Entertainment News in Kannada Live August 29, 2024: Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್ ಹಾಡಿನಲ್ಲಿ ಗ್ಲಾಮರ್ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 29 Aug 202403:02 PM IST
- ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸಿನಿಮಾ ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಬಿಜಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ.
Thu, 29 Aug 202402:17 PM IST
- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಚಿಕ್ಕಣ್ಣಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಈ ಗಂಭೀರ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಿ ಕೊಳ್ಳಲಾಗಿದೆ. ಒಂದು ವೇಳೆ ಹೇಳಿಕೆಯನ್ನು ತಿರುಚಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದೀತು ಎಂದು ಚಿಕ್ಕಣ್ಣಗೆ ಎಚ್ಚರಿಕೆ ನೀಡಿದ್ದಾರೆ ಪೊಲೀಸರು.
Thu, 29 Aug 202401:48 PM IST
- ನಟ ದರ್ಶನ್ ಬಳ್ಳಾರಿ ಜೈಲು ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಇದೀಗ ದೊಡ್ಡ ನಿರ್ಧಾರಕ್ಕೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿ ಟೀಮ್, ಇನ್ಮೇಲೆ ಬೇರಾವ ಕಲಾವಿದರ ಬಗ್ಗೆ ಮಾತನಾಡದಂತೆ ತೀರ್ಮಾನಿಸಿದ್ದಾರೆ.
Thu, 29 Aug 202401:10 PM IST
- ಅನ್ನದ ವಿಚಾರವನ್ನು ಮೂಲವಾಗಿಟ್ಟುಕೊಂಡು ಗ್ರಾಮೀಣ ಭಾಗದ ಸುತ್ತ ನೈಜಕ್ಕೆ ಹತ್ತಿರವಾಗಿ ಸೆರೆಹಿಡಿದಿರುವಂತಹ ಅನ್ನ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ವಿಕಟ ಕವಿ ಯೋಗರಾಜ್ ಭಟ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದರು.
Thu, 29 Aug 202411:33 AM IST
- August 30 Movies Release: ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ವಿನಯ್ ರಾಜ್‌ಕುಮಾರ್ ನಟನೆಯ ಪೇಪೆ, ಲಾಫಿಂಗ್ ಬುದ್ಧ, ಟೇಕ್ವಾಂಡೋ ಗರ್ಲ್:, ಮೈ ಹೀರೋ, ಕೇದರ್‌ನಾಥ್ ಕುರಿಫಾರಂ, ದಿ ರೂಲರ್ಸ್, ಅಹೋ ವಿಕ್ರಮಾರ್ಕ, ಸರಿಪೋದ ಶನಿವಾರಂ, ಎ ವೆಡ್ಡಿಂಗ್ ಸ್ಟೋರಿ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ.
Thu, 29 Aug 202411:19 AM IST
- ಜಮ್ಮು- ಕಾಶ್ಮೀರದಲ್ಲಿ ಪೊಲೀಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಕಲಾವಿದನಾಗಿಯೂ ಗುರುತಿಸಿಕೊಂಡಿರುವ ಸುನೀಲ್ ಕುಮಾರ್ ಕನ್ನಡದ ಫಾರೆಸ್ಟ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. 7.8. ಅಡಿ ಎತ್ತರವಿರುವ ಸುನೀಲ್ ಅವರನ್ನು ಅಲ್ಲಿನವರು ದಿ ಗ್ರೇಟ್ ಕಲಿ ಆಫ್ ಜಮ್ಮು ಎಂದು ಕರೆಯುತ್ತಾರೆ.
Thu, 29 Aug 202410:42 AM IST
- ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ ಅದ್ಧೂರಿ 'ಜೀ ಗಣೇಶ ಉತ್ಸವ 2024' ಕಾರ್ಯಕ್ರಮವನ್ನು ಆಯೋಜಿಸಿದೆ.
Thu, 29 Aug 202410:18 AM IST
- Funny Workout Videos: ಜಿಮ್ ಅಂದ್ರೆ ಕೇವಲ ಡಂಬಲ್ಸ್, ಸೈಕ್ಲಿಂಗ್, ಥ್ರೆಡ್‌ಮಿಲ್, ವೇಟ್ ಲಿಫ್ಟಿಂಗ್, ವರ್ಕೌಟ್ ಮಾತ್ರವಲ್ಲ. ಅಲ್ಲೂ ಫನ್ ಇರುತ್ತದೆ. ಜಿಮ್‌ನೊಳಗಿನ ಹಾಸ್ಯ ವಿಡಿಯೋ ನೋಡಲು ಬಯಸುವವರು ಜನಪ್ರಿಯ ಕೋಚ್ ಸೈಫ್ ಅಸ್ಸಾದ್ ವಿಡಿಯೋ ಪರಿಶೀಲಿಸಬಹುದು. ಕೆಲವೊಂದು ವಿಡಿಯೋಗಳನ್ನು ನೋಡಿದ್ರೆ ನೀವು ಬಿದ್ದುಬಿದ್ದು ನಗೋದು ಗ್ಯಾರಂಟಿ.
Thu, 29 Aug 202409:01 AM IST
- ಮಾಲಿವುಡ್ ನಿರ್ದೇಶಕ ಜೀತು ಜೋಸೆಫ್ ಸಿನಿಮಾಗಳೆಂದರೆ ಅಲ್ಲಿ ಕ್ರೈಂ ಥ್ರಿಲ್ಲರ್ ಅಂಶ ಇದ್ದಿದ್ದೇ. ಇದೀಗ ನುನಕುಳಿ ಚಿತ್ರದಲ್ಲಿಯೂ ಕಾಮಿಡಿ ಎಳೆಯ ಮೂಲಕ ಕ್ರೈಮ್ ಥ್ರಿಲ್ಲರ್ ಕಥೆ ಹೊತ್ತು ತಂದಿದ್ದಾರೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ಒಟಿಟಿಗೆ ಪ್ರವೇಶಿಸಲಿದೆ.
Thu, 29 Aug 202408:41 AM IST
- Upcoming Kannada Movie: ಮೆಜೆಸ್ಟಿಕ್-2 ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವಟನ ಭರತ್ ಕುಮಾರ್ ಆ ಸಿನಿಮಾ ಬಿಡುಗಡೆಗೆ ಮುನ್ನವೇ ಲವ್ ಈಸ್ ಲೈಪ್ ಎಂಬ ಚಿತ್ರಕ್ಕೆ ನಾಯಕರಾಗಿದ್ದಾರೆ. ಈ ಸಿನಿಮಾದ ಮುಹೂರ್ತ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದಿದೆ.
Thu, 29 Aug 202408:31 AM IST
ನಯನತಾರಾ ಅಭಿನಯದ ಮಿಸ್ಟರಿ ಥ್ರಿಲ್ಲರ್ ಸಿನಿಮಾ ಸುಮಾರು 3 ವರ್ಷಗಳ ನಂತರ ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ನಿಜಾಲ್ ಚಿತ್ರದಲ್ಲಿ ಕುಂಚಕೋ ಬೋಬನ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅಪ್ಪು ಎನ್ ಭಟ್ಟತ್ರಿ ಆಕ್ಷನ್ ಕಟ್ ಹೇಳಿದ್ದಾರೆ.
Thu, 29 Aug 202407:30 AM IST
- Ranjani Raghavan love Sagar Bhardwaj: ಕನ್ನಡತಿ, ಪುಟ್ಟಗೌರಿ ಮದುವೆ ಸೀರಿಯಲ್ ಮತ್ತು ಕನ್ನಡ ಸಿನಿಮಾ ನಟಿ ರಂಜನಿ ರಾಘವನ್ ತನ್ನ ಜೀವನ ಸಂಗಾತಿ ಬಗ್ಗೆ ಸುದ್ದಿಹಂಚಿಕೊಂಡಿದ್ದಾರೆ. ತಾನು ಮದುವೆಯಾಗಲಿರುವ ಹುಡುಗ ಸಾಗರ್ ಭಾರಧ್ವಜ್ ಎಂಬ ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬರು ಅನ್‌ಫ್ರೆಂಡ್ ಆಗಿದ್ದಾರೆ.
Thu, 29 Aug 202406:29 AM IST
- Ranjini Raghavan Life Partner: ಕನ್ನಡ ಸಿನಿಮಾ, ಸೀರಿಯಲ್ ನಟಿ ರಂಜನಿ ರಾಘವನ್ ತನ್ನ ಜೀವನ ಸಂಗಾತಿ ಸಾಗರ್ ಭಾರಧ್ವಜ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪುಟ್ಟ ಗೌರಿ ಮದುವೆ ಸೀರಿಯಲ್ ನಟಿ ತನ್ನ ಲೈಫ್ ಪಾಟ್ನರ್ ವಿವರವನ್ನು ಹಂಚಿಕೊಂಡಿದ್ದಾರೆ.
Thu, 29 Aug 202404:07 AM IST
- Amruthadhare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಬುಧವಾರದ ಸಂಚಿಕೆಯಲ್ಲಿ ಕೋಮದಲ್ಲಿದ್ದ ಆನಂದ್ ಕಣ್ಣು ತೆರೆದಿದ್ದಾನೆ. ಆತನಿಗೆ ಎಲ್ಲವೂ ನೆನಪಾಗಿದೆ. ಇದೇ ಸಮಯದಲ್ಲಿ ದಿವಾನ್ ಆಫೀಸ್‌ಗೆ ಗೌತಮ್ ಮನೆಹಾಳ ಮಾವನ ಕಳುಹಿಸಿದ್ದಾನೆ.
Thu, 29 Aug 202403:34 AM IST
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್ 28ರ ಎಪಿಸೋಡ್‌ನಲ್ಲಿ ತಾಂಡವ್ ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕುಸುಮಾ, ಮಗನನ್ನು ರೂಮ್‌ನಲ್ಲಿ ಲಾಕ್ ಮಾಡುತ್ತಾಳೆ. ಇತ್ತ ಶ್ರೇಷ್ಠಾ ಮದುವೆ ಮನೆಗೆ ಬರುತ್ತಾಳೆ. ಅಲ್ಲಿನ ಸಿದ್ಧತೆಗಳನ್ನು ನೋಡಿ ಖುಷಿಯಾಗುತ್ತಾಳೆ.
Thu, 29 Aug 202402:09 AM IST
- Shravani Subramanya Kannada Serial Today Episode August 28th: ಸುಬ್ಬು ಮನೆಯಲ್ಲಿ ವರದನ ಗುಣಗಾನ ಮಾಡುತ್ತಿರುವ ಅಪ್ಪ–ಅಮ್ಮ, ಬಂದೇ ಬಿಡ್ತು ಸಾಲಿಗ್ರಾಮಕ್ಕೆ ಹೋಗುವ ದಿನ, ಸಂಭ್ರಮದಲ್ಲಿ ಶ್ರಾವಣಿ. ವರದನ ಮದುವೆ ವಿಚಾರವಾಗಿ ಅಮ್ಮನ ಮನವೊಲಿಸಲು ಶ್ರೀವಲ್ಲಿ ಶತಪ್ರಯತ್ನ.