೇ ತಿಳಿದಿದೆ. ಉಳಿದಂತೆ ತೆಲುಗು ಹಾಗೂ ಹಿಂದಿ ಸಿನಿಮಾಗಳ ಪಟ್ಟಿ ಇಲ್ಲಿದೆ.
Mon, 19 Aug 202406:01 AM IST
Entertainment News in Kannada Live:Kiccha Sudeep: ಆಲದ ಮರದ ಕಥೆ ಹೇಳಿದ ಕಿಚ್ಚ ಸುದೀಪ್; ಹೋಟೆಲ್ ಊಟ ಮಾಡೋ ನಾವು ಮನೆಗೆ ಬಂದು ಊಟ ಮಾಡೋಲ್ವ?
- Kiccha Sudeep: ವಿನಯ್ ರಾಜ್‌ಕುಮಾರ್ ನಟನೆಯ ಪೆಪೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸಿನಿಮಾಗಳ ಸೋಲು ಮತ್ತು ಗೆಲುವಿನ ಕುರಿತು ತನ್ನದೇ ಶೈಲಿಯಲ್ಲಿ ಮಾತನಾಡಿದ್ದು, "ಸ್ಯಾಂಡಲ್‌ವುಡ್ ಎನ್ನುವುದು ದೊಡ್ಡ ಆಲದ ಮರ" ಎಂದಿದ್ದಾರೆ.
Mon, 19 Aug 202404:54 AM IST
Entertainment News in Kannada Live:Annayya Serial: ಅಣ್ಣಯ್ಯ ಸೀರಿಯಲ್‌ನ ಮಾರಿಗುಡಿ ಶಿವುಗೆ ಕರೆಂಟ್ ಶಾಕ್, ಬಾಯಿಗೆ ಬಾಯಿಟ್ಟು ಉಸಿರು ನೀಡಿದ ಪಾರ್ವತಿ
- Annayya Kannada Serial: ಝೀ ಕನ್ನಡ ವಾಹಿನಿಯ ಅಣ್ಣಯ್ಯ ಸೀರಿಯಲ್‌ನ ಇಂದಿನ ಎಪಿಸೋಡ್‌ನಲ್ಲಿ ಶಿವು ಮತ್ತು ಪಾರ್ವತಿಯ ಪ್ರೀತಿ ಇನ್ನೊಂದು ಲೆವೆಲ್‌ಗೆ ಹೋಗಿದೆ. ಕರೆಂಟ್ ಶಾಕ್ ಹೊಡೆದು ಬಿದ್ದ ಮಾರಿಗುಡಿ ಶಿವುನ ಬಾಯಿಗೆ ಬಾಯಿಟ್ಟು ಉಸಿರು ನೀಡಿದ್ದಾಳೆ ಪಾರ್ವತಿ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Mon, 19 Aug 202404:03 AM IST
Entertainment News in Kannada Live:Amruthadhaare TV Serial: ಭಾವನತಮ್ಮ- ಅತ್ತಿಗೆ ತಂಗಿ ನಡುವೆ ಫಸ್ಟ್‌ನೈಟ್ ಸಮಯದಲ್ಲೇ ಬಿರುಕು; ಪಾರ್ಥನ ಬುದ್ಧಿಮಾತು ಕೇಳ್ತಾಳ ಅಪೇಕ್ಷಾ
- Amruthadhaare serial today episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ಇಂದು ಅಪೇಕ್ಷಾ ಮತ್ತು ಪಾರ್ಥರ ಮೊದಲ ರಾತ್ರಿಯ ಸಂಭ್ರಮ. ಆದರೆ, ಪಾರ್ಥ ಈ ಸಮಯದಲ್ಲಿ ಅಪೇಕ್ಷಾಳಿಗೆ ಬುದ್ಧಿಹೇಳುವ ಪ್ರಯತ್ನ ಮಾಡಿರುವುದು ಅಮೃತಧಾರೆ ಪ್ರಮೋದಿಂದ ಗೊತ್ತಾಗಿದೆ.