Entertainment News in Kannada Live December 26, 2024: Singham Again OTT: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಸಿಂಗಂ ಅಗೇನ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 26, 2024: Singham Again Ott: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಸಿಂಗಂ ಅಗೇನ್‌ ಸಿನಿಮಾ

Singham Again OTT: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಸಿಂಗಂ ಅಗೇನ್‌ ಸಿನಿಮಾ

Entertainment News in Kannada Live December 26, 2024: Singham Again OTT: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಸಿಂಗಂ ಅಗೇನ್‌ ಸಿನಿಮಾ

01:58 PM ISTDec 26, 2024 07:28 PM HT Kannada Desk
  • twitter
  • Share on Facebook
01:58 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 26 Dec 202401:58 PM IST

ಮನರಂಜನೆ News in Kannada Live:Singham Again OTT: ಕೆಲವೇ ಗಂಟೆಗಳಲ್ಲಿ ಈ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಸಿಂಗಂ ಅಗೇನ್‌ ಸಿನಿಮಾ

  • Singham Again OTT Release Date: ಬಾಲಿವುಡ್‌ನ ಬಹುತಾರಾಗಣದ ಸಿಂಗಂ ಅಗೇನ್‌ ಸಿನಿಮಾ ಇನ್ನೇನು ಕೆಲವೇ ಗಂಟೆಗಳಲ್ಲಿ ಒಟಿಟಿಗೆ ಆಗಮಿಸಲಿದೆ. ರೋಹಿತ್‌ ಶೆಟ್ಟಿ ನಿರ್ದೇಶನದ ಈ ಸಿನಿಮಾ, ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್‌ 1ರಂದು ಬಿಡುಗಡೆ ಆಗಿತ್ತು. ಆದರೆ, ನಿರೀಕ್ಷೆ ಮಟ್ಟ ತಲುಪುವಲ್ಲಿ ವಿಫಲವಾಗಿತ್ತು. ಈಗ ಎರಡು ತಿಂಗಳ ಬಳಿಕ ಒಟಿಟಿಯತ್ತ ಮುಖ ಮಾಡಿದೆ.
Read the full story here

Thu, 26 Dec 202401:51 PM IST

ಮನರಂಜನೆ News in Kannada Live:South Movies: ದಕ್ಷಿಣ ಭಾರತದ 2025ರ ಬಹುನಿರೀಕ್ಷಿತ ಸೀಕ್ವೆಲ್‌ಗಳು; ಕಾಂತಾರ ಚಾಪ್ಟರ್‌ 1ರಿಂದ ಅಖಂಡ 2 ತನಕ

  • Most-awaited South sequel Movies of 2025: ಮುಂದಿನ ವರ್ಷ ದಕ್ಷಿಣ ಭಾರತದ ಹಲವು ಸೀಕ್ವೆಲ್‌ ಸಿನಿಮಾಗಳಿಗಾಗಿ ಸಿನಿಮಾ ಜಗತ್ತು ಕಾತರದಿಂದ ಕಾಯುತ್ತಿದೆ. ಅವುಗಳಲ್ಲಿ ಕರ್ನಾಟಕದ ರಿಷಬ್‌ ಶೆಟ್ಟಿಯ ಕಾಂತಾರ ಚಾಪ್ಟರ್‌ 1 ಪ್ರಮುಖ ಸಿನಿಮಾ ಎಂದರೂ ತಪ್ಪಾಗದು.
Read the full story here

Thu, 26 Dec 202412:23 PM IST

ಮನರಂಜನೆ News in Kannada Live:ಕಿಚ್ಚ ಸುದೀಪ್‌ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೀನಿ ಎಂದು ಮನೆ ಬಿಟ್ಟು ಓಡಿಬಂದಿದ್ದ ವ್ಯಕ್ತಿಯೀಗ ಸಿನಿಮಾ ನಿರ್ದೇಶಕ

  • ಕುಡ್ಲ ನಮ್ದು ಊರು ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆ ಆಗಿವೆ. ಕಿಚ್ಚ ಸುದೀಪ್‌ ಅವರ ಅಭಿಮಾನಿಯಾಗಿರುವ ದುರ್ಗಾಪ್ರಸಾದ್‌, ಈ ಸಿನಿಮಾ ನಿರ್ಮಾಣ, ನಿರ್ದೇಶನ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇನ್ನೇನು ಜನವರಿ, ಫೆಬ್ರವರಿಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. 
Read the full story here

Thu, 26 Dec 202411:26 AM IST

ಮನರಂಜನೆ News in Kannada Live:ಆ ಒಂದು ಸಾವು ನನ್ನ ಎಲ್ಲ ಮಂಗಾಟಗಳಿಗೆ ಬ್ರೇಕ್‌ ಹಾಕಿತ್ತು; ಸೀತಾ ರಾಮ ಸೀರಿಯಲ್‌ ಮೇಘಶ್ಯಾಮ್‌ ಪಾತ್ರಧಾರಿ ನಾಗಾರ್ಜುನ್‌ ಸಂದರ್ಶನ

  • ಸಂದರ್ಶನ ಪದ್ಮಶ್ರೀ ಭಟ್‌: ಸೀತಾರಾಮ, ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ನಟ ನಾಗಾರ್ಜುನ ಬಿಆರ್‌ ಅವರು ಕಿಚ್ಚ ಸುದೀಪ್‌ ಜೊತೆಗೆ ಮ್ಯಾಕ್ಸ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗಿನ ನಟನಾ ಜರ್ನಿಯನ್ನು ಮೆಲುಕು ಹಾಕುತ್ತ ಮ್ಯಾಕ್ಸ್‌ ಚಿತ್ರದ ವಿಶೇಷತೆ ಬಗ್ಗೆಯೂ ಮಾತನಾಡಿದ್ದಾರೆ.
Read the full story here

Thu, 26 Dec 202410:41 AM IST

ಮನರಂಜನೆ News in Kannada Live:Year End 2024: ಸ್ಯಾಂಡಲ್‌ವುಡ್‌ನಲ್ಲಿ ಗೆದ್ದಿದ್ದು ಬೆರಳೆಣಿಕೆ ಚಿತ್ರಗಳು ಮಾತ್ರ, ಸೋಲಿನದ್ದೇ ಮೈಲುಗೈ! ನಾಯಕ ನಟರ ವಾರ್ಷಿಕ ಫಲ

  • ಸ್ಯಾಂಡಲ್‌ವುಡ್‌ ಪಾಲಿಗೆ 2024 ಹೇಳಿಕೊಳ್ಳುವಂಥ ವರ್ಷವಾಗಿಲ್ಲ. ಬೆರಳೆಣಿಕೆ ಸಿನಿಮಾಗಳು ಮಾತ್ರ ಈ ವರ್ಷ ಗೆಲುವಿನ ನಗೆ ಬೀರಿದರೆ, ಮಿಕ್ಕಿದ್ದೆಲ್ಲವೂ ಮುಗ್ಗರಿಸಿವೆ. ಶತಕೋಟಿ ಗಳಿಕೆ ಕಂಡ ಸಿನಿಮಾಗಳು ಇಲ್ಲವೇ ಇಲ್ಲ. ಸಾಲು ಸಾಲು ಸ್ಟಾರ್‌ ನಟರು ಚಿತ್ರಮಂದಿರಕ್ಕೆ ಆಗಮಿಸಿದರೂ, ಅವರಿಂದಲೂ ಮ್ಯಾಜಿಕ್‌ ನಡೆಯಲಿಲ್ಲ. ಹಾಗಾದರೆ, ಈ ಸಲ ಗೆದ್ದವರು ಮತ್ತು ಸೋತವರು ಯಾರು? 
Read the full story here

Thu, 26 Dec 202409:31 AM IST

ಮನರಂಜನೆ News in Kannada Live:Lakshmi Baramma Serial: ಮತ್ತೆ ಮನೆ ಬಿಟ್ಟು ಹೋದ ಕೀರ್ತಿ; ಲಕ್ಷ್ಮೀ, ವೈಷ್ಣವ್ ಬದುಕಲ್ಲಿ ಆಟ ಆಡ್ತಿದ್ದಾಳಾ ಈ ಹುಡುಗಿ?

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸುಪ್ರಿತಾಗೆ ಕೀರ್ತಿ ನಡವಳಿಕೆ ಮೇಲೆ ಅನುಮಾನ ಬಂದಿದೆ. ಅವಳು ಬೇಕು ಎಂದೇ ನಾಟಕ ಮಾಡುತ್ತಿದ್ದಾಳೆ ಎಂದು ಅವಳಿಗನಿಸಿದೆ. ಈ ವಿಚಾರವನ್ನು ಲಕ್ಷ್ಮೀ ಹತ್ತಿರ ಹಂಚಿಕೊಂಡಿದ್ದಾಳೆ. 
Read the full story here

Thu, 26 Dec 202409:24 AM IST

ಮನರಂಜನೆ News in Kannada Live:ಬಾಸಿಸಂ ಕಾಲ ಮುಗೀತು, ಮ್ಯಾಕ್ಸ್‌ ಮ್ಯಾಕ್ಸಿಮಮ್‌ ಕಾಲ ಶುರುವಾಯ್ತು; ಕಿಚ್ಚನ ಬಳಗದಿಂದ ಪರೋಕ್ಷವಾಗಿ ದರ್ಶನ್‌ ಹೆಸರು ಮುನ್ನೆಲೆಗೆ!

  • ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಡಿ. 25ರಂದು ಬಿಡುಗಡೆ ಆಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ.  ಈ ನಡುವೆ ಕಿಚ್ಚನ ಆಪ್ತ ಬಳಗ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ. ಆ ಕೇಕ್‌ ಫೋಟೋ ಇದೀಗ ವೈರಲ್‌ ಆಗಿದ್ದು, ಕೇಕ್‌ ಮೇಲೆ ಬಾಸಿಸಂ ಕಾಲ ಮುಗೀತು, ಮ್ಯಾಕ್ಸ್‌ ಮ್ಯಾಕ್ಸಿಮಮ್‌ ಕಾಲ ಶುರುವಾಯ್ತು ಎಂದು ಬರೆದಿದೆ. ಈ ಮೂಲಕ ದರ್ಶನ್‌ ಹೆಸರು ಮುನ್ನೆಲೆಗೆ ಬಂದಿದೆ. 
Read the full story here

Thu, 26 Dec 202409:06 AM IST

ಮನರಂಜನೆ News in Kannada Live:ಸ್ಮಗ್ಲರ್‌ ಪಾತ್ರದಲ್ಲಿ ವಿಜೃಂಭಿಸಿದ ನಟನಿಗೆ ರಾಷ್ಟ್ರಪ್ರಶಸ್ತಿ, ಜೈಭೀಮ್‌ಗೆ ಸಿಗಲೇ ಇಲ್ಲ ಸೂಕ್ತ ಮನ್ನಣೆ; ಖೇದ ವ್ಯಕ್ತಪಡಿಸಿದ ಸಚಿವೆ

  • ಸೂರ್ಯ ಅಭಿನಯದ ಜೈ ಭೀಮ್‌ನಂತಹ ವಿಮರ್ಶಕರಿಂದ ಮೆಚ್ಚುಗೆ ಪಡೆದಂತ ಸಿನಿಮಾಗಳಿಗೆ ಯಾವುದೇ ಪ್ರಶಸ್ತಿ ಸಿಗುವುದಿಲ್ಲ. ಆದರೆ ಕಳ್ಳಸಾಗಾಣಿಕೆಯನ್ನೇ ಕೇಂದ್ರವಾಗಿಟ್ಟುಕೊಂಡ ಸಿನಿಮಾದ ನಾಯಕನಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎಂದು ತೆಲಂಗಾಣ ಸಚಿವೆ ಸೀತಕ್ಕ ಟೀಕಿಸಿದ್ದಾರೆ. 
Read the full story here

Thu, 26 Dec 202407:09 AM IST

ಮನರಂಜನೆ News in Kannada Live:ಅಜ್ಜಿ ಮನೆಗೆ ಬಂದ ಖುಷಿಯಲ್ಲಿ ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಮಾತುಕತೆ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಲಲಿತಾದೇವಿ ಮನೆಗೆ ಬರುವ ವಿಚಾರ ಎಲ್ಲರೆದುರು ಹೇಳಿದ ವೀರೇಂದ್ರ. ಶ್ರೀವಲ್ಲಿಯನ್ನು ಮದುಮಗಳಂತೆ ಅಲಂಕರಿಸಿ ವರಲಕ್ಷ್ಮೀ ಮದುವೆ ಮಾತುಕತೆಗೆ ಸುಬ್ಬು ಮನೆಗೆ ಕರೆದುಕೊಂಡ ಹೋದ ಇಂದ್ರಮ್ಮ. ಸುಂದರ–ಕಾಂತಮ್ಮನಿಗೆ ಶ್ರಾವಣಿ ಮದುವೆ ತಪ್ಪಿಸುವುದು ಹೇಗೆ ಎಂಬುದೇ ಚಿಂತೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್‌ 26ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ
Read the full story here

Thu, 26 Dec 202405:54 AM IST

ಮನರಂಜನೆ News in Kannada Live:Annayya Serial: ಅತ್ತಿಗೆ ಮನೆಗೆ ವಾಪಸ್‌ ಬಂದ ಖುಷಿಯಲ್ಲಿದ್ದಾರೆ ಶಿವಣ್ಣನ ತಂಗಿಯರು; ಶಿವು ಪ್ರೀತಿಸಿದ ಹುಡುಗಿ ಯಾರು, ರಾಣಿ ಏನಂದ್ಲು?

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮತ್ತೆ ಖುಷಿಯ ದಿನಗಳು ಆರಂಭವಾಗಿದೆ. ತಾನು ಈ ಮನೆಯಿಂದ ದೂರ ಹೋಗ್ತೀನಿ ಎಂದಿದ್ದ ಪಾರು ಮತ್ತೆ ಮನೆಗೆ ಮರಳಿದ್ದಾಳೆ. ಅವಳು ಮನೆಗೆ ಬಂದಿರುವುದು ಎಲ್ಲರಿಗೂ ಖುಷಿ ತಂದಿದೆ. 
Read the full story here

Thu, 26 Dec 202405:36 AM IST

ಮನರಂಜನೆ News in Kannada Live:ಜೈಭೀಮ್‌ ನಂತಹ ಜನಮನ್ನಣೆಯ ಚಿತ್ರಕ್ಕೆ ಸಿಗದ ರಾಷ್ಟ್ರೀಯ ಪುರಸ್ಕಾರ ಪುಷ್ಪ2 ಚಿತ್ರದ ಹೀರೋಗೆ ಸಿಕ್ಕಿರುವ ಸಂದೇಶವೇನು: ತೆಲಂಗಾಣ ಸಚಿವೆ ಪ್ರಶ್ನೆ

  • ತೆಲಂಗಾಣದ ಚಿತ್ರರಂಗದಲ್ಲಿನ ತಲ್ಲಣ ನಿಂತಿಲ್ಲ. ನಟ ಅಲ್ಲು ಅರ್ಜುನ್‌ ಬಂಧನ, ಬಿಡುಗಡೆ ನಂತರ ಹೇಳಿಕೆಗಳು ಮುಂದುವರಿದಿವೆ. ತೆಲಂಗಾಣ ಸಚಿವೆ ಸೀತಕ್ಕ ಅವರು ನಟ ಅಲ್ಲು ಅರ್ಜುನ್‌ ವಿರುದ್ದ ಹಾಗೂ ಪರೋಕ್ಷವಾಗಿ ಕೇಂದ್ರ ಸರ್ಕಾರದ ಮೇಲೆ ಹರಿ ಹಾಯ್ದಿದ್ದಾರೆ.
Read the full story here

Thu, 26 Dec 202405:13 AM IST

ಮನರಂಜನೆ News in Kannada Live:Malayalam Movies 2024: ಮಾಲಿವುಡ್‌ನಲ್ಲಿ ಈ ವರ್ಷ ಬಂಗಾರದ ಬೆಳೆ; ಬಿಡುಗಡೆಯಾದ ಸಿನಿಮಾಗಳೆಲ್ಲ ಚಿನ್ನ! ಆದರೆ..

  • Malayalam Movies 2024: ಮಲಯಾಳಂ ಚಿತ್ರರಂಗ ಈ ವರ್ಷ ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿ ಮಾತ್ರವಲ್ಲದೆ 200 ಕೋಟಿಯ ಗಡಿ ಮುಟ್ಟಿದೆ. 5 ಸಿನಿಮಾಗಳು ಶತ ಶತಕೋಟಿ ಗಳಿಕೆ ಕಂಡರೆ, ಇನ್ನೂ ಕೆಲ ಸಿನಿಮಾಗಳು ಕೋಟಿ ಲೆಕ್ಕದಲ್ಲಿ ಎರಡಂಕಿ  ದಾಟಿವೆ. ಒಟಿಟಿಯಲ್ಲಿಯೂ ಮಾಲಿವುಡ್‌ನದ್ದೇ ಸದ್ದು.
Read the full story here

Thu, 26 Dec 202404:56 AM IST

ಮನರಂಜನೆ News in Kannada Live:ಅತ್ಯಧಿಕ ಸಂಭಾವನೆ ಪಡೆಯುವ ವಿಲನ್ ಯಾರು? ಈ ಕನ್ನಡ ನಟನ ಒಂದು ಸಿನಿಮಾದ ಸಂಪಾದನೆ 200 ಕೋಟಿ ರೂ!

  • ಭಾರತದ ಒಬ್ಬ ನಟ ಸಿನಿಮಾವೊಂದರಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಲು 200 ಕೋಟಿ ರೂ.ಗಳನ್ನು ಪಡೆಯುತ್ತಿದ್ದಾರೆ. ಆ ನಟ ಕನ್ನಡದವರೇ ಆಗಿದ್ದಾರೆ. ಹಾಗಾದ್ರೆ ಆ ನಟ ಯಾರು? ಎಂಬ ಮಾಹಿತಿ ಇಲ್ಲಿದೆ ಗಮನಿಸಿ. 
Read the full story here

Thu, 26 Dec 202402:40 AM IST

ಮನರಂಜನೆ News in Kannada Live:ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಿಸಿದ ಪುಷ್ಪ ಚಿತ್ರತಂಡ; ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ

  • ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ ಪುಷ್ಪ ಸಿನಿಮಾ ತಂಡ 2 ಕೋಟಿ ರೂ. ಪರಿಹಾರ ಘೋಷಿಸಿದೆ. ನಾಯಕ ಅಲ್ಲು ಅರ್ಜುನ್ 1 ಕೋಟಿ, ಸುಕುಮಾರ್ 50 ಲಕ್ಷ ಮತ್ತು ಮೈತ್ರಿ ಮೂವಿ ಮೇಕರ್ಸ್ 50 ಲಕ್ಷ ರೂ. ನೀಡುತ್ತಿದ್ದಾರೆ.
Read the full story here

Thu, 26 Dec 202402:30 AM IST

ಮನರಂಜನೆ News in Kannada Live:ಅಹಂಕಾರ ಎಂದಿಗೂ ಒಳ್ಳೆಯದಲ್ಲ, ಸದ್ಗುಣ ಬೆಳೆಸಿಕೊಂಡ್ರೆ ಒಳ್ಳೆಯದೇ ಆಗತ್ತೆ: ರಾಮಾಚಾರಿ ಧಾರಾವಾಹಿ ನಟಿ ಶಾರದಾ ಸಂದರ್ಶನ

  • ಸಂದರ್ಶನ ಪದ್ಮಶ್ರೀ ಭಟ್: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಗೌರಿಶಂಕರ, ರಾಮಾಚಾರಿ ಧಾರಾವಾಹಿಗಳಲ್ಲಿ ಅಜ್ಜಿ ಪಾತ್ರ ಮಾಡ್ತಿರುವ ನಟಿ ಶಾರದಾ ಇದೀಗ ಮಾತಿಗೆ ಸಿಕ್ಕಿದ್ದಾರೆ. ಬರೀ ನಟನೆ ಮಾತ್ರವಲ್ಲದೆ, ಸೀರಿಯಲ್‌ಗಳ ಕಥೆಗಳು ಮತ್ತು ಪ್ರಸ್ತುತ ಧಾರಾವಾಹಿಗಳ ಬಗ್ಗೆ ಮಾತನಾಡಿದ್ದಾರೆ.
Read the full story here

Thu, 26 Dec 202402:00 AM IST

ಮನರಂಜನೆ News in Kannada Live:Seetha Rama Serial: ಒಂದು ಕರುಳ ಸತ್ಯ, ಇನ್ನೊಂದು ಕರಾಳ ಸತ್ಯ! ಸಿಹಿಯದ್ದು ಕೊಲೆ ಎಂದ ಅಶೋಕ, ಆಪ್ತಮಿತ್ರನ ಮಾತು ನಂಬ್ತಾನಾ ಶ್ರೀರಾಮ?

  • Seetha Rama Serial: ಸೀತಾ ರಾಮ ಸೀರಿಯಲ್‌ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಸಿಹಿಯ ಆಕ್ಸಿಡೆಂಟ್‌ ಹಿಂದೆ ಯಾರದ್ದೋ ಕೈವಾಡವಿದೆ ಎಂದು ರಾಮನ ಮುಂದೆ ಅಶೋಕ್‌ ಹೇಳಿದರೂ, ಅದನ್ನು ರಾಮ್‌ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದು ಕಡೆ ಅಮ್ಮ ಅಮ್ಮ ಎಂದು ಸುಬ್ಬಿಯ ಕನವರಿಕೆ ಮುಂದುವರಿದಿದೆ. ಇನ್ನೇನು ಈ ಸುಬ್ಬಿ ಸೀತಾಳ ಮಡಿಲು ಸೇರ್ತಾಳಾ? ಕಾದು ನೋಡಬೇಕು. 
Read the full story here

Thu, 26 Dec 202401:10 AM IST

ಮನರಂಜನೆ News in Kannada Live:Lakshmi Baramma Serial: ಕಾವೇರಿಗೆ ಜೈಲಿನಲ್ಲಿ ಚಿತ್ರಹಿಂಸೆ; ಐಷಾರಾಮಿ ಜೀವನದ ಬದಲು ಇದೆಂಥಾ ಶಿಕ್ಷೆ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿ ಹಲವು ದಿನಗಳೇ ಕಳೆದಿವೆ. ಆದರೆ ಯಾರೂ ಅವಳನ್ನು ನೋಡಲು ಬಂದಿಲ್ಲ. ಈ ನೋವು ಅವಳನ್ನು ಕಾಡುತ್ತಿದೆ. ಇದಷ್ಟೇ ಅಲ್ಲ ಜೈಲಿನಲ್ಲಿ ಕೆಲವರು ಅವಳಿಗೆ ಕಾಟ ಕೊಡುತ್ತಿದ್ದಾರೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter