Entertainment News in Kannada Live August 8, 2024: ಲವ್ವಿಗೆ ಬಿದ್ರು ಪ್ರಮೋದ್ ಶೆಟ್ಟಿ, ಲಾಫಿಂಗ್ ಬುದ್ಧ ಸಿನಿಮಾದ ಹಾಡಿನ ಮೋಡಿ, ರಿಷಬ್ ಶೆಟ್ರ ಸಿನಿಮಾ ಶೀಘ್ರದಲ್ಲಿ ಬಿಡುಗಡೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 08 Aug 202403:14 PM IST
- laughing buddha Kannada Movie: ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್ ರಾಜ್ ನಿರ್ದೇಶನ ಹಾಗೂ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿರುವ "ಲಾಫಿಂಗ್ ಬುದ್ಧ" ಸಿನಿಮಾ ಆಗಸ್ಟ್ 30ರಂದು ಬಿಡುಗಡೆಯಾಗಲಿದೆ.
Thu, 08 Aug 202402:19 PM IST
- Kannada Pepe Movie Song Trending: ವಿನಯ್ ರಾಜ್‌ಕುಮಾರ್ ನಟನೆಯ ಮುಂಬರುವ ಸಿನಿಮಾ "ಪೆಪೆ"ಯ ಹಾಡೊಂದು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. "ಬಾರಲೋ ಕುರುಮಾಂಜಿ ಬಾರೋಲೋ ಮಲ್ಲಿಗೆ, ಬಾರಲವ್ವ ಕುರುಮಾಂಜಿ ಬಾರೋಲೋ ಮಲ್ಲಿಗೆ" ಹಾಡಿನ ಮೋಡಿಗೆ ಎಲ್ಲರೂ ತಲೆದೂಗುತ್ತಿದ್ದಾರೆ.
Thu, 08 Aug 202401:04 PM IST
- Dunia Vijay Bheema Movie: ದುನಿಯಾ ವಿಜಯ್ ನಟನೆಯ ಬಹುನಿರೀಕ್ಷಿತ ಸಿನಿಮಾ ಭೀಮ ನಾಳೆ ಅಂದರೆ ಆಗಸ್ಟ್ 9ರಂದು 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ, ಇದು ಎ ಸರ್ಟಿಫಿಕೇಟ್ ಸಿನಿಮಾವಾಗಿದೆ. ವಯಸ್ಕರಿಗೆ ಮಾತ್ರ ಚಿತ್ರಮಂದಿರಕ್ಕೆ ಎಂಟ್ರಿ ನೀಡಲಾಗುತ್ತದೆ ಎಂದು ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ತಾಣಗಳು ಎಚ್ಚರಿಸಿವೆ.
Thu, 08 Aug 202412:34 PM IST
- Pawan Kalyan News: ತೆಲುಗು ನಟ, ರಾಜಕಾರಣಿ ಪವನ್ ಕಲ್ಯಾಣ್ ಈಗ ಅರಣ್ಯ ಸಚಿವರಾಗಿದ್ದಾರೆ. ಬೆಂಗಳೂರಿಗೆ ಇಂದು ಆಗಮಿಸಿದ ಇವರು ರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಪರೋಕ್ಷವಾಗಿ ಪುಷ್ಪಾ ಸಿನಿಮಾವನ್ನು ಚಾಟಿ ಬೀಸಿ "ಈಗ ಕಳ್ಳಸಾಗಾಣೆ ಮಾಡುವವರೇ ಹೀರೋ" ಎಂದಿದ್ದಾರೆ.
Thu, 08 Aug 202411:16 AM IST
- What is Shashtiabdapurti: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮಿಳುನಾಡಿನ ಅಮೃತ ಕದೇಶ್ವರರ್ ದೇಗುಲದಲ್ಲಿ ಷಷ್ಠಿ ಪೂರ್ತಿ ಆಚರಿಸಿಕೊಂಡಿದ್ದಾರೆ. ಶಿವಣ್ಣ ಮತ್ತು ಗೀತಾ ಶಿವರಾಜ್‌ಕುಮಾರ್ ಜತೆಯಾಗಿ ಕುಳಿತು ಷಷ್ಠಿ ಪೂರ್ತಿ ಪೂಜೆ ಕೈಗೊಳ್ಳುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಏನಿದು ಪೂಜೆ, ಏನಿದರ ಮಹತ್ವ? ತಿಳಿದುಕೊಳ್ಳೋಣ.
Thu, 08 Aug 202410:37 AM IST
- ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಪ್ಪ ಆಗೋ ಸಂಭ್ರಮದಲ್ಲಿದ್ದಾರೆ. ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಬಿದ್ದಪ್ಪ ಗರ್ಭಿಣಿಯೆಂಬ ಸುದ್ದಿ ಹೊರಬಿದ್ದಿದೆ. ಇದೇ ವಾರ ಅವಿವಾ ಸೀಮಂತ ಸಮಾರಂಭ ನಡೆಯಲಿದೆಯಂತೆ.
Thu, 08 Aug 202409:16 AM IST
- ತೆಲುಗು ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಹೈದರಾಬಾದ್‌ನಲ್ಲಿನ ಹಿರಿಯ ನಟ ಅಕ್ಕಿನೇನಿ ನಾಗಾರ್ಜುನ್ ಮನೆಯಲ್ಲಿ ತೀರಾ ಖಾಸಗಿಯಾಗಿ ನೆರವೇರಿದೆ. ಈ ಜೋಡಿಯ ಎಂಗೇಜ್‌ಮೆಂಟ್‌ನ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Thu, 08 Aug 202407:19 AM IST
- ನಟಿ ಸಮಂತಾ ರುತ್ ಪ್ರಭು ಜತೆಗಿನ ವಿಚ್ಛೇದನದ ಬಳಿಕ ನಟ ಅಕ್ಕಿನೇನಿ ನಾಗ ಚೈತನ್ಯ ಹೆಸರು ತೆಲುಗಿನ ಮತ್ತೋರ್ವ ನಟಿ ಶೋಭಿತಾ ಧೂಳಿಪಾಲ್ ಜತೆ ತಳುಕು ಹಾಕಿಕೊಂಡಿತ್ತು. ಇಬ್ಬರೂ ಪ್ರೀತಿಯಲ್ಲಿದ್ದಾರೆ ಎಂದೇ ಹೇಳಲಾಗಿತ್ತು. ಅದರಂತೆ ಈಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುವ ಹಂತಕ್ಕೂ ಬಂದಿದೆ ಎಂಬ ಸುದ್ದ ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ.
Thu, 08 Aug 202405:52 AM IST
- ನಟ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಕಾಂಬಿನೇಷನ್‌ನ ಟಾಕ್ಸಿಕ್ ಸಿನಿಮಾದ ಮುಹೂರ್ತ ನೆರವೇರಿದೆ. ಶೂಟಿಂಗ್‌ಗೂ ಚಿತ್ರತಂಡ ಚಾಲನೆ ನೀಡಿದೆ.
Thu, 08 Aug 202405:00 AM IST
- ನಟ ಚಿಯಾನ್ ವಿಕ್ರಮ್ ಮತ್ತು ಪಾ ರಂಜಿತ್ ಕಾಂಬಿನೇಷನ್‌ನ ತಂಗಲಾನ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಆಗಸ್ಟ್ 15ರಂದು ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಲಿದೆ. ಈ ನಡುವೆ ಬೆಂಗಳೂರಿಗೆ ಬಂದಿದ್ದ ವಿಕ್ರಮ್, ಈ ಸಿನಿಮಾ ಮಾಡಲು ಕಾಂತಾರ ಸಿನಿಮಾ ಸ್ಪೂರ್ತಿ ಎಂದಿದ್ದಾರೆ.
Thu, 08 Aug 202404:34 AM IST
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆ.7ರ ಎಪಿಸೋಡ್‌ನಲ್ಲಿ ನನ್ನ ಮದುವೆ ವಿಚಾರಕ್ಕೆ ತಲೆ ಹಾಕದಂತೆ ಭಾಗ್ಯಾಗೆ ಶ್ರೇಷ್ಠಾ ವಾರ್ನಿಂಗ್ ಮಾಡುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿರುವುದು ತಾಂಡವ್ ಎಂದು ತಿಳಿಯದೆ ಕುಸುಮಾ, ಭಾಗ್ಯಾ ತನ್ನನ್ನೇ ಬೈಯ್ಯುವುದು ತಾಂಡವ್‌ಗೆ ಮುಜುಗರವಾಗುತ್ತದೆ.
Thu, 08 Aug 202404:25 AM IST
- ಗಟ್ಟಿಮೇಳ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಎಸ್ ಮಹೇಂದರ್, ಇದೀಗ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಆಪರೇಷನ್ ಕೊಂಬುಡಿಕ್ಕಿ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ಬಹುಭಾಷಾ ನಟ ಕಿಶೋರ್ ನಾಯಕನಾಗಿದ್ದಾರೆ.
Thu, 08 Aug 202403:30 AM IST
- Amruthadhaare serial Yesterday Episode: ಅಮೃತಧಾರೆ ಸೀರಿಯಲ್ ಭಿನ್ನ ತಿರುವು ಪಡೆಯುತ್ತಿದೆ. ಒಳ್ಳೆಯವರಾಗಿದ್ದವರನ್ನು ಕೆಟ್ಟವರಾಗಿಸುವ ಪ್ರಯತ್ನ ನಡೆಯುತ್ತಿದೆ. ಅಪೇಕ್ಷಾ- ಪಾರ್ಥ ಮದುವೆಯ ಮುಂದಾಳತ್ವವನ್ನು ಶಕುಂತಲಾ ವಹಿಸಿದ್ದಾಳೆ. ಭೂಮಿಕಾ, ಸದಾಶಿವ ಅಯೋಮಯ ಸ್ಥಿತಿಯಲ್ಲಿದ್ದಾರೆ.
Thu, 08 Aug 202403:07 AM IST
- Shravani Subramanya Kannada Serial Today Episode August 7th: ʼಶ್ರಾವಣಿ ಸುಬ್ರಹ್ಮಣ್ಯʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸುಬ್ಬು ಮೇಲೆ ಚೀಟಿ ಎಸೆದ ಶ್ರೀವಲ್ಲಿ, ಸಿಕ್ಕಿದ್ದು ಮಾತ್ರ ಸುಂದರನ ಕೈಗೆ, ಸುಬ್ಬು ಮನೆ ಮುಂದೆ ಮತ್ತೆ ಹೈ ಡ್ರಾಮಾ ಮಾಡಿದ ಇಂದ್ರಮ್ಮ. ವಿಜಯಾಂಬಿಕಾಗೆ ಫಾರ್ಮ್‌ಹೌಸ್‌ಗೆ ಬಂದವರ ಕ್ಲೂ ನೀಡಿದ ರೌಡಿಪಡೆ.
Thu, 08 Aug 202402:08 AM IST
- 35 ವರ್ಷಗಳ ಹಿಂದೆ ಡಾ. ರಾಜ್‌ಕುಮಾರ್ ಸೇರಿ ಹಲವು ನಟರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶೋಭಾ, ಮದುವೆ ಬಳಿಕ ಬಣ್ಣದ ಲೋಕದಿಂದಲೇ ದೂರ ಉಳಿದರು. ಇದೀಗ ಇದೇ ನಟಿ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಎಲ್ಲಿದ್ದಾರೆ, ಹೇಗಿದ್ದಾರೆ, ಕುಟುಂಬ ಹೇಗಿದೆ ಎಂಬ ವಿವರ ಇಲ್ಲಿದೆ.
Thu, 08 Aug 202401:05 AM IST
- ಹೇಗಾದರೂ ಮಾಡಿ ಸಿಹಿಯನ್ನ ಬೋರ್ಡಿಂಗ್ ಸ್ಕೂಲ್‌ಗೆ ಕಳಿಸಬೇಕೆಂಬ ಭಾರ್ಗವಿ ಪ್ಲಾನ್ ಫಲಕೊಟ್ಟಂತಿದೆ. ಕಾಣೆಯಾಗಿದ್ದ ಚಾಂದಿನಿ ಮತ್ತೆ ರಾಮನ ವಿರುದ್ಧ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದಾಳೆ. ರುದ್ರಪ್ರತಾಪ್‌ಗೂ ಒಳ್ಳೆಯ ಸುಪಾರಿ ಜತೆಗೆ ಆಫರ್ ಕೊಟ್ಟಿದ್ದಾಳೆ ಭಾರ್ಗವಿ.
Thu, 08 Aug 202401:04 AM IST
- ಜೂನ್ 14ರಂದು ತೆರೆಗೆ ಬಂದಿದ್ದ ವಸಿಷ್ಠ ಸಿಂಹ ನಾಯಕನಾಗಿ ನಟಿಸಿದ ಲವ್ ಲಿ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಹಾಗಾದರೆ, ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಶೈಲಿಯ ಲವ್ ಲಿ ಸಿನಿಮಾವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ.
Thu, 08 Aug 202412:30 AM IST
- Sonal Monteiro Tharun Sudhir Marriage: ಸ್ಯಾಂಡಲ್‌ವುಡ್‌ನ ಬ್ಯೂಟಿಫುಲ್ ಡೈರೆಕ್ಟರ್-ಆಕ್ಟ್ರೇಸ್ ಜೋಡಿ ತರುಣ್ ಸುಧೀರ್ ಸೋನಾಲ್ ಮೊಂಥೆರೋ ಮದುವೆಗೆ ಇನ್ನು ಹೆಚ್ಚು ದಿನವಿಲ್ಲ. ಸೆಲೆಬ್ರಿಟಿಗಳಿಗೆ, ಆತ್ಮೀಯರಿಗೆ ಮದುವೆ ಆಮಂತ್ರಣ ನೀಡೋದ್ರಲ್ಲಿ ತರುಣ್ ಸುಧೀರ್ ಬಿಝಿಯಾಗಿದ್ದಾರೆ. ತರುಣ್ ಫೋಟೋಗೆ ಸೋನಾಲ್ ಕೇಕ್ ತಿನ್ನಿಸುವ ವಿಡಿಯೋ ನೋಡಿದ್ದೀರಾ?
Thu, 08 Aug 202412:20 AM IST
- ಟಾಲಿವುಡ್‌ನ ಸೂಪರ್ ಹಿಟ್ ಮಗಧೀರ ಚಿತ್ರದಲ್ಲಿ ರಣದೇವ್ ಬಿಲ್ಲಾ ಎನ್ನುವ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ ನಟ ದೇವ್ ಗಿಲ್ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 'ಅಹೋ ವಿಕ್ರಮಾರ್ಕ' ಸಿನಿಮಾದಲ್ಲಿ ದೇವ್ನಾ ಯಕನಟನಾಗಿ ನಟಿಸುತ್ತಿದ್ದು, ಆಗಸ್ಟ್ 30 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.