
Entertainment News in Kannada Live January 18, 2025: ‘ನೋಡಿದವರು ಏನಂತಾರೆ’ ಎನ್ನುತ್ತಲೇ ಮಿಡಲ್ ಕ್ಲಾಸ್ ಮನಸ್ಥಿತಿಗಳ ಕಥೆಯ ಜತೆಗೆ ಮತ್ತೆ ಬಂದ ನವೀನ್ ಶಂಕರ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 18 Jan 202504:04 PM IST
- ಮಿಡಲ್ ಕ್ಲಾಸ್ ಮನಸ್ಸುಗಳ ಕಥೆ ಹೇಳಲು ಆಗಮಿಸುತ್ತಿದ್ದಾರೆ ನಟ ನವೀನ್ ಶಂಕರ್. ಕುಲದೀಪ್ ಕಾರಿಯಪ್ಪ ನಿರ್ದೇಶನದ ನೋಡಿದವರು ಏನಂತಾರೆ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆ ಆಗಿದ್ದು, ಜನವರಿ 31ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.
Sat, 18 Jan 202512:10 PM IST
Saif Ali Khan: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿದು ಪರಾರಿಯಾಗಿರುವ ಶಂಕಿತನನ್ನು ಮಧ್ಯ ಪ್ರದೇಶದಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದಾಗ್ಯೂ, ಅದೇ ವ್ಯಕ್ತಿ ಸೈಫ್ ಅಲಿ ಖಾನ್‌ಗೆ ಚೂರಿ ಇರಿದದ್ದು ಎಂದು ಬಾಂದ್ರಾ ಪೊಲೀಸರು ಖಚಿತಪಡಿಸಬೇಕಷ್ಟೆ.
Sat, 18 Jan 202510:38 AM IST
- Rifle club Movie Review: ಆಶಿಕ್ ಅಬು ನಿರ್ದೇಶನದ ರೈಫಲ್ ಕ್ಲಬ್ ಎಂಬ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮೂಲ ಮಲಯಾಳಂ ಸಿನಿಮಾ ಕನ್ನಡ ಭಾಷೆಯಲ್ಲಿಯೂ ಲಭ್ಯವಿದೆ. ಚಿತ್ರದ ಕಲಾವಿದರೆಲ್ಲರೂ ಪ್ರಮುಖ ಪಾತ್ರದಾರಿಗಳಂತೆ ಸಾಮೂಹಿಕ ಪ್ರದರ್ಶನ ತೋರಿದ ರೈಫಲ್ ಗನ್ ಚಿತ್ರದ ವಿಮರ್ಶೆ ಓದಿ.
Sat, 18 Jan 202506:23 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ನನಗೆ ನ್ಯಾಯ ದೊರೆಯುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಭಾವನಾ ಪೊಲೀಸ್ ಸ್ಟೇಷನ್ ಮುಂದೆ ಧರಣಿ ಕೂರುತ್ತಾಳೆ. ಅವಳನ್ನು ಮಾಧ್ಯಮಗಳಲ್ಲಿ ನೋಡಿ ಕೋಪಗೊಂಡ ಸಿದ್ದು ಅಜ್ಜಿ, ಭಾವನಾಳನ್ನು ಮನೆಯಿಂದ ಹೊರ ಕಳಿಸಿದ್ದೇ ತಪ್ಪಾಯ್ತು ಎನ್ನುತ್ತಾರೆ.
Sat, 18 Jan 202506:08 AM IST
- Rajinikanth: ಬೆಂಗಳೂರಿನ ಎಪಿಎಸ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಸೂಪರ್‌ಸ್ಟಾರ್ ರಜನಿಕಾಂತ್, ಇದೀಗ ಆ ಶಾಲೆ ಮತ್ತು ಕಾಲೇಜಿನಲ್ಲಿ ಕಲಿತ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಸಂಸ್ಥೆಯ ವಿಶೇಷ ಅಲುಮಿನಿ ಕಾರ್ಯಕ್ರಮದ ಪ್ರಯುಕ್ತ ಕನ್ನಡದಲ್ಲಿಯೇ ಸುದೀರ್ಘವಾಗಿ ಮಾತನಾಡಿದ್ದಾರೆ.
Sat, 18 Jan 202505:09 AM IST
- ಸುಬ್ಬು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ ಎಂದು ತಿಳಿದು ಕಣ್ಣೀರು ಹಾಕುವ ಶ್ರಾವಣಿ. ಎಷ್ಟೋ ವರ್ಷಗಳ ನಂತರ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್. ಶ್ರಾವಣಿ, ಸುಬ್ಬು ಮನೆಯಲ್ಲಿ ಮದುವೆ ಸಂಭ್ರಮ. ರೌಡಿಗಳ ಜೊತೆ ವಿಜಯಾಂಬಿಕಾ ಮಾತನಾಡುವಾಗಲೇ ಹಿಂದಿನಿಂದ ಬಂದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 17ರ ಸಂಚಿಕೆಯ ವಿವರ.
Sat, 18 Jan 202505:00 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 17ರ ಎಪಿಸೋಡ್‌ನಲ್ಲಿ ಮನೆ ಬಿಟ್ಟು ಬಂದ ತಾಂಡವ್, ಭಾಗ್ಯಾಳನ್ನು ನೆನಪಿಸಿಕೊಂಡು ಸಿಟ್ಟಾಗುತ್ತಾನೆ. ನಾನು ಮನೆ ಬಿಟ್ಟು ಬರುವಂತೆ ಮಾಡಿದ ಭಾಗ್ಯಾಳನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾನೆ. ಅವಳು ಮನೆ ಬಿಟ್ಟು ಬೀದಿ ಬೀದಿ ಅಲೆಯುವಂತೆ ಮಾಡೋಣ ಎಂದು ಶ್ರೇಷ್ಠಾ-ತಾಂಡವ್ ಮಾತನಾಡಿಕೊಳ್ಳುತ್ತಾರೆ.
Sat, 18 Jan 202504:55 AM IST
- Duniya Vijay: ಇನ್ನೇನು ಜನವರಿ 20ರಂದು 51ನೇ ವರ್ಷಕ್ಕೆ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಕಾಲಿಡಲಿದ್ದಾರೆ. ಆದರೆ, ಈ ಸಲದ ಸಂಭ್ರಮದಲ್ಲಿ ನಾನು ಭಾಗವಹಿಸುತ್ತಿಲ್ಲ ಎಂದು ಮುಂಚಿತವಾಗಿಯೇ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡು, ವಿಶೇಷ ಮನವಿ ಮಾಡಿದ್ದಾರೆ.
Sat, 18 Jan 202503:45 AM IST
- ಒಟಿಟಿ ಕ್ರೈಮ್ ಥ್ರಿಲ್ಲರ್ ಸರಣಿಗಳ ಕ್ರೇಜ್ ಪಟ್ಟಿಗೆ ಸೇರುವ ಪಾತಾಳ್ ಲೋಕ್ ಸೀಸನ್ 2 ಅಮೆಜಾನ್ ಒಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಕೊಲೆಯ ಜಾಡು ಹಿಡಿದು ಹೊರಡ ತನಿಖೆಯ ಸವಾರಿ ಹೇಗಿದೆ ನೋಡಿ.
Sat, 18 Jan 202503:27 AM IST
Aman Jaiswal: ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ ಆಡಿಷನ್‌ಗೆ ತೆರಳುತ್ತಿದ್ದಾಗ ಮುಂಬೈನ ಜೋಗೇಶ್ವರಿ ಹೆದ್ದಾರಿಯಲ್ಲಿ ಅವರ ಬೈಕ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಜಕೊನೆಯುಸಿರೆಳೆದಿದ್ದಾರೆ.
Sat, 18 Jan 202502:52 AM IST
- ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿಯ ಹುಡುಕಾಟದಲ್ಲಿದ್ದ ಬಾಂದ್ರಾ ಪೊಲೀಸರು, ಶಂಕಿತ ವ್ಯಕ್ತಿಯನ್ನು ವಿಚಾರಣೆಗೆ ಕರೆತಂದಿದ್ದರು. ಆದರೆ, ಸುದೀರ್ಘ 5 ಗಂಟೆಗಳ ವಿಚಾರಣೆ ಬಳಿಕ, ಘಟನೆಯಲ್ಲಿ ಆತನ ಪಾತ್ರವಿಲ್ಲ ಎಂಬುದ ಅರಿತ ಪೊಲೀಸರು ಶಂಕಿತನನ್ನು ಬಿಡುಗಡೆ ಮಾಡಿದ್ದಾರೆ.
Sat, 18 Jan 202502:05 AM IST
- Bigg Boss Kannada 11: ಬಿಗ್ ಬಾಸ್ ಕನ್ನಡ 11ರ ಫಿನಾಲೆ ವಾರ ತಲುಪಿದ್ದಾರೆ ಮೋಕ್ಷಿತಾ ಪೈ. ಸದ್ಯ ಉಳಿದಿರುವುದು ಧನರಾಜ್ ಆಚಾರ್, ಉಗ್ರಂ ಮಂಜು, ಗೌತಮಿ ಜಾಧವ್, ಭವ್ಯಾ ಗೌಡ, ರಜತ್ ಮಾತ್ರ. ಈ ಐವರ ಪೈಕಿ ಡಬಲ್ ಎಲಿಮಿನೇಷನ್ ಉರುಳು ಯಾರಿಗೆ? ಎಂಬುದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.
Sat, 18 Jan 202501:29 AM IST
- Emergency Box office Collection Day 1: ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಎಮರ್ಜೆನ್ಸಿ ಸಿನಿಮಾ ಜ. 17ರಂದು ಬಿಡುಗಡೆ ಆಗಿದೆ. ಹೇಳಿಕೊಳ್ಳುವ ಹೈಪ್ ಸೃಷ್ಟಿ ಮಾಡದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಸದ್ದು ಮಾಡಲಿಲ್ಲ. ಹಾಗಾದರೆ, ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿದೆ ರಿಪೋರ್ಟ್