ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 10, 2024: Upcoming Movie: ಮ್ಯಾಕ್ಸ್ ಬಿಡುಗಡೆಯ ಪರಿಣಾಮ, ರಿಷಿ ಅಭಿನಯದ ರುದ್ರ ಗರುಡಾ ಪುರಾಣ ಸಿನಿಮಾ ರಿಲೀಸ್ ಮುಂದೂಡಿಕೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 10 Dec 202401:36 PM IST
ಮನರಂಜನೆ News in Kannada Live:Upcoming Movie: ಮ್ಯಾಕ್ಸ್ ಬಿಡುಗಡೆಯ ಪರಿಣಾಮ, ರಿಷಿ ಅಭಿನಯದ ರುದ್ರ ಗರುಡಾ ಪುರಾಣ ಸಿನಿಮಾ ರಿಲೀಸ್ ಮುಂದೂಡಿಕೆ
- Upcoming Kannada Movie: ರುದ್ರ ಗರುಡಾ ಪುರಾಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗುವ ಕನಸು ಕಾಣುತ್ತಿದ್ದವು. ಆದರೆ, ಉಪೇಂದ್ರ ನಟನೆಯ ಯುಐ, ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಎಂಬ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಯಾಗಲಿದೆ. ಹೀಗಾಗಿ, ರುದ್ರ ಗರುಡಾ ಪುರಾಣ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.
Tue, 10 Dec 202412:52 PM IST
ಮನರಂಜನೆ News in Kannada Live:'ರುಧಿರಂ' ಸಿನಿಮಾದಲ್ಲಿ ಡಾಕ್ಟರ್ ಆದ ರಾಜ್ ಬಿ ಶೆಟ್ಟಿ; ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರಾ ಕನ್ನಡದ ನಟ?
- ಈ ವಾರದಲ್ಲೇ ಬಿಡುಗಡೆಯಾಗಲಿರುವ ಮಲಯಾಳಂ ಸಿನಿಮಾ ‘ರುಧಿರಂ’ನಲ್ಲಿ ರಾಜ್ ಬಿ ಶೆಟ್ಟಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವಿಲನ್ ಪಾತ್ರ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಆ ಪ್ರಶ್ನೆಗೆ ಇಲ್ಲೇ ಇದೆ ಉತ್ತರ.
Tue, 10 Dec 202410:28 AM IST
ಮನರಂಜನೆ News in Kannada Live:ಬಿಳಿಚುಕ್ಕಿ ಹಳ್ಳಿಹಕ್ಕಿ ಸಿನಿಮಾದ ನಾಯಕಿ ಅಗ್ನಿಸಾಕ್ಷಿ ವೈಷ್ಣವಿ ಗೌಡ ಅಲ್ಲ! ತೊನ್ನು ಸಮಸ್ಯೆಯ ಕಥೆಗೆ ಕಾಜಲ್ ಹೀರೋಯಿನ್
- bili chukki halli hakki movie: ತೊನ್ನು ಸಮಸ್ಯೆಯ ಕಥೆ ಹೊಂದಿರುವ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರದ ನಾಯಕಿ ಕಾರಣಾಂತರಗಳಿಂದ ಬದಲಾಗಿದ್ದಾರೆ. ಈ ಸಿನಿಮಾಕ್ಕೆ ಅಗ್ನಿಸಾಕ್ಷಿ ಸೀರಿಯಲ್ ಖ್ಯಾತಿಯ ವೈಷ್ಣವಿ ಗೌಡ ಬದಲು ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. (ವರದಿ: ಚೇತನ್ ನಾಡಿಗೇರ್)
Tue, 10 Dec 202410:22 AM IST
ಮನರಂಜನೆ News in Kannada Live:Annayya Serial: ಸತ್ಯ ತಿಳಿದು ಮೂಕಳಾದ ಪಾರು; ಇನ್ನೆಂದಿಗೂ ಸಿದ್ದಾರ್ಥ್ ಅವಳ ಬದುಕಿನಲ್ಲಿ ಬರೋದೇ ಇಲ್ಲ
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಸಿದ್ದಾರ್ಥ್‌ಗಾಗಿ ತುಂಬಾ ದಿನದಿಂದ ಕಾದಿದ್ದಾಳೆ. ಶಿವುನ ಮದುವೆ ಆದರೂ ಅವಳು ಈಗಲೂ ತನ್ನ ಹುಡುಗ ಮತ್ತೆ ಬಂದೇ ಬರುತ್ತಾನೆ ಎಂದು ನಂಬಿ ಜೀವನ ನಡೆಸುತ್ತಿದ್ದಾಳೆ. ಆದರೆ ಅವಳಿಗೆ ದೊಡ್ಡ ಮೋಸ ಆಗಿದೆ.
Tue, 10 Dec 202409:04 AM IST
ಮನರಂಜನೆ News in Kannada Live:Lakshmi Baramma Serial: ಲಾಯರ್ ಮಾತನ್ನೂ ಮೀರಿದ ಹುಚ್ಚಾಟ ಕಾವೇರಿಯದು; ಕೊನೆಗೂ ಚಿಂಗಾರಿಗೆ ಸಿಕ್ಕಿದೆ ಗಿರಿಜಾ ಸುಳಿವು
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಇನ್ನೂ ಸ್ವಲ್ಪ ದಿನ ಜೈಲಿನಲ್ಲೇ ಉಳಿಯುವ ಎಲ್ಲಾ ಸೂಚನೆಯೂ ಕಂಡುಬರುತ್ತಿದೆ. ಲಾಯರ್ ಹೇಳಿದ ಯಾವ ಮಾತನ್ನೂ ಕಾವೇರಿ ಈಗ ಕೇಳುವ ಹಂತದಲ್ಲಿಲ್ಲ. ಜೈಲಿನಲ್ಲಿ ಇರಲು ಅವಳಿಂದ ಸಾಧ್ಯವಾಗುತ್ತಿಲ್ಲ.
Tue, 10 Dec 202407:52 AM IST
ಮನರಂಜನೆ News in Kannada Live:Ramachari Serial: ರಾಮಾಚಾರಿ ಕುಟುಂಬಕ್ಕೆ ಕಾದಿದೆ ಆಪತ್ತು; ರುಕ್ಕುವನ್ನು ಹುಡುಕಿ ಬಂದ ಅಣ್ಣಾಜಿ
- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ತನ್ನ ತಮ್ಮ ಕಿಟ್ಟಿ ಮದುವೆಗೆ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ. ಮದುವೆ ಮಂಟಪವೂ ರೆಡಿಯಾಗಿದೆ. ಕಿಟ್ಟಿ ಬಂದು ಹಸೆಮಣೆ ಏರಿದ್ದಾನೆ. ಹೀಗಿರುವಾಗ ಅಣ್ಣಾಜಿ ಕುಟುಂಬ ರಾಮಾಚಾರಿಯನ್ನು ಹುಡುಕಿಕೊಂಡು ಬಂದಿದೆ.
Tue, 10 Dec 202407:05 AM IST
ಮನರಂಜನೆ News in Kannada Live:Pushpa 2: 5 ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಪುಷ್ಪ 2 ಗಳಿಸಿದ್ದೆಷ್ಟು? ಅಲ್ಲು ಅರ್ಜುನ್ ನಟನೆಯ ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್
- Pushpa 2 box office collection day 5: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟನೆಗೂ ಶ್ಲಾಘನೆ ವ್ಯಕ್ತವಾಗಿದೆ.
Tue, 10 Dec 202406:25 AM IST
ಮನರಂಜನೆ News in Kannada Live:Seetha Rama Serial: ಸೀತಾರಾಮ ಧಾರಾವಾಹಿ ಪ್ರೇಕ್ಷಕರು ನನಗೆ ಇದೇ ಪ್ರಶ್ನೆ ಕೇಳ್ತಿದ್ದಾರೆ: ನಟಿ ಪದ್ಮಕಲಾ ಸಂದರ್ಶನ
- ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಎಲ್ಲರಿಂದ ದೂರವಾಗಿದ್ದಾಳೆ. ಆದರೆ ಸಿಹಿ ಪಾತ್ರವನ್ನು ಇನ್ನು ಮುಂದಿನ ದಿನಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ವೀಕ್ಷಕರು ಬೇಸರಪಟ್ಟಿದ್ದಾರೆ. ಈ ಬಗ್ಗೆ ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಅಜ್ಜಿ ಪಾತ್ರದಲ್ಲಿ ಅಭಿನಯಿಸುತ್ತಿರುವ ನಟಿ ಪದ್ಮಕಲಾ ಹೇಳಿದ್ದೇನು ನೋಡಿ. -ಸಂದರ್ಶನ ಪದ್ಮಶ್ರೀ ಭಟ್
Tue, 10 Dec 202405:23 AM IST
ಮನರಂಜನೆ News in Kannada Live:ಒಂದೇ ಚಿತ್ರದಲ್ಲಿ ಅಭಿನಯಿಸಲಿದ್ದಾರಾ ಪ್ರಭಾಸ್ ಮತ್ತು ರಿಷಭ್ ಶೆಟ್ಟಿ? ಸಿನಿ ಅಂಗಳದಲ್ಲಿ ಹೀಗೊಂದು ಹೊಸ ಸುದ್ದಿ
- ತೆಲುಗು ನಟ ಪ್ರಭಾಸ್ ಜೊತೆ ರಿಷಬ್ ಕೈ ಜೋಡಿಸಲಿದ್ದಾರೆ. ಇಬ್ಬರೂ ಒಟ್ಟಾಗಿ ಒಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಹೀಗಿರುವಾಗ ಅಭಿನಯದ ಹೊರತಾಗಿ ರಿಷಬ್ ಪ್ರಭಾಸ್ ಸಿನಿಮಾಕ್ಕೆ ಬೇರೊಂದು ರೀತಿಯಲ್ಲಿ ಸಹಕರಿಸಲಿದ್ದಾರಂತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.
Tue, 10 Dec 202404:55 AM IST
ಮನರಂಜನೆ News in Kannada Live:ಅಜಯ್ ದೇವ್‌ಗನ್ ಅಭಿನಯದ ‘ಸಿಂಗಂ ಅಗೇನ್’ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯ; ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ
- ಅಜಯ್ ದೇವ್‌ಗನ್ ಅಭಿನಯದ ‘ಸಿಂಗಂ ಅಗೇನ್’ ಸಿನಿಮಾ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ನೀವೂ ಈ ಸಿನಿಮಾವನ್ನು ಈಗ ನಿಮ್ಮ ಮನೆಯಲ್ಲೇ ಕುಳಿತು ನೋಡಬಹುದು. ಕಲಾವಿದ ದಂಡೇ ಅಭಿನಯಿಸಿದ ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಪಾಸಿಟಿವ್ ಟಾಕ್ ಇದೆ.
Tue, 10 Dec 202404:17 AM IST
ಮನರಂಜನೆ News in Kannada Live:Rashmika Mandanna: ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಟೀಸರ್ ರಿಲೀಸ್
- ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಈ ಚಿತ್ರಕ್ಕಾಗಿ ತುಂಬಾ ದಿನ ಕಾಯಲು ಸಾಧ್ಯವಿಲ್ಲ ಬೇಗ ಬಿಡುಗಡೆ ಮಾಡಿ ಎಂದಿದ್ದಾರೆ.
Tue, 10 Dec 202403:56 AM IST
ಮನರಂಜನೆ News in Kannada Live:Thangalaan ott: ಕೊನೆಗೂ ಒಟಿಟಿಗೆ ಬಂತು ತಂಗಲಾನ್; ವಿಕ್ರಮ್, ಪಾ ರಂಜಿತ್ ಬಹುನಿರೀಕ್ಷಿತ ಸಿನಿಮಾವನ್ನು ಕನ್ನಡದಲ್ಲಿಯೇ ನೋಡಿ
- Thangalaan out on OTT: ಕರ್ನಾಟಕದ ಕೆಜಿಎಫ್ ಪೂರ್ವಜರ ಕಥೆ ಹೊಂದಿರುವ ತಂಗಲಾನ್ ಸಿನಿಮಾ ಕೊನೆಗೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ವಿವಿಧ ಕಾರಣಗಳಿಂದ ಒಟಿಟಿಗೆ ಆಗಮಿಸುವುದು ತಡವಾಗಿತ್ತ. ವಿಕ್ರಮ್ ನಟನೆಯ, ಪಾ ರಂಜಿತ್ ನಿರ್ದೇಶನದ ಸಿನಿಮಾವನ್ನು ಸಿನಿಪ್ರಿಯರು ಈಗ ಮನೆಯಲ್ಲೇ ನೋಡಬಹುದು.
Tue, 10 Dec 202403:14 AM IST
ಮನರಂಜನೆ News in Kannada Live:ಅನಿಮಲ್ ಪಾರ್ಕ್ ಚಿತ್ರಕ್ಕೆ ಹೀರೊನೂ ಇವರೇ, ವಿಲನ್ನೂ ಇವರೇ; 2027ಕ್ಕೆ ಸೆಟ್ಟೇರಲಿದೆ ರಣಬೀರ್ ಕಪೂರ್ ಸಿನಿಮಾ
- ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರವು ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ ದೊಡ್ಡ ಗಳಿಕೆ ಕಂಡಿತ್ತು. ಚಿತ್ರದ ಕೊನೆಯಲ್ಲೇ ಮುಂದುವರೆದ ಭಾಗ ಬರುತ್ತದೆ ಎಂದು ಘೋಷಿಸಲಾಗಿತ್ತು. ಇದೀಗ ಅನಿಮಲ್ ಪಾರ್ಕ್ ಸಿನಿಮಾದ ಬಗ್ಗೆ ಮಾತನಾಡಿರುವ ನಟ ರಣಬೀರ್ ಕಪೂರ್ ಹೀರೊನೂ ನಾನೇ, ವಿಲನ್ ಕೂಡ ನಾನೇ ಎಂದಿದ್ದಾರೆ.
Tue, 10 Dec 202402:43 AM IST
ಮನರಂಜನೆ News in Kannada Live:ಮೂರನೇ ಬಾರಿಗೆ ಛೂ ಮಂತರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ, ಜನವರಿ 10ಕ್ಕೆ ತೆರೆ ಮೇಲೆ ರಂಜಿಸಲು ಬರ್ತಿದ್ದಾರೆ ಶರಣ್
- ಶರಣ್ ಅಭಿನಯದ ‘ಛೂ ಮಂತರ್’ ಚಿತ್ರವು ಕಳೆದ ವರ್ಷ ಎರಡು ಬಾರಿ ಘೋಷಣೆಯಾಗಿ, ಕೊನೆಗೆ ಮುಂದಕ್ಕೆ ಹೋಗಿತ್ತು. ಇದೀಗ ಮೂರನೇ ಬಾರಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಅದರ ಪ್ರಕಾರ, ಶರಣ್ ಅಭಿನಯದ ‘ಛೂ ಮಂತರ್’, ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.