Entertainment News in Kannada Live August 22, 2024: Jingo Movie: ಅಭಿಮಾನಿಗಳಿಗೆ ಡಾಲಿ ಧನಂಜಯ್ ಹುಟ್ಟುಹಬ್ಬದ ಕೊಡುಗೆ; ನರ ನರ ಜಿಂಗೋ ನರನಾಡಿ ಜಿಂಗೋ!
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 22 Aug 202404:47 PM IST
- Daali Dhananjay Birthday: ಆಗಸ್ಟ್ 23ರಂದು ಕನ್ನಡ ನಟ ಡಾಲಿ ಧನಂಜಯ್ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭ ಸಮಯದಲ್ಲಿ ಅಭಿಮಾನಿಗಳಿಗೆ ಡಾಲಿ ಫಿಕ್ಚರ್ಸ್ ಕಡೆಯಿಂದ ಗುಡ್‌ನ್ಯೂಸ್ ಬಂದಿದೆ. ಡಾಲಿ ಧನಂಜಯ್ ಮುಂದಿನ ಸಿನಿಮಾ "ಜಿಂಗೋ" ಪೋಸ್ಟರ್ ಲಾಂಚ್ ಆಗಿದೆ.
Thu, 22 Aug 202404:24 PM IST
- Kalki 2898 AD OTT release: ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ಕಲ್ಕಿ ಕುರಿತು ಚರ್ಚೆ ಮಾಡುತ್ತಿದ್ದಾರೆ.
Thu, 22 Aug 202401:57 PM IST
- Kannada Movies Release August 23: ಈ ವಾರ ಚಿತ್ರಮಂದಿರಗಳಲ್ಲಿ ಪೌಡರ್, ಕಪಟಿ, ಹಗ್ಗ, ಸಿ, ತಾಜ್, ದಿ ಜರ್ನಲಿಸ್ಟ್ ಎಂಬ 6 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೃಷ್ಣಂ ಪ್ರಣಯ ಸಖಿ, ಗೌರಿ, ಭೀಮ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಮಾಫಿಯಾ, ಪೆಪೆ, ಲಾಫಿಂಗ್ ಬುದ್ಧ ಮುಂತಾದ ಸಿನಿಮಾಗಳು ಮುಂದಿನ ವಾರ ಬಿಡುಗಡೆಯಾಗಲಿವೆ.
Thu, 22 Aug 202412:07 PM IST
- Priya Prakash Varrier: ಒರು ಅದಾರ್ ಲವ್ (ಕನ್ನಡದಲ್ಲಿ ಕಿರಿಕ್ ಲವ್ ಸ್ಟೋರಿ) ಸಿನಿಮಾದಲ್ಲಿ ಕಣ್ಸೆನ್ನೆ ಮೂಲಕ ಫೇಮಸ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಕನ್ನಡ ಹಾಡು "ನಂಗೆ ಅಲ್ಲವ" ಹಾಡಿದ್ದಾರೆ. ಕನ್ನಡ ಗೊತ್ತಿಲ್ಲದೆ ಇದ್ದರೂ ಮುದ್ದಾಗಿ ಈಕೆ ಹಾಡಿರುವ ರೀಲ್ಸ್ ವೈರಲ್ ಆಗಿದೆ.
Thu, 22 Aug 202410:31 AM IST
- Bigg Boss Kannada Season 11 FAQs: ಕಲರ್ಸ್ ಕನ್ನಡದಲ್ಲಿ ಸೆಪ್ಟೆಂಬರ್ 3ನೇ ವಾರ ಆರಂಭವಾಗಲಿರುವ ಬಿಗ್‌ಬಾಸ್ ಕನ್ನಡ ಸೀಸನ್ 11ರ ಕುರಿತು ನಿಮ್ಮಲ್ಲಿ ನಾನಾ ಪ್ರಶ್ನೆಗಳಿವೆಯೇ? ನಿಮ್ಮ 11 ಸಂದೇಹಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿದೆ.
Thu, 22 Aug 202409:56 AM IST
ಪ್ರಿನ್ಸ್ ಮಹೇಶ್ ಬಾಬು ಕುಟುಂಬದಿಂದ ಜಯಕೃಷ್ಣ ಘಟ್ಟಮನೇನಿ ಎಂಬ ಹೊಸ ಹೀರೋ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜಯಕೃಷ್ಣ, ಮಹೇಶ್ ಬಾಬು ಅವರ ಹಿರಿಯ ಸಹೋದರ ರಮೇಶ್ ಬಾಬು ಅವರ ಪುತ್ರ. ಜಯಕೃಷ್ಣ ಅವರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
Thu, 22 Aug 202409:13 AM IST
- Amruthadhare Serial Today Episode: ಪಾರ್ಥ ಮತ್ತು ಅಪೇಕ್ಷಾರನ್ನು ಸಾಯಿಸಲು ಜೈದೇವ್ ಪ್ರಯತ್ನಿಸಿದ ಸತ್ಯ ತಿಳಿದ ಆನಂದ್‌ನ ಪ್ರಾಣಕ್ಕೆ ಈಗ ಸಂಚಕಾರ ಬಂದಿದೆ. ಈ ಸತ್ಯವನ್ನು ಗೌತಮ್‌ಗೆ ತಿಳಿಸದೆ ಜೈದೇವ್‌ಗೆ ಎಚ್ಚರಿಸಿದ ಆನಂದ್‌ಗೆ ಅಪಘಾತವಾಗಿದೆ. ಈ ಆಕ್ಸಿಡೆಂಟ್ ಮಾಡಿಸಿದ್ದು ಜೈದೇವ್.
Thu, 22 Aug 202408:13 AM IST
- Rishab Shetty Kantara Updates: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಸಿನಿಮಾಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮುಂಬರುವ ಸಿನಿಮಾಕ್ಕೆ ಕಳರಿಪಟ್ಟು ಸಮರಕಲೆ ಅಭ್ಯಾಸ ನಡೆಸುವ ಫೋಟೋ ಹಂಚಿಕೊಂಡಿದ್ದಾರೆ.
Thu, 22 Aug 202407:54 AM IST
- ರೋಚಕ ಕಥನವೊಂದರ ಸುಳಿವಿನೊಂದಿಗೆ ಸದ್ದು ಮಾಡಿದ್ದ ಮಾರಿಗೆ ದಾರಿ ಚಿತ್ರ ತಣ್ಣಗೆ ಚಿತ್ರೀಕರಣ ಮುಗಿಸಿಕೊಂಡು, ಪ್ರೇಕ್ಷಕರನ್ನು ಎದುರಾಗುವ ಸನಿಹದಲ್ಲಿದೆ. ಅಗಸ್ತ್ಯ ನಿರ್ದೇಶನ ಮಾಡಿ, ಅವರೇ ನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಿದ್ದಾರೆ.
Thu, 22 Aug 202407:47 AM IST
ಮಂತ್ರಾಲಯದಲ್ಲಿ ನಡೆಯುತ್ತಿರುವ ರಾಘವೇಂದ್ರ ಸ್ವಾಮಿಗಳ 1671ನೇ ಆರಾಧನಾ ಮಹೋತ್ಸವದಲ್ಲಿ ನಟ ಜಗ್ಗೇಶ್ ಭಾಗಿಯಾಗಿದ್ದಾರೆ. ಉತ್ತರ ಆರಾಧನೆಯಂದು ಮೂಲಕ ಬೃಂದಾವನದ ವಿಡಿಯೋವನ್ನು ಜಗ್ಗೇಶ್ ತಮ್ಮ ಸೋಷಿಯಲ್ ಮೀಡಿಯಾಗೆ ಹಂಚಿಕೊಂಡಿದ್ದಾರೆ.
Thu, 22 Aug 202406:33 AM IST
- ದಳಪತಿ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಭಾವುಟ ಮತ್ತು ಪಕ್ಷದ ಹಾಡನ್ನು ಇಂದು (ಆಗಸ್ಟ್ 22) ಅನಾವರಣಗೊಳಿಸಿದ್ದಾರೆ. ಚೆನ್ನೈನ ಪನೈಯೂರಿನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಚಿಹ್ನೆಯುಳ್ಳ ಬಾವುಟದ ಧ್ವಜಾರೋಹಣವನ್ನೂ ನೆರವೇರಿಸಿದರು.
Thu, 22 Aug 202406:29 AM IST
ಸೆಲಬ್ರಿಟಿಗಳು ಅಭಿಮಾನಿಗಳೊಂದಿಗೆ ನಡೆದು ಕೊಳ್ಳುವ ರೀತಿ ಆಗ್ಗಾಗ್ಗೆ ಸುದ್ದಿಯಾಗುತ್ತದೆ. ಮಹಿಳಾ ಅಭಿಮಾನಿಯೊಬ್ಬರು ತಮ್ಮ ಬಳಿ ಫೋಟೋ ತೆಗೆಸಿಕೊಳ್ಳಲು ಬಂದಾಗ, ಆಕೆಯನ್ನು ತಡೆದು ನನ್ನ ಮುಟ್ಟದಿರಿ ಎಂದು ಬಾಲಿವುಡ್ ನಟಿ ಹೇಮಾ ಮಾಲಿನಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಸಂಸದೆ ವರ್ತನೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
Thu, 22 Aug 202405:21 AM IST
- ಬೋರ್ಡಿಂಗ್ ಸ್ಕೂಲ್‌ನಲ್ಲಿ ಆಪ್ತವಾದ ಡಾ. ಮೇಘಶ್ಯಾಮ್ ಬಗ್ಗೆ ಅಮ್ಮ ಸೀತಾಳ ಮುಂದೆ ಸಹಿ ಹೇಳಿದ್ದಾಳೆ. ಇತ್ತ ಮೇಘಶ್ಯಾಮ್ ಮಾತು ಕೇಳುತ್ತಿದ್ದಂತೆ ಸೀತಾ ನಡುಗಿದ್ದಾಳೆ. ಈ ಹಿಂದೆ ಅನಂತಲಕ್ಷ್ಮೀ ಹೆಸರು ಕೇಳಿದಾಗಲೂ ಸೀತಾ ಇದೇ ರೀತಿ ಪ್ರತಿಕ್ರಿಯಿಸಿದ್ದಳು.
Thu, 22 Aug 202404:43 AM IST
ಬಾಲಿವುಡ್ ನಟಿ, ಐರಾವತ ಕನ್ನಡ ಸಿನಿಮಾ ನಟಿ ಊರ್ವಶಿ ರೌಟೇಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಊರ್ವಶಿ, ನನಗಾಗಿ ಪ್ರಾರ್ಥಿಸಿ ಎಂದು ಬರೆದುಕೊಂಡಿದ್ದಾರೆ.
Thu, 22 Aug 202403:38 AM IST
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 21ರ ಎಪಿಸೋಡ್.ಕುಸುಮಾ ಹೇಳಿದಂತೆ ಸೋಷಿಯಲ್ ಮೀಡಿಯಾ ಲೈವ್ ಬರುವ ಮೇಘಾ ನನ್ನಿಂದ ತಪ್ಪಾಗಿದೆ, ಭಾಗ್ಯಾ ಬಗ್ಗೆ ನಾನು ಮಾಡಿದ್ದ ವಿಡಿಯೋ ಸುಳ್ಳು ಎನ್ನುತ್ತಾಳೆ. ಭಾಗ್ಯಾಗೆ ಡಿವೋರ್ಸ್ ಕೇಳಿದ್ದು ನಾನೇ ಎಂದು ತಾಂಡವ್ ಕೂಡಾ ಒಪ್ಪಿಕೊಳ್ಳುತ್ತಾನೆ.
Thu, 22 Aug 202403:04 AM IST
- Shravani Subramanya Kannada Serial Today Episode August 21st: ವಿಜಯಾಂಬಿಕಾಗೆ ಖಡಕ್ ವಾರ್ನಿಂಗ್ ಕೊಟ್ಟು ಸಾಲಿಗ್ರಾಮಕ್ಕೆ ಹೋಗುವ ಮೊದಲು ಬದಲಾಗುವಂತೆ ಹೇಳುವ ಪದ್ಮನಾಭ. ಶ್ರಾವಣಿಗೆ ಧೈರ್ಯ ಹೇಳುವ ಸುಬ್ಬು ಮನದಲ್ಲಿ ದುಗುಡ. ಮದನ್-ವಿಜಯಾಂಬಿಕಾ ಸೇರಿ ಸುಬ್ಬು ಪ್ರಾಣಕ್ಕೆ ಕಂಟಕ ತರ್ತಾರಾ?
Thu, 22 Aug 202402:09 AM IST
- ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳಾ ನಟಿಯರ ಮೇಲಿನ ಲೈಂಗಿಕ ದೌರ್ಜನ್ಯ ಹೇಗೆಲ್ಲ ನಡೆಯುತ್ತೆ ಎಂಬ ಬಗ್ಗೆ ವಿಸ್ತೃತ ತನಿಖಾ ವರದಿಯನ್ನು ಜಸ್ಟಿಸ್ ಹೇಮಾ ಸಮಿತಿ, ಕೇರಳ ಸರ್ಕಾರಕ್ಕೆ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಪಾರ್ವತಿ, ಮಾಫಿಯಾ ಗ್ಯಾಂಗ್ ಮಲಯಾಳಂ ಚಿತ್ರರಂಗವನ್ನು ನಿಯಂತ್ರಿಸುತ್ತಿದೆ
Thu, 22 Aug 202401:01 AM IST
- ತಮಿಳು ಚಿತ್ರೋದ್ಯಮದಲ್ಲಿನ ಕಾಸ್ಟಿಂಗ್ ಕೌಚ್ ಕರಾಳತೆ ಬಗ್ಗೆ ಕರ್ನಾಟಕ ಮೂಲದ ನಟಿ ಸನಮ್ ಶೆಟ್ಟಿ ಮೌನ ಮುರಿದಿದ್ದಾರೆ. ಸಿನಿಮಾ ಅವಕಾಶ ಬೇಕಿದ್ದರೆ, ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವ ಸ್ಥಿತಿ ಕಾಲಿವುಡ್‌ನಲ್ಲಿ ನಿರ್ಮಾಣವಾಗಿದೆ. ಮಂಚಕ್ಕೆ ಕರೆದಾಗ ಹೋಗಲೇಬೇಕು, ಇಲ್ಲ ಅನ್ನೋ ಮಾತೇ ಇಲ್ಲ ಎಂದಿದ್ದಾರೆ ಸನಮ್.
Thu, 22 Aug 202412:12 AM IST
- ‘ಕರ್ಕಿ’ ಸಿನಿಮಾ ತೆರೆಗೆ ಬರಲು ಭರದ ಸಿದ್ದತೆ ನಡೆಸುತ್ತಿದೆ. ಸದ್ಯ ನಿಧಾನವಾಗಿ ಈ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಮೊದಲ ಹಂತದಲ್ಲಿ ಸಿನಿಮಾದ ಟೀಸರ್ ಮತ್ತು ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.