Entertainment News in Kannada Live August 28, 2024: ದೇವರನ್ನು ಮುಟ್ಟಿದ ಬಾಲಕನಿಗೆ ಇದೆಂಥ ಶಿಕ್ಷೆ! ನೈಜ ಘಟನೆ ಆಧರಿತ ಮೈ ಹೀರೋ ಚಿತ್ರದಲ್ಲಿ ಹಾಲಿವುಡ್ ನಟ ಎರಿಕ್ ರಾಬರ್ಟ್ಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 28 Aug 202403:08 PM IST
- ವರ್ಣಬೇಧ ಮತ್ತು ಜಾತೀಯತೆಯ ಹಿನ್ನೆಲೆಯಲ್ಲಿ ಮೂಡಿಬಂದಿದೆ ಮೈ ಹೀರೋ ಸಿನಿಮಾ. ಹಾಗಂತ ಇದನ್ನು ಆರ್ಟ್ ಸಿನಿಮಾ ಶೈಲಿಯಲ್ಲಿ ಹೆಣೆಯಲಾಗಿಲ್ಲ, ಔಟ್ ಅಂಡ್ ಔಟ್ ಕಮರ್ಷಿಯಲ್ ದೃಷ್ಟಿಕೋನದಲ್ಲಿಯೇ ಮನರಂಜನೆಯನ್ನು ದೃಷ್ಟಿಯಲ್ಲಿಯೇ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಆಗಸ್ಟ್ 30ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.
Wed, 28 Aug 202401:43 PM IST
- ಬಿಗ್‌ಬಾಸ್ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿ ಹೊರಹೊಮ್ಮಿದರೆ, ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ದರು. ವಿಜೇತ ಕಾರ್ತಿಕ್ ಮಹೇಶ್‌ಗೆ 50 ಲಕ್ಷ ನಗದು ಜತೆಗೆ ಟ್ರೋಫಿ, EV ಬೈಕ್ ಸಹ ನೀಡಲಾಗಿತ್ತು. ಸುಜುಕಿ ಬ್ರಿಝಾ ಕಾರು ನೀಡುವುದಾಗಿ ಹೇಳಿತ್ತು. ಅದರಂತೆ, ಸುದೀರ್ಘ 7 ತಿಂಗಳ ಬಳಿಕ ಬ್ರಿಝಾ ಕಾರು ಕಾರ್ತಿಕ್ ಕೈ ಸೇರಿದೆ.
Wed, 28 Aug 202412:29 PM IST
- ಹೊಸ ಪ್ರತಿಭೆಗಳಿಗೆ ಸದಾ ಬೆನ್ನುತಟ್ಟುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಿತ್ರರಂಗದ ಭರವಸೆ ನಾಯಕರಾಗಿರುವ ಪ್ರಮೋದ್, ಪೃಥ್ವಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಭುವನಂ ಗಗನಂ ಹಾಡು ಬಿಡುಗಡೆ ಮಾಡಿ ಇಡೀ ಸಿನಿತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.
Wed, 28 Aug 202412:01 PM IST
- ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ಸರಿಪೋದಾ ಶನಿವಾರಂ’ ತೆಲುಗು ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ನಟ ನಾನಿ ಬೆಂಗಳೂರಿಗೆ ಆಗಮಿಸಿದ್ದರು.
Wed, 28 Aug 202410:50 AM IST
- ಸಿನಿಮಾ ಅವಕಾಶಗಳು ಸಿಗದೇ ಇರುವ ಬಗ್ಗೆ, ರಾಜ್‌ಕುಮಾರ್ ಅವರ ಸಿನಿಮಾಗಳ ಬಗ್ಗೆ, ಚಿತ್ರರಂಗದ ಕೆಲವರಿಂದ ಆದ ಅವಮಾನ.. ಹೀಗೆ ಹಳೇ ನೆನಪುಗಳನ್ನು ನೆನೆದು ಕಣ್ಣೀರಾಗಿದ್ದಾರೆ ಹಿರಿಯ ನಟ ಟೆನ್ನಿಸ್ ಕೃಷ್ಣ. ಅದರಲ್ಲೂ ಹಿರಿಯ ನಟ ಸುಧೀರ್ ಮತ್ತವರ ಮಕ್ಕಳ ಬಗ್ಗೆಯೂ ಟೆನ್ನಿಸ್ ಕೃಷ್ಣ ಮಾತನಾಡಿದ್ದಾರೆ.
Wed, 28 Aug 202410:44 AM IST
- Aavesham Ranga: ಉಡುಪಿ ಅಷ್ಟಮಿ ಸಂಭ್ರಮದಲ್ಲಿ ಆವೇಶಂನ ರಂಗ ನೆನಪು ತರಿಸುವಂತಹ ಕಾರ್ಯಕ್ರಮವೊಂದು ನಡೆದಿದೆ. ಫಹಾದ್ ಫಾಸಿಲ್ ವೇಷಧಾರಿಯೊಬ್ಬರು ಎಲ್ಲರನ್ನೂ ರಂಜಿಸಿದ್ದಾರೆ. . ವಿಸ್ಮಯ ಬನ್ನಂಜೆ ಟೀಂನವರು ಫಹಾದ್ ಫಾಸಿಲ್‌ನಂತೆ ತದ್ರೂಪಿ ವ್ಯಕ್ತಿಯೊಬ್ಬರ ಮೂಲಕ ಕೃಷ್ಣ ಅಷ್ಟಮಿಗೆ ಮೆರಗು ತಂದಿದ್ದಾರೆ.
Wed, 28 Aug 202410:09 AM IST
- ಥ್ರಿಲ್ಲರ್ ಚಲನಚಿತ್ರ ಐಸಿ 814: ದಿ ಕಂದಹಾರ್ ಹೈಜಾಕ್ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ದೊಡ್ಡಪರದೆಯಲ್ಲಿ ಸದ್ದು ಮಾಡಿರುವ ಹೈಜಾಕಿಂಗ್ ಕಥಾಹಂದರವಿರುವ ಭಾರತದ ಅತ್ಯುತ್ತಮ ಸಿನಿಮಾಗಳನ್ನು ನೋಡೋಣ.
Wed, 28 Aug 202409:51 AM IST
- ಜೈಲಿನಲ್ಲಿರುವ ನಟ ದರ್ಶನ್ ಅವರ ಪರ ಬ್ಯಾಟ್ ಬೀಸಿದ್ದ ‘ಮದರ್ ಇಂಡಿಯಾ’ ಸುಮಲತಾ ಅಂಬರೀಶ್ ಹೇಳಿಕೆಗೆ ಚೇತನ್ ಅಹಿಂಸಾ ಟಾಂಗ್ ಕೊಟ್ಟಿದ್ದಾರೆ . ಅಷ್ಟಕ್ಕೂ ದರ್ಶನ್ ಬಗ್ಗೆ ಸುಮಲತಾ ಹೇಳಿದ್ದೇನು, ಇತ್ತ ಸುಮಲತಾ ಅವರ ಯಾವ ಮಾತಿಗೆ ಚೇತನ್ ಪ್ರತಿಕ್ರಿಯಿಸಿದ್ದಾರೆ. ಇಲ್ಲಿದೆ ಮಾಹಿತಿ.
Wed, 28 Aug 202409:46 AM IST
- Kannada actor Darshan: ನಟ ದರ್ಶನ್ ಕುರಿತು ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ರೇಖಾ ಶರ್ಮಾ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ದರ್ಶನ್‌ರನ್ನು ಟ್ವೀಟ್‌ನಲ್ಲಿ ಅತ್ಯಾಚಾರ ಆರೋಪಿ ಎಂದು ಇವರು ಕರೆದಿದ್ದಾರೆ.
Wed, 28 Aug 202408:33 AM IST
- ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಒಂದೊಂದೆ ಆಚೆ ಬರುತ್ತಿದ್ದಂತೆ, ಒಂದು ಕಾಲದ ಸ್ಟಾರ್ ನಟಿ ಖುಷ್ಬೂ ಸುಂದರ್ ಸಹ ಸುದೀರ್ಘ ಬರಹದ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ತನ್ನ ತಂದೆಯಿಂದಲೇ ಲೈಂಗಿಕ ನಿಂದನೆ ಅನುಭವಿಸಿದ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ.
Wed, 28 Aug 202408:21 AM IST
- Lubber Pandhu on OTT: ಕಾಲಿವುಡ್‌ನ ಬಹುನಿರೀಕ್ಷಿತ ಲಬ್ಬರ್ ಪಾಂಡು ಸಿನಿಮಾ ಚಿತ್ರಮಂದಿರದಲ್ಲಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಲಬ್ಬರ್ ಪಾಂಡು ಸಿನಿಮಾದ ಒಟಿಟಿ ಬಿಡುಗಡೆ ಅಪ್‌ಡೇಟ್ ಕೂಡ ದೊರಕಿದೆ.
Wed, 28 Aug 202407:52 AM IST
Manchu Lakshmi: ಅಮೆರಿಕಾ ಪ್ರವಾಸದಲ್ಲಿರುವ ತೆಲುಗು ನಟಿ ಮಂಚು ಲಕ್ಷ್ಮೀ ಇತ್ತೀಚೆಗಿನ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಬಹುಶ: ಅವರು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿರಬಹುದು ಎಂದುಕೊಂಡವರೇ ಹೆಚ್ಚು. ಅದರೆ ಲಕ್ಷ್ಮೀ, ತಾನು ಮಾತ್ರೆ ತೆಗೆದುಕೊಂಡಿದ್ದರಿಂದ ಈ ರೀತಿ ಸಮಸ್ಯೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.
Wed, 28 Aug 202407:30 AM IST
- Pavi Caretaker OTT release date: ದಿಲೀಪ್ ನಟನೆಯ ಕಾಮಿಡಿ ಸಿನಿಮಾ ಪವಿ ಕೇರ್ ಟೇಕರ್ ಒಟಿಟಿಯತ್ತ ಮುಖ ಮಾಡುತ್ತಿದೆ. ಮನೋರಮಾ ಮ್ಯಾಕ್ಸ್‌ನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪವಿ ಕೇರ್ ಟೇಕರ್‌ಗೆ ವಿನೀತ್ ಕುಮಾರ್ ನಿರ್ದೇಶನವಿದೆ.
Wed, 28 Aug 202406:23 AM IST
- The Lion King vs Sarathi: ಕನ್ನಡ ನಟ ದರ್ಶನ್ ಅಭಿನಯದ ಸಾರಥಿ ಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿರುವ ದಿ ಲಯನ್ ಕಿಂಗ್ (2019) ಸಿನಿಮಾದ ಕಥೆಗೆ ಸಾಮ್ಯತೆ ಇದೆಯೇ? ಈ ಎರಡು ಸಿನಿಮಾಗಳಲ್ಲಿ ಕೆಲವು ನಿರ್ದಿಷ್ಟ ದೃಶ್ಯಗಳಲ್ಲಿರುವ ಕಥೆಯ ಸಾಮ್ಯತೆ ಏನು? ಇಲ್ಲಿದೆ ವಿವರ.
Wed, 28 Aug 202406:16 AM IST
2023 ರಲ್ಲಿ ತೆರೆ ಕಂಡಿದ್ದ ಮಂಸೋರೆ ನಿರ್ದೇಶನದ 19.20.21 ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ನೈಜ ಘಟನೆ ಆಧಾರಿತ ಈ ಸಿನಿಮಾ ನೋಡಲು ಒಟಿಟಿ ಬಳಕೆದಾರರು 99 ರೂ. ಪಾವತಿಸಬೇಕಿದೆ. ನಕ್ಸಲರ ಜೊತೆ ಸಂಬಂಧ ಹೊಂದಿರುವ ಆರೋಪ ಹೊತ್ತು ಬಂಧನಕ್ಕೊಳಗಾದ ವಿದ್ಯಾರ್ಥಿಯ ಜೀವನದ ಕಥೆ ಈ ಚಿತ್ರದಲ್ಲಿದೆ.
Wed, 28 Aug 202405:23 AM IST
- Amruthadhare Kannada Serial: ಅಮೃತಧಾರೆ ಸೀರಿಯಲ್‌ನಲ್ಲಿ ಅಪಘಾತದಿಂದ ಕೋಮಕ್ಕೆ ಹೋಗಿದ್ದ ಆನಂದ್‌ಗೆ ಎಚ್ಚರವಾಗಿದೆ. ಜೈದೇವ್‌ನಿಂದ ನನಗೆ ಅಪಾಯ ತಪ್ಪಿದ್ದಲ್ಲ ಎಂದರಿತ ಆನಂದ್ ಕೆಡಿ ಜೈದೇವ್ ಕುರಿತು ಗೌತಮ್‌ಗೆ ಹೇಳುವ ಕುರಿತು ಯೋಚಿಸುತ್ತಾ ಇದ್ದಾನೆ.
Wed, 28 Aug 202404:17 AM IST
- Social Media Abuse: ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ದೊರಕಿರುವ ಕುರಿತು ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆನ್‌ಲೈನ್ ನಿಂದನೆ ಆರಂಭವಾಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ವಿಜಯಲಕ್ಷ್ಮಿ ದರ್ಶನ್ ಕುರಿತು ತುಚ್ಛ ಪೋಸ್ಟ್‌ಗಳು ಆರಂಭವಾಗಿವೆ.
Wed, 28 Aug 202404:03 AM IST
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಂಗಳವಾರದ ಎಪಿಸೋಡ್. ತಾಂಡವ್‌ನನ್ನು ಮದುವೆ ಆಗೇ ತೀರಬೇಕು ಎಂದು ನಿರ್ಧರಿಸಿರುವ ಶ್ರೇಷ್ಠಾ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಾಳೆ. ಭಾಗ್ಯಾಗೆ ಕರೆ ಮಾಡಿ ಇಂದು ನನ್ನ ಮದುವೆ, ನಿನ್ನ ಕೌಂಟ್ ಡೌನ್ ಶುರು ಎನ್ನುತ್ತಾಳೆ.
Wed, 28 Aug 202403:03 AM IST
- Shravani Subramanya Kannada Serial Today Episode August 27th: ಸುಬ್ಬು ಮನೆಯವರ ಪಾಲಿಗೆ ವರವಾಗಿ ಬಂದು ವಿಶಾಲಾಕ್ಷಿ, ವರಲಕ್ಷ್ಮೀಯನ್ನು ಕಾಪಾಡಿದ ವರದ. ಆಗಿದ್ದಾಗಲಿ ಎಂದು ಸಾಲಿಗ್ರಾಮಕ್ಕೆ ಹೊರಡಲು ಸಿದ್ಧಳಾದ ವಿಜಯಾಂಬಿಕಾ. ಶ್ರಾವಣಿ ಮನದ ಮಾತು ಕೇಳಿಸಿಕೊಂಡ ವಂದನಾ.