Entertainment News in Kannada Live December 8, 2024: Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 8, 2024: Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ

Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ

Entertainment News in Kannada Live December 8, 2024: Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ

12:51 PM ISTDec 08, 2024 06:21 PM HT Kannada Desk
  • twitter
  • Share on Facebook
12:51 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 08 Dec 202412:51 PM IST

ಮನರಂಜನೆ News in Kannada Live:Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗದ ಪುಷ್ಪ 2 ಅಬ್ಬರ, 4ನೇ ದಿನದಾಂತ್ಯಕ್ಕೆ 750 ಕೋಟಿ ಸಂಗ್ರಹ

  • Pushpa 2 Collection Day 4: ಪುಷ್ಪ 2 ಬಿಡುಗಡೆಯಾದ ದಿನದಿಂದ ಹೊಸ ಹೊಸ ದಾಖಲೆಗಳನ್ನು ಮಾಡುತ್ತಿದೆ. ಈಗಾಗಲೇ 500 ಕೋಟಿ ರೂ.ಗಳನ್ನು ಗಳಿಸಿರುವ ಪುಷ್ಪ ಸಿನಿಮಾ, ಭಾನುವಾರದ ಅಂತ್ಯದ ವೇಳೆಗೆ ಮತ್ತೊಂದು ದಾಖಲೆಯನ್ನು ಬರೆಯಲು ಸಜ್ಜಾಗಿದೆ. 

Read the full story here

Sun, 08 Dec 202411:27 AM IST

ಮನರಂಜನೆ News in Kannada Live:ತಂದೆ ಮಕ್ಕಳ ನಡುವೆ ಅಂಥದ್ದೇನಾಗಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ; ಪೊಲೀಸ್‌ ದೂರಿನ ಬಗ್ಗೆ ಸ್ಪಷ್ಟನೆ ಕೊಟ್ಟ ಮಂಚು ಕುಟುಂಬ

  • ಮಂಚು ಕುಟುಂಬ: ಮಂಚು ಅವರ ಕುಟುಂಬವು ಟಾಲಿವುಡ್ ವಲಯಗಳಲ್ಲಿ ಚರ್ಚೆಯ ವಿಷಯವಾಗಿದೆ. ಮಂಚು ಮನೋಜ್ ತನ್ನ ತಂದೆ ಮೋಹನ್ ಬಾಬು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಹನ್ ಬಾಬು ಕೂಡ ಮನೋಜ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Read the full story here

Sun, 08 Dec 202409:46 AM IST

ಮನರಂಜನೆ News in Kannada Live:ಕಲೆಕ್ಷನ್‌ ವಿಚಾರದಲ್ಲಿ ಕಹಳೆಯೂದಿದ ಪುಷ್ಪರಾಜ್‌; ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?

  • Pushpa 2 Collection Day 3: ಬಾಕ್ಸ್‌ ಆಫೀಸ್‌ನಲ್ಲಿ ಮುಂದಡಿ ಇರಿಸಿರುವ ಪುಷ್ಪ 2 ಸಿನಿಮಾ ಕೇವಲ ಮೂರೇ ದಿನಕ್ಕೆ ವಿಶ್ವದಾದ್ಯಂತ 550 ಕೋಟಿ ಬಾಚಿಕೊಂಡಿದೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 500 ಕೋಟಿ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯೂ ಈ ಸಿನಿಮಾ ಮುಡಿಗೇರಿದೆ. 
Read the full story here

Sun, 08 Dec 202407:14 AM IST

ಮನರಂಜನೆ News in Kannada Live:ಗೌರವವನ್ನು ಹುಡುಕಿ ಅಲೆದಾಡುವ ಜೀವಗಳ ಕಥೆಯೇ ಅಗ್ನಿ; ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾದ ಪ್ರತೀಕ್‌ ಗಾಂಧಿ ಸಿನಿಮಾ

  • Agni Movie OTT: ಮಲಯಾಳಂನ ‘ಫೈರ್‌ಮ್ಯಾನ್‌’ ಸಿನಿಮಾ ಹೊರತುಪಡಿಸಿದರೆ ಅಗ್ನಿಶಾಮಕ ದಳದವರ ಕಥೆಗಳು ಹಿರಿತೆರೆಯಲ್ಲಿ ಹೆಚ್ಚು ಕಾಣಿಸಿಲ್ಲ. ಈ ಹಿಂದೆ ಬಾಲಿವುಡ್‌ನಲ್ಲಿ ನಿರ್ದೇಶಕ ರವಿ ಚೋಪ್ರಾ ‘ದಿ ಬರ್ನಿಂಗ್ ಟ್ರೈನ್’ ಸಿನಿಮಾ ಹೊರತಂದಿದ್ದರೂ, ಆ ಕಥೆಯಲ್ಲಿ ಅಗ್ನಿಶಾಮಕ ದಳದವರ ನೋವಿರಲಿಲ್ಲ. ಈಗ ಅಗ್ನಿ ಸಿನಿಮಾ ಒಟಿಟಿ ಅಂಗಳಕ್ಕೆ ಆಗಮಿಸಿದೆ. 
Read the full story here

Sun, 08 Dec 202406:01 AM IST

ಮನರಂಜನೆ News in Kannada Live:ಅಣ್ಣಯ್ಯ ಸೀರಿಯಲ್‌ ನಟ ವಿಕಾಶ್ ಉತ್ತಯ್ಯಗೆ ಜಾಕ್‌ಪಾಟ್‌! ಅಮೃತಧಾರೆ ಜೈದೇವ್‌ ಪತ್ನಿ ಮಲ್ಲಿಗೆ ಜೋಡಿಯಾದ ಮಾರಿಗುಡಿ ಶಿವು

  • ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಸೀರಿಯಲ್‌ನಲ್ಲಿ ಮಾರಿಗುಡಿ ಶಿವು ಅಲಿಯಾಸ್‌ ವಿಕಾಶ್‌ ಉತ್ತಯ್ಯ ಮತ್ತು ಅಮೃತಧಾರೆ ಸೀರಿಯಲ್‌ನ ಮಲ್ಲಿ ಖ್ಯಾತಿಯ ರಾಧಾ ಭಗವತಿ, ಈಗ ಅಪಾಯವಿದೆ ಎಚ್ಚರಿಕೆ ಎಂಬ ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. 
Read the full story here

Sun, 08 Dec 202405:08 AM IST

ಮನರಂಜನೆ News in Kannada Live:ಬಿಗ್‌ ಬಾಸ್‌ ಮನೆಯಲ್ಲಿ ಯಾರಿಗೆಷ್ಟು ಟಿಆರ್‌ಪಿ? ಹನುಮಂತುಗೆ ಫ್ರೊಫೆಷನಲ್‌ ಕಿಲಾಡಿ ಪಟ್ಟ, ಗೌತಮಿ ವಿರುದ್ಧ ತಿರುಗಿ ಬಿದ್ದ ಉಗ್ರಂ ಮಂಜು

  • Bigg Boss Kannada 11: 12 ಮಂದಿ ಸ್ಪರ್ಧಿಗಳ ಪೈಕಿ ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿಗೆ ಎಷ್ಟು ಟಿಆರ್‌ಪಿ ಇದೆ ಎಂಬುದನ್ನು ಏರಿಕೆ ಕ್ರಮದ ಮೂಲಕ ಹೇಳಬೇಕು. ಜತೆಗೆ ಯಾರಿಂದ ಈ ಮನೆಗೆ ಹೆಚ್ಚು ಕಾಂಟ್ರಿಬ್ಯೂಷನ್‌ ಇದೆ ಎಂದೂ ಹೇಳಬೇಕು. ಈ ಟಾಸ್ಕ್‌ನಲ್ಲಿ ಗೌತಮಿಗೆ ಕಡಿಮೆ ಟಿಆರ್‌ಪಿ ನೀಡಿದ್ದಾರೆ ಉಗ್ರಂ ಮಂಜು.
Read the full story here

Sun, 08 Dec 202404:32 AM IST

ಮನರಂಜನೆ News in Kannada Live:ತಾಂಡವ್‌ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಗಂಟು ಕಟ್ಟಿ ಸುನಂದಾ ಮನೆಗೆ ತಂದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 7ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ತಾಂಡವ್‌ ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೆಲ್ಲಾ ಗಂಟುಕಟ್ಟಿ ಸುನಂದಾ ಮನೆಗೆ ತರುತ್ತಾಳೆ. ಇನ್ಮುಂದೆ ಅದು ನನ್ನ ಮನೆ. ಅಲ್ಲಿ ತಾಂಡವ್‌-ನನಗೆ ಸಂಬಂಧಿಸಿದ ವಸ್ತುಗಳು ಮಾತ್ರ ಇರಬೇಕು ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಕುಸುಮಾ ಕೋಪಗೊಳ್ಳುತ್ತಾಳೆ.

Read the full story here

Sun, 08 Dec 202404:08 AM IST

ಮನರಂಜನೆ News in Kannada Live:ಬಿಗ್‌ ಬಾಸ್‌ ಬುಡಕ್ಕೆ ಕೈ ಹಾಕಿದ ತ್ರಿವಿಕ್ರಮ್‌ಗೆ ಚಾಟಿ ಬೀಸಿದ ಸುದೀಪ್;‌ ಬಲಭೀಮನಂತಿದ್ದವ ಕಿಚ್ಚನ ಮುಂದೆ ಠುಸ್‌ ಪಟಾಕಿ

  • ಶೋಭಾ ಶೆಟ್ಟಿ ಮನೆಯಿಂದ ಕ್ವಿಟ್‌ ಆಗಿದ್ದೇ ತಡ, ಅಕ್ಕಿ ಕಾಳು ಹಿಡಿದುಕೊಂಡು ಕೋಡ್‌ವರ್ಡ್‌ ಮೂಲಕವೇ ಗೌತಮಿ ಜತೆ ಚರ್ಚೆ ನಡೆಸಿ, ಬಿಗ್‌ ಬಾಸ್‌ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು ತ್ರಿವಿಕ್ರಮ್‌. ಈ ವಿಚಾರವೇ ಶನಿವಾರ ಕಿಚ್ಚನ ಕೆಣ್ಣು ಕೆಂಪಗಾಗಿಸಿತ್ತು.  
Read the full story here

Sun, 08 Dec 202404:00 AM IST

ಮನರಂಜನೆ News in Kannada Live:CSP ಪಾತ್ರದಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರಾ ಟಿ ಎನ್‌ ಸೀತಾರಾಮ್‌? ಪರಮೇಶ್ವರ್ ಗುಂಡ್ಕಲ್ ನೇತೃತ್ವದಲ್ಲಿ ಹೊಸ ಧಾರಾವಾಹಿ

  • ಟಿ ಎನ್ ಸೀತಾರಾಮ್ ಹಾಗೂ ಪರಮೇಶ್ವರ್ ಗುಂಡ್ಕಲ್ ಇವರಿಬ್ಬರ ಜೋಡಿ ಹೊಸ ಧಾರಾವಾಹಿಯೊಂದನ್ನು ಸೃಷ್ಟಿಸಲಿದೆ. ಈ ಕುರಿತು ಟಿ ಎಸ್‌ ಸೀತಾರಾಮ್ ಅವರ ಫೇಸ್ಬುಕ್ ಪೋಸ್ಟೊಂದು ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter