
Entertainment News in Kannada Live January 29, 2025: ಒಂದು ಸಾವು ಮತ್ತು ಪತ್ರಕರ್ತನ ಸುತ್ತ ಗಿರಕಿ ಹೊಡೆಯಲಿದೆ ‘ಅನಾಮಧೇಯ ಅಶೋಕ್ ಕುಮಾರ್’ ಸಿನಿಮಾ; ಫೆಬ್ರವರಿಯಲ್ಲಿ ತೆರೆಗೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 29 Jan 202501:05 PM IST
- ಅನಾಮಧೇಯ ಅಶೋಕ್ ಕುಮಾರ್ ಸಿನಿಮಾ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದ್ದು, ಸಾಗರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಟ ಕಿಶೋರ್ ಕುಮಾರ್ ಹಾಗೂ ಹರ್ಷಿಲ್ ಕೌಶಿಕ್ ಪ್ರಮುಖ ಪಾತ್ರದಲ್ಲಿದ್ದಾರೆ.
Wed, 29 Jan 202512:25 PM IST
UI World Television Premiere: ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಸೈನ್ಸ್ ಫಿಕ್ಷನ್ ಆಕ್ಷನ್ ಚಿತ್ರ ಯುಐ ಒಟಿಟಿಗಿಂತ ಮುಂಚಿತವಾಗಿ ಟಿವಿಯಲ್ಲಿ ಬಿಡುಗಡೆಯಾಗಲಿದೆ. ಇನ್ನೇನು ಶೀಘ್ರದಲ್ಲಿ ಬುದ್ಧಿವಂತನ ಸಿನಿಮಾವನ್ನು ಕಿರುತೆರೆಯಲ್ಲಿ ವೀಕ್ಷಿಸಿ ಎಂಬ ಪ್ರೋಮೋಗಳನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
Wed, 29 Jan 202511:29 AM IST
- Nagavalli Bangale Teaser: ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳ ಹಿನ್ನೆಲೆಯಲ್ಲಿ "ನಾಗವಲ್ಲಿ ಬಂಗಲೆ" ಸಿನಿಮಾ ಸಾಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
Wed, 29 Jan 202510:28 AM IST
- OTT Comedy Crime Thriller: ಕಾಮಿಡಿ ಕ್ರೈಮ್ ಥ್ರಿಲ್ಲರ್ ಜಾನರ್‌ನ ಧೂಮ್ ಧಾಮ್ ಚಿತ್ರ ನೇರವಾಗಿ ನೆಟ್‌ಫ್ಲಿಕ್ಸ್ ಒಟಿಟಿಗೆ ಬರುತ್ತಿದೆ. ಯಾಮಿ ಗೌತಮ್ ಮತ್ತು ಪ್ರತೀಕ್ ಗಾಂಧಿ ಅಭಿನಯದ ಚಿತ್ರದ ಟ್ರೇಲರ್ ಸೋಮವಾರ (ಜನವರಿ 27) ಬಿಡುಗಡೆಯಾಗಿದೆ.
Wed, 29 Jan 202509:24 AM IST
- OTT Malayalam Movies: ಮಾಲಿವುಡ್‌ನಲ್ಲಿ ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ನಾಲ್ಕು ಚಿತ್ರಗಳು ಇನ್ನೇನು ಒಟಿಟಿ ಅಂಗಳಕ್ಕೆ ಪ್ರವೇಶಿಸುವ ಸನಿಹದಲ್ಲಿವೆ. ಆ ಚಿತ್ರಗಳ ಕುರಿತು ಹೀಗಿದೆ ಅಪ್‌ಡೇಟ್.
Wed, 29 Jan 202508:37 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆ ಬಿಟ್ಟು ಹೋಗಿದ್ದ ಸಿದ್ದೇಗೌಡ ಮತ್ತು ಭಾವನಾರನ್ನು ಜವರೇಗೌಡ ಮರಳಿ ಮನೆಗೆ ಕರೆತಂದಿದ್ದಾರೆ. ಅಕ್ಸಿಡೆಂಟ್ ವಿಚಾರ ತಿಳಿದಾಗಿನಿಂದ ಸಿದ್ದೇಗೌಡ ಮಂಕಾಗಿದ್ದು, ಪಶ್ಚಾತಾಪದಿಂದ ಬಳಲುತ್ತಿದ್ದಾನೆ.
Wed, 29 Jan 202505:48 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ 700ನೇ ಸಂಚಿಕೆಯತ್ತ ದಾಪುಗಾಲಿಟ್ಟಿದೆ. ಜನವರಿ 28ರ ಸಂಚಿಕೆಯಲ್ಲಿ ಭಾಗ್ಯಾ, ಮನೆಯವರನ್ನೆಲ್ಲಾ ಕರೆದುಕೊಂಡು ಹೋಗಿ, ಮಾವನಿಗೆ ಕಾರು ಕೊಡಿಸಿ ಖುಷಿಪಟ್ಟಿದ್ದಾಳೆ. ಇತ್ತ ಶ್ರೇಷ್ಠಾ ಜತೆ ಕನ್ನಿಕಾ ಕೈಜೋಡಿಸಿದ್ದು, ಭಾಗ್ಯಾಳನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸುತ್ತಿದ್ದಾರೆ.
Wed, 29 Jan 202504:44 AM IST
- Naa Ninna Bidalaare Serial: ಜೀ ಕನ್ನಡದಲ್ಲಿ ಸೋಮವಾರದಿಂದ ನಾ ನಿನ್ನ ಬಿಡಲಾರೆ ಹಾರರ್ ಥ್ರಿಲ್ಲರ್ ಸೀರಿಯಲ್ ಆರಂಭವಾಗಿದೆ. ಮೊದಲ ಎರಡು ದಿನಗಳ ಸಂಚಿಕೆಗಳ ಮೂಲಕ ವೀಕ್ಷಕರನ್ನು ಸೆಳೆದಿದೆ ಈ ಧಾರಾವಾಹಿ ಈಗ ನಿಧಾನಕ್ಕೆ ಕಥೆ ಒಂದೊಂದು ಗುಟ್ಟು ಬಿಟ್ಟುಕೊಡುತ್ತಿದೆ. ಅಂಬಿಕಾ ಸಾವಿನ ಹಿಂದಿನ ಕೈಗಳು ಕಾಣಿಸುತ್ತಿವೆ.