ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 12, 2024: ರಾಜ್ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Thu, 12 Dec 202403:34 PM IST
ಮನರಂಜನೆ News in Kannada Live:ರಾಜ್ ಕಪೂರ್ ಜನ್ಮ ಶತಮಾನೋತ್ಸವ: ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತೀಯ ಚಿತ್ರರಂಗದ ಶೋಮ್ಯಾನ್ ಕುಟುಂಬ
- ರಾಜ್ ಕಪೂರ್ ಅವರ ಸಾಧನೆಗಳನ್ನು ನೆನಪಿಸಿಕೊಂಡಿರುವ ನರೇಂದ್ರ ಮೋದಿ, ‘ಭಾರತೀಯ ಚಿತ್ರರಂಗಕ್ಕೆ ರಾಜ್ ಕಪೂರ್ ಅವರ ಕೊಡುಗೆ ಅಪಾರ. ಇಂಡಿಯಾ ಎಂಬ ಪದ ಹುಟ್ಟುವುದಕ್ಕೆ ಮೊದಲೇ, ರಾಜ್ ಕಪೂರ್ ಈ ದೇಶದ ಶಕ್ತಿಯನ್ನು ತಮ್ಮ ಚಿತ್ರಗಳ ಮೂಲಕ ತೋರಿಸಿದ್ದರು’ ಎಂದು ಹೇಳಿದ್ದಾರೆ.
Thu, 12 Dec 202402:26 PM IST
ಮನರಂಜನೆ News in Kannada Live:ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ಬರ್ತಿದೆ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ; ಡಿಸೆಂಬರ್ 14ರಿಂದ ಮನೆ ಮನೆಯಲ್ಲೂ ಸಂಗೀತದ ಅಲೆ
- ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರದಿಂದ (ಡಿಸೆಂಬರ್ 14) 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಬಾರಿ ಒಂದು ಹೊಸತನದೊಂದಿದೆ ಈ ರಿಯಾಲಿಟಿ ಶೋ ಮನರಂಜಿಸಲು ಸಿದ್ಧವಾಗಿದೆ.
Thu, 12 Dec 202411:21 AM IST
ಮನರಂಜನೆ News in Kannada Live:ಬಾಲ್ಯದ ಗೆಳೆಯನ ಜತೆ ಕೀರ್ತಿ ಸುರೇಶ್ ಶುಭವಿವಾಹ: ಕಿಟ್ಟಿ ಮದುವೆ ಫೋಟೋಗಳು ವೈರಲ್; ಸೆಲೆಬ್ರಿಟಿಗಳು, ಅಭಿಮಾನಿಗಳಿಂದ ಹಾರೈಕೆಗಳ ಸುರಿಮಳೆ
- Keerthy Suresh marriage photos: ನಟಿ ಕೀರ್ತಿ ಸುರೇಶ್‌ಮತ್ತು ಅವರ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಶುಭವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ವಿವಾಹ ಸಮಾರಂಭ ಮಧುರ ಕ್ಷಣಗಳ ಫೋಟೋಗಳನ್ನು ಕೀರ್ತಿ ಸುರೇಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Thu, 12 Dec 202410:03 AM IST
ಮನರಂಜನೆ News in Kannada Live:ಚಿತ್ರಮಂದಿರದೊಳಗೆ ಬಂದು ಪಬ್ಜಿ ಆಡುವ ಕಾಲೇಜು ಹುಡುಗರ ಕುರಿತು ಎಚ್ಚರವಿರಲಿ; ಸಂತೋಷ್ ಕುಮಾರ್ ಎಲ್‌ಎಂ ಬರಹ
- ಚಿತ್ರತಂಡದವರು ನೀಡುವ ಉಚಿತ ಸಿನಿಮಾ ಟಿಕೆಟ್ ಪಡೆದು ಚಿತ್ರಮಂದಿರದೊಳಗೆ ಬರುವ ಕಾಲೇಜು ಹುಡುಗರು ಸಿನಿಮಾ ನೋಡದೆ ಪಬ್ಜಿ ಆಟದಲ್ಲಿ ಕಳೆದುಹೋಗುತ್ತಿದ್ದಾರೆ. ಇದರ ಬದಲು ಪ್ರಾಮಾಣಿಕವಾಗಿ ವಿಮರ್ಶೆ ಮಾಡುವವರಿಗೆ ಟಿಕೆಟ್ ನೀಡಬಹುದು ಎಂದು ಸಂತೋಷ್ ಕುಮಾರ್ ಎಲ್‌ಎಂ ಅಭಿಪ್ರಾಯಪಟ್ಟಿದ್ದಾರೆ.
Thu, 12 Dec 202407:57 AM IST
ಮನರಂಜನೆ News in Kannada Live:Rajinikanth birthday: ಸೂಪರ್‌ಸ್ಟಾರ್ ರಜನಿಕಾಂತ್ ಬ್ಲಾಕ್‌ಬಸ್ಟರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ; 2.0ನಿಂದ ಕಬಾಲಿ ತನಕ
Rajinikanth 74th birthday: ಇಂದು ಸೂಪರ್‌ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ. ರಜನಿಕಾಂತ್ ನಟನೆಯ ಬಹುತೇಕ ಸಿನಿಮಾಗಳು ಸೂಪರ್‌ಹಿಟ್ ಆಗಿವೆ. ಅವುಗಳಲ್ಲಿ ಕೆಲವು ಸಿನಿಮಾಗಳಂತೂ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡಮಟ್ಟದ ದಾಖಲೆ ಬರೆದಿವೆ. ಭಾರತ ಮಾತ್ರವಲ್ಲದೆ ಜಾಗತಿಕ ಬಾಕ್ಸ್‌ಆಫೀಸ್‌ನಲ್ಲೂ ರಜನಿಕಾಂತ್ ಸಿನಿಮಾಗಳು ಧೂಳೆಬ್ಬಿಸಿವೆ.
Thu, 12 Dec 202407:13 AM IST
ಮನರಂಜನೆ News in Kannada Live:Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ? ಕಪೋಲಕಲ್ಪಿತ ಸುದ್ದಿ ಕೇಳಿ ಕೋಪಗೊಂಡ ಸಹಜ ಸುಂದರಿ
- Sai Pallavi Vegetarian: ನಿತೀಶ್ ತಿವಾರಿ ನಿರ್ದೇಶನದ ಮುಂಬರುವ ರಾಮಾಯಣ ಸಿನಿಮಾದಲ್ಲಿ ಸೀತಾಮಾತೆ ಪಾತ್ರದಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಕುರಿತು ಹೊಸ ವದಂತಿ ಹರಡಿದೆ. ಈ ಕುರಿತು ಸ್ವತಃ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಾಯಿ ಪಲ್ಲವಿ ಸಸ್ಯಹಾರಿಯಾಗಿದ್ದಾರೆ ಎಂಬ ಸುದ್ದಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Thu, 12 Dec 202406:51 AM IST
ಮನರಂಜನೆ News in Kannada Live:ತರುಣ್ ಸುಧೀರ್ ನಿರ್ಮಾಣದ ಹೊಸ ಸಿನಿಮಾ ಘೋಷಣೆ; ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ
- ತರುಣ್ ಸುದೀರ್ ಇದೀಗ ತಮ್ಮ ನಿರ್ಮಾಣದಲ್ಲಿ ಬರಲಿರುವ ಹೊಸ ಸಿನಿಮಾದ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
Thu, 12 Dec 202406:24 AM IST
ಮನರಂಜನೆ News in Kannada Live:Annayya Serial: ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸಿಕೊಡು ಎಂದು ಕೇಳಿದ ಪಾರು; ಮಾತು ಕೇಳಿ ಕಂಗಾಲಾಗಿ ನಿಂತ ಶಿವು
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತುಂಬಾ ದುಃಖದಲ್ಲಿದ್ದಾಳೆ. ಅವಳ ನೋವನ್ನು ನೋಡಲಾಗದೇ ಶಿವು ಕೊರಗುತ್ತಿದ್ದಾನೆ. ಆದರೆ ತಂಗಿಯರಿಗೆ ಇದ್ಯಾವುದರ ಸುಳಿವೇ ಇಲ್ಲ. ಅವರಿಗೆ ಆಶ್ಚರ್ಯವಾಗಿದೆ. ಅಣ್ಣನನ್ನು ಪ್ರಶ್ನೆ ಮಾಡುತ್ತಿದ್ದಾರೆ.
Thu, 12 Dec 202405:47 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಚೈತ್ರಾ ಕುಂದಾಪುರ; ಇಷ್ಟಕ್ಕೆಲ್ಲ ಕಾರಣ ಗೌತಮಿ
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಕ್ಯಾಪ್ಟನ್ ಆಗುವ ಬಯಕೆ ಎಲ್ಲರಲ್ಲೂ ಹೆಚ್ಚಾಗುತ್ತಿದೆ. ತನಗೆ ಮೋಸ ಆಗುತ್ತಿದೆ ಎಂದು ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದಾರೆ. ಗೌತಮಿ ಆಟ ಆಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.
Thu, 12 Dec 202404:59 AM IST
ಮನರಂಜನೆ News in Kannada Live:Baby John Trailer: ಬೇಬಿ ಜಾನ್ ಟ್ರೇಲರ್‌ನಲ್ಲಿ ಅಬ್ಬರಿಸಿದ ವರುಣ್ ಧವನ್; ಖಡಕ್ ಲುಕ್‌ನಲ್ಲಿ ಜಾಕಿ ಶ್ರಾಫ್
- ವರುಣ್ ಧವನ್ ಅಭಿನಯದ ಹೊಸ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಖಡಕ್ ಲುಕ್‌ನಲ್ಲಿ ಜಾಕಿ ಶ್ರಾಫ್ ಕಾಣಿಸಿಕೊಂಡಿದ್ದಾರೆ. ಕೀರ್ತು ಸುರೇಶ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವರುಣ್ ಧವನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Thu, 12 Dec 202403:48 AM IST
ಮನರಂಜನೆ News in Kannada Live:ಕಲರ್ಸ್ ವಾಹಿನಿಯಲ್ಲಿ ನಗೆಗಡಲು -ಮತ್ತೆ ಬರ್ತಿದೆ ಮಜಾ ಟಾಕೀಸ್; ವರಲಕ್ಷ್ಮೀ ಇಲ್ಲ ಅಂದ್ರೆ ಮಜಾನೇ ಇಲ್ಲ ಎಂದ ವೀಕ್ಷಕರು
- ಅಪರ್ಣಾ ಒನ್ ಅಂಡ್ ಓನ್ಲಿ ವರಲಕ್ಷ್ಮಿಯಾಗಿ ನಟಿಸುತ್ತಿದ್ದ ಮಜಾ ಟಾಕೀಸ್ ಇದೀಗ ಇನ್ನೊಮ್ಮೆ ಕಿರುತೆರೆಗೆ ಅಪ್ಪಳಿಸಲಿದ್ದು, ಅಭಿಮಾನಿಗಳು ವರಲಕ್ಷ್ಮಿಯನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಸಹಜ ಎಂಬಂತೆ ಪ್ರೋಮೋದಲ್ಲೇ ಹೊರಬಿದ್ದಿದೆ.
Thu, 12 Dec 202403:24 AM IST
ಮನರಂಜನೆ News in Kannada Live:ಒಂದೇ ವಾರದಲ್ಲಿ ಸಾವಿರ ಕೋಟಿ ಕ್ಲಬ್ ಸೇರಿ ಹೊಸ ದಾಖಲೆ ಬರೆದ ಪುಷ್ಪ 2; ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಸಿನಿಮಾ
- ಬಿಡುಗಡೆಗೂ ಮೊದಲೇ ‘ಪುಷ್ಪ 2’ ಚಿತ್ರವು ವಿತರಣೆ, ಡಿಜಿಟಿಲ್, ಸ್ಯಾಟಲೈಟ್ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿತ್ತು. ಇದೀಗ ಬಿಡುಗಡೆಯಾದ ಮೊದಲ ವಾರದಲ್ಲಿ ಸಾವಿರ ಕೋಟಿ ಕ್ಲಬ್ ಸೇರುವ ಮೂಲಕ, ಅಲ್ಲು ಅರ್ಜುನ್ ನಟನೆಯ ಸಿನಿಮಾ ಹೊಸ ದಾಖಲೆ ನಿರ್ಮಿಸಿದೆ. (ವರದಿ: ಚೇತನ್ ನಾಡಿಗೇರ್)
Thu, 12 Dec 202403:08 AM IST
ಮನರಂಜನೆ News in Kannada Live:Rajinikanth Birthday: ರಜನಿಕಾಂತ್ ಜನ್ಮದಿನ; 74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್
- 74ನೇ ವರ್ಷಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಪ್ರತಿವರ್ಷವೂ ಸಂಭ್ರಮದಿಂದ ಅವರ ಜನ್ಮದಿನವನ್ನು ಆಚರಿಸುತ್ತಾ ಶುಭಾಶಯ ಕೋರುತ್ತಾರೆ.
Thu, 12 Dec 202402:48 AM IST
ಮನರಂಜನೆ News in Kannada Live:'UI' ಚಿತ್ರಕ್ಕೆ ಬಾಲಿವುಡ್‌ನಿಂದ ಬಂತು ಶುಭಹಾರೈಕೆ; ನಾನು ಉಪೇಂದ್ರ ಅಭಿಮಾನಿ ಎಂದ ಆಮೀರ್ ಖಾನ್
- ಉಪೇಂದ್ರ ಬಹಳ ಚೆನ್ನಾಗಿ ಟ್ರೇಲರ್ ಮಾಡಿದ್ದೀರಾ. ಇದು ದೊಡ್ಡ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಹಿಂದಿ ಪ್ರೇಕ್ಷಕರು ಸಹ ಈ ಚಿತ್ರವನ್ನು ಇಷ್ಟಪಡುತ್ತಾರೆ ಎಂಬ ನಂಬಿಕೆ ಇದೆ. ನನಗೆ ಟ್ರೇಲರ್ ನೋಡಿದಾಗ ನಿಜಕ್ಕೂ ಶಾಕ್ ಆಯ್ತು. ಅದ್ಭುತ ಟ್ರೇಲರ್ ಎಂದು ಉಪೇಂದ್ರರನ್ನು ಅಪ್ಪಿಕೊಂಡು ಬಾಲಿವುಡ್ ನಟ ಆಮೀರ್ ಖಾನ್ 'UI' ಚಿತ್ರಕ್ಕೆ ಶುಭಾಶಯ ಹೇಳಿದ್ದಾರೆ.
Thu, 12 Dec 202401:56 AM IST
ಮನರಂಜನೆ News in Kannada Live:UI Movie: ನಟ ಉಪೇಂದ್ರ ಸಿನಿಮಾ ಚೌಕಟ್ಟಿದು, ಬುದ್ಧಿವಂತ ನಿರ್ದೇಶಕ ಅಂದ್ರೆ ಇದೇ-ಇಷ್ಟೇ ಅಲ್ಲವಾ?
- ಉಪೇಂದ್ರ ಅಂದರೆ ಕಮರ್ಷಿಯಲ್ ಪ್ರವಚನಕಾರ. ಹಾಡು, ದೃಶ್ಯಗಳು, ಸಂಭಾಷಣೆ ಮೂಲಕ ಹೇಳಿದ್ದನ್ನೇ ಹೇಳುತ್ತಾ ಹತ್ತು ವರ್ಷಗಳಿಗೊಮ್ಮೆ ಜನರ ಮುಂದೆ ಬರುವವರು. ಚೆನ್ನಾಗಿದ್ದರೆ ಸಿನಿಮಾ ಗೆಲ್ಲಲೇಬೇಕು. ಆದರೆ ಮತ್ತೆ ಅದೇ ಸೈಕಾಲಜಿ, ಪೊಲಿಟಿಕಲ್ ಸೈನ್ಸ್, ಸೋಷಿಯಾಲಜಿ, ರಜನೀಶ್ ಅಂತ ಕಥೆ ತಂದರೋ ಅಲ್ಲಿಗೆ ಅದೇ ಸೇಮ್ ಓಲ್ಡ್ ಉಪೇಂದ್ರ ಅಂತ ಫಿಕ್ಸ್ ಆಗುತ್ತೆ. ಬರಹ: ನೀಲ ಮಾಧವ