Entertainment News in Kannada Live January 10, 2025: 'ಸಂಜು ವೆಡ್ಸ್ ಗೀತಾ 2' ಬಿಡುಗಡೆಗಿದ್ದ ತಡೆಯಾಜ್ಞೆ ತೆರವು; ಸದ್ಯದಲ್ಲೇ ಹೊಸ ರಿಲೀಸ್ ದಿನಾಂಕ ಘೋಷಣೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 10 Jan 202503:47 PM IST
- ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಬಿಡುಗಡೆಗೆ ಇದ್ದ ತಡೆಯಾಜ್ಞೆ ರದ್ದಾಗಿದ್ದು, ನ್ಯಾಯಾಲಯದಿಂದ ಚಿತ್ರದ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆಗೆ ಹೊಸ ದಿನಾಂಕ ಘೋಷಣೆಯಾಗಲಿದೆ. (ವರದಿ: ಚೇತನ್ ನಾಡಿಗೇರ್)
Fri, 10 Jan 202501:21 PM IST
- TN Seshan Lifestory: ರಾಮ್ ಚರಣ್ ನಟನೆಯ ಗೇಮ್ ಚೇಂಜರ್ ಸಿನಿಮಾ ಇಂದು (ಜ 10) ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ರಾಜಕೀಯ ಮತ್ತು ಜಿಲ್ಲಾಧಿಕಾರಿ ನಡುವಿನ ಜಿದ್ದಾಜಿದ್ದಿ ಇದೆ. ಈ ಸಿನಿಮಾದ ಕಥೆ ಮಧುರೈನ ಐಎಎಸ್ ಅಧಿಕಾರಿ ಟಿಎನ್ ಶೇಷನ್ ಅವರ ಬದುಕಿನ ಕಥೆಯೇ? ಹಿಂದೂಸ್ತಾನ್ ಟೈಮ್ಸ್‌ನ ಅಭಿಮನ್ಯು ಮಾಥುರ್ ಬರೆದ ಈ ವಿಶೇಷ ಲೇಖನ ಓದಿ.
Fri, 10 Jan 202510:15 AM IST
Rashmika Mandanna: ನಟಿ ರಶ್ಮಿಕಾ ಮಂದಣ್ಣ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಗಾಯಗೊಂಡಿದ್ದಾರೆ. ಈ ಕಾರಣದಿಂದ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಯಾಕೆಂದರೆ ಆ ಸಿನಿಮಾದಲ್ಲಿ ಇವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
Fri, 10 Jan 202509:14 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಪುಟ್ಟ ತೊಟ್ಟಿಲನ್ನು ಹರಕೆಯಾಗಿ ಮರಕ್ಕೆ ಕಟ್ಟಿದ್ದಾರೆ. ಆದರೆ ಆ ತೊಟ್ಟಿಲ ದಾರ ಸಡಿಲವಾಗುತ್ತಿದ್ದಂತೆ ಕೀರ್ತಿ ಅಲ್ಲಿಗೆ ಬಂದು ಅವಾಂತರ ಮಾಡಿದ್ದಾಳೆ.
Fri, 10 Jan 202507:13 AM IST
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿಯ ಮದುವೆ ಮಾಡಲು ಶಿವು ಮುಂದಾಗಿದ್ದಾನೆ. ಗಂಡಿನ ಕಡೆಯವರ ಬೇಡಿಕೆ ಏನಿದೆ? ಎಂದು ತಿಳಿದುಕೊಳ್ಳಲು ಅವರ ಮನೆಗೆ ಹೋಗಿದ್ದಾನೆ. ಆದರೆ, ವೀರಭದ್ರನ ಕುತಂತ್ರ ಅಲ್ಲೂ ಇದೆ.
Fri, 10 Jan 202507:09 AM IST
- Game Changer Movie Review: ಜಿಲ್ಲಾಧಿಕಾರಿಯಾಗಿದ್ದುಕೊಂಡು ಭ್ರಷ್ಟ ರಾಜಕಾರಣದ ವಿರುದ್ಧ ಹೋರಾಡುವ ಕಥೆ ಇರುವ ಗೇಮ್ ಚೇಂಜರ್ ಸಿನಿಮಾ ಹೇಗಿದೆ? ಈ ಸಿನಿಮಾದ ಕಥೆಯೇನು? ರಾಮ್ ಚರಣ್, ಕಿಯಾರ ಅಡ್ವಾಣಿ ನಟನೆ ಹೇಗಿದೆ? ಶಂಕರ್ ಎಸ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದ ವಿಮರ್ಶೆ ಇಲ್ಲಿದೆ.
Fri, 10 Jan 202506:44 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌ನಲ್ಲಿ ಆಸ್ಪತ್ರೆ ಸೇರಿರುವ ಅಜ್ಜಿಗೆ ಪ್ರಜ್ಞೆ ಬರುತ್ತದೆ, ಆದರೆ ಅವರು ಜಾನುಗೆ ನಿಜ ಹೇಳಿದರೆ ಕಷ್ಟ ಎಂದು ಭಯಪಡುವ ಜಯಂತ್, ಆಸ್ಪತ್ರೆಯಲ್ಲೇ ಅಜ್ಜಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ.
Fri, 10 Jan 202505:53 AM IST
- ಸಂದರ್ಶನ-ಪದ್ಮಶ್ರೀ ಭಟ್: ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಕಮಲಶ್ರೀ ಅವರಿಗೆ ಇಳಿ ವಯಸ್ಸಿನಲ್ಲಿ ಕ್ಯಾನ್ಸರ್ ಕಾಯಿಲೆ ಬಂದಿದೆ. ಈ ಕುರಿತು ಅವರು ʼಪಂಚಮಿ ಟಾಕ್ಸ್ʼ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
Fri, 10 Jan 202505:10 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 9ರ ಎಪಿಸೋಡ್‌ನಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಗೆ ಎಲ್ಲಾ ತಯಾರಿಯನ್ನು ಶ್ರೇಷ್ಠಾ ಮಾಡಬೇಕು ಎಂದು ತಾಂಡವ್ ಕಂಡಿಷನ್ ಮಾಡುತ್ತಾನೆ. ಭಾಗ್ಯಾಳನ್ನು ಅಡುಗೆಮನೆಯಿಂದ ಹೊರ ಹಾಕುವ ಶ್ರೇಷ್ಠಾ, ನೈವೇದ್ಯಕ್ಕೆ ಉಪ್ಪಿಟ್ಟು ತಯಾರಿಸುತ್ತಾಳೆ.
Fri, 10 Jan 202504:36 AM IST
- ಶ್ರಾವಣಿಯನ್ನು ಎತ್ತಿಕೊಂಡು ಸುಬ್ಬು ದೇವಾಲಯದ ಮೆಟ್ಟಿಲು ಹತ್ತುವಂತೆ ಅಜ್ಜಿ ಮಾಡಿದ ಪ್ಲಾನ್ ಸಕ್ಸಸ್. ಸೆರೆಯಲ್ಲಿರುವ ವೀರು ಸ್ನೇಹಿತನ ಎದುರು ವಿಜಯಾಂಬಿಕಾ ಆಕ್ರೋಶ. ಶ್ರೀವಲ್ಲಿ ಜೊತೆ ಡಾನ್ಸ್ ಮಾಡಿ, ಅವಳನ್ನ ಸೊಸೆಯೆಂದು ಕರೆದ ಕಾಂತಮ್ಮ. ಪ್ರೀತಿ ಬಗ್ಗೆ ಸುಬ್ಬು ಮಾತು ಕೇಳಿ ಶ್ರಾವಣಿಗೆ ಖುಷಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 9ರ ಸಂಚಿಕೆಯ ವಿವರ.
Fri, 10 Jan 202502:58 AM IST
- Choomantar Review: ಕನ್ನಡದ ಸ್ಟಾರ್ ನಟ ಶರಣ್ ಅಭಿನಯದ ಹಾರರ್, ಕಾಮಿಡಿ ಸಿನಿಮಾ ‘ಛೂ ಮಂತರ್’ ಚಿತ್ರವಿಮರ್ಶೆ ಇಲ್ಲಿದೆ. ಒಂದಕ್ಕಿಂತ ಒಂದು ರೋಚಕ ತಿರುವು ಪಡೆದುಕೊಳ್ಳುವ ಕಥೆಗಳೊಂದಿಗೆ ಶರಣ್ ಈ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Fri, 10 Jan 202501:50 AM IST
- ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಬಿಡುಗಡೆಯಾಗಿದ್ದು. ಟ್ವಿಟರ್‌ನಲ್ಲಿ ಸಾಕಷ್ಟು ವಿಮರ್ಶೆಗಳು ಲಭ್ಯವಾಗಿದೆ. ಸಿನಿಮಾದ ಬಗ್ಗೆ ಜನರ ಅಭಿಪ್ರಾಯ ಹೇಗಿದೆ ಎಂಬುದನ್ನು ನಾವಿಲ್ಲಿ ನೀಡಿದ್ದೇವೆ.