
Entertainment News in Kannada Live January 31, 2025: ಕುಂಭಮೇಳದಲ್ಲಿ ವೈರಲ್ ಆದ ಮೋನಾಸಿಗೆ ಸಿನಿಮಾ ಆಫರ್; ಇಲ್ಲಿದೆ ನಿರ್ಮಾಪಕ ಸನೋಜ್ ಮಿಶ್ರಾ ಹಂಚಿಕೊಂಡ ಮಾಹಿತಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 31 Jan 202504:19 PM IST
- ಪ್ರಯಾಗ್ ರಾಜ್‌ನ ಕುಂಭಮೇಳದಲ್ಲಿ ವೈರಲ್ ಆದ ಮೋನಾಲಿಸಾ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾಳೆ. 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್'ನಲ್ಲಿ ಮೋನಾಲಿಸಾ ಅಭಿನಯಿಸಲಿದ್ದಾರೆ.
Fri, 31 Jan 202501:12 PM IST
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಕಷ್ಟದಲ್ಲಿದ್ದಾಳೆ. ಕೀರ್ತಿ ತನಗೆ ಏನೂ ಅರ್ಥ ಆಗದಿದ್ದರೂ, ಲಕ್ಷ್ಮೀಗೆ ಸಮಾಧಾನ ಮಾಡುತ್ತಿದ್ದಾಳೆ.
Fri, 31 Jan 202511:32 AM IST
- Annayya Serial: ‘ಅಣ್ಣಯ್ಯ’ ಧಾರಾವಾಹಿಯಲ್ಲಿ ‘ಅಮೃತಧಾರೆ’ ಧಾರಾವಾಹಿಯ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರು ತನ್ನ ನೋವನ್ನು ಭೂಮಿಕಾ ಬಳಿ ಹಂಚಿಕೊಳ್ಳುತ್ತಿದ್ದಾಳೆ.
Fri, 31 Jan 202510:09 AM IST
- ನವೀನ್ ಶಂಕರ್ ಅಭಿನಯದ 'ನೋಡಿದವರು ಏನಂತಾರೆ' ಸಿನಿಮಾ ಬಿಡುಗಡೆಯಾಗಿದೆ. ಯಾವುದೇ ಕೆಲಸ ಮಾಡಲು ಹೋದರು ನಮ್ಮ ತೃಪ್ತಿಗಿಂತ "ನೋಡಿದವರು ಏನಂತಾರೆ?" ಎನ್ನುವ ಪ್ರಶ್ನೆಯೇ ನಮ್ಮಲ್ಲಿ ಮೂಡುತ್ತದೆ. ಈ ಸಿನಿಮಾ ಕೂಡ ಅದೇ ವಿಷಯವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿದೆ.
Fri, 31 Jan 202508:39 AM IST
- ಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಿ ತಿಂಗಳು ಕಳೆದರೂ, ಅದರ ಒಟಿಟಿ ರಿಲೀಸ್ ಅಪ್‌ಡೇಟ್ ಇನ್ನೂ ಹೊರಬಿದ್ದಿಲ್ಲ. ಈ ನಡುವೆ ಇದೇ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುವ ಸಾಧ್ಯತೆ ಇದೆ. ಅತಿ ಶೀಘ್ರದಲ್ಲಿ ಕಿರುತೆರೆಗೆ ಮ್ಯಾಕ್ಸ್ ಸಿನಿಮಾ ಎಂಟ್ರಿಕೊಡಲಿದೆ ಎಂದು ಜೀ ಕನ್ನಡ ಪೋಸ್ಟ್ ಮಾಡಿದೆ.
Fri, 31 Jan 202507:19 AM IST
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇಗೌಡನನ್ನು ಜವರೇಗೌಡ್ರು ಮಾತಿನಲ್ಲೇ ಮಣಿಸಿದ್ದಾರೆ. ಹೀಗಾಗಿ ಮನಸ್ಸಿನಲ್ಲಿದ್ದರೂ, ಸತ್ಯ ಹೇಳಲಾಗದೇ ಸಿದ್ದೇಗೌಡ ಮತ್ತೆ ಪರಿತಪಿಸುವಂತಾಗಿದೆ. ಮತ್ತೊಂದೆಡೆ ಸಿಂಚನಾಗೆ ನಕಲಿ ಒಡವೆಯ ಸಂಗತಿ ತಿಳಿಯುವುದರಿಂದ ಹರೀಶ್ ಸ್ವಲ್ಪದರಲ್ಲೇ ಪಾರಾಗಿದ್ದಾನೆ.
Fri, 31 Jan 202506:59 AM IST
- ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ಶೂಟಿಂಗ್ ವೇಳೆ, ತುಂಗಭದ್ರಾ ನದಿ ತೀರದ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಾಕಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಚಿತ್ರತಂಡಕ್ಕೆ ಸರ್ಕಾರ ನೋಟೀಸ್ ನೀಡಿದ್ದು, ಚಿತ್ರೀಕರಣಕ್ಕೆ ಬ್ರೇಕ್ ಹಾಕಿದೆ.
Fri, 31 Jan 202506:05 AM IST
- ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್, ಇಂದಿಗೆ (ಜ. 31) ಬಣ್ಣದ ಲೋಕಕ್ಕೆ ಕಾಲಿಟ್ಟು ಬರೋಬ್ಬರಿ 29 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
Fri, 31 Jan 202505:22 AM IST
Bhagyalakshmi Serial: ಭಾಗ್ಯಾಳನ್ನು ಹೇಗಾದರೂ ಮಾಡಿ ಕೆಲಸದಿಂದ ತೆಗೆಯಬೇಕು ಎಂದುಕೊಂಡಿದ್ದ ಶ್ರೇಷ್ಠಾ ಮತ್ತು ಕನ್ನಿಕಾ ತಮ್ಮ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅದಕ್ಕಾಗಿ ಹೋಟೆಲ್‌ಗೆ ಬಂದಿದ್ದ ವಿಐಪಿ ಅತಿಥಿಗೆ ಭಾಗ್ಯಾ ಕೊಟ್ಟ ಆಹಾರದಲ್ಲಿ ಸಮಸ್ಯೆಯಾಗಿದೆ ಎಂದು ಗಲಾಟೆ ಎಬ್ಬಿಸಿದ್ದಾರೆ. ಇದರಿಂದ ಭಾಗ್ಯಾ ಕೆಲಸಕ್ಕೆ ಕುತ್ತು ಬಂದಿದೆ.
Fri, 31 Jan 202504:30 AM IST
- ಸುಬ್ಬುಗಾಗಿ ಸ್ಟೇಷನ್ ಮೆಟ್ಟಿಲೇರುವ ಶ್ರಾವಣಿ ಅಪ್ಪನನ್ನೇ ಎದುರು ಹಾಕಿಕೊಂಡು ಇನ್ಸ್‌ಪೆಕ್ಟರ್‌ಗೆ ಸವಾಲು ಹಾಕಿ ಸುಬ್ಬುವನ್ನು ಬಿಡಿಸಿಕೊಂಡು ಬರುತ್ತಾಳೆ. ಇತ್ತ ವಿಜಯಾಂಬಿಕಾ ಕೈಗೆ ಮತ್ತೆ ಸಿಕ್ಕಿ ಬೀಳುತ್ತಾನೆ ಪೃಥ್ವಿರಾಜ್. ಶ್ರಾವಣಿಯಲ್ಲಿ ನಂದಿನಿಯಮ್ಮನನ್ನು ಕಾಣುತ್ತಾರೆ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 30ರ ಸಂಚಿಕೆಯಲ್ಲಿ ಏನೇನಾಯ್ತು.
Fri, 31 Jan 202504:03 AM IST
- Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯನ್ನೇ ಹೋಲುವ ಸುಬ್ಬಿಯ ಆಗಮನವಾಗಿದೆ. ಅಷ್ಟೇ ಅಲ್ಲ ಸುಬ್ಬಿಯನ್ನು ಕಣ್ತುಂಬಿಕೊಂಡ ರಾಮ, ಅಕ್ಷರಶಃ ಅಚ್ಚರಿಗೊಳಗಾಗಿದ್ದಾನೆ.
Fri, 31 Jan 202503:14 AM IST
- ಬಹುಭಾಷಾ ನಟ ಕಿಶೋರ್ ಕುಮಾರ್ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. 'ಈಗಿನ ಸರ್ಕಾರಗಳು ಸಂವಿಧಾನದಲ್ಲಿ ಬದಲಾವಣೆ ಮಾಡುತ್ತಿವೆಯೇ' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Fri, 31 Jan 202501:08 AM IST
- ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಟ್ರಾಫಿಕ್ ಜಾಸ್ತಿಯಾಗಿದೆ. ಸ್ಟಾರ್ ಸಿನಿಮಾಗಳ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಒಂದಷ್ಟು ಹೊಸಬರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಆ ಪೈಕಿ ಈ ವಾರ ಒಟ್ಟು 9 ಸಿನಿಮಾಗಳು ಬಿಡುಗಡೆ ಆಗುತ್ತಿವೆ.