Entertainment News in Kannada Live December 28, 2024: Sikandar Teaser: ಸಿಕಂದರ್ ಚಿತ್ರದ ಟೀಸರ್ ಮೂಲಕವೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಟಕ್ಕರ್ ಕೊಟ್ರಾ ಸಲ್ಮಾನ್ ಖಾನ್?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 28 Dec 202403:30 PM IST
- Sikandar Teaser: ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಎ.ಆರ್ ಮುರುಗದಾಸ್ ನಿರ್ದೇಶನದ ಈ ಸಿನಿಮಾ 2025ರ ಈದ್ ಹಬ್ಬದಂದು ರಿಲೀಸ್ ಆಗಲಿದೆ. ಟೀಸರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಲ್ಮಾನ್ ಖಾನ್ ನೇರವಾಗಿ ಕೌಂಟರ್ ಕೊಟ್ಟಿದ್ದಾರಾ ಎಂದು ಹೇಳಲಾಗುತ್ತಿದೆ.
Sat, 28 Dec 202401:07 PM IST
- Shiva Rajkumar: ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್ ಕುಮಾರ್ ಭಾವುಕ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ವರ ಮನೆ ಸದಸ್ಯನಾಗಿದ್ದ ನಾಯಿ ನೀಮೋ ತೀರಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿ ಪತ್ರವೊಂದನ್ನು ಬರೆದಿದ್ದಾರೆ.
Sat, 28 Dec 202412:23 PM IST
- ಸ್ಯಾಂಡಲ್‌ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗೆ ಗುಡ್ ನ್ಯೂಸ್ ನೀಡಿದ್ದಾರೆ. #PMF49 ಚಿತ್ರಕ್ಕಾಗಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಖ್ಯಾತ ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕೈಜೋಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
Sat, 28 Dec 202411:52 AM IST
- ಸಂದರ್ಶನ- ಪದ್ಮಶ್ರೀ ಭಟ್: 'ಕನ್ನಡ ಬಿಗ್ ಬಾಸ್ʼ ಖ್ಯಾತಿಯ ಅಕ್ಷತಾ ಕುಕಿ ಅವರು ವರ್ಷಗಳ ಬಳಿಕ ಸಂದರ್ಶನವನ್ನು ನೀಡಿದ್ದು, ಮದುವೆ ಹೇಗಾಯ್ತು? ಹುಡುಗ ಯಾರು? ವಿದೇಶಿ ಜೀವನ ಹೇಗಿದೆ? ಮುಂದಿನ ಪ್ಲ್ಯಾನ್ ಏನು ಎಂಬ ಬಗ್ಗೆ ಮಾತನಾಡಿದ್ದಾರೆ.
Sat, 28 Dec 202409:50 AM IST
- ಮುಫಾಸಾ: ದಿ ಲಯನ್ ಕಿಂಗ್ ಪ್ರಪಂಚದಾದ್ಯಂತ ಬಿಡುಗಡೆಯಾಗಿದ್ದು ಸಾಕಷ್ಟು ಜನರು ಈಗಾಗಲೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾಗಿ ಒಂದು ವಾರ ಕಳೆದರು ಬಾಕ್ಸ್ ಆಫೀಸ್‌ನಲ್ಲಿ ಸಿಂಬಾ ಘರ್ಜಿಸುತ್ತಲೇ ಇದ್ದಾನೆ.
Sat, 28 Dec 202408:00 AM IST
- ಚಂದನ್ ಶೆಟ್ಟಿ ಹೊಸ ಆಲ್ಬಂ ಸಾಂಗ್ ‘ಕಾಟನ್ ಕ್ಯಾಂಡಿ' ರಿಲೀಸ್ ಆಗಿದೆ. 2024ರ ಅಂತ್ಯದ ವೇಳೆ ಈ ಹಾಡು ಬಿಡುಗಡೆಯಾಗಿದ್ದು ಹೊಸ ವರ್ಷದ ಆರಂಭಕ್ಕೆ ಚಂದನ್ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
Sat, 28 Dec 202406:53 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 28ರ ಎಪಿಸೋಡ್‌ನಲ್ಲಿ ಸಿದ್ದೇಗೌಡನನ್ನು ಯೂತ್ ಪ್ರೆಸಿಡೆಂಟ್ ಸ್ಥಾನಕ್ಕೆ ನಿಲ್ಲಿಸುವಂತೆ ಪಕ್ಷದ ಕಾರ್ಯಕರ್ತರು ಜವರೇಗೌಡ ಬಳಿ ಮನವಿ ಮಾಡುತ್ತಾರೆ. ಆದರೆ ನೀಲು, ರೇಣುಕಾಗೆ ಇದು ಇಷ್ಟವಾಗುವುದಿಲ್ಲ.
Sat, 28 Dec 202406:25 AM IST
- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಎಲ್ಲ ಸತ್ಯ ಗೊತ್ತಾಗಿದೆ. ಜೀ ಕನ್ನಡ ಬಿಡುಗಡೆ ಮಾಡಿದ ಪ್ರೋಮೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾರುವಿನ ನವಿರಾದ ಪ್ರೀತಿಯ ಭಾವನೆ ಎದ್ದು ತೋರುತ್ತಿದೆ.
Sat, 28 Dec 202405:42 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 27ರ ಎಪಿಸೋಡ್‌ನಲ್ಲಿ ಮಗಳ ಸಮಸ್ಯೆಯನ್ನು ಪರಿಹರಿಸುವುದನ್ನು ಬಿಟ್ಟು ತಾಂಡವ್, ಪ್ರಿನ್ಸಿಪಾಲ್‌ಗೆ ಬೈದು ಶ್ರೇಷ್ಠಾಳನ್ನು ನೋಡಲು ಹೋಗುತ್ತಾನೆ. ಇತ್ತ ಶ್ರೇಷ್ಠಾ ಹೊಸ ಡ್ರಾಮಾ ಶುರು ಮಾಡುತ್ತಾಳೆ. ನನಗೆ ನ್ಯಾಯ ದೊರೆಯದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯುವುದಾಗಿ ಹೆದರಿಸುತ್ತಾಳೆ.