
Entertainment News in Kannada Live January 24, 2025: ಲಾಯರ್ ಜಗದೀಶ್ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ; ಮೂಗಲ್ಲಿ ರಕ್ತ ಒಸರುತ್ತಿದ್ದರೂ ಲೈವ್‌ಗೆ ಬಂದ ಬಿಗ್ ಬಾಸ್ ಮಾಜಿ ಸ್ಪರ್ಧಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 24 Jan 202505:02 PM IST
- Lawyer Jagadish: ಬಿಗ್ ಬಾಸ್ ಕನ್ನಡ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಮತ್ತೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಸಂಬಂಧ ಫೇಸ್‌ಬುಕ್ ಲೈವ್‌ಗೆ ಬಂದ ಅವರು, ಘಟನೆ ಬಗ್ಗೆ ವಿವರಿಸಿದ್ದಾರೆ. ಜತೆಗೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
Fri, 24 Jan 202504:06 PM IST
- Bigg Boss Kannada 11 Finale: ಬಿಗ್ ಬಾಸ್ ಕನ್ನಡ 11ರ ಫಿನಾಲೆಯಲ್ಲಿ ಟಾಪ್ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್ ಪೈಕಿ ಯಾರು ಕಪ್ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಇಬ್ಬರ ಹೆಸರನ್ನು ಸೂಚಿಸಿದ ಹಂಸಾ, ಒಬ್ಬರಿಗೆ ಕ್ರಿಮಿನಲ್ ಎಂದಿದ್ದಾರೆ.
Fri, 24 Jan 202503:48 PM IST
- Sourav Ganguly Biopic: ಸೌರವ್ ಗಂಗೂಲಿ ಅತ್ಯುತ್ತಮ ಆಟಗಾರ ಮಾತ್ರವಲ್ಲ, ಅತ್ಯುತ್ತಮ ನಾಯಕನೂ ಹೌದು. ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲಿ ಎಂಬ ಹಣೆಪಟ್ಟಿಯನ್ನು ಅಳಿಸಿದ ಮೊದಲ ಕ್ಯಾಪ್ಟನ್ ಕೂಡ ಹೌದು. ಅಂತಹ ಆಟಗಾರ ಬಯೋಪಿಕ್ ಬೆಳ್ಳಿ ತೆರೆಗೆ ಬಂದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿ ನೋಡಿ. ಅವರ ಪಾತ್ರದಲ್ಲಿ ನಟಿಸೋದು ಯಾರು? ಇಲ್ಲಿದೆ ವಿವರ.
Fri, 24 Jan 202502:41 PM IST
- Royal Movie Review: ‘ರಾಯಲ್’ ಎಂಬ ಹೆಸರೇ ಹೇಳುವಂತೆ ಚಿತ್ರ ಅದ್ಧೂರಿಯಾಗಿ ಮೂಡಿಬಂದಿದೆ. ಚಿತ್ರದ ಪ್ರತಿ ದೃಶ್ಯವೂ ಶ್ರೀಮಂತವಾಗಿದೆ. ಚಿತ್ರವನ್ನು ಅಂದಗಾಣಿಸುವುದಕ್ಕೆ ಶ್ರಮ ಹಾಕಿರುವ ಚಿತ್ರತಂಡ, ಚಿತ್ರಕಥೆಗೆ ಹೆಚ್ಚು ಗಮನಹರಿಸಿಲ್ಲ. ಚಿತ್ರದ ಕಥೆಯಲ್ಲಿ ವಿಶೇಷತೆಯೇನಿಲ್ಲ. ಚಿತ್ರದ ಮೊದಲಾರ್ಧ ನಾಯಕ ಮತ್ತು ಅವನ ಚೇಷ್ಟೆಗಳ ಸುತ್ತ ಸುತ್ತುತ್ತದೆ.
Fri, 24 Jan 202501:50 PM IST
- Rudra Garuda Purana Review: ‘ರುದ್ರ ಗರುಡ ಪುರಾಣ’ ಒಂದು ಮಿಸ್ಟ್ರಿ ಚಿತ್ರ. ಬರೀ ಮಿಸ್ಟ್ರಿ ಅಷ್ಟೇ ಅಲ್ಲ, ಹಾರರ್ ಅಂಶಗಳಿರುವ ಥ್ರಿಲ್ಲರ್ ಚಿತ್ರ. ಮೊದಲೇ ಹೇಳಿದಂತೆ ಕಥೆಗೆ ಗರುಡ ಪುರಾಣದ ಹಿನ್ನೆಲೆ ಇದೆ. ಇವೆಲ್ಲವನ್ನೂ ಸೇರಿಸಿ ಒಂದು ಥ್ರಿಲ್ಲರ್ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಂದೀಶ್. ಇಲ್ಲಿದೆ ಸಿನಿಮಾ ವಿಮರ್ಶೆ.
Fri, 24 Jan 202510:55 AM IST
- ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮನೆಯಿಂದ ಇನ್ನೊಬ್ಬ ಹುಡುಗ ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದು (ಜ. 24) ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಅಷ್ಟೇ ಗ್ರ್ಯಾಂಡ್ ಆಗಿ ನೆರವೇರಿದೆ. ಹೀಗಿದೆ ಆ ಸಿನಿಮಾ ಕುರಿತ ಮಾಹಿತಿ.
Fri, 24 Jan 202510:37 AM IST
ಬಿಗ್‌ಬಾಸ್ ಸೀಸನ್ 10 ರಲ್ಲಿ ಒಟ್ಟು 19 ಸ್ಪರ್ಧಿಗಳು ಭಾಗವಹಿಸಿದ್ದರು. 112ನೇ ದಿನ ಐವರು ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಕೊನೆಗೆ ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರೆ, ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು.
Fri, 24 Jan 202509:25 AM IST
- Anamadheya Ashok Kumar: ಬಹುಭಾಷಾ ನಟ ಕಿಶೋರ್ ಕುಮಾರ್ ಮತ್ತು ಹರ್ಷಿಲ್ ಕೌಶಿಕ್ ನಟಿಸಿರುವ ಅನಾಮಧೇಯ ಅಶೋಕ್ ಕುಮಾರ್ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ ಆಗಿದೆ. ಇನ್ನೇನು ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಬರಲಿರುವ ಈ ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ನಟ ಕಿಶೋರ್ ಕಾಣಿಸಿಕೊಂಡಿದ್ದಾರೆ.
Fri, 24 Jan 202508:56 AM IST
- ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಪಡೆದು ಹೊರಗಿದ್ದ ನಟ ದರ್ಶನ್‌ಗೆ ಆತಂಕ ಎದುರಾಗಿದೆ. ಆದರೆ ಜಾಮೀನು ರದ್ದು ಮಾಡಬೇಕೆಂದು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್ ಆರೋಪಿಗಳಿಗೆ ನೋಟಿಸ್ ನೀಡಿದೆ.
Fri, 24 Jan 202508:40 AM IST
ಹಿರಿಯ ನಟ ಶರತ್ ಕುಮಾರ್ ಅಭಿನಯದ 150ನೇ ಸಿನಿಮಾ ದಿ ಸ್ಮೈಲಿ ಮ್ಯಾನ್ ಆಹಾ ತಮಿಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನೆನಪಿನ ಶಕ್ತಿ ಕಳೆದುಕೊಳ್ಳುವ ತನಿಖಾ ಅಧಿಕಾರಿಯ ಕಥೆ ಹೊಂದಿರುವ ಸಿನಿಮಾವನ್ನು ಸಲಿಲ್ ದಾಸ್ ನಿರ್ಮಿಸಿದ್ದು ಶ್ಯಾಮ್ ಹಾಗೂ ಪ್ರವೀಣ್ ನಿರ್ದೇಶನ ಮಾಡಿದ್ದಾರೆ.
Fri, 24 Jan 202508:30 AM IST
- Prakash Raj: ನಟ ಪ್ರಕಾಶ್ ರಾಜ್ ಇದೀಗ ಸಿನಿಮಾ, ರಾಜಕಾರಣ ಹೊರತುಪಡಿಸಿ ಮಕ್ಕಳು ಮತ್ತು ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ನಾಳೆಯ ಭವಿಷ್ಯಕ್ಕಾಗಿ ಮಕ್ಕಳು ರೂಪುಗೊಳ್ಳುತ್ತಿದ್ದಾರೆಯೇ? ಈ ಹಂತದಲ್ಲಿ ಪೋಷಕರ ಜವಾಬ್ದಾರಿಗಳೇನು? ಎಂಬ ಕಟು ವಾಸ್ತವವನ್ನು ತೆರೆದಿಟ್ಟಿದ್ದಾರೆ.
Fri, 24 Jan 202507:45 AM IST
- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ರದ್ದು ಮಾಡಬೇಕೆಂದು ನ್ಯಾಯಾಲಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಇಂದು ವಿಚಾರಣೆ ನಡೆಯಲಿದೆ. ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ.
Fri, 24 Jan 202507:24 AM IST
- Krishnam Pranaya Sakhi TRP: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಶತದಿನೋತ್ಸವ ಆಚರಿಸಿಕೊಂಡ ಕೃಷ್ಣಂ ಪ್ರಣಯ ಸಖಿ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದಯ ಟಿವಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿತ್ತು. ಈಗ ಇದೇ ಚಿತ್ರಕ್ಕೆ ಅಂದು ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ.
Fri, 24 Jan 202507:20 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 23ರ ಎಪಿಸೋಡ್‌ನಲ್ಲಿ ಸಿದ್ದು, ಕೂಲಿ ಕೆಲಸ ಮಾಡವುದನ್ನು ಶ್ರೀನಿವಾಸ್ ನೋಡುತ್ತಾನೆ. ತನ್ನ ಮನೆಗೆ ಬರುವಂತೆ ಮಗಳು-ಅಳಿಯನಿಗೆ ಕರೆಯುತ್ತಾನೆ. ಅದರೆ ಭಾವನಾ ಅದಕ್ಕೆ ಒಪ್ಪುವುದಿಲ್ಲ. ಅವರಿಬ್ಬರೂ ಹತ್ತಿರವಾಗುತ್ತಿದ್ದಾರೆ ಎಂದು ತಿಳಿದು ಸಮಾಧಾನಗೊಳ್ಳುತ್ತಾನೆ.
Fri, 24 Jan 202506:38 AM IST
- Sky Force Film Twitter Review: ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಸ್ಕೈ ಫೋರ್ಸ್’ ಬಿಡುಗಡೆಯಾಗಿದೆ. ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಂತೆ ಸಿನಿಮಾ ಮೂಡಿಬಂದಿದೆ.
Fri, 24 Jan 202506:29 AM IST
- ಮದುವೆ ಮಂಟಪಕ್ಕೆ ಹೋಗುವ ಮನೆಯವರೆಲ್ಲರ ಆಶೀರ್ವಾದ ಪಡೆಯುವ ಶ್ರಾವಣಿಗೆ ವಿಜಯಾಂಬಿಕಾ ಆಶೀರ್ವಾದ ಮಾಡಲು ಆಗುವುದಿಲ್ಲ. ಸುಬ್ಬು ಜೊತೆಗೆ ಕಾರಿನಲ್ಲಿ ಹೋಗುವ ಅವಕಾಶ ದಕ್ಕಿಸಿಕೊಂಡ ಶ್ರಾವಣಿ, ಮದನ್ ಪೇಚಾಟಕ್ಕೆ ಕೊನೆಯಿಲ್ಲ. ಮದುವೆ ಮಂಟಪ ತಲುಪಿದ ಪೃಥ್ವಿರಾಜ್ ಕೈಯಲ್ಲಿದೆ ತಾಳಿ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 23ರ ಸಂಚಿಕೆಯ ವಿವರ.
Fri, 24 Jan 202506:20 AM IST
- Kannada Serial TRP: 2025ರ ಎರಡನೇ ವಾರದ ಕನ್ನಡ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್ 10ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ? ಅವುಗಳಲ್ಲಿ ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳೆಷ್ಟು? ಇಲ್ಲಿದೆ ವಿವರ.
Fri, 24 Jan 202506:11 AM IST
OTT Release Today: ಒಟಿಟಿಯಲ್ಲಿ ಇಂದು ಒಂದೇ ದಿನ ವೆಬ್ ಸಿರೀಸ್ ಹಾಗೂ ಸಿನಿಮಾಗಳು ಸೇರಿದಂತೆ ಒಟ್ಟು 11 ಕಂಟೆಂಟ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಈಗಾಗಲೇ ಕೆಲವೊಂದು ನೋಡಲು ಲಭ್ಯವಿದೆ. ಯಾವ ಒಟಿಟಿಯಲ್ಲಿ ಯಾವ ಚಿತ್ರಗಳು ರಿಲೀಸ್ ಆಗಲಿವೆ? ಇಲ್ಲಿದೆ ಮಾಹಿತಿ.
Fri, 24 Jan 202504:38 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 23ರ ಎಪಿಸೋಡ್‌ನಲ್ಲಿ ತನ್ನ ಆಫೀಸ್ ಡಾಕ್ಯುಮೆಂಟ್ಸ್ ಹಾಗೂ ಬಟ್ಟೆಗಳನ್ನು ತೆಗೆದುಕೊಳ್ಳುವ ನೆಪದಲ್ಲಿ ಮನೆಗೆ ಬರುವ ತಾಂಡವ್ ಅವಳು ಮಾಡಿದ ಅಡುಗೆಯನ್ನು ಹೊಗಳಿ, ಬರಗೆಟ್ಟವನಂತೆ ತಿನ್ನುತ್ತಾನೆ. ಅಷ್ಟಾದರೂ ಮತ್ತೆ ಅವಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಿದ್ದಾನೆ.
Fri, 24 Jan 202504:38 AM IST
- Vadhu Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ (ಜನವರಿ 27) ಹೊಸ ಧಾರಾವಾಹಿ ‘ವಧು’ ಆರಂಭವಾಗುತ್ತಿದೆ. ಈ ಧಾರಾವಾಹಿಯ ನಾಯಕ ನಟಿ ದುರ್ಗಶ್ರೀ ‘ಹಿಂದೂಸ್ತಾನ್ ಟೈಮ್ಸ್’ ಕನ್ನಡಕ್ಕೆ ನೀಡಿದ ಸಂದರ್ಶನ ಇಲ್ಲಿದೆ.
Fri, 24 Jan 202502:11 AM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲುಪಾಲಾಗುತ್ತಾಳಾ? ಅಥವಾ ಲಕ್ಷ್ಮೀಗೆ ಸಂಕಷ್ಟ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇಂದಿನ ಸಂಚಿಕೆಯಲ್ಲಿ ಏನಾಗಿದೆ ಗಮನಿಸಿ.
Fri, 24 Jan 202501:42 AM IST
- Ramachari Serial: ರಾಮಾಚಾರಿ ಮನೆಯಲ್ಲಿ ದ್ವೇಷ ತುಂಬಿಕೊಂಡಿದೆ. ಕಿಟ್ಟಿ ಕೂಡ ಮತ್ತೆ ಬದಲಾಗುತ್ತಾ ಇದ್ದಾನೆ. ಈ ಹಿಂದೆ ಅವನ ಕೆಟ್ಟ ಗುಣಗಳೆಲ್ಲ ಹೋಗಿತ್ತು, ಆದರೆ ಈಗ ಅವನಿಗೇ ತಿಳಿಯದ ಹಾಗೆ ಅವನು ಕೆಟ್ಟವನಾಗುತ್ತಾ ಇದ್ದಾನೆ.
Fri, 24 Jan 202512:30 AM IST
- Chhaava: ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿರುವ 'ಛಾವ' ಸಿನಿಮಾದ ಪ್ರಚಾರ ಈಗಾಗಲೇ ಆರಂಭವಾಗಿದೆ. ಇದು ಸಂಭಾಜಿ ಮಹಾರಾಜರ ಜೀವನ ಆಧರಿತ ಐತಿಹಾಸಿಕ ಚಿತ್ರ. ಟ್ರೇಲರ್ ನೋಡಿದ ಅಭಿಮಾನಿಗಳು ಸಂಭಾಜಿ ಯಾರು? ಅವರ ಬದುಕು ಹೇಗಿತ್ತು? ಎಂದು ಹುಡುಕಾಡುತ್ತಿದ್ದಾರೆ. ಇಂಥ ಪ್ರಶ್ನೆಗಳು ನಿಮ್ಮಲ್ಲೂ ಇದ್ದರೆ ಈ ಬರಹದಲ್ಲಿ ಉತ್ತರ ಸಿಗಲಿದೆ.