Entertainment News in Kannada Live December 9, 2024: Action OTT: ಸರ್, ಈ ಸಿನಿಮಾ ನೋಡಿದ್ದೀರಾ? ಒಟಿಟಿಯಲ್ಲಿದೆ ವೆಟ್ರಿಮಾರನ್ ಆಕ್ಷನ್ ಸಿನಿಮಾ, ಕನ್ನಡದಲ್ಲಿಯೂ ಸ್ಟ್ರೀಮಿಂಗ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 09 Dec 202401:55 PM IST
Action OTT: ವೆಟ್ರಿಮಾರನ್ ತಮಿಳು ಆಕ್ಷನ್ ಸಿನಿಮಾ ಸರ್ ಒಟಿಟಿಗೆ ಆಗಮಿಸಿದೆ. ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಚಿತ್ರದಲ್ಲಿ ವಿಮಲ್ ನಾಯಕನಾಗಿ ನಟಿಸಿದ್ದಾರೆ. ತಮಿಳು ಚಲನಚಿತ್ರ ನಟ ಬೋಸ್ ವೆಂಕಟ್ ನಿರ್ದೇಶಿಸಿದ್ದಾರೆ.
Mon, 09 Dec 202409:42 AM IST
- Aamir Khan: ‘ಸಿತಾರೆ ಜಮೀನ್ ಪರ್’ ಚಿತ್ರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಈ ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶನ ಮಾಡಿದ್ದು, ಆಮೀರ್ ಖಾನ್ ಜೊತೆಗೆ ಜೆನಿಲಿಯಾ ಡಿ’ಸೋಜ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Mon, 09 Dec 202409:07 AM IST
- Bhool Bhulaiyaa 3 OTT Release: ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಕಲೆಕ್ಷನ್ ವಿಚಾರದಲ್ಲಿ ಮೋಡಿ ಮಾಡಿದ್ದ ಬಾಲಿವುಡ್‌ನ ಭೂಲ್ ಭುಲ್ಲಯ್ಯ 3 ಸಿನಿಮಾ ಇದೀಗ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಅನೀಸ್ ಬಾಜ್ಮಿ ನಿರ್ದೇಶನದ ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಾಯಕನಾಗಿ ನಟಿಸಿದ್ದಾರೆ.
Mon, 09 Dec 202408:11 AM IST
- Amaran Movie Sai Pallavi: ಅಮರನ್ ಸಿನಿಮಾದಲ್ಲಿ ನಾಯಕಿಯ ಮೊಬೈಲ್ ನಂಬರ್ ಎಂದು ತೋರಿಸಲಾದ ಸಂಖ್ಯೆ ವಿದ್ಯಾರ್ಥಿಯೊಬ್ಬನ ನಿಜವಾದ ಮೊಬೈಲ್ ನಂಬರ್ ಆಗಿತ್ತು. ಸಾಯಿ ಪಲ್ಲವಿ ನಂಬರ್ ಎಂದು ಸಾವಿರಾರು ಜನರು ಆ ವಿದ್ಯಾರ್ಥಿಗೆ ಕರೆ ಮಾಡಿದ್ದರು. ಇದೀಗ ಅಮರನ್ ಚಿತ್ರತಂಡ ಆ ದೃಶ್ಯವನ್ನು ಪರಿಷ್ಕರಣೆ ಮಾಡಿದೆ.
Mon, 09 Dec 202407:13 AM IST
- The Girlfriend Teaser: ರಶ್ಮಿಕಾ ಮಂದಣ್ಣ ಅಭಿನಯದ ದಿ ಗರ್ಲ್‌ಫ್ರೆಂಡ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ವಿಜಯ್ ದೇವರಕೊಂಡ ಅವರ ಧ್ವನಿಯಲ್ಲಿ ಟೀಸರ್ ಮೂಡಿಬಂದಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾದ ಬಿಡುಗಡೆ ದಿನಾಂಕವೂ ಘೋಷಣೆ ಆಗಲಿದೆ.
Mon, 09 Dec 202406:29 AM IST
- Anil Kapoor: ‘ಪಲ್ಲವಿ ಅನುಪಲ್ಲವಿ’ ಚಿತ್ರದ ನಂತರ ಅನಿಲ್ ಕಪೂರ್ ಬೇರ್ಯಾವುದೇ ಕನ್ನಡ ಚಿತ್ರದಲ್ಲೂ ನಟಿಸಿರಲಿಲ್ಲ. ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನಗಳು ಆಗಾಗ ಆಗುತ್ತಲೇ ಇತ್ತು. ಆದರೆ, ಅನಿಲ್ ಮಾತ್ರ ಕಾರಣಾಂತರಗಳಿಂದ ಕನ್ನಡ ಚಿತ್ರರಂಗದಿಂದ ದೂರವೇ ಇದ್ದರು. ಇದೀಗ ಅವರು ಬಹಳ ವರ್ಷಗಳ ನಂತರ ಕನ್ನಡಕ್ಕೆ ವಾಪಸ್ಸಾಗುತ್ತಿದ್ದಾರೆ.
Mon, 09 Dec 202405:40 AM IST
- Pushpa 2: ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಭಾನುವಾರದಷ್ಟೊತ್ತಿಗೆ 750 ಕೋಟಿ ಗುರಿ ಮುಟ್ಟುವ ಸಾಧ್ಯತೆ ಇದೆ. ಶನಿವಾರಕ್ಕೆ 620 ಕೋಟಿ ಗಳಿಸಿರುವ ಇದೇ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ, ನಿರ್ದೇಶಕ ರಾಮ್‌ಗೋಪಾಲ್ ವರ್ಮ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
Mon, 09 Dec 202405:10 AM IST
- ಪುನೀತ್ ರಾಜ್‌ಕುಮಾರ್ ಹಿರಿ ಮಗಳು ಧೃತಿ ರಾಜ್‌ಕುಮಾರ್ ಸದ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮ್ಯಾಕ್ಸಿಕೊದಲ್ಲಿನ ಬಗೆಬಗೆ ತಾಣಗಳಿಗೆ ಭೇಟಿ ನೀಡಿ, ರೆಸ್ಟೋರಂಟ್‌ಗಳಿಗೆ ತೆರಳಿ ಅಲ್ಲಿನ ತರಹೇವಾರಿ ಖಾದ್ಯಗಳ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಪ್ಪು ಫ್ಯಾನ್ಸ್ ಕಡೆಯಿಂದ ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ.
Mon, 09 Dec 202404:55 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 8ರ ಎಪಿಸೋಡ್‌ನಲ್ಲಿ ಸಹಪಾಠಿಗಳಿಗೆ ಹೊಡೆದ ಪರಿಣಾಮ ಕಾಲೇಜ್ ಪ್ರಿನ್ಸಿಪಾಲ್ ತನ್ವಿಯನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡುತ್ತಾರೆ. ಮನೆಯವರ ಬಳಿ ತನ್ವಿ ಈ ಮಾತು ಹೇಳಿದಾಗ ಶ್ರೇಷ್ಠಾ ಅದನ್ನು ಕೇಳಿಸಿಕೊಂಡು ಖುಷಿ ಪಡುತ್ತಾಳೆ.
Mon, 09 Dec 202404:23 AM IST
- Drone Prathap: ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್, ಸದ್ಯ ಹಳ್ಳಿ ಜೀವನದ ಜತೆಗೆ ತಮ್ಮ ಡ್ರೋನ್ ತಯಾರಿಕಾ ಉದ್ಯಮದಲ್ಲಿ ನಿರತರಾಗಿದ್ದಾರೆ. ಈ ನಡುವೆ ಗ್ಯಾಪ್‌ನಲ್ಲಿಯೇ ಊರ ಹೊರಗಿನ ಕೃತಕ ಕೆರೆಯೊಂದರಲ್ಲಿ ಬಾಂಬ್ ಸಿಡಿಸಿದ್ದಾರೆ. ಅದೂ ಸೋಡಿಯಂ ಬಾಂಬ್.
Mon, 09 Dec 202402:11 AM IST
- Dance Karnataka Dance 2024 Finale: ಕಳೆದ ಐದು ತಿಂಗಳಿಂದ ಡಾನ್ಸ್ ಮೂಲಕವೇ ಕರುನಾಡಿನ ಗಮನ ಸೆಳೆದ ಡಾನ್ಸ್ ಕರ್ನಾಟಕ ಡಾನ್ಸ್ ಶೋಗೆ ಗ್ರ್ಯಾಂಡ್ ತೆರೆಬಿದ್ದಿದೆ. ಶಶಾಂಕ್ ಮತ್ತು ಕಾವ್ಯಾ ಈ ಸೀಸನ್ ವಿಜೇತರಾಗಿ ಹೊರಹೊಮ್ಮಿದ್ದು, ಅಪ್ಪು ಟ್ರೋಫಿಯನ್ನು ಎತ್ತಿ ಹಿಡಿದಿದ್ದಾರೆ.