
Entertainment News in Kannada Live January 12, 2025: ಕಿತ್ತೋದ ಪ್ರೇಮ, ಅಬ್ಬರದ ಕಾಮ..; ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ 2 ಚಿತ್ರದ ಮೊದಲ ಹಾಡು ರಿಲೀಸ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 12 Jan 202511:31 AM IST
- 2009ರಲ್ಲಿ ತೆರೆಕಂಡ 'ಎದ್ದೇಳು ಮಂಜುನಾಥ' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಈಗ ಎದ್ದೇಳು ಮಂಜುನಾಥ-2ಗೆ ದಿವಂಗತ ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿಯೇ ಮೊದಲ ಹಾಡು ಬಿಡುಗಡೆ ಆಗಿದೆ.
Sun, 12 Jan 202511:00 AM IST
- Actress Kamalshree: ಗಟ್ಟಿಮೇಳ ಧಾರಾವಾಹಿ ನಟಿ ಕಮಲಶ್ರೀ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಬಾಡಿಗೆ ಮನೆಯಲ್ಲಿರುವ ಬಗ್ಗೆ ಮಾತನಾಡಿರುವ ಅವರು ಜೀವನ ಹೇಗೆ ಸಾಗುತ್ತಿದೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
Sun, 12 Jan 202510:29 AM IST
- Seetha Rama Serial: ಸೀತಾ ರಾಮ ಧಾರಾವಾಹಿ ನಟಿ ಪದ್ಮಕಲಾ ಅವರ ಮಗಳು ದಿವ್ಯಾ ರಮೇಶ್ ಅನೇಕ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಯೇ ಸಂಗೀತ ಶಾಲೆಯನ್ನು ಆರಂಭಿಸಿದ್ದಾರೆ. ಈ ಬಗ್ಗೆ ಪಂಚಮಿ ಟಾಕ್ಸ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Sun, 12 Jan 202509:44 AM IST
Game Changer Day 2 Box office Collection: ಎಸ್. ಶಂಕರ್ ನಿರ್ದೇಶನದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗೇಮ್ ಚೇಂಜರ್ ಸಿನಿಮಾ ಜನವರಿ 10 ರಂದು ಬಿಡುಗಡೆ ಆಗಿದ್ದು ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಕಲೆಕ್ಷನ್ ಡಲ್ ಆಗಿದೆ.
Sun, 12 Jan 202508:24 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 11ರ ಎಪಿಸೋಡ್‌ನಲ್ಲಿ ತಾನು ಆಫೀಸಿಗೆ ಹೋದಾಗ ಮನೆ ಕೆಲಸ ಮಾಡಲು ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆ ತರುತ್ತಾಳೆ. ಆದರೆ ಶ್ರೇಷ್ಠಾಳಂತೆ ಮನೆ ಕೆಲಸದವಳು ಕೂಡಾ ಕುಸುಮಾ, ಭಾಗ್ಯಾ ಮೇಲೆ ದರ್ಪ ತೋರಿಸುತ್ತಾಳೆ. ಇದನ್ನು ಕಂಡು ಕುಸುಮಾ, ಭಾಗ್ಯಾ ಸಿಟ್ಟಾಗುತ್ತಾರೆ.
Sun, 12 Jan 202507:02 AM IST
Daaku Maharaj Movie Review in Kannada: ಬಾಲಕೃಷ್ಣ ಅವರ ಸಿನಿಮಾ ಎಂದರೆ ಅದು ಕಮರ್ಷಿಯಲ್ ಅಂಶಗಳ ಗೊಂಚಲು. ಎಲ್ಲ ವರ್ಗದವರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಅವರ ಸಿನಿಮಾಗಳಲ್ಲಿ ಹೆಚ್ಚು. ಡಾಕು ಮಹಾರಾಜ್ ಚಿತ್ರದಲ್ಲೂ ಕಲರ್‌ಫುಲ್ ಹಾಡುಗಳು, ಅಬ್ಬರದ ಡೈಲಾಗ್‌ಗಳು.. ಇದೆಲ್ಲದಕ್ಕೂ ಮಿಗಿಲಾಗಿ ಸಿಡಿಲಬ್ಬರದ ಸಾಹಸ ದೃಶ್ಯಗಳೂ ಸೋಜಿಗದಂತೆ ಕಂಡಿವೆ.
Sun, 12 Jan 202505:14 AM IST
- Bigg Boss Kannada 11: ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐದು ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆ ಪೈಕಿ ಭವ್ಯಾ ಗೌಡ ಶನಿವಾರ ಸೇವ್ ಆಗಿದ್ದಾರೆ. ಇನ್ನುಳಿದಂತೆ ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಎಲಿಮಿನೇಟ್ ಯಾರು?
Sun, 12 Jan 202504:21 AM IST
- Daaku Maharaaj Twitter Review: ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಸಿನಿಮಾ ಇಂದು (ಜನವರಿ 12) ಅದ್ದೂರಿಯಾಗಿ ಬಿಡುಗಡೆಯಾಗಿದೆ. ಇತ್ತ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ವಿಮರ್ಶೆ ನೀಡುತ್ತಿದ್ದಾರೆ. ಮಾಸ್ ಅವತಾರಕ್ಕೆ ಫಿದಾ ಆದರೆ, ಹಿನ್ನೆಲೆ ಸಂಗೀತಕ್ಕೂ ಪ್ರೇಕ್ಷಕ ತಲೆದೂಗಿದ್ದಾನೆ. ಇಲ್ಲಿದೆ ಟ್ವಿಟ್ಟರ್ ರಿವ್ಯೂವ್.