Entertainment News in Kannada Live December 1, 2024: Shobitha Shivanna: ಬಹ್ಮಗಂಟು ಧಾರಾವಾಹಿ ಪಿಂಕಿ ಖ್ಯಾತಿಯ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆಗೆ ಶರಣು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 01 Dec 202401:40 PM IST
Shobitha Shivanna: ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕಿ ಗುಂಡಮ್ಮ ತಂಗಿ ಪಿಂಕಿ ಪಾತ್ರದಲ್ಲಿ ನಟಿಸುತ್ತಿದ್ದ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಶೋಭಿತಾ, ಎರಡೊಂದ್ಲಾ ಮೂರು, ಒಂದ್ ಕಥೆ ಹೇಳಾ, ಫಸ್ಟ್ ಡೇ ಫಸ್ಟ್ ಶೋ ಸೇರಿ ಕೆಲವೊಂದು ಸಿನಿಮಾಗಳಲ್ಲಿ ಕೂಡಾ ನಟಿಸಿದ್ದರು.
Sun, 01 Dec 202411:48 AM IST
Kanguva OTT Realease Date: ಕಾಲಿವುಡ್ ನಟ ಸೂರ್ಯ ಅವರ ವೃತ್ತಿಜೀವನದ ಬಿಗ್ ಬಜೆಟ್‌ನ ಚಿತ್ರ ಕಂಗುವ, ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲುಂಡಿದೆ. ಈ ನಡುವೆ ಇದೇ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
Sun, 01 Dec 202409:47 AM IST
- ಬಹುತೇಕ ಹೊಸಬರು ಸೇರಿ ನಿರ್ಮಾಣ ಮಾಡಿರುವ ಠಾಣೆ ಸಿನಿಮಾದ ಪೋಸ್ಟರ್‌ವೊಂದನ್ನು ಆರ್ಟ್ ಆಫ್ ಲಿವೀಂಗ್‌ನ ಶ್ರೀ ರವಿಶಂಕರ್ ಗುರೂಜಿ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
Sun, 01 Dec 202409:17 AM IST
Bougainvillea Movie OTT: ಫಹಾದ್ ಫಾಸಿಲ್, ಕುಂಚಿಕೊ ಬೋಬನ್ ನಟನೆಯ ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಬೊಗೆನ್‌ವಿಲ್ಲಾ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಈ ಚಿತ್ರ ಅಕ್ಟೋಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿತ್ತು, ಇದೀಗ ಒಟಿಟಿಗೆ ಆಗಮಿಸುತ್ತಿದೆ.
Sun, 01 Dec 202409:02 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 30ರ ಎಪಿಸೋಡ್‌ನಲ್ಲಿ ಮದುವೆ ವಾರ್ಷಿಕೋತ್ಸವದಲ್ಲಿ ತಾಂಡವ್, ಭಾಗ್ಯಾಗೆ ಮತ್ತೊಮ್ಮೆ ತಾಳಿ ಕಟ್ಟಲು ನಿರಾಕರಿಸುತ್ತಾನೆ. ಭಾಗ್ಯಾ ಎಲ್ಲರ ಮುಂದೆ ತಾಂಡವ್-ಶ್ರೇಷ್ಠಾ ಹೋಟೆಲ್‌ನಲ್ಲಿ ಇದ್ದಿದ್ದನ್ನು ತಿಳಿಸುತ್ತಾಳೆ. ಮಕ್ಕಳಿಗೂ ಈಗ ಅಪ್ಪನ ಅಸಲಿ ಮುಖ ಗೊತ್ತಾಗಿದೆ.
Sun, 01 Dec 202407:04 AM IST
- ಬೇರೆ ಭಾಷೆಗಳ ಜನಪ್ರಿಯ ನಿರ್ದೇಶಕರು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರಿಂದ ಸ್ಫೂರ್ತಿಗೊಂಡು ಚಿತ್ರ ನಿರ್ದೇಶಿಸುತ್ತಿದ್ದರು. ಅದಕ್ಕೆ ಸರಿಯಾಗಿ ಪುಟ್ಟಣ್ಣ ನಿರ್ದೇಶನದ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗಿವೆ. ಯಾವ ಚಿತ್ರ, ಯಾವ ಭಾಷೆಗೆ ರೀಮೇಕೆ ಆಗಿದೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Sun, 01 Dec 202406:08 AM IST
- Pushpa 2 The Rule Ticket Price in Bengaluru: ಪುಷ್ಪ 2 ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಕರ್ನಾಟಕದಲ್ಲಿಯೂ ಆರಂಭವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸಾವಿರಾರು ಶೋಗಳನ್ನು ಪಡೆದಿದೆ ಅಲ್ಲು ಅರ್ಜುನ್ ನಟನೆಯ ಈ ಸಿನಿಮಾ. ಬೆಳಗಿನ ಜಾವ 3ಗಂಟೆಯಿಂದಲೇ ಶೋ ಶುರುವಾಗಲಿವೆ.
Sun, 01 Dec 202405:49 AM IST
- ಜ್ಯೂ ಎನ್‌ಟಿಆರ್ ನಟನೆಯ ದೇವರ ಚಿತ್ರವು ನಿರ್ಮಾಪಕರಿಗೆ 74 ಕೋಟಿ ರೂ. ಲಾಭ ತಂದಿದೆ ಎಂದು ಹೇಳಲಾಗುತ್ತಿದೆ. 2024 ರಲ್ಲಿ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ದೇವರ ಕೂಡಾ ಒಂದಾಗಿದೆ. ಚಿತ್ರದ ಕ್ಲೋಸಿಂಗ್ ಕಲೆಕ್ಷನ್ ಹಾಗೂ ಲಾಭದ ವಿವರ ಇಲ್ಲಿದೆ.
Sun, 01 Dec 202405:17 AM IST
- Zee Kannada reality shows: ಈಗಾಗಲೇ ಒಂದು ಪ್ರೋಮೋ ಮೂಲಕ ಗಮನ ಸೆಳೆದಿರುವ ಸರೆಗಮಪ ಸಿಂಗಿಂಗ್ ಶೋ, ಇದೀಗ ಮತ್ತೊಂದು ಪ್ರೋಮೋ ಜತೆಗೆ ಆಗಮಿಸಿದೆ. ಈ ಎರಡನೇ ಪ್ರೋಮೋದಲ್ಲಿ ಈ ಸಲದ 32 ಅಭ್ಯರ್ಥಿಗಳನ್ನು ರಿವೀಲ್ ಮಾಡಿದೆ. ಆ 32ರಲ್ಲಿ ಅಂತಿಮ 16 ಸ್ಪರ್ಧಿಗಳು ಯಾರು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ.
Sun, 01 Dec 202404:50 AM IST
- ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್, 1980ರ ದಶಕದಲ್ಲಿ ಮಲಯಾಳಂನಲ್ಲಿ ಅಗ್ರ ನಾಯಕಿಯಾಗಿದ್ದರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದ ಮೇನಕಾ, ತೆಲುಗಿನಲ್ಲಿಯೂ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ.
Sun, 01 Dec 202404:15 AM IST
- Naa Ninna Bidalaare: ನಾ ನಿನ್ನ ಬಿಡಲಾರೆ ಸಿನಿಮಾಕ್ಕೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಅನ್ಯಾಯವಾಗಿದೆ. ಸಿನಿಮಾ ಬಿಡುಗಡೆಯಾಗಿದ್ದರೂ, ಆ ಚಿತ್ರದ ಸ್ಟ್ಯಾಂಡಿಗಳನ್ನು ಬಚ್ಚಿಟ್ಟು, ಕಳ್ಳಾಟವಾಡಿ, ಚಿತ್ರತಂಡದ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ. ಬಳಿಕ ಕ್ಷಮೆ ಕೇಳಿ, ಸ್ಟ್ಯಾಂಡಿಗಳನ್ನು ಎಲ್ಲರಿಗೂ ಕಾಣುವಂತೆ ಇರಿಸಿದ್ದಾರೆ.