Entertainment News in Kannada Live December 11, 2024: ಉಪೇಂದ್ರ ಯುಐ ಸಿನಿಮಾ ಎರಡು ರೀತಿಯ ಅಂತ್ಯ ಹೊಂದಿರುತ್ತಾ? ಆ ಥಿಯೇಟರ್‌ನಲ್ಲಿರುವ ಕ್ಲೈಮ್ಯಾಕ್ಸ್ ಈ ಚಿತ್ರಮಂದಿರದಲ್ಲಿ ಇರೋದಿಲ್ವಂತೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 11 Dec 202401:24 PM IST
- Alternate endings movie: ಉಪೇಂದ್ರ ನಟನೆ ಮತ್ತು ನಿರ್ದೇಶನದ ಯುಐ ಸಿನಿಮಾ ಇದೇ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವು ಆಲ್ಟರ್‌ನೆಟ್ ಕಟ್/ ಡಬಲ್ ಎಂಡಿಂಗ್ (alternate endings) ಮೂಲಕ ಪ್ರೇಕ್ಷಕರನ್ನು ಅಚ್ಚರಿಗೊಳಿಸುವ ಸೂಚನೆಯಿದೆ. ಏನಿದು ಡಬಲ್ ಕಟ್ಟಿಂಗ್? ಇಲ್ಲಿದೆ ವಿವರ.
Wed, 11 Dec 202412:13 PM IST
- ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿ ಹಾಗೂ ರುಕ್ಕು ಹಸೆಮಣೆ ಏರಿದ್ದಾರೆ. ಆದರೆ ಈ ಮದುವೆಯನ್ನು ತಡೆಯಲು ಸರಿಯಾದ ಸಮಯಕ್ಕೆ ಅಣ್ಣಾಜಿ ಬಂದಿದ್ದಾರೆ. ಆದರೆ ಚಾರು ತನ್ನ ಜಾಣತನದಿಂದ ಮದುವೆ ಮಾಡಿಸಿದ್ದಾಳೆ.
Wed, 11 Dec 202412:08 PM IST
- ಅಯೋಗ್ಯ 2 ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಸತೀಶ್ ನೀನಾಸಂ ಬಗ್ಗೆ ರಚಿತಾ ರಾಮ್ ಕೋಪಿಸಿಕೊಂಡರು. ಇವರಿಬ್ಬರ ನಡುವೆ ಹುಸಿಮುನಿಸು, ಜಗಳಕ್ಕೆ ಕಾರಣವಾದ ಅಂಶವೇನು? ನಂತರ ಇವರಿಬ್ಬರು ರಾಜಿಯಾದ್ರ? ತಿಳಿಯೋಣ ಬನ್ನಿ. (ವರದಿ: ಚೇತನ್ ನಾಡಿಗೇರ್)
Wed, 11 Dec 202411:13 AM IST
- ರಚಿತಾ ಮತ್ತು ನೀನಾಸಂ ಸತೀಶ್ ಅವರನ್ನು ತೆರೆಮೇಲೆ ಮತ್ತೆ ಕಾಣುವ ಸಮಯ ಹತ್ತಿರ ಬರುತ್ತಿದೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ 'ಅಯೋಗ್ಯ 2' ಸಿನಿಮಾ ಸೆಟ್ಟೇರಿದೆ.
Wed, 11 Dec 202410:32 AM IST
- ಡಿ 24ರಂದು ಮಿಯಾಮಿಯಲ್ಲಿ ಶಿವರಾಜಕುಮಾರ್‌ಗೆ ಆಪರೇಷನ್ ಜರುಗಲಿದೆ ಎಂದು ಗೀತಾ ಶಿವರಾಜಕುಮಾರ್ ತಿಳಿಸಿದ್ದಾರೆ. ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋದಲ್ಲಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಭಿಮಾನಿಗಳೂ ಬೇಗ ಗುಣಮುಖರಾಗಿ ಎಂದು ಆಶಿಸುತ್ತಿದ್ದಾರೆ.
Wed, 11 Dec 202410:20 AM IST
- OTT Revenue: ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್, ಜಿಯೋ ಸಿನಿಮಾ, ಜೀ5, ಸನ್‌ನೆಕ್ಸ್ಟ್‌ನಂತಹ ಒಟಿಟಿಗಳಿಗೆ ಆದಾಯದ ಮೂಲ ಯಾವುವು? ಕೋಟ್ಯಾಂತರ ಹಣ ನೀಡಿ ಸಿನಿಮಾ ಖರೀದಿಸುವ ಈ ಪ್ಲಾಟ್‌ಫಾರ್ಮ್‌ಗಳು ಆದಾಯ ಹೇಗೆ ಗಳಿಸುತ್ತವೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
Wed, 11 Dec 202409:44 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಅಳುತ್ತಿದ್ದಾಳೆ. ಅವಳ ಪ್ರೀತಿಯ ಅರಮನೆ ಕುಸಿದು ಹೋಗಿದೆ. ಅವಳು ಇಷ್ಟು ದಿನ ಸಿದ್ದಾರ್ಥ್ ಬರುತ್ತಾನೆ ಎಂಬ ನಂಬಿಕೆಯಲ್ಲಿ ಜೀವನ ನಡೆಸುತ್ತಿದ್ದಳು ಆದರೆ ಈಗ ಎಲ್ಲ ಮಾಯ.
Wed, 11 Dec 202408:22 AM IST
- ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಟಾಪ್ 10 ಚಲನಚಿತ್ರಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಸ್ತ್ರೀ 2 ಸಿನಿಮಾ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 2024ರಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
Wed, 11 Dec 202407:21 AM IST
Bigg Boss Kannada 11: ಬಿಗ್ ಬಾಸ್ ಫಿನಾಲೆ ಹತ್ತಿರ ಬರುತ್ತಿದ್ದಂತೆ ಯಾವಾಗಲೂ ಆಟದಲ್ಲಿ ಮಹತ್ತರ ಬದಲಾವಣೆಗಳು ಆಗುತ್ತಲೇ ಇರುತ್ತದೆ. ಈಗ ಗೌತಮಿ ಯಾವಾಗಲೂ ತನ್ನ ಗೆಳೆಯ ಎಂದು ಹೇಳುತ್ತಿದ್ದ ಉಗ್ರಂ ಮಂಜು ಅವರ ವಿರುದ್ಧವಾಗಿ ಮಾತನಾಡಿದ್ದಾರೆ. ಗೆಳೆತನ ಇನ್ನು ಮುಂದೆ ಬೇಡ ಎಂದು ಹೇಳಿದ್ದಾರೆ.
Wed, 11 Dec 202406:00 AM IST
- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ, ಟಿಆರ್‌ಪಿಯಲ್ಲಿ ಸದಾ ಟಾಪ್ ಇರುವ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು‘. ಈ ಧಾರಾವಾಹಿಯಲ್ಲಿ ರಾಧಾ ಪಾತ್ರಧಾರಿ ರಮ್ಯಾ ರಾಜುಗೆ ಹೇಗೆ ಬ್ಯಾಕ್ ಟು ಬ್ಯಾಕ್ ವಿಲನ್ ಪಾತ್ರವೇ ಸಿಗ್ತಿದೆ? ಈ ಬಗ್ಗೆ ಅವರು Panchami Taks ಯುಟ್ಯೂಬ್ ಚಾನೆಲ್ ಜೊತೆಗೆ ಮಾತನಾಡಿದ್ದಾರೆ. (ಸಂದರ್ಶನ: ಪದ್ಮಶ್ರೀ ಭಟ್)
Wed, 11 Dec 202406:00 AM IST
- ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಅಭಿನಯದ 'ಪುಷ್ಪ 2 ದಿ ರೂಲ್' ಸಿನಿಮಾ ಬಿಡುಗಡೆಯಾಗಿ 6 ದಿನ ಕಳೆದಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಓಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಷ್ಟು ದಿನಗಳಲ್ಲಿ ಪುಷ್ಪ 2 ಸಿನಿಮಾ ಸಂಗ್ರಹಿಸಿದ ಅಂದಾಜು ಮೊತ್ತ ಇಲ್ಲಿದೆ.
Wed, 11 Dec 202405:48 AM IST
- ಅಕ್ಷಯ್ ಕುಮಾರ್ ನಟನೆಯಲ್ಲಿ ‘ಭೂತ್ ಬಂಗ್ಲಾ’ ಎಂಬ ಹಾರರ್ ಕಾಮಿಡಿ ಚಿತ್ರಕ್ಕೆ ನಿರ್ದೇಶನ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಘೋಷಣೆ ಅಧಿಕೃತವಾಗಿ ಆಗಿದೆ. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, 2026ರ ಏಪ್ರಿಲ್ 02ರಂದು ಚಿತ್ರ ತೆರೆಗೆ ಬರಲಿದೆ. (ವರದಿ: ಚೇತನ್ ನಾಡಿಗೇರ್)
Wed, 11 Dec 202405:38 AM IST
- Upendra UI Movie: ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘UI’, ಡಿ. 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವು ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆ ಆಗುತ್ತಿದೆ. ಆದರೆ, ಚಿತ್ರತಂಡವು ಪ್ರಚಾರದ ವಿಷಯವಾಗಿ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. (ವರದಿ: ಚೇತನ್ ನಾಡಿಗೇರ್)
Wed, 11 Dec 202405:15 AM IST
- Fahadh Faasil: ಕಳೆದ 15 ವರ್ಷಗಳಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ನಟಿಸಿದ್ದಾರೆ. ಈಗ ಮೊದಲ ಬಾರಿಗೆ ಬಾಲಿವುಡ್‍ಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಚಿತ್ರದ ಮೂಲಕ ಅವರು ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರಂತೆ. (ವರದಿ: ಚೇತನ್ ನಾಡಿಗೇರ್)
Wed, 11 Dec 202404:57 AM IST
- ಮಂಚು ಮೋಹನ್ ಬಾಬು ಕುಟುಂಬದಲ್ಲಿ ಕಲಹ ಏರ್ಪಟ್ಟಿದೆ. ಮಂಚು ಮೋಹನ್ ಬಾಬು ಹಾಗೂ ಅವರ ಕಿರಿಯ ಮಗ ಮನೋಜ್ ಬಾಬು ನಡುವೆ ಗಲಾಟೆಯಾಗಿ ದೈಹಿಕ ಹಲ್ಲೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಸಂಘರ್ಷ ಮುಂದುವರೆದಿದೆ.
Wed, 11 Dec 202404:43 AM IST
- ಅಮೃತಧಾರೆ ಧಾರಾವಾಹಿ ಡಿಸೆಂಬರ್ 11ರ ಸಂಚಿಕೆ: ತಾಯಿ ಮತ್ತು ತಂಗಿಯನ್ನು ಇನ್‌ಸ್ಪೆಕ್ಟರ್ ಕರೆದುಕೊಂಡು ಬರುತ್ತಾರೆ ಎಂದು ಭಾವಿಸಿದ್ದ ಗೌತಮ್‌ಗೆ ಅಮ್ಮ ಮತ್ತು ತಂಗಿಯ ಸಾವಿನ ಸುದ್ದಿ ದೊರಕಿದೆ. ಈ ಸುದ್ದಿ ಕೇಳಿ ಗೌತಮ್ ಕುಸಿದಿದ್ದಾರೆ. ಅಮೃತಧಾರೆಯಲ್ಲಿ ಇನ್‌ಸ್ಪೆಕ್ಟರ್ ಶಕುಂತಲಾದೇವಿ ಬಣ ಸೇರಿಕೊಂಡಿದ್ದಾರೆಯೇ?
Wed, 11 Dec 202404:17 AM IST
- ನಾ ನಿನಗೆ ನೀ ನನಗೆ, ಬೇಡ ಬೇರೆ ಏನು; ಕನ್ನಡ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಕೇಳಬೇಕು ಎನ್ನುವಂತಿದೆ. ಈ ಹಾಡಿನ ಎಲ್ಲ ಸಾಲುಗಳು ಬಹಳ ಅರ್ಥಪೂರ್ಣವಾಗಿದೆ. ಕಣ್ಮುಚ್ಚಿ ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡಿನ ಸಾಲುಗಳು ಇಲ್ಲೇ ಇದೆ ಗಮನಿಸಿ.
Wed, 11 Dec 202403:17 AM IST
- ಕನ್ನಡ ಚಿತ್ರರಂಗದಲ್ಲಿ ಸಿನೆಮಾಗಳ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸಗಳು ಆಗಿವೆ. ಭಾರೀ ಬಜೆಟ್‌ನ ಮ್ಯಾಕ್ಸ್ ಹಾಗೂ UI ಚಿತ್ರಗಳ ಬಿಡುಗಡೆ ಭರಾಟೆಯಲ್ಲಿ ಆರು ಕನ್ನಡ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕ ಬದಲಿಸಲಿವೆ.