
Entertainment News in Kannada Live January 21, 2025: Duniya Vijay: ನಾನು ಬಡವರ ಪ್ರತಿನಿಧಿ- ಹುಟ್ಟುಹಬ್ಬದಂದು ದುನಿಯಾ ವಿಜಯ್ ಮಾತು; ‘ಲ್ಯಾಂಡ್ ಲಾರ್ಡ್’ ಸಿನಿಮಾ ಬಗ್ಗೂ ಇಲ್ಲಿದೆ ಮಾಹಿತಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 21 Jan 202503:55 PM IST
- Duniya Vijay: ದುನಿಯಾ ವಿಜಯ್ ಈ ಬಾರಿ ತಮ್ಮ ಹುಟ್ಟುಹಬ್ಬದಂದು ಚಿತ್ರೀಕರಣದಲ್ಲೇ ತೊಡಗಿಕೊಳ್ಳುತ್ತಿರುವುದರ ಬಗ್ಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅವರ ಸಿನಿಮಾ 'ಲ್ಯಾಂಡ್ ಲಾರ್ಡ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Tue, 21 Jan 202512:22 PM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ತನ್ನ ಮದುವೆ ವಿಚಾರವಾಗಿ ಮಾತಾಡಬೇಕು ಎಂದುಕೊಂಡು ಅವನ ಅಮ್ಮ ಲೀಲಾ ಹತ್ತಿರ ಬಂದಿರುತ್ತಾನೆ. ಆದರೆ ಆಗ ಅಲ್ಲಿ ಆಗಿದ್ದೇ ಬೇರೆ. ವೀಕ್ಷಕರಂತು ಈ ಸನ್ನಿವೇಶ ನೋಡಿ ನಕ್ಕಿದ್ದಾರೆ.
Tue, 21 Jan 202511:06 AM IST
- ಚಾಕು ಇರಿತದ ಐದು ದಿನಗಳ ನಂತರ ನಟ ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಕೆಲ ದಿನ ಉಳಿದುಕೊಂಡು ಆರೋಗ್ಯ ಸುಧಾರಣೆಯನ್ನು ಗಮನಿಸಿ ಅವರು ಮನೆಗೆ ಮರಳಲಿದ್ದಾರೆ.
Tue, 21 Jan 202510:11 AM IST
- ಪುಷ್ಪ ಸಿನಿಮಾ ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ಗೇಮ್ ಚೇಂಜರ್ ಸಿನಿಮಾ ನಿರ್ಮಾಪಕರಾದ ರವಿಶಂಕರ್ ಮತ್ತು ದಿಲ್ ರಾಜು, ನವೀನ್ ಅವರ ಕಚೇರಿ ಮತ್ತು ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಂಗಳವಾರ (ಜನವರಿ 21) ದಾಳಿ ನಡೆಸಿದೆ.
Tue, 21 Jan 202509:15 AM IST
- ಸ್ಯಾಂಡಲ್‌ವುಡ್ ಕಂಡ ಮೇರು ನಟ ಡಾ ರಾಜ್‌ಕುಮಾರ್ ಅವರನ್ನು ಇಡೀ ಕರುನಾಡು ಇಂದಿಗೂ ಪೂಜಿಸುತ್ತದೆ. ನಿತ್ಯ ಬೆಳಕಾದರೆ ಅವರ ಹಾಡು ಕಿವಿಗಪ್ಪಳಿಸುತ್ತವೆ, ಸಿನಿಮಾಗಳು ಕಣ್ಣಿಗೆ ಬೀಳುತ್ತವೆ. ಹೀಗಿರುವಾಗ ಇಂತಿಪ್ಪ ಅಣ್ಣಾವ್ರ ಸಿನಿಮಾ ಹಾಡುಗಳು ಚೀನಾದಲ್ಲಿ ಕೇಳಿಸಿದರೆ ಹೇಗಿರುತ್ತೆ. ಹೌದು, ಅಂಥ ವಿಡಿಯೋ ಇಲ್ಲಿದೆ ನೋಡಿ.
Tue, 21 Jan 202509:02 AM IST
- ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಚಾರುಗಿದ್ದ ಅಡುಗೆ ಮಾಡುವ ಅವಕಾಶವನ್ನು ತಾನು ಕಸಿದುಕೊಂಡೆ ಎಂದು ಅವಳಿಗೆ ಅನಿಸುತ್ತಿದೆ. ರುಕ್ಕು ಈಗ ಅಡುಗೆ ಮಾಡುತ್ತಿದ್ದಾಳೆ.
Tue, 21 Jan 202507:48 AM IST
- ಭದ್ರತೆಗಾಗಿ ತಮ್ಮ ಬಳಿ ಗನ್ ಇರಿಸಿಕೊಂಡಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಕೂಡಲೇ ಗನ್ ಮರಳಿಸುವಂತೆ ಪೊಲೀಸ್ ಇಲಾಖೆ ಆದೇಶಿಸಿದೆ. ಜತೆಗೆ ಗನ್ ಲೈಸೆನ್ಸ್ ರದ್ದು ಮಾಡುವುದಾಗಿಯೂ ಚಿಂತನೆ ನಡೆಸಿದೆ.
Tue, 21 Jan 202507:19 AM IST
- Rashmika Mandanna: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಸಂಭಾಜಿ ಮಹಾರಾಜ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.
Tue, 21 Jan 202506:12 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 20ರ ಎಪಿಸೋಡ್‌ನಲ್ಲಿ ಪೊಲೀಸ್ ಸ್ಟೇಷನ್‌ನಿಂದ ಮನೆಗೆ ಬಂದ ಭಾವಳಾನ್ನು ತಾಯವ್ವ ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಹೆಂಡತಿಗೆ ಜಾಗ ಇಲ್ಲದ ಕಡೆ ನಾನೂ ಇರುವುದಿಲ್ಲ ಎಂದು ಸಿದ್ದು, ಭಾವನಾ ಜೊತೆ ಮನೆಬಿಟ್ಟು ಹೋಗುತ್ತಾನೆ.
Tue, 21 Jan 202505:55 AM IST
- ಶ್ರೀವಲ್ಲಿಗೂ ಶ್ರಾವಣಿಗೂ ಅರಿಸಿನ ಶಾಸ್ತ್ರ. ಮಂಕಾಗಿದ್ದ ಶ್ರಾವಣಿ ಮೊಗದಲ್ಲಿ ನಗು ತರಿಸಿದ ಬಾಲ್ಯದ ಗೆಳತಿ ಗಗನ. ಸುಬ್ಬು ಮುಂದೆ ಪ್ರೀತಿ ಹೇಳಿಕೊಳ್ಳುವಂತೆ ಅಜ್ಜಿಯ ಸಲಹೆ. ಎಂಥ ಸಮಯದಲ್ಲೂ ಜೊತೆ ಇರ್ತೀನಿ ಅಂತ ಶ್ರಾವಣಿಗೆ ಮಾತು ಕೊಟ್ಟ ಸುಬ್ಬು. ಅರಿಸಿನ ಹಚ್ಚುವಂತೆ ಸುಬ್ಬುವಿಗೆ ಹೇಳಿದ ಶ್ರಾವಣಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 20ರ ಸಂಚಿಕೆಯ ವಿವರ.
Tue, 21 Jan 202505:53 AM IST
- Hellboy The Crooked Man OTT: ಹೆಲ್‌ಬಾಯ್ 4 ಸರಣಿಯಾಗಿ ಹೆಲ್‌ಬಾಯ್ ದಿ ಕ್ರಾಕ್ಡ್ ಮ್ಯಾನ್ ಸಿನಿಮಾ ಕಳೆದ ವರ್ಷ ತೆರೆಕಂಡಿತು. ಜಾಕ್ ಕೇಸಿ ಈ ಚಿತ್ರದಲ್ಲಿ ಹೆಲ್‌ಬಾಯ್ ಪಾತ್ರದಲ್ಲಿ ನಟಿಸಿದ್ದರು. ಆದರೆ, ಬಹು ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತು ಸುಣ್ಣವಾಯ್ತು. ಈಗ ಇದೇ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
Tue, 21 Jan 202505:17 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 20ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಜೊತೆ ಖುಷಿಯಾಗಿರಬಹುದು ಎಂದು ಮನೆ ಬಿಟ್ಟು ಹೋದ ತಾಂಡವ್‌ಗೆ ಒಂದೊಂದಾಗಿ ಕಷ್ಟದ ದಿನಗಳು ಆರಂಭವಾಗಿದೆ. ಭಾಗ್ಯಾಳಂತೆ ಶ್ರೇಷ್ಠಾಗೆ ಅಡುಗೆ ಮಾಡುವುದಿಲ್ಲ,ಕಾಳಜಿ ಮಾಡಲು ಬರುವುದಿಲ್ಲ ಎಂಬುದು ನಿಧಾನವಾಗಿ ಅರ್ಥವಾಗುತ್ತಿದೆ.
Tue, 21 Jan 202504:32 AM IST
- Hisaab Barabar OTT Release Date: ಆರ್ ಮಾಧವನ್ ನಟನೆಯ ಹಿಸಾಬ್ ಬರಾಬರ್ ಸಿನಿಮಾ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ಟ್ರೇಲರ್ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಲಿರುವ ಈ ಸಿನಿಮಾ, ಸಾಮಾನ್ಯನ ಕಣ್ಣ ಮುಂದಿರುವ ಹಗರಣವೊಂದರ ಸುತ್ತ ಸುತ್ತುತ್ತದೆ.
Tue, 21 Jan 202503:42 AM IST
- Bigg Boss Kannada winners List: ಕನ್ನಡದಲ್ಲಿ ಬಿಗ್ ಬಾಸ್ ಈ ವರೆಗೂ 10 ಸೀಸನ್‌ಗಳನ್ನು ಮುಗಿಸಿದೆ. ಈ ಶೋ ಮೂಲಕ ನೂರಾರು ಸ್ಪರ್ಧಿಗಳು ಕರುನಾಡಿಗೆ ಪರಿಚಿತರಾಗಿದ್ದಾರೆ. ಟ್ರೋಫಿ ಗೆದ್ದು ಅದನ್ನೇ ಏಣಿಯಾಗಿ ಮಾಡಿಕೊಂಡು, ಸಿನಿಮಾರಂಗಕ್ಕೂ ಬಂದವರೂ ಇದ್ದಾರೆ. ಹಾಗೆ ಬಂದ ಎಲ್ಲರಿಗೂ ಚಿತ್ರೋದ್ಯಮದಲ್ಲಿ ಗೆಲುವು ದಕ್ಕಿತೇ?
Tue, 21 Jan 202503:38 AM IST
- ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಅಮೃತಧಾರೆಯ ಜನವರಿ 20ರ ಸಂಚಿಕೆಯಲ್ಲಿ ಮಹತ್ವದ ಘಟನೆಗಳು ನಡೆದಿಲ್ಲ. ಆದರೆ, ಕೆಲವೊಂದು ಸಣ್ಣಪುಟ್ಟ ಘಟನೆಗಳು ಮುಂದೆ ದೊಡ್ಡಮಟ್ಟದ ಯುದ್ಧ ನಡೆಯುವ ಸೂಚನೆ ನೀಡಿವೆ. ವಿಶೇಷವಾಗಿ ಜೈದೇವ್-ದಿಯಾಳ ಸಂಬಂಧ ಕಣ್ಣಾರೆ ಕಂಡ ಮಲ್ಲಿ ರೋಷಗೊಂಡಿದ್ದಾಳೆ.
Tue, 21 Jan 202503:01 AM IST
- Bigg Boss Kannada 11: ನಿಮ್ಮ ಕೈ ಸೇರಬಹುದಾದ ಈ ಟ್ರೋಫಿಯನ್ನು ನೋಡಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅದರಂತೆ, ಟ್ರೋಫಿ ನೋಡಿದ ಮನೆ ಮಂದಿ, ಕಣ್ಣೀರಿಟ್ಟಿದ್ದಾರೆ. ಭಾವುಕವಾಗಿದ್ದಾರೆ. ಯಾರ ಮನದಾಳ ಏನಿತ್ತು? ಇಲ್ಲಿದೆ.
Tue, 21 Jan 202501:44 AM IST
- Barroz Ott Release Date: ಕಳೆದ ವರ್ಷದ ಕ್ರಿಸ್‌ಮಸ್ ಪ್ರಯುಕ್ತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು ಮೋಹನ್ ಲಾಲ್ ನಟನೆಯ ಬರೋಜ್ ಸಿನಿಮಾ. ಈಗ ಇದೇ ಸಿನಿಮಾ ಒಟಿಟಿಯತ್ತ ಮುಖಮಾಡಿದೆ.
Tue, 21 Jan 202501:04 AM IST
- ರಾಷ್ಟ್ರ ಭಕ್ತಿಯ ಕಥೆಯುಳ್ಳ ಹೈನ ಹೆಸರಿನ ಸಿನಿಮಾ ಇದೇ ಮಾಸಾಂತ್ಯಕ್ಕೆ ಚಿತ್ರಮಂದಿರಗಳಿಗೆ ಎಂಟ್ರಿಯಾಗುತ್ತಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಟ್ರೇಲರ್‌ಅನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಿಡುಗಡೆ ಮಾಡಿ ಶುಭಕೋರಿದ್ದಾರೆ.