Entertainment News in Kannada Live December 13, 2024: Annayya Serial: ಅಣ್ಣನ ಮಾತು ಕೇಳಿ ಬೇಸರಗೊಂಡ ತಂಗಿಯರು; ಇಷ್ಟಕ್ಕೆಲ್ಲ ಕಾರಣ ಪಾರು ನಿರ್ಧಾರ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 13 Dec 202405:43 PM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ತಾನು ಕಲಿಯಲು ವಿದೇಶಕ್ಕೆ ಹೋಗಬೇಕು ಎಂದು ಅಂದುಕೊಳ್ಳುತ್ತಾ ಇದ್ದಾಳೆ. ಆ ಆಸೆಯನ್ನು ಶಿವು ಬಳಿ ಹೇಳಿಕೊಂಡಿದ್ದಾಳೆ. ಆದರೆ ಶಿವು ತಲೆಕೆಡಿಸಿಕೊಂಡಿದ್ದಾನೆ. ಅವಳನ್ನು ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾನೆ.
Fri, 13 Dec 202405:24 PM IST
- Prakash Raj On Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಸೇರಿ ಎಲ್ಲ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಈ ಬೆನ್ನಲ್ಲೇ ದರ್ಶನ್‌ಗೆ ಬೇಲ್ ಸಿಗ್ತಿದ್ದಂತೆ, ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
Fri, 13 Dec 202401:34 PM IST
- Paatal Lok Season 2 First Poster: ಹಿಂದಿಯಲ್ಲಿ ಪಾತಾಳ್ ಲೋಕ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ವೆಬ್‌ಸಿರೀಸ್‌ಗಳಲ್ಲೊಂದು. ಮೊದಲ ಸಿರೀಸ್ ಮುಗಿದ ಬಳಿಕ, ಎರಡನೇ ಸೀಸನ್ ಯಾವಾಗ ಎಂಬ ಪ್ರಶ್ನೆ ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದರೂ, ಮೇಕರ್ಸ್ ಕಡೆಯಿಂದ ಉತ್ತರ ಸಿಕ್ಕಿರಲಿಲ್ಲ. ಇದೀಗ ಸದ್ದಿಲ್ಲದೆ ಎರಡನೇ ಸೀಸನ್ ಘೋಷಣೆ ಮಾಡಿದ್ದಾರೆ.
Fri, 13 Dec 202401:04 PM IST
- Allu Arjun's Arrest In Stampede Case: ಅಲ್ಲು ಅರ್ಜುನ್ ಬಂಧನ ಘಟನೆಗೆ ಸಂಬಂಧಪಟ್ಟಂತೆ ಪುಷ್ಪ 2 ನಟಿ ರಶ್ಮಿಕಾ ಮಂದಣ್ಣ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ದುರದೃಷ್ಟಕರ ಮತ್ತು ತೀವ್ರ ದುಃಖಕರವಾಗಿದೆ. ಎಲ್ಲದಕ್ಕೂ ಒಬ್ಬನೇ ವ್ಯಕ್ತಿಯನ್ನು ದೂಷಿಸುವುದನ್ನು ನೋಡಲು ದುಃಖವಾಗುತ್ತದೆ ಎಂದು ರಶ್ಮಿಕಾ ಅಭಿಪ್ರಾಯಪಟ್ಟಿದ್ದಾರೆ.
Fri, 13 Dec 202412:32 PM IST
- Allu Arjun: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿನ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
Fri, 13 Dec 202411:25 AM IST
- KD – The Devil: ಪ್ರೇಮ್ ನಿರ್ದೇಶನದ ಕೆಡಿ ದಿ ಡೆವಿಲ್ ಸಿನಿಮಾವು ಅಂದುಕೊಂಡಂತೆ ಆಗಿದ್ದರೆ, ಈ ಡಿಸೆಂಬರ್ ತಿಂಗಳಲ್ಲಿಯೇ ಬಿಡುಗಡೆಯಾಗಬೇಕಿತ್ತು. ಆಆದರೆ, ಈಗ ಚಿತ್ರತಂಡ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಮಾಡುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆ ಕುರಿತು ಮಾಹಿತಿ ದೊರಕಿದೆ.
Fri, 13 Dec 202411:02 AM IST
- ಸಂದ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ಸಿನಿಮಾ ವೇಳೆ ಘಟಿಸಿದ ಕಾಲ್ತುಳಿತ ದುರಂತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ಅಲ್ಲು ಅರ್ಜುನ್‌ಗೆ 14 ದಿನಗಳ ನಾಯ್ಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
Fri, 13 Dec 202410:41 AM IST
- ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶಿಸಿದೆ. ಈ ಬೆನ್ನಲ್ಲೇ, ರೇಣುಕಾಸ್ವಾಮಿ ಅವರ ತಂದೆ ಶಿವನಗೌಡ್ರು, ಚಿತ್ರದುರ್ಗದಲ್ಲಿ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Fri, 13 Dec 202410:27 AM IST
- Miss You Movie Review: ವ್ಯತಿರಿಕ್ತ ವ್ಯಕ್ತಿತ್ವದ ಇಬ್ಬರ ಪ್ರೀತಿ ಹೇಗಿರುತ್ತದೆ? ಎಂದು ತಿಳಿಯಲು ಸಿದ್ಧಾರ್ಥ್ ಮತ್ತು ಆಶಿಕಾ ರಂಗನಾಥ್ ನಟನೆಯ ಮಿಸ್ ಯೂ ಸಿನಿಮಾ ನೋಡಬಹುದು. ಆಧುನಿಕ ಕಾಲದ ಪ್ರೀತಿಯ ಸಮಸ್ಯೆಗೆ ಇಲ್ಲಿ ಹಳೆ ಕಾಲದ ಪರಿಹಾರವನ್ನು ಅತ್ಯಂತ ಸೊಗಸಾಗಿ ನೀಡಲಾಗಿದೆ.
Fri, 13 Dec 202409:42 AM IST
- ಪುಷ್ಪ 2 ಸಿನಿಮಾದಲ್ಲಿ ಗಂಗಮ್ಮ ಜಾತ್ರೆ ಸನ್ನಿವೇಷದಲ್ಲಿ ಅಲ್ಲು ಅರ್ಜುನ್ ಸೀರೆಯುಟ್ಟಿರುವ ದೃಶ್ಯ ವೈರಲ್ ಆಗಿದೆ. ಇನ್ನು ಸಿನಿಮಾ ನೋಡಲು ಬಂದ ಅಭಿಮಾನಿಗಳೂ ಸಹ ಕೆಲವೆಡೆ ಸೀರೆಯುಟ್ಟು ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Fri, 13 Dec 202409:28 AM IST
- Pushpa 2 Box Office Day 8: ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಕಳೆದ 8 ದಿನದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯು 1,067 ಕೋಟಿ ರೂಗೆ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 1500 ಕೋಟಿ ರೂಪಾಯಿ ಕ್ಲಬ್‌ಗೆ ಸೇರುವ ಸಾಧ್ಯತೆಯಿದೆ. ಭಾರತದಲ್ಲಿ ದಂಗಲ್ ಸಿನಿಮಾವು 2,070.3 ಕೋಟಿ ರೂಪಾಯಿ ಗಳಿಸಿತ್ತು.
Fri, 13 Dec 202407:38 AM IST
- ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಕಾರಣ ಈ ಹಿಂದೆ ಆದ ಘಟನೆ. ಪುಷ್ಪ ದಿ ರೂಲ್ ಚಿತ್ರದ ಪ್ರದರ್ಶನದ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಕ್ಕಿ ಮೃತರಾಗಿದ್ದರು. ಅದೇ ಪ್ರಕರಣದಲ್ಲಿ ಬಂಧಿಸಲಾಗಿದೆ ಎನ್ನಲಾಗುತ್ತಿದೆ.
Fri, 13 Dec 202407:06 AM IST
- Dinakar Thoogudeepa Movie: ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಸಿನಿಮಾ 2025ರ ಜನವರಿ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ದಿನಕರ್ ನಿರ್ದೇಶನದಲ್ಲಿ ಮತ್ತು ವಿರಾಟ್ ಅಭಿನಯದಲ್ಲಿ ಜಯಣ್ಣ, ‘ರಾಯಲ್’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸಂಜನಾ ಆನಂದ್ ನಾಯಕಿ. (ವರದಿ: ಚೇತನ್ ನಾಡಿಗೇರ್)
Fri, 13 Dec 202406:44 AM IST
- ಜೀ ಕನ್ನಡ ವಾಹಿನಿಯಲ್ಲಿ ಇದೇ ಭಾನುವಾರದಿಂದ (ಡಿಸೆಂಬರ್ 14) 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಬಾರಿ ಒಂದು ಹೊಸತನದೊಂದಿದೆ ಈ ರಿಯಾಲಿಟಿ ಶೋ ಮನರಂಜಿಸಲು ಸಿದ್ಧವಾಗಿದೆ.
Fri, 13 Dec 202406:35 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 12ರ ಎಪಿಸೋಡ್‌ನಲ್ಲಿ ಸಿದ್ದೇಗೌಡ-ಭಾವನಾ ಇಬ್ಬರೂ ಶ್ರೀನಿವಾಸ್‌ಗೆ ಹುಟ್ಟುಹಬ್ಬದ ಶುಭ ಕೋರಲು ಬರುತ್ತಾರೆ. ಭಾವನಾ ಅಪ್ಪನಿಗೆ ವಾಚ್ ಗಿಫ್ಟ್ ಮಾಡುತ್ತಾಳೆ. ಸಿದ್ದು ಕೂಡಾ ಮಾವನಿಗೆ ಬರ್ತ್‌ಡೇ ಶುಭ ಕೋರುತ್ತಾನೆ.
Fri, 13 Dec 202405:29 AM IST
- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಭಯದಿಂದಲೇ ತನ್ನ ಜೀವನ ನಡೆಸುತ್ತಿದ್ದಾಳೆ. ಅವಳಿಗೆ ರುಕ್ಕು ಬಗ್ಗೆ ಅನುಮಾನ ಆರಂಭವಾಗಿದೆ. ತಾನೇ ಅವಳ ತಂದೆ, ತಾಯಿಯನ್ನು ಕೊಂದೆ ಎಂಬ ವಿಚಾರ ಗೊತ್ತಾಗಿದೆ ಎಂದುಕೊಂಡಿದ್ದಾಳೆ.
Fri, 13 Dec 202404:49 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 12ರ ಎಪಿಸೋಡ್‌ನಲ್ಲಿ ಸುನಂದಾಳನ್ನು ಬಿಡಿಸಲು ನನ್ನ ಕಂಡಿಷನ್‌ಗೆ ಒಪ್ಪುವಂತೆ ತಾಂಡವ್ ಹೇಳುತ್ತಾನೆ. ಅದೇ ಸಮಯಕ್ಕೆ ಭಾಗ್ಯಾ ಮೊಬೈಲ್‌ಗೆ ಬರುವ ಮೆಸೇಜ್‌ವೊಂದು ಅವಳ ಮಾತಿನ ಧಾಟಿಯನ್ನೇ ಬದಲಿಸುತ್ತದೆ. ಭಾಗ್ಯಾ ಮುಖದ ಮೇಲೆ ಆದ ಬದಲಾವಣೆ ಕಂಡು ತಾಂಡವ್‌ಗೆ ಆಶ್ಚರ್ಯವಾಗುತ್ತದೆ.
Fri, 13 Dec 202404:05 AM IST
- Rakshit Shetty Upcoming Movies: ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರೋದ್ಯಮ ಮತ್ತು ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಈ ನಡುವೆ ರಿಚರ್ಡ್ ಆಂಟನಿ, ಮಿಡ್‌ವೇ ಟು ಮೋಕ್ಷ, ಮತ್ತು ಪುಣ್ಯಕೋಟಿ ಸಿನಿಮಾಗಳ ಬಗ್ಗೆಯೂ ಟೊರೆಂಟೋದಲ್ಲಿ ಕನ್ನಡ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ.
Fri, 13 Dec 202403:15 AM IST
- ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಲಿದೆ. 2011ರಲ್ಲಿ ‘ಸಂಜು ವೆಡ್ಸ್ ಗೀತಾ' ಸಿನಿಮಾ ರಿಲೀಸ್ ಆಗಿತ್ತು. ಈ ಬಾರಿ ಶ್ರೀನಗರ ಕಿಟ್ಟಿ ಜೊತೆ ಜೋಡಿಯಾಗಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Fri, 13 Dec 202402:32 AM IST
- ಶಿವರಾಜ್ ಕುಮಾರ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ‘ಭೈರತಿ ರಣಗಲ್' ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಿಸಲು ಕಾದವರಿಗೆ ಇಲ್ಲಿದೆ ಗುಡ್ ನ್ಯೂಸ್. ಇದೇ ತಿಂಗಳು ನೀವು ನಿಮ್ಮ ಮನೆಯಲ್ಲೇ ಕೂತು ಈ ಸಿನಿಮಾ ನೋಡಬಹುದು.